INDIA POST GDS 2026: 20,699 ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆರಂಭ

ಭಾರತೀಯ ಅಂಚೆ ಇಲಾಖೆ

Photo Credits: @indiapost_news (Instagram)

ಸಂಕ್ಷಿಪ್ತ ವಿವರಣೆ: ಭಾರತೀಯ ಅಂಚೆ ಇಲಾಖೆಯು ದೇಶಾದ್ಯಂತ 20,699 ಗ್ರಾಮೀಣ ಡಾಕ್ ಸೇವಕ್ (GDS) ಹುದ್ದೆಗಳ ನೇಮಕಾತಿಗೆ Schedule-II ಅಧಿಸೂಚನೆ ಪ್ರಕಟಿಸಿದೆ. SSLC ಪಾಸಾದ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಭಾರತೀಯ ಅಂಚೆ ಇಲಾಖೆಯಲ್ಲಿ (India Post) ಉದ್ಯೋಗ ಬಯಸುತ್ತಿರುವ ಅಭ್ಯರ್ಥಿಗಳಿಗೆ ಬೃಹತ್ ಅವಕಾಶ. ಅಂಚೆ ಇಲಾಖೆಯು India Post GDS Online Engagement 2026 (Schedule-II, July 2026) ಅಡಿಯಲ್ಲಿ ದೇಶಾದ್ಯಂತ ಖಾಲಿ ಇರುವ ಒಟ್ಟು 20,699 ಗ್ರಾಮೀಣ ಡಾಕ್ ಸೇವಕ್ (GDS) ಹುದ್ದೆಗಳ ಭರ್ತಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.

ಒನ್‌ಟೈಮ್ ನೋಂದಣಿ ಪ್ರಕ್ರಿಯೆಯು ಆಗಸ್ಟ್ 31, 2026 ರಿಂದ ಆರಂಭವಾಗಲಿದೆ.

ನೇಮಕಾತಿಯ ಪ್ರಮುಖ ಮುಖ್ಯಾಂಶಗಳು…

  • ನೇಮಕಾತಿ ಸಂಸ್ಥೆ: ಭಾರತೀಯ ಅಂಚೆ ಇಲಾಖೆ (India Post)
  • ಅಧಿಸೂಚನೆ ಹೆಸರು: GDS Online Engagement 2026 (Schedule-II, July 2026)
  • ಹುದ್ದೆಯ ಹೆಸರು: ಗ್ರಾಮೀಣ ಡಾಕ್ ಸೇವಕ್ (GDS – BPM / ABPM / Dak Sevak)
  • ಒಟ್ಟು ಹುದ್ದೆಗಳು: 20,699 (ದೇಶಾದ್ಯಂತ)
  • ಉದ್ಯೋಗ ಸ್ಥಳ: ಭಾರತಾದ್ಯಂತ (All India)

Photo Credits: @indiapost_news (Instagram)

ಪ್ರಮುಖ ದಿನಾಂಕಗಳು…

  • ಆನ್‌ಲೈನ್ ಒನ್‌ಟೈಮ್ ನೋಂದಣಿ: 31-08-2026 ರಿಂದ 19-09-2026 (ಸಂಜೆ 5:00 ರವರೆಗೆ)
  • ಆನ್‌ಲೈನ್ ಅರ್ಜಿ ಸಲ್ಲಿಕೆ & ಶುಲ್ಕ ಪಾವತಿ: 02-09-2026 ರಿಂದ 21-09-2026 (ಸಂಜೆ 5:00 ರವರೆಗೆ)
  • ಅರ್ಜಿ ತಿದ್ದುಪಡಿ ಅವಧಿ: 23-09-2026 ರಿಂದ 24-09-2026 (ಸಂಜೆ 5:00 ರವರೆಗೆ)

ಶೈಕ್ಷಣಿಕ ಅರ್ಹತೆ…

ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ 10ನೇ ತರಗತಿ (SSLC / Matriculation) ಉತ್ತೀರ್ಣರಾಗಿರಬೇಕು. (ಗಣಿತ ಮತ್ತು ಇಂಗ್ಲಿಷ್ ವಿಷಯಗಳನ್ನು ಅಭ್ಯಾಸ ಮಾಡಿರಬೇಕು ಹಾಗೂ ಸ್ಥಳೀಯ ಭಾಷೆಯ ಜ್ಞಾನವಿರಬೇಕು).

ಆಯ್ಕೆ ಪ್ರಕ್ರಿಯೆ…

ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. 10ನೇ ತರಗತಿಯಲ್ಲಿ ಪಡೆದ ಅಂಕಗಳ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ನೇರವಾಗಿ ಆಯ್ಕೆ ಮಾಡಲಾಗುತ್ತದೆ.