☔ Weather
Bengaluru: 🌤️ 23°C | AQI 155
Mysore: 🌤️ 21°C | AQI 122
Mangalore: ☀️ 26°C | AQI 142
Bengaluru: 🌤️ 23°C | AQI 155
☔ Weather
Bengaluru: 🌤️ 23°C | AQI 155
Mysore: 🌤️ 21°C | AQI 122
Mangalore: ☀️ 26°C | AQI 142
Bengaluru: 🌤️ 23°C | AQI 155

BBK 13: ಶನಿವಾರದ ಪ್ರೋಮೋದಲ್ಲೇ ಟ್ವಿಸ್ಟ್; ಈ ವಾರ ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಷನ್ ಇಲ್ವಾ?

BBK 13: No Elimination This Week Promo Hint Sudeep Saturday Episode
ಬಿಗ್ ಬಾಸ್ ಕನ್ನಡ 13ರಲ್ಲಿ ಈ ವಾರ ಎಲಿಮಿನೇಷನ್ ಇಲ್ಲವೇ ಎಂಬ ಪ್ರಶ್ನೆ ಮೂಡಿದ್ದು, ಪ್ರೋಮೋ ಹಾಗೂ ವೋಟಿಂಗ್ ಲೈನ್ಸ್ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದೆ.

ಮುಖ್ಯಾಂಶಗಳು

  • ಎಲಿಮಿನೇಷನ್ ಪ್ರೋಮೋದಲ್ಲಿ ಭಿನ್ನ ದೃಶ್ಯ.
  • ಈ ವಾರ ಇಲ್ವಾ ವೋಟಿಂಗ್ ಲೈನ್ಸ್?
  • ಸುದೀಪ್ ಪಂಚಾಯಿತಿಗೆ ಕಾತರ ಹೆಚ್ಚಳ.

ಬಿಗ್ ಬಾಸ್ ಕನ್ನಡ ಸೀಸನ್ 13ರ (BBK 13) ಮನೆಯಲ್ಲಿ ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಕುರಿತು ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿದೆ. ಪ್ರತಿ ವಾರ ಶನಿವಾರದ ಸಂಚಿಕೆ ಪ್ರಸಾರವಾಗುವ ಮುನ್ನವೇ ಪ್ರೋಮೋ ಮೂಲಕ ನಾಮಿನೇಷನ್ ಹಾಗೂ ಎಲಿಮಿನೇಷನ್ ಕಾವು ಹೇಗಿರುತ್ತದೆ ಎಂಬುದರ ಸುಳಿವು ಸಿಗುತ್ತಿತ್ತು.

ಸಾಮಾನ್ಯವಾಗಿ ಶನಿವಾರದ ಪ್ರೋಮೋದಲ್ಲಿ ‘ಯಾರು ನಾಮಿನೇಟ್ ಆಗಿದ್ದಾರೆ, ಈ ವಾರ ಮನೆಯಿಂದ ಹೊರಹೋಗುವವರು ಯಾರು?’ ಎಂದು ವೀಕ್ಷಕರಲ್ಲಿ ಪ್ರಶ್ನೆ ಮೂಡಿಸುವ ರೀತಿಯಲ್ಲಿ ದೃಶ್ಯಗಳನ್ನು ಸಂಪಾದಿಸಿ ಬಿಡುಗಡೆ ಮಾಡಲಾಗುತ್ತಿತ್ತು.

ಆದರೆ ಈ ಬಾರಿ ವಾಹಿನಿ ಬಿಡುಗಡೆ ಮಾಡಿರುವ ನೂತನ ಪ್ರೋಮೋದಲ್ಲಿ ಸಂಪೂರ್ಣವಾಗಿ ಭಿನ್ನವಾದ ದೃಶ್ಯಗಳು ಕಂಡುಬಂದಿವೆ. ಇದರಿಂದಾಗಿ ಈ ವಾರದ ಎಲಿಮಿನೇಷನ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಆರಂಭವಾಗಿದೆ.

ಈ ವಾರ ವೋಟಿಂಗ್ ಇಲ್ವಾ? ನೆಟ್ಟಿಗರ ಲೆಕ್ಕಾಚಾರ

ಈ ಬಾರಿಯ ಶನಿವಾರದ ಸಂಚಿಕೆಯ ಪ್ರೋಮೋದಲ್ಲಿ ಯಾವುದೇ ಎಲಿಮಿನೇಷನ್ ಅಥವಾ ವೋಟಿಂಗ್ ಕುರಿತು ಸುಳಿವು ನೀಡಲಾಗಿಲ್ಲ. ಪ್ರಮುಖವಾಗಿ ಈ ವಾರ ವೋಟಿಂಗ್ ಲೈನ್ಸ್ ಕೂಡ ತೆರೆದಿರಲಿಲ್ಲ ಎನ್ನಲಾಗಿದೆ.

