☔ Weather
Bengaluru: ☁️ 21°C | AQI 60
Mysore: ☁️ 22°C | AQI 62
Mangalore: ☁️ 26°C | AQI 70
Bengaluru: ☁️ 21°C | AQI 60

Bigg Boss 13: ಜೈಲಿನಲ್ಲೂ ತರಕಾರಿ ಕಟ್ ಮಾಡಲ್ಲ ಎಂದ ಕಿರಣ್ ಶಾಸ್ತ್ರಿ; ಮಂಜ್ಯಾ ಸಾರಿ ಕೇಳಿದ್ದೇಗೆ?

Bigg Boss 13: Kiran Shastri Refuses Jail Work

Bigg Boss 13: ಬಿಗ್ ಬಾಸ್ ಕನ್ನಡ ಸೀಸನ್-13ರಲ್ಲಿ ದಿನದಿಂದ ದಿನಕ್ಕೆ ಡ್ರಾಮಾ ಹೆಚ್ಚಾಗುತ್ತಿದೆ. ಈ ವಾರ ಕಿರಣ್ ಶಾಸ್ತ್ರಿ ಮನೆಯ ಸದಸ್ಯರಿಂದ ಕಳಪೆ ಪಟ್ಟ ಪಡೆದು ಜೈಲು ಸೇರಿದ್ದಾರೆ. ಆದರೆ ಜೈಲಿಗೆ ಹೋದ ಮೇಲೂ ಅವರ ಕಿರಿಕ್ ಮಾತ್ರ ನಿಂತಿಲ್ಲ.

ಮನೆಯ ಬಹುತೇಕ ಸದಸ್ಯರು ಕಿರಣ್ ಅವರ ಮಾತು ಮತ್ತು ವರ್ತನೆಯಿಂದ ಬೇಸತ್ತು ಅವರಿಗೆ ಕಳಪೆ ನೀಡಿದ್ದರು. ಹೀಗಾಗಿ ಅವರು ಬೆಂಡಾದ ಐಫಿಲ್ ಟವರ್ ಜೈಲು ಸೇರಬೇಕಾಯಿತು. ಆದರೆ ಜೈಲಿನಲ್ಲಿ ನೀಡಿದ ಕೆಲಸವನ್ನು ಮಾಡಲು ಅವರು ನೇರವಾಗಿ ನಿರಾಕರಿಸಿದ್ದಾರೆ.

ಸಾಮಾನ್ಯವಾಗಿ ಜೈಲಿಗೆ ಹೋದ ಸ್ಪರ್ಧಿಗಳು ತರಕಾರಿ ಕಟ್ ಮಾಡುವ ಕೆಲಸ ಮಾಡಬೇಕು. ಧನುಷ್ ಮಂಜುನಾಥ್ ತರಕಾರಿ ತಂದುಕೊಟ್ಟಾಗ, ಕಿರಣ್ ಶಾಸ್ತ್ರಿ ನಾನು ಈ ಕೆಲಸ ಮಾಡುವುದಿಲ್ಲ ಎಂದು ತಕರಾರು ತೆಗೆದಿದ್ದಾರೆ.

ಮಾಡರ್ನ್ ಕವಿ ಮಂಜ್ಯಾ ಜೊತೆ ಗಲಾಟೆ

ಕಿರಣ್ ಕೆಲಸ ಮಾಡಲ್ಲ ಎಂದಾಗ ಮಾಡರ್ನ್ ಕವಿ ಮಂಜ್ಯಾ ಗರಂ ಆಗಿದ್ದಾರೆ. “ಇರೋದು ಇದೊಂದೇ ಕೆಲಸ, ಮಾಡು” ಎಂದು ಮಂಜ್ಯಾ ಹೇಳಿದ್ದಾರೆ. ಅದಕ್ಕೆ ಕಿರಣ್ “ನೀನು ನನಗೆ ಹೇಳಲು ಯಾರು?” ಎಂದು ಎದುರುತ್ತರ ಕೊಟ್ಟಿದ್ದಾರೆ. ಕೊನೆಗೆ ಮಂಜ್ಯಾ ತಮ್ಮದೇ ಶೈಲಿಯಲ್ಲಿ ಕಿರಣ್‌ಗೆ ಕ್ಷಮೆ ಕೇಳುವ ಸನ್ನಿವೇಶವೂ ನಡೆದಿದೆ.

Bigg Boss 13: ಕಿರಣ್‌ಗೆ ಸಿಗುತ್ತಾ ಕಿಚ್ಚನ ಚಪ್ಪಾಳೆ?

ಸಾಮಾಜಿಕ ಜಾಲತಾಣಗಳಲ್ಲಿ ಈ ವಾರ ಕಿರಣ್ ಶಾಸ್ತ್ರಿಗೆ ಕಿಚ್ಚನ ಚಪ್ಪಾಳೆ ಸಿಗಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಕಿಚ್ಚ ಸುದೀಪ್ ಅವರು ಕಿರಣ್ ಆಟವನ್ನು ಮೆಚ್ಚಿ ಚಪ್ಪಾಳೆ ಕೊಡ್ತಾರಾ ಅಥವಾ ಕ್ಲಾಸ್ ತಗೊಳ್ತಾರಾ ಎಂಬ ಕುತೂಹಲ ಪ್ರೇಕ್ಷಕರಲ್ಲಿದೆ.

ಮನೆಯಿಂದ ತಾಂಡವ್ ರಾಮ್ ಎಮರ್ಜೆನ್ಸಿ ಎಕ್ಸಿಟ್

ಇನ್ನೊಂದೆಡೆ ದೊಡ್ಮನೆಯಿಂದ ಪ್ರಬಲ ಸ್ಪರ್ಧಿ ತಾಂಡವ್ ರಾಮ್ ಎಮರ್ಜೆನ್ಸಿ ಎಕ್ಸಿಟ್ ಆಗಿದ್ದಾರೆ. ಈಗಾಗಲೇ ಪ್ರಥಮ ಪ್ರಸಾದ್ ಎಲಿಮಿನೇಟ್ ಆಗಿ ಹೊರಬಂದಿದ್ದರು. ಆ ಬಳಿಕ ಡೈರೆಕ್ಟರ್ ಓಂ ಪ್ರಕಾಶ್ ರಾವ್ ಅನಾರೋಗ್ಯದ ಕಾರಣ ಆಟ ಅರ್ಧಕ್ಕೆ ನಿಲ್ಲಿಸಿ ಹೊರನಡೆದಿದ್ದರು. ಈಗ ತಾಂಡವ್ ರಾಮ್ ಕೂಡ ಮನೆಗೆ ಹೋಗಿರುವುದು ಶೋಗೆ ದೊಡ್ಡ ಟ್ವಿಸ್ಟ್ ನೀಡಿದೆ.