Photo Credits: @prajwal_karsh (Instagram)
ಸ್ಯಾಂಡಲ್‌ವುಡ್‌ನ ಪ್ರಸಿದ್ಧ ‘ಡೈನಾಮಿಕ್’ ಕುಟುಂಬದಲ್ಲಿ ಈಗ ಮದುವೆ ಸಂಭ್ರಮ ಶುರುವಾಗಿದೆ. ನಟ ದೇವರಾಜ್ ಅವರ ಕಿರಿಯ ಮಗ ಪ್ರಣಮ್ ದೇವರಾಜ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ತಮ್ಮ ಪ್ರೇಯಸಿ ನಮಿತಾ ಅವರೊಂದಿಗೆ ಪ್ರಣಮ್ ಉಂಗುರ ಬದಲಾಯಿಸಿಕೊಂಡಿದ್ದಾರೆ. ಕುಟುಂಬದ ಹಿರಿಯರ ಸಮ್ಮುಖದಲ್ಲಿ ಈ ಕಾರ್ಯಕ್ರಮ ಸರಳವಾಗಿ ನಡೆದಿದೆ.
ಇದು ಲವ್ ಕಮ್ ಅರೇಂಜ್ಡ್ ಮದುವೆಯಾಗಿದ್ದು, ಶೀಘ್ರದಲ್ಲೇ ಮದುವೆ ದಿನಾಂಕ ಹೊರಬೀಳಲಿದೆ.
ಮುಂದೆ ನಿಂತು ಕಾರ್ಯಕ್ರಮ ನಡೆಸಿಕೊಟ್ಟ ಪ್ರಜ್ವಲ್-ರಾಗಿಣಿ ಜೋಡಿ
ಈ ಎಂಗೇಜ್‌ಮೆಂಟ್ ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿಯನ್ನು ಪ್ರಣಮ್ ಅಣ್ಣ ಪ್ರಜ್ವಲ್ ದೇವರಾಜ್ ವಹಿಸಿಕೊಂಡಿದ್ದರು. ಪ್ರಜ್ವಲ್ ಮತ್ತು ಪತ್ನಿ ರಾಗಿಣಿ ಮುಂದೆ ನಿಂತು ಸಮಾರಂಭವನ್ನು ನಡೆಸಿಕೊಟ್ಟರು.
ಚಿತ್ರರಂಗದ ಆಪ್ತರು ಹಾಗೂ ಹತ್ತಿರದ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹೊಸ ಜೋಡಿಗೆ ಎಲ್ಲರೂ ಹಾರೈಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಪ್ರಣಮ್ ಮತ್ತು ನಮಿತಾಗೆ ಶುಭಾಶಯ ತಿಳಿಸುತ್ತಿದ್ದಾರೆ.
ಸಿನಿಮಾ ಜರ್ನಿ ಮತ್ತು ಹೊಸ ಬಾಳು
ಪ್ರಣಮ್ ದೇವರಾಜ್ ‘ಕುಮಾರಿ 21 ಎಫ್’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಎಂಟ್ರಿ ಕೊಟ್ಟಿದ್ದರು. ನಂತರ ‘ಸನ್ ಆಫ್ ಮುತ್ತಣ್ಣ’ ಸೇರಿದಂತೆ ವಿಭಿನ್ನ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಈಗ ಸಾಲು ಸಾಲು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ವೈಯಕ್ತಿಕ ಜೀವನದ ಈ ಹೊಸ ಇನ್ನಿಂಗ್ಸ್ ಪ್ರಣಮ್ ಅವರಿಗೆ ಇನ್ನಷ್ಟು ಯಶಸ್ಸು ತರಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.




