Photo Credits: @sakkarichaitra (Instagram)
ಬಣ್ಣದ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ನಟಿ ಚೈತ್ರಾ ಸಕ್ಕರಿ, ‘ಶಾರದೆ’ ಧಾರಾವಾಹಿಯ 500 ಸಂಚಿಕೆಗಳ ಯಶಸ್ಸಿನ ಸಂಭ್ರಮದಲ್ಲಿದ್ದಾರೆ. ಜೀ ಕನ್ನಡದ ‘ಕುಣಿಯೋಣ ಬಾರ’ ರಿಯಾಲಿಟಿ ಶೋ ಹಾಗೂ ಪ್ರಜ್ವಲ್ ದೇವರಾಜ್ ಅವರ ‘ಭದ್ರಾ’ ಚಿತ್ರದಲ್ಲಿ ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಇವರು, ಸನ್ ಟಿವಿಯ ‘ತಮಿಳ್ ಸೆಲ್ವಿ’ ಧಾರಾವಾಹಿ ಮೂಲಕ ನಾಯಕಿಯಾಗಿ ಸಾಗಿದವರು. ಪ್ರಸ್ತುತ ಶಾರದೆ ಧಾರಾವಾಹಿಯಲ್ಲಿ ಸಿಂಗಲ್ ಮದರ್ ಆಗಿ, ಸವಾಲಿನ ಪಾತ್ರದ ಮೂಲಕ ಕನ್ನಡ ಕನ್ನಡಿಗರ ಮನ ಗೆದ್ದಿರುವ ಚೈತ್ರಾ ಸಕ್ಕರಿ ಅವರು, ತಮ್ಮ ಧಾರಾವಾಹಿ ಪಯಣ, ವೈಯಕ್ತಿಕ ಜೀವನ ಹಾಗೂ ಅಭಿಮಾನಿಗಳ ಪ್ರೀತಿಯ ಕುರಿತು ಹಂಚಿಕೊಂಡ ವಿಶೇಷ ಅಭಿನಂದನಾತ್ಮಕ ಮಾತುಕತೆ ಇಲ್ಲಿದೆ.
ತೆಲುಗು ಹಾಗೂ ಉದಯ ಟಿವಿ ಸೀರಿಯಲ್ಸ್ ನಂತರ ಶಾರದೆ ಕೊಟ್ಟ ಸ್ಪೆಷಲ್ ಗುರುತು ಏನು ನಿಮಗೆ?
ಚೈತ್ರಾ ಸಕ್ಕರಿ: ಶಾರದೆ… ಅಂದ್ರೆ ನಮ್ಮ ಕನ್ನಡ ಜನರ ಪ್ರೀತಿ. ನಾನು ಪ್ರೀವಿಯಸ್ ಮಾಡಿದ ಸೀರಿಯಲ್ನಲ್ಲಿ ಅಷ್ಟೊಂದು ರೀಚ್ ಇರ್ಲಿಲ್ಲ. ಬಟ್ ಈ ಸೀರಿಯಲ್ನಿಂದ ತುಂಬಾ ಜನ ಗುರುತಿಸ್ತಾರೆ, ಪ್ರೀತಿ ಕೊಡ್ತಾರೆ. ತುಂಬಾ ಜನ ಶಾರದೆನಾ ನೋಡ್ತಾ ಇದ್ದಾರೆ. ಸೋ ಅದೊಂದು ಹೇಳ್ಬೋದು.
ಬಣ್ಣದ ಪ್ರಪಂಚಕ್ಕೆ ನಿಮ್ಮ ಎಂಟ್ರಿ ಹೇಗಾಯ್ತು?
