☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

Daily Horoscope: ಇಂದು ಸಹೋದ್ಯೋಗಿಗಳಿಂದ ಆಪತ್ತು; ನಿಮ್ಮ ರಾಶಿ ಭವಿಷ್ಯ

Daily Horoscope: October 15 Zodiac Predictions And Astrological Updates

Image: AI Generated

Daily Horoscope: ಅಕ್ಟೋಬರ್ 15ರ ಇಂದಿನ ರಾಶಿ ಭವಿಷ್ಯದ ಪ್ರಕಾರ, ಕೆಲ ರಾಶಿಯವರಿಗೆ ಸಹೋದ್ಯೋಗಿಗಳಿಂದ ಕಿರಿಕಿರಿ, ಆಪತ್ತು ಹಾಗೂ ಆತಂಕ ಎದುರಾಗುವ ಸಂಭವವಿದೆ. ಇಂದಿನ ದಿನದಲ್ಲಿ ಪ್ರತಿಯೊಂದು ಕೆಲಸದಲ್ಲೂ ಎಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಶರತ್ ಋತು, ಆಶ್ವಯುಜ ಮಾಸದ ಶುಕ್ಲ ಪಕ್ಷದ ಪಂಚಮೀ ತಿಥಿಯ ಗುರುವಾರದ ದಿನ ಇದಾಗಿದೆ. ಇಂದು ಶತ್ರುಬಾಧೆ, ದೇಹ ಪೀಡೆ ಹಾಗೂ ವಿಶ್ವಾಸಘಾಸಿಯಂತಹ ಮಿಶ್ರ ಫಲಗಳು ಕಂಡುಬರಲಿವೆ.

ಶರನ್ನವರಾತ್ರದ ಐದನೆಯ ದಿನವಾದ ಇಂದು ಜಗನ್ಮಾತೆಯ ಸ್ವರೂಪಳಾದ ಸ್ಕಂದಮಾತೆಯ ಆರಾಧನೆಯು ಎಲ್ಲರಿಗೂ ಮಂಗಲ ತರಲಿ. ತಾಯಿಯ ವಾತ್ಸಲ್ಯವು ಎಲ್ಲರ ಸಂಕಟಗಳನ್ನು ದೂರ ಮಾಡಿ ರಕ್ಷಿಸಲಿ ಎಂದು ಹಾರೈಸೋಣ.

ಮೇಷ ರಾಶಿ

ನಿಮ್ಮ ಆತ್ಮೀಯ ಮಾತುಕತೆಯಿಂದ ಅಪರಿಚಿತರು ಆಪ್ತರಾಗುವರು. ಆಕಸ್ಮಿಕ ದ್ರವ್ಯಪ್ರಾಪ್ತಿ ಆಗಲಿದೆ. ದಾಂಪತ್ಯದಲ್ಲಿ ಪರಸ್ಪರ ನಂಬಿಕೆ ದೃಢವಾಗಲಿದೆ. ಶತ್ರುಗಳ ನಡುವೆ ಮೌನವಾಗಿ ಬದುಕುವುದು ಉತ್ತಮ.

ವೃಷಭ ರಾಶಿ

ಯಾರ ಮೇಲೂ ಅತಿಯಾದ ವಿಶ್ವಾಸವಿಡುವುದು ಬೇಡ. ಪಾಲುದಾರಿಕೆ ಒಪ್ಪಂದದ ಬಗ್ಗೆ ಎಚ್ಚರಿಕೆ ಇರಲಿ. ಕಚೇರಿಯ ಕೆಲಸಗಳು ಹಿಂದೆ ಉಳಿಯಬಹುದು. ಅನಾರೋಗ್ಯದ ಸಮಸ್ಯೆ ಹೆಚ್ಚಾಗಬಹುದು.

ಮಿಥುನ ರಾಶಿ

ಅಪ್ರಸಿದ್ಧ ಸಂಸ್ಥೆಗಳಲ್ಲಿ ಹಣ ಹೂಡಿಕೆ ಮಾಡಿ ನಷ್ಟ ಅನುಭವಿಸಬೇಡಿ. ಕರಕುಶಲ ವ್ಯಾಪಾರಿಗಳಿಗೆ ಅಧಿಕ ಲಾಭ ಸಿಗಲಿದೆ. ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯುವಿರಿ. ಆಸ್ತಿ ವ್ಯವಹಾರಗಳಿಗೆ ಓಡಾಟ ಹೆಚ್ಚಾಗುವುದು.

ಕರ್ಕಾಟಕ ರಾಶಿ

ಹಲವು ದಿನಗಳಿಂದ ನಿರೀಕ್ಷಿಸುತ್ತಿದ್ದ ಬಡ್ತಿ ಇಂದು ಲಭಿಸುವ ಸಾಧ್ಯತೆಯಿದೆ. ಧಾರ್ಮಿಕ ಶ್ರದ್ಧೆಗೆ ತಕ್ಕ ಫಲ ದೊರೆಯಲಿದೆ. ನಿಮ್ಮ ಯಶಸ್ಸಿಗೆ ಕಾರಣರಾದವರನ್ನು ಸ್ಮರಿಸಿಕೊಳ್ಳಿ. ಸವಾಲುಗಳನ್ನು ಧೈರ್ಯದಿಂದ ಎದುರಿಸಿ.

