☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

Interview: ಮಂಜು ಪಾತ್ರದ ಪಯಣ

Interview: Journey of 'Aase' Serial Manju

Interview: ‘ಆಸೆ’ ಧಾರಾವಾಹಿಯಲ್ಲಿ ‘ಮಂಜು’ ಪಾತ್ರದ ಮೂಲಕ ಗಮನ ಸೆಳೆಯುತ್ತಿರುವ ನಟ ತೀರ್ಥೇಶ್ ಅವರು ತಮ್ಮ ನಟನಾ ಪಯಣ ಮತ್ತು ಸೀರಿಯಲ್ ಅನುಭವಗಳ ಬಗ್ಗೆ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ನಟನೆಯ ಬಗ್ಗೆ ಅಷ್ಟೇನೂ ಅನುಭವವಿಲ್ಲದಿದ್ದರೂ, ಥಿಯೇಟರ್ ತರಬೇತಿ ಮತ್ತು ಪೌರಾಣಿಕ ಧಾರಾವಾಹಿಗಳು ತಮ್ಮ ನಟನೆಯನ್ನು ರೂಪುಗೊಳಿಸಿದವು ಎಂದು ಅವರು ತಿಳಿಸಿದ್ದಾರೆ. ಪ್ರಸ್ತುತ ‘ಆಸೆ’ ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್‌ನಿಂದ ಕಾಮ್ ಮೈಂಡೆಡ್ ಮಂಜುವಾಗಿ ಬದಲಾಗಿರುವ ಪಾತ್ರದಲ್ಲಿ ನಟಿಸುತ್ತಿದ್ದು, ಗುರುಗಳಾದ ಮಂಡ್ಯ ರಮೇಶ್ ಅವರ ಮಾರ್ಗದರ್ಶನದಿಂದಾಗಿ ಈ ಪಾತ್ರದ ಮೇಲೆ ಉತ್ತಮ ಹಿಡಿತ ಸಿಕ್ಕಿದೆ ಎಂದಿದ್ದಾರೆ. ಡ್ಯಾನ್ಸ್ ಹಾಗೂ ಥಿಯೇಟರ್ ಹಿನ್ನೆಲೆಯಿರುವ ಇವರು ‘ಮಹಾಯೋಗಿ ಸಿದ್ಧಾರುಢ’ ಮತ್ತು ‘ವಾರಾಹಿ’ ಸೇರಿದಂತೆ ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ‘ಆಸೆ’ ಧಾರಾವಾಹಿಯು ಯಶಸ್ವಿಯಾಗಿ ಮುನ್ನಡೆಯಲು ಮಧ್ಯಮ ವರ್ಗದ ಜನರ ಬದುಕಿಗೆ ಹತ್ತಿರವಿರುವ ಕಥೆ ಮತ್ತು ತಂಡದ ಪರಿಶ್ರಮವೇ ಕಾರಣ ಎಂದು ತಿಳಿಸಿರುವ ತೀರ್ಥೇಶ್, ವೀಕ್ಷಕರು ತಮ್ಮನ್ನು ಮನೆಮಗನಂತೆ ಪ್ರೀತಿಸುತ್ತಿರುವುದಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ಬೇರೆಯವರು ಮಾಡುತ್ತಿದ್ದ ‘ಮಂಜು’ ಪಾತ್ರವನ್ನು ಈಗ ನೀವು ಮುಂದುವರಿಸುತ್ತಿದ್ದೀರಿ, ಆರಂಭದಲ್ಲಿ ಸವಾಲು ಎನಿಸಿತೇ? 

ತೀರ್ಥೇಶ್: ನನಗೆ ಸ್ವಲ್ಪ ದಿನಗಳ ತನಕ ಕಥೆ ಅಷ್ಟು ಗೊತ್ತಿರಲಿಲ್ಲ. ‘ಆಸೆ’ಯನ್ನ ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳಲ್ಲಿ ನೋಡ್ತಿದ್ದೆ ಹೊರತು, ಕಂಪ್ಲೀಟ್ ಆಗಿ ಕಥೆ ಫಾಲೋ ಮಾಡ್ತಿರಲಿಲ್ಲ. ಇಷ್ಟು ದೊಡ್ಡ ಸೀರಿಯಲ್‌ನಲ್ಲಿ ನಾನು ಆಕ್ಟ್ ಮಾಡ್ತೀನಿ ಅಂತ ಎಕ್ಸ್ಪೆಕ್ಟ್ ಕೂಡ ಮಾಡಿರಲಿಲ್ಲ, ಅದು ನನ್ನ ಇಮ್ಯಾಜಿನ್ ಕೂಡ ಇರಲಿಲ್ಲ. ಅದರಿಂದ ಸ್ವಲ್ಪ ಫಾಲೋ ಕಡಿಮೆ ಇತ್ತು; ಆದ್ರೂ ಸೂರ್ಯ ಯಾರು, ಮೀನಾ ಯಾರು, ಸಕ್ಕರೆ ಯಾರು ಅನ್ನೋ ಸ್ಟೋರಿ ಗೊತ್ತಾಗ್ತಿತ್ತು. ಮೇನ್ ಆಗಿ ‘ಆಸೆ’ ನೋಡೋಕೆ ಇನ್ನೊಂದು ಕಾರಣ, ಶ್ರೀಯುತ ಮಂಡ್ಯ ರಮೇಶ್ ಸರ್ ನನ್ನ ಗುರುಗಳು. ನಾನು ಏಳು ವರ್ಷದಿಂದ ಅವರ ಜೊತೆ ನಾಟಕ ತರಬೇತಿಯಲ್ಲಿದ್ದು, ಅವರ ಸ್ಟೂಡೆಂಟ್ ಆಗಿದ್ದೆ. 