ಚೈತ್ರಾ ಸಕ್ಕರಿ: ನಾನು ಆಕ್ಚುಲಿ ಚಿಕ್ಕ ವಯಸ್ಸಲ್ಲಿ ಜೀ ಕನ್ನಡದ ‘ಕುಣಿಯೋಣ ಬಾರ’ ಡ್ಯಾನ್ಸ್ ರಿಯಾಲಿಟಿ ಶೋ ಮಾಡಿದ್ದೆ. ಮೂರು ಸೀಸನ್ ಮಾಡ್ದೆ. ಅದಾದ್ಮೇಲೆ ಬ್ರೇಕ್ ತಗೊಂಡು ಸ್ಟಡೀಸ್ ಕಡೆ ಕಾನ್ಸಂಟ್ರೇಟ್ ಮಾಡ್ದೆ. ಆಮೇಲೆ ನಾನು ಮತ್ತೆ ನನ್ನ ಫ್ರೆಂಡ್ ಸೇರಿ ಒಂದು ಕವರ್ ಸಾಂಗ್ ಮಾಡಿದ್ದೆವು. ಅದನ್ನು ನೋಡಿ ತಮಿಳು ಸೀರಿಯಲ್ಗೆ NVN ಕಾಸ್ಟಿಂಗ್ ಹೌಸ್ನ ನವೀನ್ ಅನ್ನೋರು ಕಾಲ್ ಮಾಡಿ ಆಡಿಷನ್ ತಗೊಂಡು ಸೆಲೆಕ್ಟ್ ಮಾಡಿದ್ರು. 2020 ಜನವರಿಯಲ್ಲಿ ಸನ್ ಟಿವಿಯ ‘ತಮಿಳ್ ಸೆಲ್ವಿ’ ಸೀರಿಯಲ್ನಲ್ಲಿ ರೀಪ್ಲೇಸ್ಮೆಂಟ್ ಲೀಡ್ ರೋಲ್ ಮೂಲಕ ನನ್ನ ಜರ್ನಿ ಶುರುವಾಯ್ತು.
500 ಎಪಿಸೋಡ್ ಯಶಸ್ಸನ್ನು ಒಂದೇ ಮಾತಿನಲ್ಲಿ ಹೇಗೆ ಹೇಳ್ತೀರಾ?
ಚೈತ್ರಾ ಸಕ್ಕರಿ: ಜನರ ಪ್ರೀತಿ, ಆಶೀರ್ವಾದ ಅಷ್ಟೇ ಮೇಡಂ. ಅವರು ನೋಡಿ ಆಶೀರ್ವಾದ ಮಾಡ್ತಿರೋದಕ್ಕೆ, ಪ್ರೀತಿ ತೋರಿಸ್ತಿರೋದಕ್ಕೆ 500 ಎಪಿಸೋಡ್ಸ್ ಕಂಪ್ಲೀಟ್ ಮಾಡಿರೋದು. ಇಲ್ಲಾಂದ್ರೆ ಸಾಧ್ಯ ಆಗ್ತಾ ಇರ್ಲಿಲ್ಲ. ಮತ್ತೆ ನಮ್ಮ ಶಾರದೆ ಎಂಟೈರ್ ಟೀಮ್ ಎಫರ್ಟ್. ಡೈರೆಕ್ಷನ್, ರೈಟರ್ಸ್, ಆರ್ಟಿಸ್ಟ್ಗಳು, ಪ್ರೊಡ್ಯೂಸರ್, ಟೆಕ್ನಿಷಿಯನ್ಸ್, ಪ್ರಕೃತಿ ಪ್ರೊಡಕ್ಷನ್ ಪ್ರತಿಯೊಬ್ಬರ ಎಫರ್ಟ್ಸ್ ಶಾರದೆ.
ಒಬ್ಬ ಒಂಟಿ ತಾಯಿಯಾಗಿ ಶಾರದೆ ಪಾತ್ರ ನಡೆಸೋದು ಎಷ್ಟು ಚಾಲೆಂಜಿಂಗ್?
ಚೈತ್ರಾ ಸಕ್ಕರಿ: ತುಂಬಾ ಚಾಲೆಂಜಿಂಗ್ ಆಗಿತ್ತು. ಚಿಕ್ಕ ಹುಡುಗಿನೇ ಶಾರದೆ, ದೊಡ್ಡವಳೇನಲ್ಲ. ಚಿಕ್ಕ ವಯಸ್ಸಲ್ಲೇ ಎಲ್ಲಾ ತರಹ ಜವಾಬ್ದಾರಿಗಳು, ಗಂಡ ಬಿಟ್ಟು ಹೋಗ್ತಾನೆ, ಸಿಂಗಲ್ ಪೇರೆಂಟ್ ಆಗಿ ಮಗುವಿನ ಸ್ಕೂಲ್ ನಿಂದ ಹಿಡಿದು ಪ್ರತಿಯೊಂದನ್ನೂ ಹ್ಯಾಂಡಲ್ ಮಾಡಬೇಕು, ದುಡಿದು ಮನೆ ಸಾಕ್ಬೇಕು. ಸೋ ತುಂಬಾ ರೆಸ್ಪಾನ್ಸಿಬಿಲಿಟಿ ಇರುವಂತಹ, ಮೆಚ್ಯೂರ್ಡ್ ಆಗಿ ಬಿಹೇವ್ ಮಾಡಬೇಕಾದ ಪಾತ್ರ. ಸ್ವಲ್ಪ ಕಷ್ಟ ಇತ್ತು.
