NIA Recruitment 2026: ಕೇಂದ್ರ ಗೃಹ ಸಚಿವಾಲಯದ ವ್ಯಾಪ್ತಿಗೆ ಒಳಪಡುವ ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ (NIA) ಖಾಲಿ ಇರುವ ವಿವಿಧ ಮಿನಿಸ್ಟೀರಿಯಲ್ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಸರ್ಕಾರಿ ನೌಕರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸಂಪೂರ್ಣವಾಗಿ ಡೆಪ್ಯುಟೇಶನ್ (ಪ್ರತಿನಿಧಿ) ಆಧಾರದ ಮೇಲೆ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಆಸಕ್ತರು ಆಫ್ಲೈನ್ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ನಡೆಯುತ್ತಿರುವುದು ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶವಾಗಿದೆ. ಈ ನೇಮಕಾತಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಕೆಳಗಿನಂತಿದೆ.
ಹುದ್ದೆಗಳ ವಿವರ ಹಾಗೂ ಪ್ರಮುಖ ದಿನಾಂಕಗಳು
- ಸಂಸ್ಥೆ: ರಾಷ್ಟ್ರೀಯ ತನಿಖಾ ಸಂಸ್ಥೆ (NIA), ಗೃಹ ವ್ಯವಹಾರಗಳ ಸಚಿವಾಲಯ
- ಒಟ್ಟು ಹುದ್ದೆಗಳು: 50 ಹುದ್ದೆಗಳು
- ಹುದ್ದೆಗಳ ವಿವರ: ಹಿರಿಯ ಖಾಸಗಿ ಕಾರ್ಯದರ್ಶಿ (03), ಸೆಕ್ಷನ್ ಆಫೀಸರ್ (05), ಸಹಾಯಕ (05), ಅಕೌಂಟೆಂಟ್ (01), ಸ್ಟೆನೋಗ್ರಾಫರ್ ಗ್ರೇಡ್-I (15), ಸ್ಟೆನೋಗ್ರಾಫರ್ ಗ್ರೇಡ್-II (06), ಯುಡಿಸಿ (03) ಹಾಗೂ ಎಲ್ಡಿಸಿ (12).
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 25, 2026
ಇದನ್ನು ಓದಿ: RRB NTPC Recruitment 2026: ಭಾರತೀಯ ರೈಲ್ವೆಯಲ್ಲಿ 3,548 ಹುದ್ದೆಗಳಿಗೆ ಅರ್ಜಿ ಆಹ್ವಾನ
ವಿದ್ಯಾರ್ಹತೆ ಮತ್ತು ವಯೋಮಿತಿ
- ಅರ್ಹತೆ: ಕೇಂದ್ರ ಅಥವಾ ರಾಜ್ಯ ಸರ್ಕಾರಿ ಇಲಾಖೆಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಅರ್ಜಿ ಸಲ್ಲಿಸಬಹುದು. ಹುದ್ದೆಗೆ ತಕ್ಕಂತೆ 12ನೇ ತರಗತಿ ಅಥವಾ ಪದವಿ ಮುಗಿಸಿರಬೇಕು.
- ವಯೋಮಿತಿ: ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದ ವೇಳೆಗೆ ಅಭ್ಯರ್ಥಿಯ ಗರಿಷ್ಠ ವಯಸ್ಸು 56 ವರ್ಷ ಮೀರಿರಬಾರದು.
NIA Recruitment 2026: ವೇತನ ಹಾಗೂ ಅರ್ಜಿ ಸಲ್ಲಿಕೆ ವಿಧಾನ
- ವೇತನ ಶ್ರೇಣಿ: ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ವೇತನ ₹19,900 ರಿಂದ ₹1,51,100 ರವರೆಗೆ ಇರಲಿದೆ. ಇದರೊಂದಿಗೆ ಶೇ. 20ರಷ್ಟು ವಿಶೇಷ ಭದ್ರತಾ ಭತ್ಯೆ ಸಿಗಲಿದೆ.
- ಅರ್ಜಿ ಸಲ್ಲಿಕೆ: ಎನ್ಐಎ ಅಧಿಕೃತ ವೆಬ್ಸೈಟ್ nia.gov.in ನಿಂದ ಅರ್ಜಿ ನಮೂನೆ ಡೌನ್ಲೋಡ್ ಮಾಡಿ, ಅಗತ್ಯ ದಾಖಲೆಗಳೊಂದಿಗೆ “DIG (Admin), NIA HQ, CGO Complex, Lodhi Road, New Delhi – 110003” ವಿಳಾಸಕ್ಕೆ ಕಳುಹಿಸಬೇಕು.