ಇದೇ ಕಾರಣಕ್ಕೆ ಈ ವಾರ ಬಿಗ್ ಬಾಸ್ ಮನೆಯಿಂದ ಯಾವುದೇ ಸ್ಪರ್ಧಿ ಹೊರಹೋಗುವುದಿಲ್ಲ ಅಥವಾ ಎಲಿಮಿನೇಷನ್ ಇರುವುದಿಲ್ಲ ಎಂಬ ವದಂತಿಗಳು ಬಲವಾಗಿ ಕೇಳಿಬರುತ್ತಿವೆ.

ಇದನ್ನು ಓದಿ: BBK 13: ಕ್ಯಾಪ್ಟನ್ ಪಟ್ಟಕ್ಕೇರಿದ ಯಶಸ್, ‘ಉತ್ತಮ’ನಾದ ತಾಂಡವ್; ಅನಾಮಧೇಯ ಪತ್ರದಿಂದ ಶುರುವಾಯ್ತು ಕಿರಿಕ್

ಪ್ರೋಮೋದಲ್ಲಿ ಎಲಿಮಿನೇಷನ್ ಬದಲು ಮನೆಯ ಸ್ಪರ್ಧಿಗಳ ಭಾವನಾತ್ಮಕ ಕ್ಷಣಗಳು ಹಾಗೂ ಕಹಿ ಘಟನೆಗಳ ಚರ್ಚೆಗೆ ಹೆಚ್ಚಿನ ಒತ್ತು ನೀಡಲಾಗಿರುವುದು ಈ ಅನುಮಾನಕ್ಕೆ ಮತ್ತಷ್ಟು ನೀರೆರೆದಿದೆ.

BBK 13: ಪತ್ರಗಳ ಚಟುವಟಿಕೆ ಹಾಗೂ ಕಿಚ್ಚನ ಅಂಗಳದ ಕಾತರ

ಈ ವಾರ ಬಿಗ್ ಬಾಸ್ ಮನೆಯ ಸದಸ್ಯರು ತಮ್ಮ ಕುಟುಂಬದವರಿಂದ ಬಂದ ಪತ್ರಗಳನ್ನು ಓದಿ ತೀವ್ರವಾಗಿ ಭಾವುಕರಾಗಿದ್ದರು. ಇದರ ಜೊತೆಗೆ ಅನಾಮಧೇಯ ಪತ್ರಗಳ ಕಾರಣದಿಂದ ಕೆಲವರ ನಡುವೆ ಮನಸ್ತಾಪ ಹಾಗೂ ಭಾರಿ ಮಾತಿನ ಚಕಮಕಿ ಕೂಡ ನಡೆದಿತ್ತು.

ಅಕ್ಷರಗಳ ಆಟದ ಮೂಲಕ ಸ್ಪರ್ಧಿಗಳ ಭಾವನೆಗಳನ್ನು ಬಡಿದೆಬ್ಬಿಸುವ ಪ್ರಯತ್ನವನ್ನು ಬಿಗ್ ಬಾಸ್ ಮಾಡಿದ್ದರು. ಈ ಎಲ್ಲಾ ಗಲಾಟೆ ಹಾಗೂ ಕಹಿ ಮಾತುಗಳ ಕುರಿತು ಶನಿವಾರದ ಸಂಚಿಕೆಯಲ್ಲಿ ನಿರೂಪಕ ಕಿಚ್ಚ ಸುದೀಪ್ ಅವರು ಹೇಗೆ ಕ್ಲಾಸ್ ತಗೆದುಕೊಳ್ಳಲಿದ್ದಾರೆ ಎಂಬ ಕಾತರ ಹೆಚ್ಚಾಗಿದೆ.

ಇಂದು ರಾತ್ರಿ 9 ಗಂಟೆಗೆ ಪ್ರಸಾರವಾಗುವ ವಿಶೇಷ ಸಂಚಿಕೆಯಲ್ಲಿ ಈ ವಾರ ನಿಜವಾಗಿಯೂ ಎಲಿಮಿನೇಷನ್ ಇದೆಯಾ ಅಥವಾ ಟ್ವಿಸ್ಟ್ ಕಾದಿದೆಯಾ ಎಂಬ ಎಲ್ಲಾ ಪ್ರಶ್ನೆಗಳಿಗೆ ಅಧಿಕೃತ ಉತ್ತರ ಸಿಗಲಿದೆ.