Photo Credits: @govt_job_alert_24 (Instagram)
ಸಂಕ್ಷಿಪ್ತ ವಿವರಣೆ: ಆರ್ಮಿ ಆರ್ಡ್‌ನನ್ಸ್ ಕಾರ್ಪ್ಸ್ (AOC) 2,615 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. 10th, 12th ಹಾಗೂ ಪದವಿ ಮುಗಿಸಿದ ಅಭ್ಯರ್ಥಿಗಳು ಉಚಿತವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಭಾರತೀಯ ಸೇನೆಯ ಆರ್ಮಿ ಆರ್ಡ್‌ನನ್ಸ್ ಕಾರ್ಪ್ಸ್ (AOC) ನಲ್ಲಿ ಉದ್ಯೋಗ ಬಯಸುತ್ತಿರುವ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ. AOC ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 2,615 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಗಸ್ಟ್ 24, 2026 ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಸೆಪ್ಟೆಂಬರ್ 23, 2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ನೇಮಕಾತಿಯ ಪ್ರಮುಖ ಮುಖ್ಯಾಂಶಗಳು…
- ನೇಮಕಾತಿ ಸಂಸ್ಥೆ: ಆರ್ಮಿ ಆರ್ಡ್‌ನನ್ಸ್ ಕಾರ್ಪ್ಸ್ (Army Ordnance Corps – AOC)
- ಹುದ್ದೆಗಳ ಹೆಸರು: ಜೂನಿಯರ್ ಆಫೀಸ್ ಅಸಿಸ್ಟೆಂಟ್, ಟ್ರೇಡ್ಸ್‌ಮ್ಯಾನ್ ಮೇಟ್, ಫೈರ್‌ಮ್ಯಾನ್, ಮೆಟೀರಿಯಲ್ ಅಸಿಸ್ಟೆಂಟ್, ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS)
- ಒಟ್ಟು ಹುದ್ದೆಗಳು: 2,615
- ಮಾಸಿಕ ವೇತನ: ₹18,000 ರಿಂದ ₹92,300/-
- ವಯೋಮಿತಿ: 18 ರಿಂದ 30 ವರ್ಷಗಳು
- ಅರ್ಜಿ ಶುಲ್ಕ: ಉಚಿತ (ಯಾವುದೇ ಶುಲ್ಕವಿಲ್ಲ)

Photo Credits: @govt_job_alert_24 (Instagram)
ಪ್ರಮುಖ ದಿನಾಂಕಗಳು…
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 24 ಆಗಸ್ಟ್ 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23 ಸೆಪ್ಟೆಂಬರ್ 2026
ಶೈಕ್ಷಣಿಕ ಅರ್ಹತೆ…
ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ, 12ನೇ ತರಗತಿ ಅಥವಾ ಪದವಿ ಪೂರ್ಣಗೊಳಿಸಿರಬೇಕು.
ಆಯ್ಕೆ ಪ್ರಕ್ರಿಯೆ; ಅಭ್ಯರ್ಥಿಗಳನ್ನು ಈ ಕೆಳಗಿನ ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ…
- ಲಿಖಿತ ಪರೀಕ್ಷೆ
- ದೈಹಿಕ ಕ್ಷಮತೆ ಪರೀಕ್ಷೆ
- ದಾಖಲೆಗಳ ಪರಿಶೀಲನೆ
- ವೈದ್ಯಕೀಯ ತಪಾಸಣೆ
ಅರ್ಜಿ ಶುಲ್ಕದ ವಿವರ…
- ಸಾಮಾನ್ಯ ವರ್ಗ (GEN): ₹0/- (ಉಚಿತ)
- OBC ಅಭ್ಯರ್ಥಿಗಳಿಗೆ: ₹0/- (ಉಚಿತ)
- SC / ST ಅಭ್ಯರ್ಥಿಗಳಿಗೆ: ₹0/- (ಉಚಿತ)