ಹೆತ್ತವರನ್ನು ಹುಡುಕೋ ಎಮೋಷನಲ್ ಸೀನ್ಗಳಲ್ಲಿ ನಟಿಸಿದ ಅನುಭವ ಹೇಗಿದೆ?
ಚೈತ್ರಾ ಸಕ್ಕರಿ: ಆಕ್ಚುಲಿ ಈಗ ನನಗೆ ಗೊತ್ತಾಗಿದೆ ಹೆತ್ತವರು ಯಾರು ಅಂತ, ಬಟ್ ಅವರಿಗೆ ಗೊತ್ತಿಲ್ಲ. ಆ ತರ ಸನ್ನಿವೇಶದಲ್ಲಿ ಅವರಿಗೆ ಹೆಂಗೆ ಹೇಳೋದು, ಅರ್ಥ ಮಾಡಿಸೋದು ಅಂತ ಬಿಗ್ ಕೊಶ್ಚನ್ ಮಾರ್ಕ್ ಬರುತ್ತೆ. ಹೇಳಿದ್ರೆ ಮುಂದೆ ಎಲ್ಲರಿಗೂ ತೊಂದರೆ ಆಗುತ್ತೆ ಅನ್ನೋ ಚಾಲೆಂಜ್ ಇದೆ. ಅದ್ಬಿಟ್ರೆ ಎಮೋಷನಲ್ ಸೀನ್ಸ್ ಎಕ್ಸ್ಪ್ಲೇನ್ ಮಾಡೋಕೆ ಆಗಲ್ಲ, ಅದೊಂದು ಫೀಲಿಂಗ್.
ಆಫೀಸ್ನಲ್ಲಿ ಸಿದ್ಧಾರ್ಥ್ ಮತ್ತು ನಿಮ್ಮ ಕೆಮಿಸ್ಟ್ರಿ ಹಾಗೂ ಬಾಂಡಿಂಗ್ ಹೆಂಗಿರುತ್ತೆ?
ಚೈತ್ರಾ ಸಕ್ಕರಿ: ಆಫೀಸ್ಗೆ ಹೋಗ್ತಾ ಇರುವಾಗ ತುಂಬಾ ಚೆನ್ನಾಗಿತ್ತು. ಅವರ ನಡುವೆ ಆ ತರ ಫೀಲಿಂಗ್ಸ್ ಏನು ಇರ್ಲಿಲ್ಲ. ಬಟ್ ಅವರು ನಾರ್ಮಲ್ ಆಗಿ ಕೇರ್ ಮಾಡೋರು. ನಾನು ಸಿಂಗಲ್ ಪೇರೆಂಟ್, ದೀಪುನಾ ಸಾಕ್ಬೇಕು, ಸ್ಕೂಲ್ ಫೀಸ್ ಮೇಂಟೇನ್ ಮಾಡ್ಬೇಕು ಅಂತ ಗೊತ್ತಿದ್ದು ಆಫೀಸ್ನಲ್ಲಿ ಒಳ್ಳೆ ಪೋಸ್ಟಿಂಗ್, ಒಳ್ಳೆ ಪೇ ಸ್ಕೇಲ್ ಕೊಡ್ಸಿ ಚೆನ್ನಾಗಿ ನಡೀತಾ ಇತ್ತು.

Photo Credits: @sakkarichaitra (Instagram)
ಜನರು ನಿಮ್ಮನ್ನು ರಿಯಲ್ ಲೈಫ್ನಲ್ಲಿ ಚೈತ್ರಾ ಅಂತಾರಾ ಅಥವಾ ಶಾರದೆನೇ ಅಂತಾರಾ?
ಚೈತ್ರಾ ಸಕ್ಕರಿ: ಶಾರದೆ ಅಂತಾನೇ ಅಂತಾರೆ. ಸೀರಿಯಲ್ ನೋಡೋರು ಶಾರದೆ ಅಂತಾರೆ. ನನ್ನ ಫ್ರೆಂಡ್ಸ್ ಮತ್ತು ಫ್ಯಾಮಿಲಿ ಸರ್ಕಲ್ನಲ್ಲಿ ಚೈತ್ರಾ ಅಂತಾರೆ. ಹೊರಗಡೆ ಯಾರಾದ್ರೂ ನೋಡಿದ್ರೆ “ನೀವು ಶಾರದೆ ಅಲ್ವಾ?” ಅಂತಾನೇ ಕೇಳ್ತಾರೆ.
