Daily Horoscope: ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಭಾದ್ರಪದ ಮಾಸದ ಕೃಷ್ಣ ಪಕ್ಷದ ಚತುರ್ದಶೀ ತಿಥಿಯ ಶುಕ್ರವಾರದ ಈ ದಿನ ಅನವಶ್ಯಕ ಪ್ರತಿಜ್ಞೆ, ಅನಿರೀಕ್ಷಿತ ಗೆಲುವು, ದೈವಭಕ್ತಿ ಮತ್ತು ಸರ್ಕಾರಿ ಕಾರ್ಯಗಳು ನೆರವೇರಲಿವೆ. ಆದರೆ ಅಪಘಾತ, ಅನಾರೋಗ್ಯ, ಅಪನಂಬಿಕೆ ಹಾಗೂ ಒಡನಾಟದಲ್ಲಿ ಸಣ್ಣಪುಟ್ಟ ತೊಂದರೆಗಳು ಎದುರಾಗುವ ಸಾಧ್ಯತೆ ಇರುವುದರಿಂದ ಎಚ್ಚರ ಅಗತ್ಯ.
ಇಂದಿನ ಚಾಂದ್ರಮಾನ ಭಾದ್ರಪದ, ಸೌರಮಾನ ಕನ್ಯಾ ಮಾಸ, ಹಸ್ತಾ ಮಹಾನಕ್ಷತ್ರ ಹಾಗೂ ಉತ್ತರಾಫಲ್ಗುಣೀ ನಿತ್ಯನಕ್ಷತ್ರಗಳ ಶುಭ ಸಂಯೋಗವಿದೆ. ಬ್ರಹ್ಮ ಯೋಗ ಮತ್ತು ಶಕುನಿ ಕರಣವಿದ್ದು, ಸೂರ್ಯೋದಯ ಬೆಳಿಗ್ಗೆ 06:10ಕ್ಕೆ ಹಾಗೂ ಸೂರ್ಯಾಸ್ತ ಸಂಜೆ 06:03ಕ್ಕೆ ಆಗಲಿದೆ.
ಇಂದಿನ ಶುಭಾಶುಭ ಕಾಲಗಳನ್ನು ಗಮನಿಸುವುದಾದರೆ, ಬೆಳಿಗ್ಗೆ 10:38 ರಿಂದ 12:07 ರವರೆಗೆ ರಾಹು ಕಾಲವಿರುತ್ತದೆ. ಯಮಗಂಡ ಕಾಲ ಮಧ್ಯಾಹ್ನ 03:05 ರಿಂದ 04:34 ಹಾಗೂ ಗುಳಿಕ ಕಾಲ ಬೆಳಿಗ್ಗೆ 07:39 ರಿಂದ 09:09 ರವರೆಗೆ ಇರಲಿದೆ.
ಮೇಷ ರಾಶಿ
ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಕೆಲವು ಬದಲಾವಣೆಗಳಾಗಬಹುದು. ದುಬಾರಿ ಸಾಹಸಗಳಿಗೆ ಕೈಹಾಕುವ ಮುನ್ನ ವಿವೇಚನೆ ಬಳಸಿ. ವಾಹನ ಖರೀದಿ ವ್ಯವಹಾರ ಪೂರ್ಣಗೊಳ್ಳುವುದು ಕಷ್ಟ. ಸಹೋದರರಲ್ಲಿ ಆಪ್ತತೆ ಹೆಚ್ಚಾಗಲಿದ್ದು, ಕೈತಪ್ಪಿದ ವಸ್ತುವನ್ನು ಪುನಃ ಸ್ವಾಧೀನಪಡಿಸಿಕೊಳ್ಳುವಿರಿ.
ವೃಷಭ ರಾಶಿ
ಬಹುದಿನಗಳ ನಂತರ ಪುಣ್ಯಕ್ಷೇತ್ರಗಳ ದರ್ಶನಕ್ಕಾಗಿ ದೂರಪ್ರಯಾಣ ಬೆಳೆಸುವಿರಿ. ಸಾಮಾಜಿಕ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಪ್ರೇಮ ನಿವೇದನೆಗೆ ಹಿಂಜರಿಯುವಿರಿ. ತುರ್ತು ಅಗತ್ಯಕ್ಕಾಗಿ ಇಟ್ಟಿದ್ದ ಹಣವನ್ನು ವೆಚ್ಚ ಮಾಡಬೇಕಾಗಿ ಬರಬಹುದು.