ಈಗ ಒಂದು ತಿಂಗಳಿಂದ ನನಗೆ ‘ಆಸೆ’ಯಲ್ಲಿ ಒಂದು ಗ್ರಿಪ್ ಸಿಕ್ಕಿದೆ. ಮಂಡ್ಯ ರಮೇಶ್ ಸರ್ ಜೊತೆ ಸ್ಕ್ರೀನ್ ಶೇರ್ ಮಾಡ್ಬೇಕು ಅನ್ನೋದು ನನ್ನ ದೊಡ್ಡ ಆಸೆಯಾಗಿತ್ತು. ಸರ್ ಜೊತೆ ಒಡನಾಟ ಇಟ್ಕೊಂಡು ಆರೇಳು ವರ್ಷ ಆಯ್ತು; ಈಗ ಬಂದಿರೋ ಹೊಸ ಸ್ಟೂಡೆಂಟ್ಸ್ ಎಲ್ಲರೂ ಸರ್ ಜೊತೆ ಸ್ಕ್ರೀನ್ ಶೇರ್ ಮಾಡ್ತಾ ಇದ್ದಾರೆ. ನಾನು ಇಷ್ಟು ವರ್ಷದಿಂದ ಇದ್ದ್ರೂ ಸರ್ ಜೊತೆ ಒಂದ್ಸಲ ಸ್ಕ್ರೀನ್ ಶೇರ್ ಮಾಡ್ಕೊಳ್ಳಿಲ್ವಲ್ಲಾ ಅಂತ ಬೇಜಾರಿತ್ತು. ಈಗ ನೋಡಿದ್ರೆ ಸರ್ ಜೊತೆನೇ ಇರೋ ತರ ಆಸೆಲಿ ಸಿಕ್ಕಿದೆ. ಅದೊಂದು ತುಂಬಾ ದೊಡ್ಡ ಸಂತೋಷ, ಜೊತೆಗೆ ಒಂದು ಒಳ್ಳೆ ಟೀಮ್ ಸಿಕ್ಕಿದೆ. ಜೀರೋ ಇಂದ ಇವಾಗ ಮತ್ತೆ ಕಲಿತಾ ಇದೀನಿ ಅನ್ನೋ ಖುಷಿ ಇದೆ.

ನೆಗೆಟಿವ್ ಶೇಡ್‌ನಿಂದ ಈಗ ಕಾಮ್‌ ಮೈಂಡೆಡ್ ಮಂಜುವಾಗಿ ಬದಲಾಗಿದ್ದೀರಿ, ಈ ಪಾತ್ರದ ಜರ್ನಿ ಹೇಗನಿಸುತ್ತಿದೆ? 

ತೀರ್ಥೇಶ್: ಸಿಂಪಲ್ ಏನಿಲ್ಲ. ನನಗೆ ಈ ಮಂಜು ನೆಗೆಟಿವ್ ಆಗಿ ಇದ್ದಾಗ ಇದ್ದಿದ್ದ ಪಾತ್ರದಲ್ಲಿ, ಆಸ್ ಆನ್ ಆಕ್ಟರ್ ಆ ನೆಗೆಟಿವ್ ಪಾತ್ರನ ನಾನು ಮಾಡಬೇಕಿತ್ತು ಅಂತ ನನಗೆ ಎಲ್ಲೋ ಒಂದು ಕಡೆ ಅನಿಸ್ತು ಮೇಡಂ. ಅಂದ್ರೆ ಆ ನೆಗೆಟಿವ್ ಶೇಡ್ ನ ಕ್ಯಾರಿ ಮಾಡ್ಕೊಂಡು ನಾನು ಯಾವ ತರ ಚೇಂಜಸ್ ಆಗ್ತೀನಿ ಅಂತ ಒಂದು ಸ್ಟೋರಿ ಇತ್ತು ನೋಡಿ, ಆ ಸ್ಟೋರಿಲ್ಲಿ ನಾನು ಇನ್ವಾಲ್ವ್ ಆಗ್ಬೇಕಿತ್ತು ಅಂತ ನನಗೆ ಎಲ್ಲೋ ಒಂದು ಕಡೆ ಅನಿಸ್ತಾ ಇತ್ತು ನನಗೆ. 

ಆದ್ರೆ ಅದು ಅದು ನನಗೆ ವರ್ಕ್ ಆಗ್ಲಿಲ್ಲ. ಬಿಕಾಸ್ ಏನಕ್ಕೆ ಅಂದ್ರೆ ಮಂಜನ್ ಕ್ಯಾರೆಕ್ಟರ್ ಯಾವಾಗ ಅವನು ತನ್ನ ಮಾವನ ಮಾತು ಕೇಳಿ ಅವನು ಬದಲಾಗೋಕೆ ಶುರುವಾದ, ಅವನಿಗೂ ಒಂದು ತಾಯಿ, ಮಿಡಲ್ ಕ್ಲಾಸ್ ಫ್ಯಾಮಿಲಿ ಇದೆ. ತಾಯಿ ಹೂ ಕಡ್ಕೊಂಡು ಜೀವನ ಮಾಡ್ತಾ ಇದ್ದಾಳೆ. ನೀನು ನೋಡು ನೀನು ಬದಲಾಗು ಅಂತ ಯಾವಾಗ ಭಾವ ನನಗೆ ಹೇಳೋಕೆ, ನೀತಿ ಪಾಠ ಹೇಳೋಕೆ ಶುರು ಮಾಡಿದಾಗ ಮಂಜ ಬದಲಾದ. ನನಗೆ ಆ ಮಂಜ ಸಿಕ್ಬಿಟ್ಟ. 

ಸೋ ಈ ಎರಡನ್ನು ಬ್ಯಾಲೆನ್ಸ್ ಮಾಡ್ಕೊಂಡು ಬಂದಿದ್ದಿದ್ರೆ ನನಗೆ ಕಂಪ್ಲೀಟ್ ಆಗಿ ಒಂದು ಒಳ್ಳೆ, ಮಂಜಂತೂ ಒಂದು ಒಳ್ಳೆ ನನಗೆ ಒಂದು ಲೆನ್ಸ್ ಸಿಗೋದು ಅಂತ ನಾನು ಅನ್ಕೊಂಡೆ ಮೇಡಂ. ಬಟ್ ಒಂದು ದೊಡ್ಡ ಸವಾಲ್ ಇದೆ. ಯಾಕೆಂದ್ರೆ, ಇವಾಗ್ಲೂ ನಾನು ಹೊರಗಡೆ ಹೋದಾಗೆಲ್ಲ “ಏನೋ ಕೆಟಿಎಂ ಮಂಜಾ, ಏನೋ ಕೆಟಿಎಂ ಮಂಜಾ” ಅಂತ ಹೇಳ್ತಾ ಇರ್ತಾರೆ. ನನಗೆ ಬಟ್ ಆ ಕೆಟಿಎಂ ಮಂಜನ ನಾನು ಅನುಭವಿಸಿಲ್ಲ. ಸೋ ಅದು ನನಗೆ ನಾಡ್ತಾ ಇಲ್ಲ ಅದು. “ಕಾಗೆ, ಕಾಗೆ ಸುಬ್ಬು ಹೆಂಗಿದ್ದಾನೋ? ಕಾಗೆ ಸುಬ್ಬು ಹೆಂಗಿದ್ದಾನೋ?” ಅಂತ ಕೇಳ್ತಿರ್ತಾರೆ. ಸೋ ನನಗೆ ಕಾಗೆ ಸುಬ್ಬನ ಜೊತೆ ನಾನು ಒಡನಾಟದಲ್ಲಿ ಇರ್ಲಿಲ್ಲ. ಮತ್ತೆ ಕೆಟಿಎಂ ಮಂಜನಾಗಿ ನಾನು ಇರಲಿಲ್ಲ. 

