YASH TOXIC: ‘ಟಾಕ್ಸಿಕ್’ ಹೊಸ ಇತಿಹಾಸ ಕೆತ್ತಲಿ ಎಂದು ಕವನ ಬರೆದು ಹಾರೈಸಿದ ಯೋಗರಾಜ್ ಭಟ್

ಯಶ್ ಸಿನಿಮಾಗೆ ಯೋಗರಾಜ್ ಭಟ್ ಶುಭ ಹಾರೈಕೆ

Photo Credits: @yogarajbhatofficial (Instagram)

‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಜಗತ್ತಿನಾದ್ಯಂತ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರಿಂದ ಸಕಲ ಕಡೆಗಳಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಚಿತ್ರತಂಡಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಪ್ರೇಕ್ಷಕರ ಜೊತೆಗೆ ಚಿತ್ರರಂಗದ ಗಣ್ಯರು ಕೂಡ ಯಶ್ ಪ್ರಯತ್ನಕ್ಕೆ ಸಾಥ್ ನೀಡುತ್ತಿದ್ದಾರೆ.

ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರು ‘ಟಾಕ್ಸಿಕ್’ ಚಿತ್ರದ ಯಶಸ್ಸಿಗೆ ವಿಶೇಷವಾಗಿ ಶುಭ ಹಾರೈಸಿದ್ದಾರೆ. ತಮ್ಮದೇ ಶೈಲಿಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಯೋಗರಾಜ್ ಭಟ್ ಬರೆದ ಪದ್ಯ ವೈರಲ್

ಯೋಗರಾಜ್ ಭಟ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪುಟ್ಟ ಪದ್ಯದ ರೀತಿಯಲ್ಲಿ ಸಾಲುಗಳನ್ನು ಬರೆದುಕೊಂಡು ತಮ್ಮ ಶುಭಾಶಯ ತಿಳಿಸಿದ್ದಾರೆ. ಅವರ ಈ ಪೋಸ್ಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

“ಅಭೂತಪೂರ್ವ ಪ್ರಯತ್ನ ‘ಟಾಕ್ಸಿಕ್’ ಸಿನಿಮಾ ಹೊಸ ಇತಿಹಾಸ ಕೆತ್ತಲೆಂದು ಹಾರೈಸುತ್ತಾ” ಎಂದು ಮನಸಾರೆ ಶುಭ ಕೋರಿದ್ದಾರೆ.

Photo Credits: @yogarajbhatofficial (Instagram)

12 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ‘ಟಾಕ್ಸಿಕ್’ ಅಬ್ಬರ

‘ಟಾಕ್ಸಿಕ್’ ಚಿತ್ರವು ವಿಶ್ವಾದ್ಯಂತ ಒಟ್ಟು 6 ಭಾಷೆಗಳಲ್ಲಿ ಬೃಹತ್ ಮಟ್ಟದಲ್ಲಿ ತೆರೆಕಂಡಿದೆ. ವಿಶ್ವದಾದ್ಯಂತ ಬರೋಬ್ಬರಿ 12 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶನಗೊಳ್ಳುತ್ತಿದೆ.

ಭಾರತ ಒಂದರಲ್ಲೇ 5,500ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಆಗಿ ಧೂಳೆಬ್ಬಿಸುತ್ತಿದೆ. ಯಶ್ ಮಾಸ್ ಲುಕ್ ಮತ್ತು ಗೀತು ಮೋಹನ್‌ದಾಸ್ ಟೇಕಿಂಗ್‌ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಇನ್ನು ನಮ್ಮ ಕರ್ನಾಟಕದಲ್ಲೇ 500ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗಿದ್ದು, ಪ್ರತಿಯೊಂದು ಶೋಗಳೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿವೆ.