KEA AYUSH 2026: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಆಯುಷ್ ಕೋರ್ಸ್ಗಳ ಪ್ರವೇಶಾತಿಯ ಕುರಿತು ಅತ್ಯಂತ ಪ್ರಮುಖ ಸೂಚನೆಯೊಂದನ್ನು ಬಿಡುಗಡೆ ಮಾಡಿದೆ. ಆಯುರ್ವೇದ ಹಾಗೂ ಹೋಮಿಯೋಪತಿ ಕೋರ್ಸ್ಗಳ ಮೊದಲ ಸುತ್ತಿನ ಸೀಟು ಹಂಚಿಕೆಗಾಗಿ ಆಪ್ಷನ್ ಎಂಟ್ರಿ ಪ್ರಕ್ರಿಯೆ ಪ್ರಸ್ತುತ ಆರಂಭವಾಗಿದೆ. ಅರ್ಹ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ತಮ್ಮ ಕಾಲೇಜು ಹಾಗೂ ಕೋರ್ಸ್ ಆದ್ಯತೆಗಳನ್ನು ದಾಖಲಿಸಲು ಕೆಇಎ ಅವಕಾಶ ನೀಡಿದೆ.
ಆಪ್ಷನ್ ಎಂಟ್ರಿಗೆ ಅಕ್ಟೋಬರ್ 12 ಕೊನೆ ದಿನ
ಆಯುಷ್ ಸೀಟು ಹಂಚಿಕೆಯಲ್ಲಿ ಭಾಗವಹಿಸಲು ಬಯಸುವ ಅಭ್ಯರ್ಥಿಗಳು ಅಕ್ಟೋಬರ್ 7ರ ಮಧ್ಯಾಹ್ನ 2 ಗಂಟೆಯಿಂದಲೇ ಆಪ್ಷನ್ ಎಂಟ್ರಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ವಿದ್ಯಾರ್ಥಿಗಳು ಅಕ್ಟೋಬರ್ 12ರ ಬೆಳಿಗ್ಗೆ 11 ಗಂಟೆಯವರೆಗೆ ತಮ್ಮ ಆಪ್ಷನ್ಗಳನ್ನು ದಾಖಲಿಸಲು ಸಮಯ ನೀಡಲಾಗಿದೆ. ಯುಜಿ ನೀಟ್ನಲ್ಲಿ ಉತ್ತಮ ರಾಂಕ್ ಪಡೆದು, ಈಗಾಗಲೇ ಕೆಇಎ ವೆರಿಫಿಕೇಷನ್ ಸ್ಲಿಪ್ ಹೊಂದಿರುವ ಅಭ್ಯರ್ಥಿಗಳು ಮಾತ್ರ ಈ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು.
ಇದನ್ನು ಓದಿ: KEA UGNEET 2026: ಮೆಡಿಕಲ್, ಡೆಂಟಲ್ 3ನೇ ಸುತ್ತಿನ ಫಲಿತಾಂಶ ಪ್ರಕಟ
ಯಾರಿಗೆ ಅವಕಾಶವಿಲ್ಲ?
ಈಗಾಗಲೇ ವೈದ್ಯಕೀಯ (MBBS) ಕೋರ್ಸ್ಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಇದರಲ್ಲಿ ಅವಕಾಶವಿರುವುದಿಲ್ಲ. ಅಷ್ಟೇ ಅಲ್ಲದೆ, 3ನೇ ಸುತ್ತಿನ ಕೌನ್ಸೆಲಿಂಗ್ನಲ್ಲಿ ವೈದ್ಯಕೀಯ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳು ಕೂಡ ಈ ಆಯುಷ್ ಕೌನ್ಸೆಲಿಂಗ್ನಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಈ ನಿಯಮವನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ.
KEA AYUSH 2026: ದಾಖಲೆಗಳ ಪರಿಶೀಲನೆ ಅತ್ಯಗತ್ಯ
ಇತರ ಕೋರ್ಸ್ಗಳಿಗೆ ಸೇರಿರುವ ಅಭ್ಯರ್ಥಿಗಳು ಆಯುಷ್ ಆಪ್ಷನ್ ಎಂಟ್ರಿ ಮಾಡುವ ಮುನ್ನ ಎಚ್ಚರ ವಹಿಸಬೇಕು. ತಾವು ವ್ಯಾಸಂಗ ಮಾಡುತ್ತಿರುವ ಪ್ರಸ್ತುತ ಕಾಲೇಜಿನಿಂದ ಮೂಲ ದಾಖಲೆಗಳು ಸರಿಯಾಗಿ ಸಿಗುತ್ತವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಏಕೆಂದರೆ ಆಯುಷ್ನಲ್ಲಿ ಹೊಸ ಸೀಟು ಸಿಕ್ಕ ತಕ್ಷಣ ನಿಮ್ಮ ಹಳೆಯ ಸೀಟು ಸ್ವಯಂಚಾಲಿತವಾಗಿ ರದ್ದಾಗುತ್ತದೆ. ನಂತರ ದಾಖಲೆಗಳಿಲ್ಲದೆ ತೊಂದರೆ ಅನುಭವಿಸಬಾರದು ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ. ಹೆಚ್ಚಿನ ಮಾಹಿತಿಗಾಗಿ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಐಎಎಸ್ ಅವರು ವೆಬ್ಸೈಟ್ ಗಮನಿಸಲು ಸೂಚಿಸಿದ್ದಾರೆ.