ನಾರ್ಮಲ್ ಆಗಿ ಈಗ ತಾರಾ ಅವರ ಕಂಪನಿಯಲ್ಲಿ ಏನ್ ಕೆಲಸ ಮಾಡ್ಕೊಂಡು ಬರ್ತಿದ್ದ ಆ ಮಂಜ, ಆ ಮಂಜ ಆಗಿರೋದ್ರಿಂದ ನನಗೆ ಹೊರಗಡೆ ಸ್ವಲ್ಪ ಅದು ಕ್ಯಾಚ್ ಮಾಡ್ಕೊಳ್ಳೋಕೆ ನನಗೆ ಗೊತ್ತ… ಏನಂತಾರೆ ಗೊತ್ತಾಗ್ತಿಲ್ಲ ನನಗೆ ಯಾವ ತರ ಕ್ಯಾಚ್ ಮಾಡ್ಕೊಳ್ಳಿ ಜನ ಯಾವ ತರ ರಿಯಾಕ್ಟ್ ಮಾಡ್ತಾ ಇದ್ದಾರಲ್ಲ ಕಾಗೆ ಸುಬ್ಬ ಅನ್ಕೊಂಡು, ಮತ್ತೆ ಕೆಟಿಎಂ ಮಂಜ ಅಂತ ಅನ್ಕೊಂಡು ಅನ್ನೋದು ಒಂದು ಕಾಡ್ತಾ ಇದೆ ಮೇಡಂ.

ಕಥೆಗೆ ಹೊಸದಾಗಿ ಎಂಟ್ರಿ ಕೊಟ್ಟಿರುವ ‘ತಾರಾ’ ಜೊತೆಗಿನ ಲವ್ ಟ್ರ್ಯಾಕ್ ಮುಂದೇನು ತಿರುವು ಪಡೆಯಲಿದೆ? 

ತೀರ್ಥೇಶ್: ಕಾನ್ಫಿಡೆನ್ಷಿಯಲ್ ಆಗಿ ಹೇಳ್ಕೊಬಹುದಾ (ನಗು). ಸದ್ಯಕ್ಕೆ ಈಗ ಲವ್ ನಡೀತಾ ಇದೆ. ತಾರಾ ಆಲ್ರೆಡಿ ಸಕ್ಕರೆ ಮನೆಗೆ ಬಂದಿದ್ದಾರೆ, ಮತ್ತೆ ನಮ್ಮನೆಗೂ ಆದಷ್ಟು ಬೇಗ ಅವರು ಬರ್ತಾರೆ ಅನ್ನೋದು ಒಂದು ನಂಬಿಕೆ ಇದೆ. ಜೊತೆಗೆ ಏನಕ್ಕೆ ತಾರಾ ಅವರ ಮನೇಲಿ ಇದ್ದು, ಅವರನ್ನೆಲ್ಲ ತುಂಬಾ ದ್ವೇಷಿಸುತ್ತಾ ಇದ್ದಾಳೆ ಅನ್ನೋದು ನಮಗೂ ಒಂದು ಪ್ರಶ್ನೆ ಕಾಡ್ತಾ ಇದೆ. ಆದಷ್ಟು ಬೇಗ ಅದು ಕುತೂಹಲ ಸಿಗಬಹುದು ಅಂತ ನಾನು ಕಾಯ್ತಾ ಇದೀನಿ ಮೇಡಂ.

ಡ್ಯಾನ್ಸ್, ಸಿನಿಮಾ, ಸೀರಿಯಲ್ ಅಂತ ಎಲ್ಲದರಲ್ಲೂ ಆಕ್ಟಿವ್ ಆಗಿದ್ದೀರಾ, ಈ ವರ್ಸಟಾಲಿಟಿ ಸೀಕ್ರೆಟ್ ಏನು? 

ತೀರ್ಥೇಶ್: ಸಿಂಪಲ್. ಆಸ್ ಆನ್ ಆಕ್ಟರ್ ಆಗಿ, ಬರಿ ಆಕ್ಟಿಂಗ್ ಇದ್ರೆ ಅವನು ಬದುಕೋದು ತುಂಬಾ ಕಷ್ಟಇಂಡಸ್ಟ್ರಿಯಲ್ಲಿ. ಅವನಿಗೆ ಒಂದು ಡೈರೆಕ್ಷನ್ ಗೊತ್ತಿರಬೇಕು, ಅಟ್ಲೀಸ್ಟ್ ಒಂದು ಬೇಸಿಕ್ ಸಿಂಗಿಂಗ್ ಗೊತ್ತಿರಬೇಕು, ಅಟ್ಲೀಸ್ಟ್ ಬೇಸಿಕ್ ಡ್ಯಾನ್ಸ್ ಅನ್ನೋದಕ್ಕಿಂತ ಅವನಿಗೆ ಪ್ಯೂರ್ ಡ್ಯಾನ್ಸ್ ಗೊತ್ತಿರಬೇಕಲ್ವೇ ಆಸ್ ಆನ್ ಆಕ್ಟರ್ ಗೆ? ರಿದಮ್ ಸೆನ್ಸ್ ಇದೆಯಲ್ಲ, ಅದು ಆಕ್ಟರ್ ಗೆ ತುಂಬಾ ಬೆನಿಫಿಟ್ಸ್ ಕೊಡುತ್ತೆ ಅದು. 

