ಬಿಗ್ಬಾಸ್ ಕನ್ನಡ (Bigg Boss Kannada) ಶುರುವಾಗಿ 13 ವರ್ಷಗಳಾಗಿವೆ. ಆಗಿನಿಂದ ಈಗಿನವರೆಗೆ ಸುದೀಪ್ ಒಬ್ಬರೇ ಶೋ ನಡೆಸಿಕೊಂಡು ಬರುತ್ತಿದ್ದಾರೆ. ಸುದೀಪ್ ಬಿಟ್ಟರೆ ಇನ್ನೊಬ್ಬ ಸೆಲೆಬ್ರಿಟಿಯನ್ನು ಆ ವೇದಿಕೆ ಮೇಲೆ ಊಹಿಸಲು ಸಹ ಸಾಧ್ಯವಾಗುವುದಿಲ್ಲ ಅಷ್ಟರ ಮಟ್ಟಿಗೆ ಅವರು ಶೋ ಅನ್ನು ಆವರಿಸಿಕೊಂಡಿದ್ದಾರೆ. ಈ ಹದಿಮೂರು ವರ್ಷಗಳಲ್ಲಿ ಸುದೀಪ್ ಅವರು ನೂರಾರು ಸ್ಪರ್ಧಿಗಳನ್ನು ನೋಡಿದ್ದಾರೆ, ನೂರಾರು ಭಿನ್ನ ವ್ಯಕ್ತಿತ್ವದ ಸ್ಪರ್ಧಿಗಳ ಜೊತೆಗೆ ಮಾತನಾಡಿದ್ದಾರೆ. ಆದರೆ ಈ ವರೆಗೆ ಯಾರೂ ಸಹ ಸುದೀಪ್ ಅವರಿಗೆ ಅವಮಾನ ಮಾಡುವ ಮಾಡುವ ಕಾರ್ಯ ಮಾಡಿರಲಿಲ್ಲ. ಆದರೆ ಸೀಸನ್ 13ರಲ್ಲಿ ಅದು ಸಹ ನಡೆದು ಬಿಟ್ಟಿದೆ.
ನಿನ್ನೆ (ಶನಿವಾರ) ಎಪಿಸೋಡಿನಲ್ಲಿ ಬಿಗ್ಬಾಸ್ ವೇದಿಕೆ ಮೇಲೆ ಸುದೀಪ್ ಅವರಿಗೆ ಅವಮಾನ ಆಗಿದೆ. ಈ ಬಗ್ಗೆ ಖುದ್ದು ಸುದೀಪ್ ಅವರೇ ಮಾತನಾಡಿದ್ದಾರೆ. ಮೊದಲಿಗೆ ಸುದೀಪ್ ಅವರು ಸ್ಪರ್ಧಿಗಳೊಟ್ಟಿಗೆ ಮಾತನಾಡುವಾಗ ಕಟಕಟೆಯಲ್ಲಿ ನಿಂತಿದ್ದ ಗಾನವಿ ಮತ್ತು ಕಾವ್ಯಾ ತಮ್ಮ ಪಾಡಿಗೆ ಮಾತನಾಡುತ್ತಾ, ವಾದ-ಪ್ರತಿವಾದ ಮಾಡಲು ಪ್ರಾರಂಭಿಸಿದರು. ಸುದೀಪ್ ಅವರಿಗೆ ಮಾತನಾಡಲು ಅವಕಾಶ ಕೊಡಲು, ಕೂಡಲೇ ಸುದೀಪ್ ಅವರ ಕೈಯನ್ನು ಮೇಜಿಗೆ ಕುಟ್ಟಿ, ವೇದಿಕೆಯಿಂದಲೇ ಹೊರಗೆ ನಡೆದು ಬಿಟ್ಟರು.