ನಿಮ್ಮ ಶೂಟಿಂಗ್ ಬ್ಯುಸಿ ಷೆಡ್ಯೂಲ್ ನಡುವೆ ಫಿಟ್ನೆಸ್ ಮತ್ತು ಬ್ಯೂಟಿ ಹೆಂಗೆ ಮೇಂಟೇನ್ ಮಾಡ್ತೀರಾ?
ಚೈತ್ರಾ ಸಕ್ಕರಿ: ನಾನು ಆಕ್ಚುಲಿ ಎರಡೂ ಮೇಂಟೇನ್ ಮಾಡಲ್ಲ. ಫಿಟ್ನೆಸ್, ಬ್ಯೂಟಿ ಕಾನ್ಷಿಯಸ್ ಇಲ್ಲ. ಫ್ರೀ ಇದ್ರೆ, ಮೂಡ್ ಇದ್ರೆ ಮನೆ ಮುಂದೆ ವಾಕಿಂಗ್ ಮಾಡ್ತೀನಿ. ಬ್ಯೂಟಿ ಕೇರ್ ಅಂದ್ರೆ ನಾರ್ಮಲ್ ಮೊಯಿಶ್ಚರೈಸರ್, ಸನ್ಸ್ಕ್ರೀನ್ ಅಷ್ಟೇ. ಬೇಸಿಕ್ಸ್ ಬಿಟ್ರೆ ಎಕ್ಸ್ಟ್ರಾ ಏನ್ ಮಾಡಲ್ಲ.
ನಟನೆ ಬಿಟ್ಟು ಫ್ರೀ ಟೈಮ್ ಸಿಕ್ಕಾಗ ನಿಮ್ಮ ಹಾಬೀಸ್ ಏನೇನು?
ಚೈತ್ರಾ ಸಕ್ಕರಿ: ಫ್ರೀ ಟೈಮ್ನಲ್ಲಿ ಟಿವಿ ನೋಡ್ತೀನಿ, ಮೊಬೈಲ್ ನೋಡ್ತೀನಿ. ಡ್ಯಾನ್ಸ್ ಕ್ಲಾಸ್ಗೆ ಸೇರ್ಕೋಬೇಕು ಅಂತ ತುಂಬಾ ದಿನದಿಂದ ಅನ್ಕೋತಾ ಇದೀನಿ, ನನಗೆ ಡ್ಯಾನ್ಸ್ ಅಂದ್ರೆ ತುಂಬಾ ಇಷ್ಟ. ಬಟ್ ಟೈಮ್ ಸಿಗ್ತಾ ಇಲ್ಲ. ಮತ್ತೆ ಹೆಲ್ತ್ ನೋಡ್ಕೊಳ್ಳೋದು ಮುಖ್ಯ ಅನ್ಕೊಂಡು ಸದ್ಯಕ್ಕೆ ಎಲ್ಲಾ ಸ್ಟಾಪ್ ಮಾಡಿದ್ದೀನಿ. ಹೆಲ್ತ್ ಬೆಟರ್ ಆದ್ಮೇಲೆ ರೆಸ್ಯೂಮ್ ಮಾಡ್ತೀನಿ.
ಸಿನಿಮಾ ಅಥವಾ OTTಯಲ್ಲಿ ನಟಿಸೋ ಮುಂದಿನ ಕನಸುಗಳೇನಾದ್ರೂ ಇದೆಯಾ?
ಚೈತ್ರಾ ಸಕ್ಕರಿ: ಯೆಸ್, ಡೆಫಿನೆಟ್ ಆಗಿ ಇದೆ. ಒಂದು ಒಳ್ಳೆ ಕಥೆ, ಒಳ್ಳೆ ಆಪರ್ಚುನಿಟಿ, ಒಳ್ಳೆ ಟೀಮ್ ಸಿಕ್ಕಿದ್ರೆ ಡೆಫಿನೆಟ್ ಆಗಿ ವರ್ಕ್ ಮಾಡ್ತೀನಿ.
ಟ್ರಾವೆಲಿಂಗ್ ಬಗ್ಗೆ ಏನಾದ್ರೂ ಇಂಟರೆಸ್ಟ್ ಇದೆಯಾ?
