
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 13 (BBK 13) ಸಂಚಿಕೆ ದಿನದಿಂದ ದಿನಕ್ಕೆ ಕೂತೂಹಲ ಕೆರಳಿಸುತ್ತಿದೆ. ಅದರಲ್ಲೂ ನಿನ್ನೆ (ಅಕ್ಟೊಬರ್ 10) ಸಂಚಿಕೆ ‘ವಾರದ ಕಥೆ ಕಿಚ್ಚನ ಜೊತೆ’ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಟ್ಟಿತ್ತು. ಕಳೆದೊಂದು ವಾರದಿಂದ ಮನೆಯೊಳಗೆ ಸ್ಪರ್ಧಿಗಳು ನಡೆದುಕೊಂಡ ರೀತಿಯನ್ನು ಕಿಚ್ಚ ಸುದೀಪ್ ಪ್ರಶ್ನೆ ಮಾಡಿದ್ದರು. ಅವರ ಮುಂದೆ ಚರ್ಚೆ ಮಾಡಿದ್ದರು. ತಪ್ಪುಗಳನ್ನು ಎತ್ತಿ ತೋರಿಸಿದ್ದರು.
ಅದರಲ್ಲೂ ಮುಖ್ಯವಾಗಿ ಮಾಡ್ರನ್ ಕವಿ ಮಂಜನನ್ನು ಮನೆಯಿಂದ ಹೊರಹಾಕಿದ್ದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಕಳೆದ ಒಂದು ವಾರದಿಂದ ಮಂಜನ ಹಾವಳಿಯನ್ನು ತಡೆದುಕೊಳ್ಳಲು ಆಗದೇ ಸ್ಪರ್ಧಿಗಳು ತಡವರಿಸಿ ಹೋಗಿದ್ದರು. ಮಂಜನನ್ನು ಹೊರ ಹಾಕಿದ್ದರಿಂದ ಸದ್ಯಕ್ಕಂತೂ ಸ್ಪರ್ಧಿಗಳು ನಿರಾಳರಾಗಿದ್ದಾರೆ. ಆದರೆ, ಮಂಜ ಜಾಗಕ್ಕೆ ಇನ್ನೊಂದು ಪ್ರತಿಭೆ, ಹಳ್ಳಿ ಹುಡುಗಿ ಕುಮಾರಿ ಎಂಟ್ರಿ ಕೊಡುವ ಸಾಧ್ಯತೆಯಿದೆ.
ಅಷ್ಟಕ್ಕೂ ನಿನ್ನೆಯ ಸಂಚಿಕೆಯಲ್ಲಿ ಚರ್ಚೆಯಾದ 7 ಪ್ರಮುಖ ವಿಷಯಗಳು ಹೀಗಿವೆ. ಗಾನವಿ, ಗಗನ್ ಹಾಗೂ ಆಸಿಯಾ ವಿಚಾರಕ್ಕೆ ಹೆಚ್ಚು ಚರ್ಚೆಗಳಾಗಿವೆ. ಅವುಗಳ ಮೇಲೊಂದು ಝಲಕ್ ಇಲ್ಲಿದೆ.
- ಗನವಿ ಮತ್ತು ಗಗನ್ ವಿಚಾರ: ಇಬ್ಬರ ನಡುವಿನ ವಿಷಯದ ಬಗ್ಗೆ ಕಿಚ್ಚ ಸುದೀಪ್ ಸ್ಪಷ್ಟತೆ ನೀಡಿದ್ದಾರೆ.
- ಆಸಿಯಾ ಉಸ್ತುವಾರಿ ಮತ್ತು ಸುಸ್ತುವಾರಿ: ಈ ವಿಚಾರಕ್ಕೂ ಕಿಚ್ಚ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದರು.
- ಗನವಿ ಮಾತುಗಳು: ಗಾನವಿ ಮಾತಾಡುವಾಗ ಸುದೀಪ್ ಭಾವುಕರಾದ ಕ್ಷಣ ನಿನ್ನೆಯಸಂಚಿಕೆಯ ಪ್ರಮುಖ ಹೈಲೈಟ್.
- ಗಗನ್ ಮತ್ತು ತಾಂಡವ್ ರಾಮ್ ಆಟ: ಇವರಿಬ್ಬರ ಆಟದ ವಿಚಾರ, ನಡೆಗಳ ಬಗ್ಗೆಯೂ ಚರ್ಚೆ ಆಗಿದೆ.
- ಮಾಡ್ರನ್ ಕವಿ ಮಂಜನ ಪದ ಬಳಕೆ: ಇಂದಿನ ಸಂಚಿಕೆಯಲ್ಲಿ ಅತ್ಯಂತ ಪ್ರಮುಖವಾಗಿ ಚರ್ಚೆಯಾದ ವಿಷಯಗಳಲ್ಲಿ ಇದೂ ಒಂದು. ಮಾತುಗಳಿಗೂ ಒಂದು ಮಿತಿ ಇರಬೇಕು ಎಂಬ ವಿಚಾರ ಹೆಚ್ಚು ಗಮನ ಸೆಳೆಯಿತು.