ಇದನ್ನೂ ಓದಿ: ಹೆಣ್ಮಕ್ಕಳ ತೊಡೆ ಮೇಲೆ ಮಲಗು’: ಶಾಸ್ತ್ರಿ ಬಗ್ಗೆ ಕೀಳು ಮಾತು
ಆದರೆ ಅದಾದ ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಮರಳಿ ಬಂದು ಶೋ ಅನ್ನು ಪ್ರಾರಂಭಿಸಿದರು. ಆದರೆ ಗಾನವಿ ತಮ್ಮ ವರ್ತನೆಯಿಂದ ಬುದ್ಧಿ ಕಲಿತಿರಲಿಲ್ಲ. ಸುದೀಪ್ ಅವರು ಮತ್ತೆ ಬಂದು ಉಸ್ತುವಾರಿಗಳ ಏಕಪಕ್ಷೀಯ ಆಟದ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಆಗ ಗಾನವಿ ಮಧ್ಯೆ ಪ್ರವೇಶಿಸಿ ನಮ್ಮ ತಂಡಕ್ಕೆ ಬಿಗ್ಬಾಸ್ ಅನ್ಯಾಯ ಮಾಡಿದ್ದಾರೆ ಎಂದು ವಾದಿಸಲು ಆರಂಭಿಸಿದರು. ಸುದೀಪ್ ಅವರು ಪದೇ ಪದೇ ಹಾಗೆ ಆಗಲು ಸಾಧ್ಯವಿಲ್ಲ ಎಂದು ವಿವರಿಸುತ್ತಿದ್ದರೂ ಸಹ ಗಾನವಿ ಒಪ್ಪಲು ತಯಾರೇ ಇರಲಿಲ್ಲ. ಕೊನೆಗೆ ಸುದೀಪ್ ಅವರು ಗಾನವಿಗೆ ಸಾವಧಾನವಾಗಿ ವಿವರಿಸಲು ಯತ್ನಿಸಿದಾಗ, ಗಾನವಿ ಉದ್ದೇಶಪೂರ್ವಕವಾಗಿ ಸುದೀಪ್ ಅವರ ಮಾತು ಆಲಿಸದೆ ಬೇರೆಲ್ಲೋ ನೋಡುತ್ತಾ ಕುಳಿತರು, ಇದನ್ನು ನೋಡಿದ ಸುದೀಪ್ ಅವರಿಗೆ ಸಿಟ್ಟು ಒಮ್ಮೆಲೆ ನೆತ್ತಿಗೇರಿತು.
ಸುದೀಪ್ ಹೇಳಿದ್ದೇನು?
‘ನನಗೆ ಅವಮಾನ ಮಾಡುವ ಪ್ರಯತ್ನ ಬೇಡ, ನನಗೆ ಅಥವಾ ಈ ಬಿಗ್ಬಾಸ್ ವೇದಿಕೆಗೆ ಅವಮಾನ ಮಾಡುವ ಪ್ರಯತ್ನ ಮಾಡಬೇಡಿ ಗಾನವಿ. ಹಾಗೇನಾದರೂ ಇದ್ದರೆ ಹೇಳಿ, ನಾನೇ ಬಾಗಿಲು ತೆಗೆಸುತ್ತೀನಿ, ಶೋ ಇಂದ ಹೊರಗೆ ಹೋಗುತ್ತಾ ಇರಬಹುದು’ ಎಂದು ಸಿಟ್ಟಿನಿಂದ ಹೇಳಿದರು. ಕಿಚ್ಚನ ಸಿಟ್ಟಿಗೆ ಗಾನವಿ ಸುಮ್ಮನಾಗಿಬಿಟ್ಟರು. ಆದರೆ ನಿನ್ನೆಯ ಎಪಿಸೋಡಿನಲ್ಲಿ ಗಾನವಿ ಹಲವು ಬಾರಿ ಸುದೀಪ್ ಮಾತನಾಡುವಾಗ ಮಧ್ಯೆ ಮಾತನಾಡುವುದು, ಸುದೀಪ್ ಅವರ ಮಾತಿಗೆ ಗಮನ ಕೊಡದೇ ಇರುವುದು, ಸುದೀಪ್ ಅವರ ಸೂಕ್ತ ವಿವರಣೆಯನ್ನು ಒಪ್ಪದೇ ಅಸಂತುಷ್ಟಿ ಪ್ರದರ್ಶಿಸುವುದು ಮಾಡಿದರು. ಇಷ್ಟು ವರ್ಷಗಳ ಬಿಗ್ಬಾಸ್ ಇತಿಹಾಸದಲ್ಲಿಯೇ ಸುದೀಪ್ ಅವರ ಮಾತನ್ನು ಯಾವ ಸ್ಪರ್ಧಿಯೂ ಅಲಕ್ಷಿಸಿರಲಿಲ್ಲ.




