☔ Weather
Bengaluru: ☁️ 22°C | AQI 58
Mysore: 🌤️ 24°C | AQI 63
Mangalore: ☁️ 28°C | AQI 71
Bengaluru: ☁️ 22°C | AQI 58

Dadasaheb Phalke Award: ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಅನಂತ್ ನಾಗ್ ಅವರಿಗೆ ಸಿಗುವ ಮೊತ್ತ ಎಷ್ಟು?

What did Anant Nag get along with Dadasaheb Phalke Award

ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ‘ದಾದಾ ಸಾಹೇಬ್ ಫಾಲ್ಕೆ’ (Dadasaheb Phalke award) ಪ್ರಶಸ್ತಿಯನ್ನು ನಿನ್ನೆ (ಸೆಪ್ಟೆಂಬರ್ 22) ಅನಂತ್ ನಾಗ್ (Anant Nag) ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪಡೆದುಕೊಂಡಿದ್ದಾರೆ. ಯಾವುದೇ ಭಾರತೀಯ ಕಲಾವಿದನಿಗೆ ಸಿಗಬಹುದಾದ ಅತ್ಯುನ್ನತ ಗೌರವ ಇದು. ಅನಂತ್ ನಾಗ್ ಅಂಥಹ ಅದ್ಭುತ ಕಲಾವಿದರಿಗೆ ತಡವಾದರೂ ಈ ಗೌರವ ದೊರೆತಿದ್ದು ಕನ್ನಡಿಗರ ಪಾಲಿಗೆ ಹೆಮ್ಮೆಯ ವಿಷಯ. ಅಂದಹಾಗೆ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ ಏನನ್ನು ಒಳಗೊಂಡಿರುತ್ತದೆ? ಇಲ್ಲಿದೆ ಅದರ ಮಾಹಿತಿ.

ಸಾಮಾನ್ಯವಾಗಿ ಯಾವುದೇ ದೊಡ್ಡ ಪ್ರಶಸ್ತಿಗಳ ಜೊತೆಗೆ ನಗದು ಬಹುಮಾನವನ್ನು ಒಳಗೊಂಡಿರುತ್ತವೆ. ಆಸ್ಕರ್ ಗೆದ್ದವರಿಗೆ ಕೋಟ್ಯಂತರ ರೂಪಾಯಿ ಹಣವನ್ನು ಪ್ರಶಸ್ತಿ ಜೊತೆಗೆ ನೀಡಲಾಗುತ್ತದೆ. ಹಾಗೆಯೇ ‘ದಾದಾ ಸಾಹೇಬ್ ಫಾಲ್ಕೆ’ ಗೆದ್ದವರಿಗೂ ಸಹ ಅದರ ಜೊತೆಗೆ ನಗದು ಬಹುಮಾನವನ್ನು ಗೌರವ ಪೂರ್ವಕವಾಗಿ ನೀಡಲಾಗುತ್ತದೆ. ನಿನ್ನೆ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್ ಅವರಿಗೂ ಸಹ ಪ್ರಶಸ್ತಿಯ ಜೊತೆಗೆ ಹಣವನ್ನು ‘ಬಹುಮಾನ’ವಾಗಿ ನೀಡಲಾಗಿದೆ.

ಪ್ರಶಸ್ತಿಯ ಜೊತೆಗೆ ಸಿಗುವುದೇನು?

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಗೆದ್ದ ವ್ಯಕ್ತಿಗಳಿಗೆ ಒಂದು ಸುಂದರವಾದ ರೇಷಿಮೆ ಶಾಲು, ರಾಷ್ಟ್ರಪತಿ ಅವರ ಸಹಿ ಉಳ್ಳ ಪ್ರಮಾಣ ಪತ್ರ ಅಥವಾ ಹಳೆಯ ಕಾಲದ ಓಲೆ ಮಾದರಿಯ ಪತ್ರ. ಒಂದು ಸ್ವರ್ಣ ಕಮಲ ಹಾಗೂ 15 ಲಕ್ಷ ರೂಪಾಯಿ ಹಣ ನೀಡಲಾಗುತ್ತದೆ. ಅನಂತ್‌ನಾಗ್ ಅವರಿಗೂ ಸಹ ನಿನ್ನೆಯ ಸಮಾರಂಭದಲ್ಲಿ ಇವುಗಳನ್ನೇ ನೀಡಲಾಗಿದೆ. ಸರ್ಕಾರವು ನೀಡುವ ಈ ಬಹುಮಾನದ ಮೊತ್ತಕ್ಕೆ ತೆರಿಗೆ ಇರುವುದಿಲ್ಲ. ಇನ್ನು ಪ್ರಶಸ್ತಿ ಪುರಸ್ಕೃತರಿಗೆ ನೀಡಲಾಗುವ ಸ್ವರ್ಣ ಕಮಲ, ನಿಜವಾದ ಚಿನ್ನದಿಂದ ಮಾಡಿದ್ದಾಗಿರುವುದಿಲ್ಲ ಬದಲಿಗೆ ಕಂಚಿನದ್ದಾಗಿರುತ್ತದೆ ಅದರ ಮೇಲೆ ಬಂಗಾರದ ಹೊದಿಕೆ ಇರುತ್ತದೆ.

ಅನಂತ್ ನಾಗ್ ಅವರು 50ಕ್ಕೂ ಹೆಚ್ಚು ವರ್ಷಗಳಿಂದ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಪ್ರಶಸ್ತಿಯ ಜೊತೆಗೆ ನೀಡಲಾದ 15 ಲಕ್ಷ ಮೊತ್ತ ನಗಣ್ಯ. ಆದರೆ ಸರ್ಕಾರವು ಅವರ ಸೇವೆಯನ್ನು ಗುರುತಿಸಿ ಅವರ ಸೇವೆ ಪ್ರಶಸ್ತಿಗೆ ಅರ್ಹ ಎಂದು ನಿರ್ಣಯಸಿದ್ದನ್ನು ಕೋಟಿಗಳಿಂದಲೂ ಅಳೆಯಲು ಸಾಧ್ಯವಿಲ್ಲದ್ದು. 

ಪ್ರಶಸ್ತಿಯ ಹಿರಿಮೆ-ಗರಿಮೆ

ದಾದಾ ಸಾಹೇಬ್ ಫಾಲ್ಕೆ ಮಾತ್ರವಲ್ಲ, ನಿನ್ನೆ ಹಲವು ಸಿನಿ ಕರ್ಮಿಗಳಿಗಳಿಗೆ ಪ್ರಶಸ್ತಿಯ ಜೊತೆಗೆ 3 ಲಕ್ಷ ರೂ, 2 ಲಕ್ಷ ರೂ. ಕೆಲವರಿಗೆ 1 ಲಕ್ಷ ರೂ ನಗದು ನೀಡಲಾಯ್ತು. ಆದರೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಹಿರಿಮೆ ಆ ನಗದು ಬಹುಮಾನದಲ್ಲಿ ಅಡಕವಾಗಿಲ್ಲ. ಬದಲಿಗೆ ಪ್ರಶಸ್ತಿಗೆ ಅರ್ಹ ಎನಿಸಿಕೊಳ್ಳುವುದರಲ್ಲೇ ಇದೆ.