ಚೈತ್ರಾ ಸಕ್ಕರಿ: ಟ್ರಾವೆಲಿಂಗ್ ಇಷ್ಟ. ನಾನು ಜಾಸ್ತಿ ದೇವಸ್ಥಾನಗಳಿಗೆ ಹೋಗೋಕೆ ಇಷ್ಟಪಡ್ತೀನಿ. ಬೀಚ್, ಮೌಂಟೇನ್ಸ್ಗಿಂತ ದೇವಸ್ಥಾನ ಪೀಸ್ಫುಲ್ ಪ್ಲೇಸ್. ಮೈಸೂರು ಚಾಮುಂಡೇಶ್ವರಿ ಬೆಟ್ಟ, ತಿರುಪತಿ, ಮಂತ್ರಾಲಯಕ್ಕೆ ಹೋಗ್ತಾ ಇರ್ತೀನಿ.
ನಿಮ್ಮ ಈ ಜರ್ನಿಗೆ ಮನೆಯವರಿಂದ ಸಿಗುತ್ತಿರುವ ಪ್ರೋತ್ಸಾಹ ಹೇಗಿದೆ?
ಚೈತ್ರಾ ಸಕ್ಕರಿ: ನನ್ನ ಫ್ಯಾಮಿಲಿ ಬಗ್ಗೆ ಹೇಳ್ಬೇಕು, ತುಂಬಾ ಸಪೋರ್ಟಿವ್. ನಮ್ಮ ಅಪ್ಪ, ಅಮ್ಮ, ಇಬ್ಬರು ಅಕ್ಕಂದಿರು ಇದ್ದಾರೆ. ಅವರ ಸಪೋರ್ಟ್ ಇಲ್ಲದಿದ್ದರೆ ನಾನು ಈ ಫೀಲ್ಡ್ ಚೂಸ್ ಮಾಡೋಕೆ ಆಗ್ತಿರಲಿಲ್ಲ. ಚಿಕ್ಕ ವಯಸ್ಸಿನಿಂದ ಡ್ಯಾನ್ಸ್ನಲ್ಲಿದ್ದೆ. ಮಧ್ಯ ಪ್ರಜ್ವಲ್ ದೇವರಾಜ್ ಅವರ ಜೊತೆ ‘ಭದ್ರಾ’ ಸಿನಿಮಾದಲ್ಲಿ ಚೈಲ್ಡ್ ಆರ್ಟಿಸ್ಟ್ ಆಗಿ ನಟಿಸಿದ್ದೆ. ಆಮೇಲೆ ಬ್ರೇಕ್ ತಗೊಂಡು ಸ್ಟಡೀಸ್ ಕಂಟಿನ್ಯೂ ಮಾಡ್ದೆ. ದೇವರ ಆಶೀರ್ವಾದದಿಂದ ಬ್ಯಾಕ್ ಟು ಬ್ಯಾಕ್ ಪ್ರಾಜೆಕ್ಟ್ಸ್ ಸಿಗ್ತಿದೆ. ಶಾರದೆ ನಾಯಕಿಯಾಗಿ ನನ್ನ 5ನೇ ಪ್ರಾಜೆಕ್ಟ್.
ನಿಮ್ಮ ಅಭಿಮಾನಿಗಳಿಗೆ ಏನು ಹೇಳ್ತೀರಾ?
ಚೈತ್ರಾ ಸಕ್ಕರಿ: ಅವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಕಡಿಮೇನೆ. ನಮಗೆ ಶೂಟಿಂಗ್ ಬ್ಯುಸಿಯಲ್ಲಿ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಮಾಡೋಕೆ ಆಗಲ್ಲ. ಬಟ್ ನಮ್ಮ ಫ್ಯಾನ್ಸ್ ಪ್ರತಿಯೊಂದು ಫೋಟೋ, ವೀಡಿಯೋ ಎಡಿಟ್ ಮಾಡಿ ಪೋಸ್ಟ್ ಮಾಡಿ ಅಷ್ಟು ಪ್ರೀತಿ ತೋರಿಸ್ತಾರೆ. ನಾವು ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಇದ್ದೀವಿ ಅಂದ್ರೆ ಅದಕ್ಕೆ ಅವರೇ ಕಾರಣ. ಎಲ್ಲರಿಗೂ ಥ್ಯಾಂಕ್ ಯು & ಲಾಟ್ಸ್ ಆಫ್ ಲವ್.