ಸೋ ಇದಕ್ಕೆಲ್ಲ ಹೆಲ್ಪ್ ಮಾಡಿದ್ದು ನನಗೆ ಒಂದು ಥಿಯೇಟರ್. ಥಿಯೇಟರ್ ಅಲ್ಲಿ ನನಗೆ ಹಾಡು ಹಾಡೋದಾಗಿರಲಿ, ಆಮೇಲೆ ಮಂಡ್ಯ ರಮೇಶ್ ಸರ್ ತುಂಬಾ ನನಗೆ ಈ ಡ್ಯಾನ್ಸ್ ಅನ್ನೋದನ್ನ ನಾನು ಬಿಟ್ಬಿಟ್ಟಿದ್ದೆ. ಆಮೇಲೆ ರಮೇಶ್ ಸರ್ ನನಗೆ ಪ್ರತಿ ಸಲ ನೀನು ಡ್ಯಾನ್ಸ್ ಮಾಡ್ಕೊಂಡು ಬಾ, ನೀನು ಡ್ಯಾನ್ಸ್ ಮಾಡ್ಕೊಂಡು ಬಾ, ನೀನು ಡ್ಯಾನ್ಸ್ ಮಾಡ್ಕೊಂಡು ಬಾ ಅಂತ ಹೆಚ್ಚಿಸುತ್ತಾ ಇದ್ರು ನನ್ನ. 

ಸೋ ಅಲ್ಲಿ ನಾನು ಜುಂಬಾ ಕ್ಲಾಸಸ್ ತಗೊಳೋದಾಗಿರಲಿ ನಾಟಕದಲ್ಲಿ, ಇದೆಲ್ಲ ನನಗೆ ಇವತ್ತಿಗೂನು ಇನ್ನು ಆ ಪಿಚ್ಚರ್ ನನಗೆ ಇನ್ನು ಕೊಡ್ತಾ ಇದೆ ಮೇಡಂ. ಸೋ ಆಮೇಲೆ ಇನ್ನೊಂದು ಏನು ಅಂತ ಅಂದ್ರೆ, ಇದೇ ಸ್ಟಾರ್ ಸುವರ್ಣದಲ್ಲಿ ನನಗೆ ಗುರುತಿಸೋಕೆ ಶುರು ಮಾಡಿದರು. ‘ಸ್ನೇಹದ ಕಡಲಲ್ಲಿ’, ಮತ್ತೆ ‘ಶ್ರೀದೇವಿ ಮಹಾತ್ಮೆ’, ‘ರೇಣುಕಾ ಎಲ್ಲಮ್ಮ’ ಆಗಿರಲಿ. ಈ ಎಲ್ಲಾ ಸೀರಿಯಲ್ ಗಳಿಗೂ ನಾನು ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿ ವರ್ಕ್ ಮಾಡಿದ್ದೀನಿ. 

ಸೋ ಆ ನೀವು ಮತ್ತೆ ಕೇಳಿದಂಗೆ ಪಾಯಿಂಟ್, ನನಗೆ ಇಷ್ಟೆಲ್ಲಾ ಏನಿಕ್ಕೆ ಆಕ್ಟಿಂಗ್ ಇರಬೇಕು ಅಂತ ಅಂದ್ರೆ, ನನಗೆ ಅದು ಗೊತ್ತಿತ್ತು. ಆಸ್ ಆನ್ ಆಕ್ಟರ್ ನನಗೆ ಎಲ್ಲಾ ತರ ಕಲೆಗಳು ಗೊತ್ತಿರಬೇಕು ಅಟ್ಲೀಸ್ಟ್ ಬೇಸಿಕ್ ಏನೋ ಒಂದು ಅಟ್ಲೀಸ್ಟ್ ಒಂದು ಸೀನ್ ತೆಗೆಯುವಷ್ಟು ಆದರೂ ನಾನು ಡೈರೆಕ್ಷನ್ ಕಲ್ತಿರಬೇಕು ಅನ್ನೋದು ನನ್ನ ತಲೆಯಲ್ಲಿ ಇವತ್ತಿಗೂ ಓಡ್ತಾ ಇರುತ್ತೆ. 

ಸೋ ನಾಳೆ ದಿನ ಯಾವುದಾದರೂ ಒಬ್ಬ ಡೈರೆಕ್ಟರ್ ಕರೆದು “ಈ ತರ ಮಾಡಪ್ಪ” ಅಂತ ಅಂದ್ರೆ, ಸರ್ ನನಗೆ ಗೊತ್ತಿಲ್ಲ ಅಂತ ಹೇಳಬಾರದು. ಒಂದು ಪ್ಯಾಕೇಜ್ ಇಟ್ಕೊಂಡು ನಾನು ಬೂಸ್ಟ್ ಆಗಬೇಕು ಅಂತ ನನ್ನ ಆಸೆ. ಸೋ ಇದರ ಮೂಲಕ ನಾನು ಜಿಮ್ನಾಸ್ಟಿಕ್ ಕಲಿಯೋದಾಗಿರಲಿ, ಬೇಸಿಕ್ ಫೈಟ್ ಒಂದಷ್ಟು ನಾಲೆಡ್ಜ್ ಗಳು ಗೊತ್ತಿರೋದಾಗಿರಲಿ, ಇದೆಲ್ಲ ಒಂದು ಪ್ಯಾಕೇಜ್ ಇವಾಗ ಸದ್ಯಕ್ಕೆ ಇಟ್ಕೊಂಡಿದ್ದೀನಿ. ಅದು ಯಾರಾದರೂ ಒಬ್ಬ ದೊಡ್ಡ ವ್ಯಕ್ತಿ ನನ್ನ ಗುರುತಿಸಿ “ನೋಡಪ್ಪ ನಿನ್ನ ಹತ್ರ ಒಂದು ಸಣ್ಣ ಕಲೆ ಇದೆ” ಅಂತ ಕರೆದರೆ ನಾನು ಮುಂದೆ ಸೈಕಲ್ ಹೊಡ್ಕೊಂಡು ಹೋಗಬಹುದು ಅಂತ ರೆಡಿ ಇದ್ದೀನಿ.

‘ಇಂತಿ ನಿಮ್ಮ ಆಶಾ’, ‘ರೇಣುಕಾ ಎಲ್ಲಮ್ಮ’ ದಾರಾವಾಹಿಗಳಿಗೂ ‘ಆಸೆ’ ಸೀರಿಯಲ್‌ ಅನುಭವಕ್ಕೂ ಏನು ವ್ಯತ್ಯಾಸ? 

