QUATLE KITCHEN GRAND FINALE: ಕಲರ್ಸ್ ಕನ್ನಡದ ‘ಕ್ವಾಟ್ಲೆ ಕಿಚನ್’ ಕಿರೀಟ ಸೂರಜ್ ಪಾಲು; ರನ್ನರ್ ಅಪ್ ನಟ ಭವಿಶ್‌ಗೆ ಸಿಕ್ಕಿದ್ದೆಷ್ಟು?…

'ಕ್ವಾಟ್ಲೆ ಕಿಚನ್ ಸೀಸನ್ 2' ಗ್ರ್ಯಾಂಡ್ ಫಿನಾಲೆ ...

Photo Credits: @surajsinghh_96 (Instagram)

‘ಕಲರ್ಸ್ ಕನ್ನಡ’ ವಾಹಿನಿಯ ಅಡುಗೆ ರಿಯಾಲಿಟಿ ಶೋ ‘ಕ್ವಾಟ್ಲೆ ಕಿಚನ್ ಸೀಸನ್ 2’ ಗ್ರ್ಯಾಂಡ್ ಫಿನಾಲೆ ಸಖತ್ ಅದ್ಧೂರಿಯಾಗಿ ಮುಕ್ತಾಯಗೊಂಡಿದೆ. ಅಡುಗೆ ಮನೆಯಲ್ಲಿ ನೀಡಲಾಗಿದ್ದ ಕಠಿಣ ನಿಯಮಗಳು ಹಾಗೂ ತುಂಟಾಟದ ವಿಚಿತ್ರ ಸವಾಲುಗಳನ್ನು ಮೀರಿ ನಿಂತ ಸೂರಜ್ ಸಿಂಗ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ವೀಕ್ಷಕರ ಅಪಾರ ಮೆಚ್ಚುಗೆ ಗಳಿಸಿದ ಈ ಶೋ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಸೂರಜ್‌ ಗೆಲುವಿಗೆ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಅಡುಗೆ ಮನೆಯ ತುಂಟಾಟದ ಸವಾಲು ಮೆಟ್ಟಿ ನಿಂತು ಗೆದ್ದ ಸೂರಜ್ ಸಿಂಗ್…

‘ಕ್ವಾಟ್ಲೆ ಕಿಚನ್’ ಕೇವಲ ರುಚಿಕರವಾದ ಅಡುಗೆ ಮಾಡುವ ಸಾಮಾನ್ಯ ಕುಕ್ಕಿಂಗ್ ಶೋ ಆಗಿರಲಿಲ್ಲ. ಅಡುಗೆ ತಯಾರಿಸುವ ವೇಳೆ ಸ್ಪರ್ಧಿಗಳಿಗೆ ನೀಡಲಾಗುತ್ತಿದ್ದ ತುಂಟಾಟದ ಹಾಗೂ ಗೊಂದಲಮಯ ಸವಾಲುಗಳನ್ನು ನಿಭಾಯಿಸುವುದೇ ದೊಡ್ಡ ಸಾಹಸವಾಗಿತ್ತು. ಶೋ ಆರಂಭವಾದ ಮೊದಲ ದಿನದಿಂದಲೇ ಸೂರಜ್ ಸಿಂಗ್ ತಮ್ಮ ಕ್ರಿಯೇಟಿವಿಟಿ ಹಾಗೂ ತಾಳ್ಮೆಯಿಂದ ಜಡ್ಜಸ್ ಗಮನ ಸೆಳೆದರು. ಎಷ್ಟೇ ಕಷ್ಟದ ಪರಿಸ್ಥಿತಿಯಲ್ಲೂ ಧೃತಿಗೆಡದೆ, ಸಮಯಪ್ರಜ್ಞೆಯಿಂದ ಅತ್ಯುತ್ತಮ ಅಡುಗೆ ತಯಾರಿಸಿ ಸೈ ಎನಿಸಿಕೊಂಡರು. ಅಡುಗೆ ಮನೆಯ ತೀವ್ರ ಕಾಂಪಿಟೇಷನ್ ನಡುವೆಯೂ ಕೂಲ್ ಆಗಿ ಸವಾಲುಗಳನ್ನು ಎದುರಿಸಿದ್ದು ಸೂರಜ್‌ಗೆ ದೊಡ್ಡ ಪ್ಲಸ್ ಪಾಯಿಂಟ್ ಆಯಿತು.