- ರಾಕ್ಷಸ ಮತ್ತು ಗಂಧರ್ವ ಆಟ: ಮನೆಯ ಸದಸ್ಯರ ಆಟ ಮತ್ತು ವರ್ತನೆಯ ಬಗ್ಗೆ ಕಿಚ್ಚನ ಅಭಿಪ್ರಾಯ ನಿನ್ನೆ ಸಂಚಿಕೆಯ ಹೈಲೈಟ್‌ಗಳಲ್ಲೊಂದು.
- ಧನುಷ್ ಕ್ಯಾಪ್ಟನ್ ಬಗ್ಗೆ: ಧನುಷ್ ಕ್ಯಾಪ್ಟನ್ ಆಗಿರುವುದಕ್ಕೆ ಸುದೀಪ್ ಸಂತಸ ವ್ಯಕ್ತಪಡಿಸಿದ್ದು, ಗಮನ ಸೆಳೆಯಿತು.
ಇದನ್ನೂ ಓದಿ: Bigg Boss Kannada: ‘ರೌಡಿʼ ಮಂಜನ ಮನೆಯಿಂದ ಹೊರಹಾಕಿದ ಬಿಗ್ಬಾಸ್: ಸಿಹಿ ತಿಂದ ಸ್ಪರ್ಧಿಗಳು
ಒಟ್ಟಿನಲ್ಲಿ, ಧನುಷ್ ಕ್ಯಾಪ್ಟನ್ಸಿ ವಿಚಾರವನ್ನು ಹೊರತುಪಡಿಸಿ ಉಳಿದ ಬಹುತೇಕ ವಿಷಯಗಳಲ್ಲಿ ಮನೆಯ ಸದಸ್ಯರಿಗೆ ಸುದೀಪ್ ಸಖತ್ ಕ್ಲಾಸ್ ತೆಗೆದುಕೊಂಡಿದ್ದು ವೀಕ್ಷಕರಿಗೆ ಕಿಕ್ ಕೊಟ್ಟಿತ್ತು. ಕೊನೆಯಲ್ಲಿ ಮಂಜು ಅವರನ್ನು ಕನ್ಫೆಷನ್ ರೂಮ್‌ಗೆ ಕಳುಹಿಸುವ ಮೂಲಕ ನಿನ್ನೆಯ ಸಂಚಿಕೆಗೆ ತೆರೆ ಎಳೆಯಲಾಯಿತು. ಅದರಲ್ಲೂ ಏನಾದರೂ ಟ್ವಿಸ್ಟ್ ಇದೆಯಾ? ಅನ್ನೋ ಪ್ರಶ್ನೆಗೆ ಇಂದಿನ (ಅಕ್ಟೋಬರ್ 11) ಸಂಚಿಕೆಯಲ್ಲಿ ಉತ್ತರ ಸಿಗಲಿದೆ.

ಹಳ್ಳಿ ಹುಡುಗಿ ಕುಮಾರಿ ಎಂಟ್ರಿ
ಮಂಜು ಮನೆಯಿಂದ ಹೊರಬಂದಿದ್ದಾರೆ, ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ನಮ್ಮ ಹಳ್ಳಿ ಹುಡುಗಿ ಕುಮಾರಿ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾಗಿದೆ. ಕಲರ್ಸ್ ಕನ್ನಡವೇ ಅಧಿಕೃತವಾಗಿ ಪ್ರೋಮೊ ರಿಲೀಸ್ ಮಾಡಿದೆ. ಕುಮಾರಿ ವೀಕ್ಷಕರನ್ನು ಹೇಗೆಲ್ಲ ರಂಜಿಸುತ್ತಾರೆ ಅನ್ನೋದು ನೋಡಬೇಕಿದೆ.
ಲಕ್ಷ್ಮಿ ಯಾರು?
ಈ ವಾರ ಒಬ್ಬರಲ್ಲ ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಕೊಡಲಿದ್ದಾರೆ. ಅದರಲ್ಲಿ ಹಳ್ಳಿ ಹುಡುಗಿ ಕುಮಾರಿ ಆದರೆ, ಇನ್ನೊಬ್ಬರು ಲಕ್ಷ್ಮಿ ಎನ್ನಲಾಗುತ್ತಿದೆ. ಇವರಿಬ್ಬರೂ ಅಗ್ನಿ ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಇಂತಹ ಅನಿರೀಕ್ಷಿತ ತಿರುವುಗಳು ಹಾಗೂ ಭಾವನಾತ್ಮಕ ಕ್ಷಣಗಳಿಂದ ಈ ಸೀಸನ್ ವೀಕ್ಷಕರ ಮನಸ್ಸಿನಲ್ಲಿ ಉಳಿಯುತ್ತಾ? ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.