ತೀರ್ಥೇಶ್: ಇಂತಿ ನಿಮ್ಮ ಆಶಾ ಮಾಡಬೇಕಾದರೆ ಐ ಆಮ್ ಅನ್ಮೆಚೂರ್, ನಾನು ಹೇಳ್ತೀನಿ ನನಗೆ ಗೊತ್ತಿರಲಿಲ್ಲ ಏನು ಅಂತ, ಆಕ್ಟಿಂಗ್ ಅಂದ್ರೆ ಏನು ಅಂತ ಗೊತ್ತಿರಲಿಲ್ಲ. ಸೋ ಅವರು ಏನು ಕೊಡ್ತಿದ್ರೋ ಅದನ್ನೇ ಮಾಡ್ತಾ ಹೋಗ್ತಿದ್ದೆ. ಅದು ಮುಗಿಸಿ ಶ್ರೀ ರೇಣುಕಾ ಎಲ್ಲಮ್ಮ, ದೇವಿ ಮಹಾತ್ಮೆಗೆ ಬಂದ್ರೆ, ನನಗೆ ಥಿಯೇಟರ್ ಕಾಪಾಡ್ತು ಆ ಟೈಮ್ ಅಲ್ಲಿ. ಸೋ ಆದಷ್ಟು ನಾವು ಸ್ಟೈಲೈಸ್ಡ್ ನಾಟಕಗಳಾಗಿರಲಿ, ರಿಯಲಿಸ್ಟಿಕ್ ನಾಟಕಗಳಾಗಿರಲಿ, ಯಾವುದೇ ನಾಟಕಗಳನ್ನು ಮಾಡಿಕೊಂಡು ಹೋದ್ರುನುವೆ ಅದಕ್ಕೊಂದು ಮೂಲ ಅನ್ನೋದು ಏನು ಥಿಯೇಟರ್ ಅಲ್ಲಿ ನಮಗೆ ಆ ಒಂದು ಸ್ಟೈಲೈಸ್ಡ್ ಬರ್ತಾ ಇತ್ತು ನಮಗೆ. 

ಸೋ ಆ ಸ್ಟೈಲೈಸ್ಡ್ ನಮಗೆ ದೇವಿ ಮಹಾತ್ಮೆ ಆಗಿರಲಿ, ರೇಣುಕಾ ಎಲ್ಲಮ್ಮ ಆಗಿರಲಿ, ರಾಘವೇಂದ್ರ ಮಹಾತ್ಮೆ ಆಗಿರಲಿ ಇದ್ರಲ್ಲೆಲ್ಲ ಕ್ಯಾರಿ ಆಯ್ತು ಕ್ಯಾರಿ ಆಗ್ತಾ ಬಂತು ನನಗೆ. ಸೋ ನಮಗೆ ಆ ತುಂಬಾ ಸುಲಭ ಅನಿಸ್ತು. ಆದ್ರೆ ಅದನ್ನೇ ಮುಗಿಸಿಕೊಂಡು ಇಮ್ಮಿಡಿಯೇಟ್ ಆಗಿ ನಾನು ಆಸೆಗೆ ಜಂಪ್ ಆಗಿದ್ ತಕ್ಷಣ, ನನಗೆ ವರ್ಕ್ ಬೇರೆ ಅನಿಸ್ತಾ ಇದೆ ಇವಾಗ. ಅಂದ್ರೆ ಒಂದಷ್ಟು ಇಷ್ಟು ವರ್ಷ ಜೆನ್ಯುವಿನ್ಲಿ ನಾನು ಮತ್ತೆ ರಿಯಲಿಸ್ಟಿಕ್ ಆಗಿ ಅಂದ್ರೆ ಸೋಶಿಯಲ್ ಧಾರಾವಾಹಿಗೆ ಬಂದ ತಕ್ಷಣ ಅದಕ್ಕೆ ಸ್ವಲ್ಪ ಅಡ್ಜಸ್ಟ್ ಆಗೋದು ನಮಗೆ ಇವಾಗ ಇನ್ನು ಇನ್ನು ಅದು ಪ್ರಾಕ್ಟೀಸ್ ಆಗ್ತಾನೆ ಇದೆ. 

ಅಂದ್ರೆ ಇದರ ಜೊತೆಗೆ ನಾನು ಏನು ಅಂತ ಅಂದ್ರೆ, ಈಗ ನನಗೆ ಆದಷ್ಟು ತುಂಬಾ ಅವಕಾಶಗಳು ಸಿಕ್ಕಿರೋದು ಈ ತರ ಮೈಥಾಲಜಿಲಿ. ನನ್ನ ಮೊದಲನೇ ಸಿನಿಮಾ ಬಂದು ನನಗೆ ಇದು ಮಹಾಯೋಗಿ ಸಿದ್ಧಾರುಢ ಅಂತ, ಸಿದ್ಧಾರುಢ ಸ್ವಾಮಿಗಳ ಬಗ್ಗೆ ಒಂದು ಬಯೋಮೆಟ್ರಿಕ್ ಮೂವಿ ಮಾಡಿದ್ದೆ. ಅದಕ್ಕೆ ಡೈರೆಕ್ಷನ್ ಬಂದು ನನ್ನ ಪುಣ್ಯಕ್ಕೆ ಸಾಧು ಕೋಕಿಲ ಸರ್. ಸಾಧು ಕೋಕಿಲ ಸರ್ ಡೈರೆಕ್ಷನ್ ಅಲ್ಲಿ ಆಕ್ಟ್ ಮಾಡಬೇಕು ಅಂತ ತುಂಬಾ ಜನ ಕಲಾವಿದರಿಗೆ ಆಸೆ ಇರುತ್ತೆ. ಆದ್ರೆ ನನಗೆ ಮೊದಲನೇ ಸಿನಿಮಾ ಸಾಧು ಕೋಕಿಲ ಸರ್ ಜೊತೆ ಸಿಕ್ಕಿರೋ ಅವಕಾಶ ಅದಂತೂ ನಾನು ಯಾವತ್ತೂ ಮರೆಯೋಕೆ ಆಗಲ್ಲ. 

ಇದೇ ಕೋವಿಡ್ ಟೈಮ್ ಅಲ್ಲಿ ಅವರು ನನ್ನ ಹಿಮಾಲಯಕ್ಕೆ ಕರ್ಕೊಂಡು ಹೋಗಿ ಹಿಮಾಲಯ ತೋರಿಸಿಕೊಟ್ರು. ಯಾವತ್ತೂ ನೋಡದೆ ಇರುವಂತಹ ಆರ್ಟಿಸ್ಟ್ ರಾಮೋಜಿ ಫಿಲಂ ಸಿಟಿ ತೋರಿಸಿಕೊಟ್ರು. ಅಲ್ಲೊಂದು 20-25 ದಿನ ಇಟ್ಕೊಂಡು ನಮಗೆ ಒಂದು ಸಿನಿಮಾ ತೋರಿಸಿ ಒಂದು ಸಿನಿಮಾ ರಂಗನ ಸಿನಿಮಾ ರಂಗ ಪರಿಚಯ ಮಾಡಿಕೊಟ್ಟು ಸಾಧು ಕೋಕಿಲ ಸರ್ ಅಂತ ಅನ್ನೋದ್ರಲ್ಲಿ ತಪ್ಪಿಲ್ಲ. 

