‘ಒರಿಜಿನಲ್ ಮಾನ್ಸ್ಟರ್’ ಮೋಷನ್ ಪೋಸ್ಟರ್ ಲಾಂಚ್‌ಗಾಗಿ ಮುಂಬೈಗೆ ತೆರಳಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ಗೆ ಮಾಧ್ಯಮದವರು ‘ಟಾಕ್ಸಿಕ್’ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಶಿವಣ್ಣ, “ಚಿತ್ರದಲ್ಲಿ ಏನೋ ಹೊಸ ವಿಚಾರ ಹೇಳಲು ಪ್ರಯತ್ನಿಸಿದ್ದು ಹಲವರಿಗೆ ಇಷ್ಟವಾಗಿದೆ. ಬಿಡುವು ಮಾಡಿಕೊಂಡು ಖಂಡಿತ ಸಿನಿಮಾ ನೋಡುತ್ತೇನೆ” ಎಂದಿದ್ದಾರೆ.