ಸಿಂಹ ರಾಶಿ

ನಿರಂತರ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ. ಸಹೋದ್ಯೋಗಿಗಳ ಕಿರಿಕಿರಿಯಿಂದ ಸ್ವಾಭಿಮಾನಕ್ಕೆ ಧಕ್ಕೆಯಾಗಬಹುದು. ದೇವತಾ ಕಾರ್ಯಗಳಲ್ಲಿ ಪಾಲ್ಗೊಳ್ಳಿ. ಶ್ರಮಕ್ಕೆ ತಕ್ಕ ಫಲ ಸಿಗದೆ ಬೇಸರವಾಗಬಹುದು.

ಕನ್ಯಾ ರಾಶಿ

ಹಣಕಾಸಿನ ವ್ಯವಹಾರದಿಂದ ಶುಭವಾಗಲಿದೆ. ಹೊಸ ಯೋಜನೆಗಳು ನಿಮ್ಮನ್ನು ಹುಡುಕಿ ಬರಲಿವೆ. ಮಾತಿನಲ್ಲಿ ನೇರ ಹಾಗೂ ಸ್ಪಷ್ಟತೆ ಇರಲಿ. ಉದ್ಯೋಗ ಸ್ಥಳದಲ್ಲಿ ತಾಳ್ಮೆ ಕಾಯ್ದುಕೊಳ್ಳುವುದು ಮುಖ್ಯ.

ತುಲಾ ರಾಶಿ

ಕಾರ್ಯಗಳಲ್ಲಿ ಎದುರಾದ ಅಡೆತಡೆಗಳನ್ನು ನಿವಾರಿಸುವಿರಿ. ಸಂಗಾತಿಯ ಇಷ್ಟಪೂರ್ತಿಗೊಳಿಸಿ ಖುಷಿಪಡಿಸುವಿರಿ. ನಿಮ್ಮ ಒಳ್ಳೆತನದಿಂದ ಕೆಲವೊಮ್ಮೆ ತೊಂದರೆಯಾಗಬಹುದು. ಜವಾಬ್ದಾರಿಗಳನ್ನು ಕಷ್ಟಪಟ್ಟು ಮುಗಿಸುವಿರಿ.

ವೃಶ್ಚಿಕ ರಾಶಿ

ಮನೆಯವರಿಂದ ವಿವಾಹದ ಒತ್ತಡ ಹೆಚ್ಚಾಗಬಹುದು. ಮಕ್ಕಳ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಅಧ್ಯಾತ್ಮದತ್ತ ಮನಸ್ಸು ಹರಿಯುವುದು. ಇನ್ನೊಬ್ಬರ ಮಾತನ್ನು ಕಣ್ಣಮುಚ್ಚಿ ನಂಬಬೇಡಿ.

ಧನು ರಾಶಿ

ಸಮಾಜದಲ್ಲಿ ಗೌರವ ಪಡೆಯುವ ಅವಕಾಶವಿದ್ದರೂ ಕೆಲವು ಕಾರಣಗಳಿಂದ ತಪ್ಪಬಹುದು. ಆಹಾರದ ವಿಚಾರದಲ್ಲಿ ಎಚ್ಚರಿಕೆ ಇರಲಿ. ಸಂಗಾತಿಗೆ ಉಡುಗೊರೆ ನೀಡಿ ಸಂತೋಷಪಡಿಸಿ. ಜವಾಬ್ದಾರಿಯುತ ಸ್ಥಾನ ದೊರೆಯಲಿದೆ.

ಮಕರ ರಾಶಿ

ಅನಿರೀಕ್ಷಿತ ವಾರ್ತೆಗಳು ಮನಸ್ಸಿಗೆ ಬೇಸರ ತರಬಹುದು. ಕಚೇರಿಯಲ್ಲಿ ಮೇಲಧಿಕಾರಿಗಳ ಸೂಚನೆಯಂತೆ ನಡೆದುಕೊಳ್ಳಿ. ಅನಗತ್ಯ ಹಣ ಹೂಡಿಕೆಯಿಂದ ದೂರವಿರಿ. ಕುಟುಂಬದ ಜವಾಬ್ದಾರಿ ಅಧಿಕವಾಗಿರಲಿದೆ.

ಕುಂಭ ರಾಶಿ

ದೀರ್ಘಕಾಲದ ಸ್ನೇಹದಲ್ಲಿ ಮುನಿಸು ಉಂಟಾಗಬಹುದು. ಏಕಾಂತವನ್ನು ಹೆಚ್ಚು ಇಷ್ಟಪಡುವಿರಿ. ಸ್ವಂತ ಕೆಲಸಗಳಿಗೆ ಸಮಯ ಮಾಡಿಕೊಳ್ಳುವುದು ಕಷ್ಟವಾದೀತು. ಮೇಲಧಿಕಾರಿಗಳ ಮೆಚ್ಚುಗೆ ಗಳಿಸುವಿರಿ.

ಮೀನ ರಾಶಿ Daily Horoscope)

ಭೂಮಿಯ ಉತ್ಪನ್ನಗಳಿಂದ ಆದಾಯ ತಕ್ಕಷ್ಟು ಸಿಗಲಿದೆ. ಸಂಪತ್ತು ಉಳಿಸಲು ಹೊಸ ಯೋಜನೆ ರೂಪಿಸಿ. ದಾಂಪತ್ಯದಲ್ಲಿ ಸಣ್ಣಪುಟ್ಟ ಕಲಹಗಳು ಬರಬಹುದು. ಗೊಂದಲಗಳಿಗೆ ತೆರೆ ಎಳೆದು ಮುನ್ನಡೆಯಿರಿ.