ನಿಮ್ಮ ಫಸ್ಟ್ ಸಿನಿಮಾ ಯಾವುದು ಅಂದ್ರೆ ಸರ್?

ತೀರ್ಥೇಶ್: ನಮ್ಮ ಫಸ್ಟ್ ಸಿನಿಮಾ ಬಂದು ಮಹಾಯೋಗಿ ಸಿದ್ಧಾರುಢ ಅಂತ. ಅದೊಂದು ಬಯೋಮೆಟ್ರಿಕ್ ಮೂವಿ. ಅದಾದಮೇಲೆ ನಾನು ಇದು ಡೇ ಡೇವಿಲ್ ಮುಸ್ತಫಾ ಅಂತ ಒಂದು ಸಿನಿಮಾ ಮಾಡಿದೆ. ಇದೇ ಶಶಾಂಕ್ ಸೋಗಲ್ ಸರ್ ಇದ್ದಾರೆ, ಅದರಲ್ಲಿ ಒಂದು ಸಾಂಗ್ ಕೊರಿಯೋಗ್ರಾಫಿ ಮಾಡಿ ಅದರಲ್ಲಿ ಒಂದು ಸಣ್ಣ ಪಾತ್ರ ಮಾಡಿದೆ. ಈ ಎರಡು ಸಿನಿಮಾ ಮಾಡಿದೀನಿ. ಅದಾದ್ಮೇಲೆ ಒಂದು ಫಸ್ಟ್ ಶೆಡ್ಯೂಲ್ ಸಿನಿಮಾ ಮುಗಿದಿದೆ, ವಾರಾಹಿ ಅಂತ. ಕಿರಣ್ ಅಂತ ಒಬ್ಬ ಮ್ಯಾನೇಜರ್ ಇದ್ದಾರೆ ಅವರೇ ಸ್ವಂತವಾಗಿ ಒಂದು ಪ್ರೊಡ್ಯೂಸರ್ ಆಗಿ ಈಗ ಫಸ್ಟ್ ಶೆಡ್ಯೂಲ್ ಮುಗಿಸಿದ್ದಾರೆ. ವಾರಾಹಿ ಅಂತ ಒಂದು ಸಿನಿಮಾ ಮಾಡಿದ್ದೀನಿ. 

ಈಗ ಜೊತೆಗೆ ಇದು ಸೀರಿಯಲ್ ನಡ್ಕೊಂಡು ಹೋಗ್ತಾ ಇದೆ ‘ಆಸೆ’, ಅದರ ಜೊತೆಗೆ ಅವರದೇ ಪ್ರೊಡಕ್ಷನ್ ಅಲ್ಲಿ ‘ಗೆಳತಿ ಗಾಯತ್ರಿ’ ಅಂತ ಒಂದು ಉದಯದಲ್ಲಿ ಬರ್ತಾ ಇದೆ. ಅದ್ರಲ್ಲೂ ನಾನು ಕೃತಿಕ ಅವರ ತಮ್ಮನಾಗಿ ಪಾತ್ರದಲ್ಲಿ ನಾನು ಅಭಿನಯಿಸುತ್ತಾ ಇದ್ದೀನಿ.   ನಂದು ಬಿಸಿಎ ಕಂಪ್ಲೀಟ್ ಆಗಿದೆ. ಬಿಸಿಎ ಕಂಪ್ಲೀಟ್ ಆಗಿದ್ ತಕ್ಷಣ ನಾನು ಯಾವುದು ಜಾಬ್ ಗೆಲ್ಲ ಯಾವುದಕ್ಕೂ ಹೋಗ್ಲಿಲ್ಲ. ನಾನು ಬಿಸಿಎ ಶುರು ಮಾಡ್ತಾನೆ ನನ್ನ ಜರ್ನಿ ಶುರು ಮಾಡಿದೆ. ಸೋ ಈ ಕಡೆ ಬಿಸಿಎ ನು ಕಂಪ್ಲೀಟ್ ಮಾಡ್ಕೊಂಡು ಈ ಕಡೆ ಸೀರಿಯಲ್ಸ್ ಮಾಡ್ಕೊಂಡು ಹೋಗ್ತಾ ಇದ್ದೀನಿ.

‘ಆಸೆ’ ಸೀರಿಯಲ್ 1000+ ಸಂಚಿಕೆಗಳನ್ನು ಪೂರೈಸಿ ಹಾಟ್‌ಸ್ಟಾರ್‌ನಲ್ಲಿ ನಂಬರ್ ಒನ್ ಆಗಿರುವುದಕ್ಕೆ ನಿಮ್ಮ ಮಾತು ಏನು? 

ತೀರ್ಥೇಶ್: ಇದು ಸಂಪೂರ್ಣವಾಗಿ ಅವರ ಎಫರ್ಟ್. ಅಂದ್ರೆ ಅವರು ಅದೊಂದು ಕನ್ಸಿಸ್ಟೆನ್ಸಿಯನ್ನ ಮೇಂಟೈನ್ ಮಾಡ್ತಾರೆ ‘ಆಸೆ’ ಸೀರಿಯಲ್‌ನಲ್ಲಿ. ನಾನು ನೋಡಿರೋ ಪ್ರಕಾರ ನಾನು ಬರೋಕಿಂತ ಮುಂಚೆ ಆಗಲಿ, ನಾನು ಬಂದ್ಮೇಲೆ ಆದ್ರೂ ಆಗಿರಲಿ, ಅವರದೊಂದು ಪ್ಯಾಟರ್ನ್ ಇದೆ. ಆಮೇಲೆ, ನಿಮಗೆ ಈಗ ಕರ್ನಾಟಕ ಅಂತ ತಗೊಂಡ್ರು ಎಲ್ಲರೂ ಶ್ರೀಮಂತರಲ್ಲ, ಎಲ್ಲರೂ ತುಂಬಾ ಲೋ ಕ್ಲಾಸ್ ಅಲ್ಲ. ಇಲ್ಲಿ ನಾವೆಲ್ಲ ಬದುಕ್ತಾ ಇರೋದೇ ಒಂದು ಮಿಡಲ್ ಕ್ಲಾಸ್ ಫ್ಯಾಮಿಲಿಯಲ್ಲಿ. 