ಮಿಥುನ ರಾಶಿ
ಉದ್ಯೋಗದಲ್ಲಿ ಮನಸ್ತಾಪಗಳು ಬಂದು ಕೆಲಸ ತೊರೆಯುವ ಆಲೋಚನೆ ಮೂಡಬಹುದು. ಮೇಲಧಿಕಾರಿಗಳ ಜೊತೆ ವಾಗ್ವಾದ ಬೇಡ. ಮನಸ್ಸಿಗೆ ಏಕಾಂತ ಬೇಕೆನಿಸಿ ದೂರ ಎಲ್ಲಾದರೂ ತೆರಳಲು ಇಷ್ಟಪಡುವಿರಿ. ಸಮಾಧಾನದಿಂದ ನಿರ್ಧಾರ ತಗೊಳ್ಳಿ.
ಕರ್ಕಾಟಕ ರಾಶಿ
ಸರ್ಕಾರಿ ಅಧಿಕಾರಿಗಳಿಂದ ಕೊಂಚ ಕಿರಿಕಿರಿ ಉಂಟಾಗಬಹುದು. ಮನಸ್ಸಿನಲ್ಲಿ ಅಜ್ಞಾತ ಭಯ ಕಾಡಲಿದೆ. ಮಕ್ಕಳ ನಡೆಸಿ ಕಿರಿಕಿರಿ ಎದುರಾಗಬಹುದು. ಹಣಕಾಸಿನ ವಿಚಾರದಲ್ಲಿ ತಾಳ್ಮೆ ವಹಿಸುವುದು ಮುಖ್ಯ. ಕುಲದವರಿಂದ ಸೂಕ್ತ ಗೌರವ ಸಿಗಲಿದೆ.
ಸಿಂಹ ರಾಶಿ
ಲಾಭವಿಲ್ಲದ ಪ್ರಯಾಣದಿಂದ ಬೇಸರವಾಗಬಹುದು. ಪ್ರಶಂಸೆಯ ಜೊತೆಗೆ ಹೆಚ್ಚುವರಿ ಜವಾಬ್ದಾರಿಗಳು ಹೆಗಲೇರಲಿವೆ. ಮಕ್ಕಳಿಂದ ಪ್ರೀತಿ ಸಿಗಲಿದೆ. ಅಧಿಕ ಖರ್ಚುಗಳನ್ನು ನಿಯಂತ್ರಿಸುವುದು ಒಳಿತು. ಇಂದು ಆರಂಭಿಸುವ ಕೆಲಸ ಮುಗಿಯಲು ಹೆಚ್ಚು ಸಮಯ ಬೇಕಾಗಬಹುದು.
ಕನ್ಯಾ ರಾಶಿ
ಕಚೇರಿಯಲ್ಲಿ ಅಧಿಕಾರಿಗಳಿಗೆ ಒತ್ತಡ ಹೆಚ್ಚಿರಲಿದೆ. ಮಾತನಾಡುವಾಗ ಸ್ಪಷ್ಟತೆ ಇರಲಿ. ಹಣಕಾಸಿನ ಲೆಕ್ಕಾಚಾರದಲ್ಲಿ ಗೊಂದಲ ಉಂಟಾಗಬಹುದು. ಅಪರಿಚಿತರು ಅಥವಾ ಶತ್ರುಗಳಿಂದ ಕೆಲಸಕ್ಕೆ ಅಡೆತಡೆ ಬರಬಹುದು. ವಿದ್ಯಾರ್ಥಿಗಳು ಯೋಗ್ಯ ಉದ್ಯೋಗಕ್ಕಾಗಿ ಅನ್ವೇಷಣೆ ನಡೆಸುವರು.
ತುಲಾ ರಾಶಿ
ಬಹುದಿನಗಳ ನಿರುದ್ಯೋಗ ಸಮಸ್ಯೆ ಬಗೆಹರಿದು ಸಂತಸ ತರಲಿದೆ. ಭೂ ಲಾಭವಿದ್ದರೂ ಕೊನೆ ಕ್ಷಣದಲ್ಲಿ ಕೈತಪ್ಪಬಹುದು. ಉನ್ನತ ವ್ಯಾಸಂಗಕ್ಕಾಗಿ ಸ್ನೇಹಿತನ ಜೊತೆ ತೆರಳುವಿರಿ. ಸ್ಥಾನಚ್ಯುತಿಯ ಭಯ ಕಾಡಬಹುದು, ತಾಳ್ಮೆಯಿಂದಿರಿ.
