☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

Bigg Boss: ಎರಡೇ ವಾರಕ್ಕೆ ಮುರಿದ ಗೆಳೆತನ, ವೈರಿಗಳಾದ ‘ಅಗ್ನಿ ಬಾಯ್ಸ್’

ಬಿಗ್​​ಬಾಸ್ ಕನ್ನಡ ಸೀಸನ್ 13 (Bigg Boss Kannada season 13) ಬಹಳ ವಿಶೇಷ. ಏಕೆಂದರೆ ಈ ಬಾರಿ ಸೆಲೆಬ್ರಿಟಿಗಳ ಜೊತೆಗೆ ಸಾಮಾನ್ಯರನ್ನೂ ಸಹ ಮನೆಯ ಒಳಗೆ ಕಳಿಸಲಾಗಿದೆ. ಮಾಡರ್ನ್ ಮಹಾ ಕವಿ ಮಂಜ, ಲಿಖಿತ್ ಗೋಂಧಿ, ಕಿರಣ್ ಶಾಸ್ತ್ರಿ ಹಾಗೂ ಧನುಶ್ ಅವರುಗಳನ್ನು ಅಗ್ನಿಪರೀಕ್ಷೆ ಶೋ ಮೂಲಕ ಆಯ್ಕೆ ಮಾಡಿ ಮನೆಯ ಒಳಗೆ ಕಳಿಸಿಕೊಡಲಾಗಿದೆ. ಆರಂಭದ ವಾರದಲ್ಲಿ ಈ ಅಗ್ನಿ ಬಾಯ್ಸ್ ಬಹಳ ಆಪ್ತವಾಗಿದ್ದರು. ಅವರದ್ದೇ ಒಂದು ತಂಡ ಮಾಡಿಕೊಂಡಿದ್ದರು. ಬಹಳ ಹತ್ತಿರವಾಗಿದ್ದರು ಆದರೆ ಎರಡೇ ವಾರಕ್ಕೆ ಇವರ ನಡುವೆ ಬಿರುಕು ಮೂಡಿದ್ದು, ಪರಸ್ಪರ ವೈರಿಗಳಾಗಿಬಿಟ್ಟಿದ್ದಾರೆ.

ಮೊದಲೆರಡು ವಾರ ಅಗ್ನಿ ಬಾಯ್ಸ್ ಬಲು ಹತ್ತಿರವಾಗಿದ್ದರು. ನಾಲ್ಕೂ ಜನ ಸೇರಿ ಇತರೆ ಸ್ಪರ್ಧಿಗಳನ್ನು ಬಹಳ ಗೋಳೂ ಹೊಯ್ದುಕೊಂಡರು, ವ್ಯಂಗ್ಯ ಮಾಡಿದರು. ಒಳ್ಳೆಯ ಆಟವನ್ನೂ ಆಡಿದರು. ಆದರೆ ಅದರ ಜೊತೆಗೆ ಸಾಕಷ್ಟು ಸಮಸ್ಯೆಗಳನ್ನು ಸಹ ಮನೆಯಲ್ಲಿ ಸೃಷ್ಟಿಸಿದರು. ಇದೇ ಕಾರಣಕ್ಕೆ ಕಳೆದ ವಾರಾಂತ್ಯದ ವೇಳೆ ಸುದೀಪ್, ಇವರಿಗೆ ಬುದ್ಧಿ ಹೇಳಿದ್ದಲ್ಲದೆ, ಮುಂದಿನ ಬಾರಿ ಅಗ್ನಿಪರೀಕ್ಷೆಯೇ ಬೇಡ ಎಂದು ಬಿಟ್ಟರು.

ಅದಾದ ಕೇವಲ ಒಂದೇ ವಾರದಲ್ಲಿ ಸಾಮಾನ್ಯರ ಖೋಟಾದಿಂದ ಬಂದ ಸ್ಪರ್ಧಿಗಳ ಗೆಳೆತನ ಮುರಿದು ಚೂರು-ಚೂರಾಗಿದೆ. ಒಬ್ಬೊಬ್ಬರು ಒಂದೊಂದು ದಾರಿ ಆಗಿದ್ದಾರೆ. ಯಾವ ಮಟ್ಟಿಗೆ ಇವರ ಗೆಳೆತನ ಮುರಿದಿದೆ ಎಂದರೆ ಪರಸ್ಪರರನ್ನೇ ನಾಮಿನೇಟ್ ಮಾಡಿಕೊಂಡು ಹೊರಗೆ ಹಾಕಲು ಯತ್ನಿಸುತ್ತಿದ್ದಾರೆ. ಒಬ್ಬರನ್ನು ಇನ್ನೊಬ್ಬರು ತುಳಿಯಲು ಯತ್ನಿಸುತ್ತಿದ್ದಾರೆ.

ಮಂಜ ಹಾಗೂ ಶಾಸ್ತ್ರಿ ಅಂತೂ ಪರಸ್ಪರ ವೈರಿಗಳೇ ಆಗಿಬಿಟ್ಟಿದ್ದಾರೆ. ಕಳೆದ ವಾರ ಇಬ್ಬರೂ ಒಟ್ಟಿಗೆ ಹೊರಗೆ ಹೋಗಿ ಒಳಗೆ ಬಂದಾಗಿನಿಂದಲೂ ಪರಸ್ಪರ ಕಿತ್ತಾಡುತ್ತಲೇ ಇದ್ದಾರೆ. ಇನ್ನು ಮಂಜ, ಅವಕಾಶ ಸಿಕ್ಕಾಗೆಲ್ಲ ಧನುಶ್​​ ಕಾಲೆಳೆಯುವುದು, ಟಾಸ್ಕ್​​ಗಳಲ್ಲಿ ಧನುಶ್ ಎದುರಾಳಿಗಳಿಗೆ ಬೆಂಬಲ ನೀಡುವುದು ಮಾಡುತ್ತಲೇ ಇರುತ್ತಾರೆ. ಧನುಶ್ ಸಹ ಮಂಜನನ್ನೇ ಟಾರ್ಗೆಟ್ ನಾಮಿನೇಟ್ ಮಾಡುವುದು, ಕಳಪೆ ಕೊಡುವುದು ಮಾಡುತ್ತಿದ್ದಾರೆ. ಲಿಖಿತ್ ಸಹ ಹೊರತಲ್ಲ. ಲಿಖಿತ್​​ ಮಂಜನಿಗೆ ಹತ್ತಿರ ಇದ್ದರೂ ಸಹ ಶಾಸ್ತ್ರಿ ಹಾಗೂ ಧನುಶ್ ಮೇಲೆ ದ್ವೇಷ ಇರಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ ಮೊದಲ ವಾರ ಒಟ್ಟೊಟ್ಟಿಗೆ ಗುಂಪಾಗಿ ಇದ್ದ ಸಾಮಾನ್ಯರು ಎರಡು ವಾರ ಮುಗಿಯುತ್ತಿದ್ದಂತೆ ಅಪ್ಪಟ ವೈರಿಗಳೇ ಆಗಿಬಿಟ್ಟಿದ್ದಾರೆ.