ಸೋ ಆಡಿಯನ್ಸ್ ಆಸೆಗೆ ನನ್ನ ಪ್ರಕಾರ, ಮಿಡಲ್ ಕ್ಲಾಸ್ ಫ್ಯಾಮಿಲಿಯವರು ತುಂಬಾ ಜನ ಫ್ಯಾನ್ಸ್‌ಗಳಿದ್ದಾರೆ. ಈ ಕಡೆ ತುಂಬಾ ರಿಚ್ ಮನೆಯಲ್ಲೂ ತೆಗಿತಾ ಇಲ್ಲ, ತುಂಬಾ ಪುಅರ್ ಅಂದ್ರೆ ಪುಅರ್ ಮನೆಯಲ್ಲೂ ತೆಗಿತಾ ಇಲ್ಲ. ಅಂದ್ರೆ ಒಬ್ಬ ಸಾಮಾನ್ಯ ಜನ ಬದುಕಲಿ ಏನೇನು ಪ್ರತಿದಿನ ನಡೆಯುತ್ತಾ ಹೋಗುತ್ತೆ, ಅದನ್ನೇ ತೋರಿಸ್ತಾ ಬರ್ತಿರೋದ್ರಿಂದ ಜನಕ್ಕೆ ಅದು ನಾಡ್ತಾ ಇದೆ ತುಂಬಾ. ಓಹ್, ಇಲ್ಲ ಈ ಸಂಗತಿಗಳು ನನ್ನ ಜೀವನದಲ್ಲೂ ನಡೆದಿದೆ, ಈ ಘಟನೆಗಳು ನನ್ನ ಜೀವನದಲ್ಲೂ ನಡೆದಿದೆ ಅನ್ನೋದ್ರಿಂದ ಆ ಕನ್ಸಿಸ್ಟೆನ್ಸಿ ಮೈಂಟೈನ್ ಮಾಡ್ಕೊಂಡು ಹೋಗ್ತಾ ಇರೋದ್ರಿಂದ ಇವತ್ತು ಜಿಯೋ ಹಾಟ್‌ಸ್ಟಾರ್‌ನಲ್ಲಿ ಟಾಪ್ ಒನ್ ಇರಬಹುದು, ಚಾನೆಲ್‌ನಲ್ಲಿ ಟಾಪ್ ಒನ್ ಇರಬಹುದು.

ಸೆಟ್‌ನಲ್ಲಿ ಇತರ ಕಲಾವಿದರ ಜೊತೆ ಕೆಲಸ ಮಾಡಿದ ಅನುಭವ ಮತ್ತು ಮರೆಯಲಾಗದ ಮೊಮೆಂಟ್ ಯಾವುದು? 

ತೀರ್ಥೇಶ್: ಕಲಾವಿದರು ಹೊಸಬರಾಗಲಿ ಅಥವಾ ಹಳೇಬರಾಗಲಿ ಒಂದೇ ದಿನ ಮಾತಾಡ್ಸಿದ್ರೆ ಸಾಕು, ನಾಳೆಯಿಂದ ಅವರನ್ನ “ಈ ಹುಡುಗ ನನಗೆ ಮೂರು ವರ್ಷದಿಂದ ಪರಿಚಯ, ಐದು ವರ್ಷದಿಂದ ಪರಿಚಯ ಇದ್ದಾರೆ” ಅನ್ನೋ ರೀತಿ ಟ್ರೀಟ್ ಮಾಡ್ತಾರೆ. ಸೆಟ್‌ನಲ್ಲಿ ನಾವು ಎಲ್ಲರೂ ತುಂಬಾ ಚೆನ್ನಾಗಿದ್ದೀವಿ. ಆಮೇಲೆ ಆ ಸೀನ್ ಬಂದ ತಕ್ಷಣ ಅವರ ಜೊತೆ ಆ ಪಾತ್ರಗಳಾಗಿ ಅಭಿನಯಿಸುತ್ತೇವೆ, ಅದು ಮುಗಿದ ತಕ್ಷಣ ನಮ್ಮ ಏನು ಜೋನ್ ಇದೆ, ಅಲ್ಲಿ ನಾವು ತುಂಬಾ ಚೆನ್ನಾಗಿರ್ತೀವಿ. 

ಈಗ ‘ಸಕ್ಕರೆ’ ಆಗಿರಲಿ, ‘ಮೀನಾ’ ಆಗಿರಲಿ ಆಗಲ್ಲ ಅವರಿಬ್ಬರಿಗೂವೇ ಸೀರಿಯಲ್ ಪ್ರಕಾರ. ಆ ಕಟ್ ಅಂದ ತಕ್ಷಣ ಅವರಿಬ್ಬರ ಬಾಂಡಿಂಗ್ ನೋಡೋದೇ ಚಂದ. ಸೂರ್ಯ ಅಂದ್ರೆ ಸಕ್ಕರೆ ಮೂಡ್, ಸಕ್ಕರೆ ಇವನ್ ಸೂರ್ಯ ಅವರನ್ನ ಮುಟ್ಟೋದು ಇಲ್ಲ, ದೂರ ಕಲ್ತಾರೆ. ಅದೇ ಮಧ್ಯಾಹ್ನ ಊಟಕ್ಕೆ ಬಿಟ್ಟ ತಕ್ಷಣ ಕೈ ತುತ್ತು ಅಲ್ಲಿ ಊಟ ಮಾಡಸ್ತಾ ಇರ್ತಾರೆ, ಸೋ ಎಷ್ಟು ಚಂದ ನೋಡೋಕೆ ತುಂಬಾ ಚೆನ್ನಾಗಿರುತ್ತೆ. 