ವೃಶ್ಚಿಕ ರಾಶಿ
ಅಸೂಯೆಯ ಸ್ವಭಾವದಿಂದ ನಷ್ಟ ಉಂಟಾಗಬಹುದು. ಸ್ನೇಹಿತರ ನೆರವು ಬಲ ತರಲಿದೆ. ದಾಂಪತ್ಯದಲ್ಲಿ ಮಧುರ ಕ್ಷಣಗಳು ಇರಲಿವೆ. ವ್ಯಾಪಾರದಲ್ಲಿ ಮಿತ ಲಾಭಕ್ಕೆ ತೃಪ್ತಿಪಡಿ. ಪ್ರಭಾವಿ ವ್ಯಕ್ತಿಗಳ ಭೇಟಿಯಾಗಲಿದೆ.
ಧನು ರಾಶಿ
ನಾನಾ ಮೂಲಗಳಿಂದ ಅನಿರೀಕ್ಷಿತ ಹಣ ಹರಿದುಬರಲಿದೆ. ಹೂಡಿಕೆ ವಿಷಯದಲ್ಲಿ ಜಾಗರೂಕರಾಗಿರಿ, ನಷ್ಟವಾಗುವ ಸಾಧ್ಯತೆ ಇದೆ. ಇತರರ ಕೆಲಸಗಳಿಗಿಂತ ಸ್ವಂತ ಕೆಲಸದ ಕಡೆ ಹೆಚ್ಚಿನ ಗಮನ ನೀಡಿ. ಬದಲಾಯಿಸಲು ಸಾಧ್ಯವಿಲ್ಲದ್ದನ್ನು ಒಪ್ಪಿಕೊಳ್ಳಲು ಕಲಿಯಿರಿ.
ಮಕರ ರಾಶಿ
ಹಿರಿಯರೆದುರು ವಿನಯದಿಂದ ನಡೆದುಕೊಳ್ಳುವುದು ಶ್ರೇಯಸ್ಕರ. ದೇವತಾ ಕಾರ್ಯಗಳು ಮುಂದೂಡಲ್ಪಡಬಹುದು. ಬಿಡುವಿನ ಸಮಯವನ್ನು ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿ, ಮನಸ್ಸಿಗೆ ನೆಮ್ಮದಿ ಸಿಗಲಿದೆ. ಪ್ರೇಮಿಗಳ ನಡುವೆ ಪರಸ್ಪರ ಮೆಚ್ಚುಗೆ ವ್ಯಕ್ತವಾಗಲಿದೆ.
ಕುಂಭ ರಾಶಿ
ಕೋಪದಲ್ಲಿ ಬಾಯಿ ತಪ್ಪಿ ಮಾತನಾಡಿ ತೊಂದರೆಗೆ ಸಿಲುಕಬೇಡಿ. ದೂರದೃಷ್ಟಿಯಿಂದ ಮುಂಬರುವ ತೊಂದರೆಯನ್ನು ತಡೆಯುವಿರಿ. ಯಂತ್ರೋಪಕರಣಗಳ ವ್ಯಾಪಾರಿಗಳಿಗೆ ಲಾಭದಾಯಕ ದಿನ. ಯಾರಾದರೂ ಉಚಿತವಾಗಿ ಕೊಡುವ ವಸ್ತುಗಳನ್ನು ಸ್ವೀಕರಿಸದಿರಿ.
ಮೀನ ರಾಶಿ (Daily Horoscope)
ನಕಾರಾತ್ಮಕ ಆಲೋಚನೆಗಳನ್ನು ದೂರವಿಡಿ. ಕಚೇರಿಯಲ್ಲಿ ಒತ್ತಡದ ನಡುವೆಯೂ ಮೇಲಧಿಕಾರಿಗಳ ಮೆಚ್ಚುಗೆ ಗಳಿಸುವಿರಿ. ಕೇವಲ ಆಸೆ ಪಡದೇ ಪ್ರಯತ್ನಕ್ಕೂ ಒತ್ತು ನೀಡಿ. ಮಕ್ಕಳ ಕಡೆಗೆ ಹೆಚ್ಚಿನ ಗಮನ ಹರಿಸುವುದು ಕಡ್ಡಾಯ.




