MAGICC SHORT FILM: ರಿಷಬ್ ಶೆಟ್ಟಿ ಹೊಸ ಸಾಹಸ; ಗಿಮಿಕ್ ಅಲ್ಲ, ಇದು ನಿಜವಾದ ‘ಮ್ಯಾಜಿಕ್’

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ

Photo Credits: @rishabshettyfilms (Instagram)

                           @aadityabpujar (Instagram)

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಚಿತ್ರ ನಿರ್ಮಾಣದಿಂದ ಹಿಂದೆ ಸರಿದಿಲ್ಲ. ಆರಂಭದಿಂದಲೂ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುತ್ತಾ ಬಂದಿರುವ ಅವರು ಇದೀಗ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ.

ತಮ್ಮ ‘ರಿಷಬ್ ಶೆಟ್ಟಿ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ಅವರು ‘ಮ್ಯಾಜಿಕ್’ ಎಂಬ ವಿಶಿಷ್ಟ ಕಿರುಚಿತ್ರವನ್ನು ನಿರ್ಮಿಸಿದ್ದಾರೆ. ಹಿರಿಯ ಸಾಹಿತಿ ಹಾಗೂ ಸಿನಿಮಾ ಪತ್ರಕರ್ತ ಜೋಗಿ ಅವರ ಕತೆಯನ್ನು ಆಧರಿಸಿ ಈ ಚಿತ್ರ ರೂಪಿಸಲಾಗಿದೆ.

ಆಗಸ್ಟ್ 23ರಂದು ಈ ಕಿರುಚಿತ್ರದ ಆಕರ್ಷಕ ಟೀಸರ್ ಬಿಡುಗಡೆಯಾಗಿದೆ. ಟೀಸರ್‌ನ ಕೊನೆಯಲ್ಲಿಯೇ ಚಿತ್ರದ ಬಿಡುಗಡೆ ದಿನಾಂಕವನ್ನು ಕೂಡ ಪ್ರಕಟಿಸಿರುವುದು ವಿಶೇಷ.

ಗಮನ ಸೆಳೆಯುತ್ತಿರುವ ‘ಮ್ಯಾಜಿಕ್’ ಟೀಸರ್ ಹಾಗೂ ರಿಲೀಸ್ ಡೇಟ್…

‘ಮ್ಯಾಜಿಕ್’ ಚಿತ್ರದ ಟೀಸರ್ ಅತ್ಯಂತ ಕುತೂಹಲಕಾರಿಯಾಗಿ ಮೂಡಿಬಂದಿದೆ. ಟೀಸರ್‌ನಲ್ಲಿ ಜಾದೂಗಾರನೊಬ್ಬ ವೇದಿಕೆಯ ಮೇಲೆ ಬಂದು “ನನ್ನ ಮಿಸ್ ಮಾಡ್ಕೊಂಡ್ರಾ?” ಎಂದು ಕೇಳುವ ದೃಶ್ಯ ಎಲ್ಲರ ಗಮನ ಸೆಳೆಯುತ್ತಿದೆ.

ಈ ಕಿರುಚಿತ್ರವು ಇದೇ ಆಗಸ್ಟ್ 31, 2026ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ. ಅಷ್ಟೇ ಅಲ್ಲದೆ ರಿಷಬ್ ಶೆಟ್ಟಿ ಫಿಲ್ಮ್ಸ್ ಪೇಜ್‌ನಲ್ಲಿ ಚಿತ್ರದ ಪೋಸ್ಟರ್ ಶೇರ್ ಮಾಡಲಾಗಿದೆ.

“ಸುತ್ತಲಿನ ಸದ್ದು ಅಡಗಿದಾಗ, ಉಳಿಯುವುದೇನು?” ಎಂಬ ಪೋಸ್ಟರ್ ಮೇಲಿನ ಸಾಲುಗಳು ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ.

Photo Credits: @rishabshettyfilms (Instagram)

ಜೋಗಿ ಕತೆಗೆ ಶಿವಚಿರಂತನ ನಿರ್ದೇಶನ…

ಸಾಹಿತಿ ಜೋಗಿ ಅವರ ಕತೆಯನ್ನು ಸಿನಿಮಾ ಮಾಡಬೇಕು ಎಂಬ ಆಸೆ ರಿಷಬ್ ಶೆಟ್ಟಿ ಅವರಿಗೆ ಇತ್ತು. ಇದೀಗ ಆ ಕತೆಗೆ ಶಿವಚಿರಂತನ ಅವರು ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

ಈ ಚಿತ್ರದಲ್ಲಿ ಆದಿತ್ಯ ಪೂಜಾರ್ ಮುಖ್ಯ ಪಾತ್ರದಲ್ಲಿ ಜಾದೂಗಾರನಾಗಿ ನಟಿಸಿದ್ದಾರೆ. ಇವರ ಜೊತೆಗೆ ಭುವನ್ ರೆಡ್ಡಿ ಛಾಯಾಗ್ರಹಣ ಹಾಗೂ ನಚಿಕೇತನ್ ಶರ್ಮಾ ಸಂಗೀತ ನಿರ್ದೇಶನ ಮಾಡಿದ್ದಾರೆ.

ಒಟ್ಟಿನಲ್ಲಿ ಹೊಸಬರ ಈ ವಿಶಿಷ್ಟ ಕಂಟೆಂಟ್ ಆಧಾರಿತ ‘ಮ್ಯಾಜಿಕ್’ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.