☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

Bigg Boss Kannada: ಬಿಗ್​​ಬಾಸ್ ಬಾಸ್ ಮನೆಯಲ್ಲಿ ಕಟ್ಟಪ್ಪ, ಶಿವಗಾಮಿ: ಯಾರದು?

Bigg Boss Kannada

ಬಿಗ್​​ಬಾಸ್ (Bigg Boss Kannada) ಮನೆಯಲ್ಲಿ ಸ್ಪರ್ಧಿಗಳು ಪರಸ್ಪರ ಸ್ನೇಹಿತರಾಗುವುದು, ಜೋಡಿಗಳಾಗುವುದು, ಸಹೋದರ-ಸಹೋದರಿಯರಂತೆ ಹತ್ತಿರವಾಗುವುದು ಸಾಮಾನ್ಯ. ಈ ಬಾರಿ ಬಿಗ್​​ಬಾಸ್ ಮನೆಯಲ್ಲಿ ಸೆಲಿಬ್ರಿಟಿಗಳ ಜೊತೆಗೆ ಸಾಮಾನ್ಯರೂ ಸಹ ಸೇರಿರುವ ಕಾರಣ ಆಟದ ರೀತಿ-ಗತಿಯಲ್ಲಿ ಬದಲಾವಣೆಗಳಾಗಿವೆ. ಸಾಮಾನ್ಯರ ಖೋಟಾದಿಂದ ಬಂದಿರುವ ಸ್ಪರ್ಧಿಗಳು ನಿಧಾನಕ್ಕೆ ಮನೆಯ ಇತರ ಸ್ಪರ್ಧಿಗಳ ಜೊತೆಗೆ ಬೆರೆಯಲು ಪ್ರಾರಂಭಿಸಿದ್ದಾರೆ. ಇದರ ನಡುವೆ ಮನೆಯಲ್ಲಿ ಒಬ್ಬ ಶಿವಗಾಮಿ ಮತ್ತು ಕಟ್ಟಪ್ಪ ಸಹ ಹುಟ್ಟುಕೊಂಡಿದ್ದಾರೆ. ಯಾರದು?

ಬಿಗ್​​ಬಾಸ್ ಮನೆಯಲ್ಲಿ ಒಬ್ಬ ಕಟ್ಟಪ್ಪ ಮತ್ತು ಒಬ್ಬ ಶಿವಗಾಮಿ ಇದ್ದಾರೆ. ಶಿವಗಾಮಿ ನೀಡಿದ ಆದೇಶವನ್ನು ಶಿರಸಾವಹಿಸಿ ಪಾಲಿಸುವುದೇ ಕಟ್ಟಪ್ಪನ ಕಾರ್ಯವಾಗಿದೆ. ಬಿಗ್​​ಬಾಸ್ ಮನೆಯ ಕಟ್ಟಪ್ಪ ಮಾಡರ್ನ್ ಕವಿ ಮಂಜು ಮತ್ತು ಶಿವಗಾಮಿ ಕ್ಯಾಪ್ಟನ್ ಸಂಗೀತಾ ಭಟ್. ಈ ಮಾತನ್ನು ಖುದ್ದು ಮಾಡರ್ನ್ ಮಹಾಕವಿ ಮಂಜನೇ ಹೇಳಿದ್ದಾನೆ.

ಮನೆಯಲ್ಲಿ ನಡೆದಿದ್ದೇನು?

ನಿನ್ನೆ (ಶುಕ್ರವಾರದ ಎಪಿಸೋಡ್​​)ನಲ್ಲಿ ಬಿಗ್​​ಬಾಸ್ ಲೈಫ್ ಜಾಕೆಟ್ ಕಳಿಸಿದ್ದರು. ಆ ಜಾಕೆಟ್ ಧರಿಸಿ ಮನೆ ಸ್ಪರ್ಧಿಗಳು ತಾವೇಕೆ ಮನೆಯಲ್ಲಿ ಉಳಿದುಕೊಳ್ಳಬೇಕು ಎಂದು ಹೇಳಬೇಕು ಅಂತಿಮವಾಗಿ ಯಾರ ಮೈಮೇಲೆ ಜಾಕೆಟ್ ಇರುತ್ತದೆಯೋ ಅವರು ಉಳಿದುಕೊಳ್ಳುತ್ತಾರೆ ಎಂದಿತ್ತು. ಈ ಆಟವನ್ನು ಆಡಿಸುವಾಗ ಮಂಜನನ್ನು ಕರೆದು ಸಂಗೀತಾ ಅವರು ಜಾಕೆಟ್ ನೀಡಿದರು. ಅದಾದ ಸ್ವಲ್ಪ ಹೊತ್ತಿನ ಬಳಿಕ ಆ ಜಾಕೆಟ್ ಅನ್ನು ಮಂಜನಿಂದ ತೆಗೆಸಿ ಶಾಸ್ತ್ರಿಗೆ ಕೊಟ್ಟರು.

ಸಂಗೀತಾ ಹೇಳಿದ ಆದೇಶವನ್ನು ಪಾಲಿಸುವೆ ಎಂದ ಮಂಜ, ‘ನೀವು ಶಿವಗಾಮಿ, ನಾನೇ ಕಟ್ಟಪ್ಪ, ನಿಮ್ಮ ಆದೇಶ ಪಾಲಿಸುವುದೇ ನನ್ನ ಕೆಲಸ’ ಎಂದ. ಹೇಳಿದ್ದು ಮಾತ್ರವಲ್ಲ ಹಾಗೆಯೇ ವರ್ತಿಸಿದ ಸಹ. ಕಿರಣ್ ಶಾಸ್ತ್ರಿ ನಿದ್ದೆ ಮಾಡಿ ನಿಯಮ ಮುರಿದಾಗ ಸಂಗೀತಾ ಅವರ ಆದೇಶದಂತೆ ಮಂಜನೇ ಮುಂದೆ ನಿಂತು ಶಾಸ್ತ್ರಿಯನ್ನು ಮನೆಯ ಸ್ವಿಮ್ಮಿಂಗ್ ಪೂಲ್​​ಗೆ ತಳ್ಳಿದ ಬಳಿಕ ಸಂಗೀತಾಗೆ ಜೈಕಾರಗಳನ್ನು ಸಹ ಹಾಕಿದ.

ಮಂಜನ ಬೋಳು ತಲೆ, ಸಂಗೀತಾ ಅವರ ಗಾಂಭೀರ್ಯ ತುಂಬಿದ ಮುಖ, ಕಟ್ಟಪ್ಪ ಮತ್ತು ಶೀವಗಾಮಿಗೆ ಸೂಕ್ತವಾಗಿ ಹೋಲಿಕೆ ಆಗುತ್ತದೆ. ಇದರ ಕುರಿತು ಈಗಾಗಲೇ ಮೀಮ್​​ಗಳು ಹರಿದಾಡಲು ಆರಂಭವಾಗಿವೆ.