Photo Credits: @surajsinghh_96 (Instagram)

3 ಲಕ್ಷ ರೂ. ನಗದು ಬಹುಮಾನ, ಆಕರ್ಷಕ ಗಿಫ್ಟ್ ಹ್ಯಾಂಪರ್ ಹಾಗೂ ರನ್ನರ್ ಅಪ್ ಪಡೆದಿದ್ದೆಷ್ಟು?…

ಸಖತ್ ರಂಗಾರಂಗಾಗಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ವಿನ್ನರ್ ಸೂರಜ್ ಸಿಂಗ್ ಅವರಿಗೆ ಸೀಸನ್ 2ರ ಕಿರೀಟ ತೊಡಿಸಲಾಯಿತು. ಟ್ರೋಫಿ ಜೊತೆಗೆ 3 ಲಕ್ಷ ರೂಪಾಯಿ ಭಾರಿ ಮೊತ್ತದ ಕ್ಯಾಶ್ ಪ್ರೈಜ್ ಹಾಗೂ ಆಕರ್ಷಕ ಗಿಫ್ಟ್ ಹ್ಯಾಂಪರ್‌ಗಳನ್ನು ನೀಡಲಾಯಿತು. ಇನ್ನೊಂದೆಡೆ ಕಠಿಣ ಪೈಪೋಟಿ ನೀಡಿ ಶೋನ ರನ್ನರ್ ಅಪ್ ಆದ ನಟ ಭವಿಶ್ ಅವರಿಗೆ 1 ಲಕ್ಷ ರೂ. ನಗದು ಬಹುಮಾನ ಸಿಕ್ಕಿದೆ. “ಕುಕ್ಕಿಂಗ್ ನನ್ನ ಪ್ಯಾಶನ್ ಆಗಿತ್ತು, ಈಗ ರಿಯಾಲಿಟಿ ಶೋ ಗೆಲ್ಲುವ ಮಟ್ಟಿಗೆ ಬಂದಿದ್ದಕ್ಕೆ ತುಂಬಾ ಖುಷಿಯಾಗಿದೆ” ಎಂದು ಸೂರಜ್ ಸಂತಸ ಹಂಚಿಕೊಂಡಿದ್ದಾರೆ. “ಶೋನ ಎಲ್ಲಾ ಸ್ಪರ್ಧಿಗಳು ಮತ್ತು ಕುಕ್‌ಗಳ ಶ್ರಮವೇ ಈ ಟ್ರೋಫಿ ಗೆಲುವಿಗೆ ಕಾರಣ” ಎಂದು ಕಲರ್ಸ್ ಕನ್ನಡ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.

ಜಡ್ಜಸ್, ನಿರೂಪಕಿ ಹಾಗೂ ಗ್ರ್ಯಾಂಡ್ ಫಿನಾಲೆಯ ಬದ್ಧವೈರಿ ಸ್ಪರ್ಧಿಗಳ ಕದನ…

ಈ ಬಾರಿಯ ಸೀಸನ್ 2ರಲ್ಲಿ ನಟಿ ಮೇಘನಾ ರಾಜ್ ಹಾಗೂ ಖ್ಯಾತ ಶೆಫ್ ಕೌಶಿಕ್ ಶಂಕರ್ ತೀರ್ಪುಗಾರರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಖ್ಯಾತಿಯ ನಟಿ ಸುಷ್ಮಾ ಕೆ. ರಾವ್ ತಮ್ಮ ವಿಶಿಷ್ಟ ನಿರೂಪಣೆಯಿಂದ ಶೋಗೆ ಹೊಸ ಮೆರಗು ತಂದಿದ್ದರು. ಸೆಮಿಫೈನಲ್ ಹಾಗೂ ಫೇಸ್-ಆಫ್ ಪಂದ್ಯಗಳನ್ನು ಗೆದ್ದು ಗ್ರ್ಯಾಂಡ್ ಫಿನಾಲೆ ತಲುಪಲು ಹಲವು ಸ್ಪರ್ಧಿಗಳು ತೀವ್ರ ಪೈಪೋಟಿ ನಡೆಸಿದ್ದರು. ನಿರ್ದೇಶಕ ಓಂ ಪ್ರಕಾಶ್ ರಾವ್, ‘ನಂದಗೋಕುಲ’ ಧಾರಾವಾಹಿ ಮೇಘಾ ಹಾಗೂ ‘ಬಿಗ್ ಬಾಸ್’ ಖ್ಯಾತಿಯ ರಕ್ಷಿತಾ ಶೆಟ್ಟಿ ಫಿನಾಲೆ ರೇಸ್‌ನಲ್ಲಿದ್ದರು. ಅಂತಿಮ ಹಂತದ ರೋಚಕ ಫೈನಲ್ ಕದನದಲ್ಲಿ ಎಲ್ಲರನ್ನು ಹಿಂದಿಕ್ಕಿದ ಸೂರಜ್ ಸಿಂಗ್ ‘ಕ್ವಾಟ್ಲೆ ಕಿಚನ್ 2’ ಚಾಂಪಿಯನ್ ಆಗಿ ಮಿಂಚಿದ್ದಾರೆ.