ಆಮೇಲೆ ಇನ್ನೊಂದು ಬಿಟ್ರೆ, ಇನ್ನು ರಮೇಶ್ ಸರ್ ಹತ್ರ ಬಂದ್ರೆ, ರಮೇಶ್ ಸರ್ ಏನು ನಮಗೆ ಥಿಯೇಟರ್ ಅಲ್ಲಿ ಟ್ರೈನ್ ಮಾಡ್ತಿದ್ದರೋ, ಅದನ್ನ ಇವತ್ತಿಗೂ ಇಲ್ಲೂ ಕಂಟಿನ್ಯೂ ಮಾಡ್ತಾರೆ. “ನೀನು ಹಿಂಗೆ ಮಾಡ್ತಾ ಇದ್ದೀಯಾ, ಇದು ಸರಿ ಮಾಡ್ಕೋ, ಇದು ತಪ್ಪು ಮಾಡ್ತಾ ಇದ್ದೀಯಾ ಕಣೋ” ಮೇಕಪ್ ಆಗಿರಲಿ, ಕಾಸ್ಟ್ಯೂಮ್ ಆಗಿರಲಿ ಇದನ್ನೆಲ್ಲಾ ನಮಗೆ ಕ್ಲಾಸಸ್ ಗಳು ನಡೀತಾ ಇರುತ್ತೆ ಆ ಸೆಟ್ ಅಲ್ಲಿ. ಇನ್ನು ಮೀನಾ, ತಾರಾ ಬಂದ್ರೆ, ತಾರಾ ಅಂತೂ ನಮ್ಮ ಮೈಸೂರು ಹುಡುಗಿ. ಅದು ಸ್ವಲ್ಪ ಏನೋ ನಮ್ಮ ಮೈಸೂರು ಅಂದ್ರೆ, “ನಮ್ಮೂರು ಹುಡುಗಿ, ನಮ್ಮೂರು ಹುಡುಗಿ” ಅಂತ ಇರುತ್ತೆ. 

ಸ್ಟಾರ್ಟಿಂಗ್ ಡೇಸ್ ಅಲ್ಲಿ ನಾನು ಅವರು ಸ್ವಲ್ಪ ಮಾತಾಡ್ತಾ ಇದ್ದಿದ್ದು ಕಡಿಮೆನೇ. ಆಮೇಲೆ ನಾವು ಕೂತ್ಕೊಂಡು ಮಾತಾಡಿದ ಮೇಲೆ ನಮ್ಮ ಮ್ಯೂಚುವಲ್ ಫ್ರೆಂಡ್ಸ್ ತುಂಬಾ ಜನ ಇದ್ದಾರೆ ಅಂತ ಗೊತ್ತಾದಮೇಲೆ ನಾವು ತುಂಬಾ ಕ್ಲೋಸ್ ಆಗ್ವಿ. ಇವತ್ತಿಗೂ ಅಕಾಸ್ಮಾತ್ ಏನಾದ್ರು ತುಂಬಾ ಲೇಟ್ ಆಯ್ತು, ಯಾರೋ ಆರ್ಟಿಸ್ಟ್ ಬರ್ದೆ ಇದ್ರುವೆ ಒಂದು ಫೋನ್ ಮಾಡ್ತೀವಿ. “ಎಲ್ಲಿದ್ದೀರಾ? ಇನ್ನು ಬಂದಿಲ್ವಲ್ಲ, ಇವತ್ತು ನಿಮ್ಮದು ಶೂಟಿಂಗ್ ಇದೆಯಾ? ನೀವು ಬರ್ತಿದ್ದೀರಾ?” ಅಂತ ಈ ತರ ಒಂದಷ್ಟು ಒಡನಾಟಗಳು ಇಟ್ಕೊಂಡಿದ್ದೀವಿ.

Interview: ನಿಮ್ಮ ಈ ಹೊಸ ಜರ್ನಿ ಮತ್ತು ಮಂಜು ಪಾತ್ರದ ಬಗ್ಗೆ ವೀಕ್ಷಕರಿಗೆ ಏನು ಹೇಳಲು ಬಯಸುತ್ತೀರಿ?

ತೀರ್ಥೇಶ್: ಏನ್ ಹೇಳೋದು, ಅವರು ನನ್ನನ್ನ ಬರೀ ಗುರುತಿಸಿ ಮಂಜ ಅಂತ ಅಂದ್ರೆ ಸಾಕು, ಅದಕ್ಕಿಂತ ಪ್ರೀತಿ ಇನ್ನೇನು ಬೇಡ ಆ ಪ್ರೀತಿ ಸದಾ ಕೊಡಲಿ. ನನಗಂತೂ ಬಹಳ ಆಸೆ, ನಾನು ಇವತ್ತಿಗೂವೆ ಬರೀ ಒಂದು ಬಂದು ಫೋಟೋ ತಕೊಂಡ್ರೆ “ಹೂ ಸರಿ ಥ್ಯಾಂಕ್ಸ್” ಅಂತ ಹೇಳ್ಬಿಟ್ಟು ಕಳಿಸೋ ವ್ಯಕ್ತಿ ನಿಜವಾಗ್ಲೂ ಅಲ್ಲ. ಹೇಗೆ ಬರ್ತಾ ಇದೆ ಅಂತ ಕೇಳ್ತೀನಿ, ಏನು ಬದಲು ಮಾಡ್ಕೋಬೇಕು ಅಂತ ಕೇಳ್ತೀನಿ. 

ಅವರನ್ನ ನನ್ನನ್ನ ಮನೆ ಮಗನಾಗಿ ನೋಡಿದ್ರೆ ಸಾಕು ಇನ್ನೇನು ಬೇಡ. ಕರೆದು ಒಂದು ತುತ್ತು ಊಟ ಹಾಕಿದ್ರು ಬಂದು ಮನೆಯಲ್ಲಿ ಕೂತ್ಕೊಂಡು ಊಟ ಮಾಡಿ ಹೋಗುವಷ್ಟು ನಾನು ಸರಳ ವ್ಯಕ್ತಿ. ನಾನು ಯಾರಿಗೂ ಕೆಟ್ಟದ್ದು ಬಯಸಲ್ಲ, ನಾನು ಹಂಗೆ ನನಗೆ ಅದೇ ಆಸೆ ಇವತ್ತಿಗೂವೆ ಮಂಜನ ಪಾತ್ರ ಎಷ್ಟು ಮೇಲ್ಮಟ್ಟಕ್ಕೆ ಹೋದ್ರುವೆ ಕೆಳಮಟ್ಟಕ್ಕೆ ಬಂದ್ರುವೆ ಜನ ಇವತ್ತು ಏನು ಪ್ರೀತಿ ಕೊಡ್ತಾ ಇದ್ದಾರೆ ಅದೇ ಕೊಟ್ಟರೆ ಸಾಕು ಇನ್ನೇನು ಬೇಡ. ನೀನು ಬದಲಾಗಪ್ಪ ಅಂತ ನನಗೆ ಯಾವುದೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಮೆಸೇಜ್ ಮಾಡಿದ್ರು ಸಾಕು, ನಾನು ಅದನ್ನ ಅಕ್ಸೆಪ್ಟ್ ಮಾಡೋಕೆ ನಾನು ರೆಡಿ ಇದ್ದೀನಿ.