Photo Credits: @nayanthara (Instagram)
ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಇಂದು ಸಿನಿಮಾರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಪ್ರಮುಖರು. ಆದರೆ ಅವರ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಸಿಗುತ್ತಿದ್ದ ಹಣಕ್ಕೂ ಹಾಗೂ ಇಂದು ಅವರು ಪಡೆಯುತ್ತಿರುವ ಮೊತ್ತಕ್ಕೂ ಅಂತರ ದೊಡ್ಡದಿದೆ.
ಆರಂಭಿಕ ದಿನಗಳಲ್ಲಿ ಕೇವಲ 2,000 ರೂಪಾಯಿ ಸಂಭಾವನೆ ಪಡೆಯುತ್ತಿದ್ದ ನಯನತಾರಾ, ಇಂದು ಸಿನಿಮಾವೊಂದಕ್ಕೆ ಕೋಟಿ ಕೋಟಿ ಪಡೆಯುವ ಹಂತಕ್ಕೆ ಬೆಳೆದಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ನಯನತಾರಾ ತಮ್ಮ ಮೊದಲ ಸಂಪಾದನೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಜೊತೆ ಅವರು ಅಭಿನಯಿಸಿರುವ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಇಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದ್ದು, ಈ ಚಿತ್ರಕ್ಕೆ ನಯನತಾರಾ ಪಡೆದ ಸಂಭಾವನೆ ಸಿನಿವಲಯದಲ್ಲಿ ಭಾರೀ ಸದ್ದು ಮಾಡುತ್ತಿದೆ.
ರೂ. 3,000 ದಿಂದ ಆರಂಭವಾಗಿತ್ತು ನಯನತಾರಾ ಕರಿಯರ್
ತಮ್ಮ ಮೊದಲ ಸಂಪಾದನೆಯ ಕುರಿತು ಸ್ವತಃ ನಯನತಾರಾ ಅವರೇ ಆಸಕ್ತಿಕರ ವಿಷಯ ಹಂಚಿಕೊಂಡಿದ್ದಾರೆ. ‘ವನಿತಾ’ ಮ್ಯಾಗಜಿನ್‌ನ ಕವರ್ ಶೂಟ್ ಹಾಗೂ ಫ್ಯಾಷನ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ಅವರಿಗೆ ಮೊದಲ ಹಣ ಸಿಕ್ಕಿತ್ತು.
ಆ ಮೊದಲ ಕೆಲಸಕ್ಕೆ ನಯನತಾರಾ ಪಡೆದಿದ್ದು ಕೇವಲ 2,000 ದಿಂದ 3,000 ರೂಪಾಯಿ ಮಾತ್ರ. ಆ ದಿನಗಳನ್ನು ನೆನಪಿಸಿಕೊಂಡ ನಟಿ, ತಮ್ಮ ಕಠಿಣ ಪರಿಶ್ರಮವೇ ಈ ಮಟ್ಟಕ್ಕೆ ಬೆಳೆಯಲು ಕಾರಣ ಎಂದಿದ್ದಾರೆ.
ಪ್ಲಾನ್ ಮಾಡದೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಸೌತ್ ಕ್ವೀನ್
ನಯನತಾರಾ ಎಂದಿಗೂ ಚಿತ್ರರಂಗಕ್ಕೆ ಬರಬೇಕೆಂದು ಯೋಜನೆ ರೂಪಿಸಿದವರಲ್ಲ. ಮ್ಯಾಗಜಿನ್‌ನಲ್ಲಿ ಅವರ ಫೋಟೋ ನೋಡಿದ ನಿರ್ದೇಶಕ ಸತ್ಯನ್ ಅಂತಿಕ್ಕಾಡ್ ನಟನೆಯ ಆಫರ್ ನೀಡಿದರು.
2003ರಲ್ಲಿ ತೆರೆಕಂಡ ‘ಮನಸ್ಸಿನಕ್ಕರೆ’ ಮಲಯಾಳಂ ಸಿನಿಮಾ ಮೂಲಕ ನಯನತಾರಾ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. ಅಂದಿನಿಂದ ಹಿಂತಿರುಗಿ ನೋಡದ ನಟಿ ಸೌತ್ ಇಂಡಿಯಾದ ಟಾಪ್ ಹೀರೋಯಿನ್ ಆಗಿ ಹೊರಹೊಮ್ಮಿದರು.

Photo Credits: @nseries_music (Instagram)
‘ಟಾಕ್ಸಿಕ್’ ಸಿನಿಮಾಗೆ ನಯನತಾರಾ ಸಂಭಾವನೆ ಎಷ್ಟು?
ಮೊದಲ ಫೋಟೋ ಶೂಟ್‌ಗೆ ಕೆಲವೇ ಸಾವಿರ ರೂಪಾಯಿ ಪಡೆದಿದ್ದ ನಯನತಾರಾ, ಇಂದು ದಕ್ಷಿಣ ಭಾರತದ ಅತ್ಯಂತ ದುಬಾರಿ ನಟಿಯಾಗಿದ್ದಾರೆ. ವರದಿಗಳ ಪ್ರಕಾರ, ‘ಟಾಕ್ಸಿಕ್’ ಸಿನಿಮಾಗಾಗಿ ನಯನತಾರಾ ಬರೋಬ್ಬರಿ 12 ಕೋಟಿಯಿಂದ 18 ಕೋಟಿ ರೂಪಾಯಿವರೆಗೆ ಸಂಭಾವನೆ ಪಡೆದಿದ್ದಾರೆ.
ಯಶ್ ಅಭಿನಯದ ಹಾಗೂ ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾ ಇಂದು ವಿಶ್ವದಾದ್ಯಂತ ರಿಲೀಸ್ ಆಗಿ ಧೂಳೆಬ್ಬಿಸುತ್ತಿದೆ. ಇದರ ಜೊತೆಗೆ ಆಗಸ್ಟ್ 28ಕ್ಕೆ ನಯನತಾರಾ ನಟನೆಯ ‘ಹಾಯ್’ ತಮಿಳು ಸಿನಿಮಾ ಕೂಡ ತೆರೆಗೆ ಬರಲು ಸಜ್ಜಾಗಿದೆ.




