☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

BBK 13: ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಕ್ಲಾಸ್; ಕಠಿಣ ನಿರ್ಧಾರದ ಸುಳಿವು

BBK 13: Kiccha Sudeep Warns Contestants in New Promo

BBK 13: ಬಿಗ್ ಬಾಸ್ ಕನ್ನಡ ಮನೆಯಲ್ಲಿ ಈ ವಾರದ ವೀಕೆಂಡ್ ಪಂಚಾಯ್ತಿಯ ಪ್ರೋಮೋ ಬಿಡುಗಡೆಯಾಗಿದೆ. ಸ್ಪರ್ಧಿಗಳ ಅತಿರೇಕದ ವರ್ತನೆ ಹಾಗೂ ಅವಾಚ್ಯ ಶಬ್ದಗಳ ಬಳಕೆಯ ಬಗ್ಗೆ ಕಿಚ್ಚ ಸುದೀಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂದಿನ ಸಂಚಿಕೆಯಲ್ಲಿ ಚರ್ಚೆಗಿಂತ ಕಠಿಣ ತೀರ್ಪುಗಳು ಮತ್ತು ದೊಡ್ಡ ನಿರ್ಧಾರಗಳನ್ನು ಕೈಗೊಳ್ಳುವುದಾಗಿ ಸುದೀಪ್ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಮನೆಯಲ್ಲಿ ಮತ್ತು ವೀಕ್ಷಕರಲ್ಲಿ ತೀವ್ರ ಕುತೂಹಲ ಮೂಡಿದೆ.

ಈ ವಾರ ನಡೆದ ಜಗಳಗಳು, ಅವಾಚ್ಯ ಶಬ್ದಗಳ ಬಳಕೆ ಹಾಗೂ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆಗಳು ದೊಡ್ಡ ವಿವಾದಕ್ಕೆ ಕಾರಣವಾಗಿವೆ. ತಪ್ಪು ಮಾಡಿದ ಸ್ಪರ್ಧಿಗಳಿಗೆ ಸುದೀಪ್ ಕ್ಲಾಸ್ ತೆಗೆದುಕೊಳ್ಳುವುದು ಖಚಿತವಾಗಿದ್ದು, ಕೆಲವರಿಗೆ ರೆಡ್ ಕಾರ್ಡ್ ಸಿಗುವ ಸಾಧ್ಯತೆಯೂ ಇದೆ.

ಮಂಜು ಅವಾಚ್ಯ ಶಬ್ದ ಮತ್ತು ಕಿರಿಕ್

ಬಿಗ್ ಬಾಸ್ ಮನೆಯಲ್ಲಿ ಮಾಡರ್ನ್ ಮಹಾಕವಿ ಮಂಜು ಅವರ ಆಟಕ್ಕಿಂತ ಮಾತಿನ ಪ್ರಭಾವವೇ ಹೆಚ್ಚಾಗಿದೆ. ತಮ್ಮ ವಾದದಿಂದಲೇ ಎದುರಾಳಿಗಳನ್ನು ಮಣಿಸುವ ಚಾತುರ್ಯ ಹೊಂದಿರುವ ಮಂಜು, ಕೆಲವೊಮ್ಮೆ ಎಲ್ಲ ವಿಷಯಗಳಲ್ಲೂ ಅತಿರೇಕವಾಗಿ ಮಾತನಾಡುತ್ತಿದ್ದಾರೆ.

ಅವರು ಈ ವಾರ ಬಳಕೆ ಮಾಡಿದ ಅವಾಚ್ಯ ಶಬ್ದಗಳು ಮನೆಯ ವಾತಾವರಣವನ್ನು ಹದಗೆಡಿಸಿವೆ. ಮಂಜು ಹಾಗೂ ಯಶಸ್, ಮಂಜು ಮತ್ತು ಸೌಂದರ್ಯಾ ನಡುವೆ ತೀವ್ರ ಕಿರಿಕ್ ನಡೆದಿದೆ.

BBK 13: ಗಗನ್ ಹಾಗೂ ಗಾನವಿ ನಡುವಿನ ವಾಗ್ದಾಳಿ

ಮನೆಯಲ್ಲಿ ಗಗನ್ ಹಾಗೂ ಗಾನವಿ ನಡುವಿನ ಸಂಬಂಧವು ಮೊದಲಿನಿಂದಲೂ ಏರಿಳಿತಗಳಿಂದ ಕೂಡಿದೆ. ಟಾಸ್ಕ್ ವೇಳೆ ಗಗನ್ ಅವರನ್ನು ‘ಕುನ್ನಿ’ ಎಂದು ಕರೆಯುವ ಮೂಲಕ ಗಾನವಿ ಟ್ರಿಗರ್ ಮಾಡಿದ್ದರು.

ಇದರ ಬೆನ್ನಲ್ಲೇ ಕಳಪೆ ಕೊಡುವ ಸಂದರ್ಭದಲ್ಲಿ ‘ನೀನು ಹಾಕುವ ಪ್ಯಾಂಟ್ ಬೆಲೆ ಬಾಳಲ್ಲ’ ಎಂದು ಗಗನ್ ಆಡಿದ ಮಾತುಗಳು ವಿಕೋಪಕ್ಕೆ ತಿರುಗಿದವು. ಈ ಜಗಳ ಅವಾಚ್ಯ ಶಬ್ದಗಳ ಬಳಕೆ ಹಾಗೂ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.