ಜನ್ಮಾಷ್ಟಮಿಯಂದೇ ಗಂಡು ಮಗುವಿಗೆ ಜನ್ಮ ನೀಡಿದ ಹರ್ಷಿಕಾ

ಮೊದಲ ಮಗಳು ತ್ರಿದೇವಿಗೆ ತಮ್ಮ: ಭುವನ್ ಪೊನ್ನಣ್ಣ ಸಂತಸ

Photo Credits: @harshikapoonachaofficial (Instagram)

ಸ್ಯಾಂಡಲ್‌ವುಡ್‌ನ ಜನಪ್ರಿಯ ಹಾಗೂ ಮುದ್ದಾದ ತಾರಾದಂಪತಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಅವರ ಕುಟುಂಬಕ್ಕೆ ಎರಡನೇ ಮಗುವಿನ ಆಗಮನವಾಗಿದೆ. ಶ್ರೀಕೃಷ್ಣ ಜನ್ಮಾಷ್ಟಮಿಯ ಅತ್ಯಂತ ಪವಿತ್ರ ದಿನದಂದೇ ನಟಿ ಹರ್ಷಿಕಾ ಪೂಣಚ್ಚ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಈ ಅಪರೂಪದ ಸಂಭ್ರಮದ ಸುದ್ದಿಯನ್ನು ಹಂಚಿಕೊಂಡಿರುವ ದಂಪತಿ, ತಮ್ಮ ಮನೆಗೆ ‘ಚೋಟು ಕೃಷ್ಣ’ ಬಂದಿದ್ದಾನೆ ಎಂದು ಅತ್ಯಂತ ಸಂತಸದಿಂದ ಹೇಳಿಕೊಂಡಿದ್ದಾರೆ. ಜತೆಗೆ ಮಗುವಿನ ಮುಂಗೈನ ಮುದ್ದಾದ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಪ್ರೀತಿ ವ್ಯಕ್ತಪಡಿಸಿದ್ದಾರೆ.

ಹಬ್ಬದ ದಿನವೇ ಗಂಡು ಮಗು ಜನಿಸಿರುವುದರಿಂದ ಸಾಕ್ಷಾತ್ ಶ್ರೀಕೃಷ್ಣನೇ ತಮ್ಮ ಮನೆಗೆ ಬಂದಿದ್ದಾನೆ ಎಂಬ ಸಂತಸದಲ್ಲಿದ್ದಾರೆ ಈ ದಂಪತಿ. ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಹರ್ಷಿಕಾ-ಭುವನ್ ಜೋಡಿಗೆ ಶುಭಾಶಯಗಳ ಮಳೆ ಹರಿಸುತ್ತಿದ್ದಾರೆ.

ಮೊದಲ ಮಗಳು ತ್ರಿದೇವಿಗೆ ತಮ್ಮ: ಭುವನ್ ಪೊನ್ನಣ್ಣ ಸಂತಸ

ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಅವರಿಗೆ ಈಗಾಗಲೇ ‘ತ್ರಿದೇವೀ ಪೊನ್ನಕ್ಕ’ ಎಂಬ ಮುದ್ದಾದ ಹೆಣ್ಣು ಮಗಳಿದ್ದಾಳೆ. ಇದೀಗ ತ್ರಿದೇವಿಗೆ ತಮ್ಮನ ಆಗಮನವಾಗಿದ್ದು, ಇಡೀ ಕುಟುಂಬದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಈ ಖುಷಿಯ ಸುದ್ದಿಯ ಬಗ್ಗೆ ಮಾತನಾಡಿದ ನಟ ಭುವನ್ ಪೊನ್ನಣ್ಣ, ತಾಯಿ ಮತ್ತು ಮಗು ಇಬ್ಬರೂ ಸಂಪೂರ್ಣ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ. ಮಗ ಅತ್ಯಂತ ಒಳ್ಳೆಯ ನಕ್ಷತ್ರದಲ್ಲಿ, ಕೃಷ್ಣ ಜನ್ಮಾಷ್ಟಮಿಯಂದೇ ಹುಟ್ಟಿರುವುದು ತಮಗೆ ಅತ್ಯಂತ ಖುಷಿ ತಂದಿದೆ ಎಂದಿದ್ದಾರೆ.

ಮನೆಗೆ ಹೊಸ ಅತಿಥಿ ಬಂದಿರುವುದರಿಂದ ಮೊದಲ ಮಗಳು ತ್ರಿದೇವಿ ಸ್ವಲ್ಪ ಕನ್‌ಫ್ಯೂಸ್ ಸ್ಟೇಟ್‌ನಲ್ಲಿದ್ದಾಳೆ ಎಂದು ಭುವನ್ ತಮಾಷೆಯಾಗಿ ಹೇಳಿದ್ದಾರೆ. ಪ್ರಸ್ತುತ ತಾಯಿ ಮತ್ತು ಮಗುವಿನ ಆರೈಕೆಯಲ್ಲಿ ಇಡೀ ಕುಟುಂಬ ತೊಡಗಿಸಿಕೊಂಡಿದೆ.

Photo Credits: @harshikapoonachaofficial (Instagram)

ಮಾಧ್ಯಮಗಳೊಂದಿಗೆ ಖುಷಿ ಹಂಚಿಕೊಳ್ಳಲು ಪ್ರೆಸ್ ಮೀಟ್

ತಮ್ಮ ಬದುಕಿನ ಈ ದೊಡ್ಡ ಸಂಭ್ರಮದ ಕ್ಷಣವನ್ನು ಅಭಿಮಾನಿಗಳು ಹಾಗೂ ನಾಡಿನ ಜನರೊಂದಿಗೆ ಹಂಚಿಕೊಳ್ಳಲು ಈ ತಾರಾದಂಪತಿ ವಿಶೇಷ ಪ್ರೆಸ್ ಮೀಟ್ ಒಂದನ್ನು ಆಯೋಜಿಸಿದ್ದಾರೆ. ಮೈಸೂರು ರಸ್ತೆಯ ನಾಟುಸ್ ಆಸ್ಪತ್ರೆಯಲ್ಲಿ ಈ ಸುದ್ದಿಗೋಷ್ಠಿ ಪ್ಲಾನ್ ಆಗಿದೆ.

ಈ ಪ್ರೆಸ್ ಮೀಟ್‌ನಲ್ಲಿ ನಟ ಭುವನ್ ಪೊನ್ನಣ್ಣ, ನಟಿ ಹರ್ಷಿಕಾ ಪೂಣಚ್ಚ ಜೊತೆಗೆ ಚಿಕಿತ್ಸೆ ನೀಡಿದ ಸ್ತ್ರೀರೋಗ ತಜ್ಞೆ ಡಾ. ಪ್ರೀತಿ ಸುರೇಂದ್ರ ಹಾಗೂ ಮಕ್ಕಳ ತಜ್ಞ ಡಾ. ಸುರೇಂದ್ರ ಅವರು ಭಾಗವಹಿಸಲಿದ್ದಾರೆ.

ಚಿತ್ರರಂಗದ ಹಲವು ಕಲಾವಿದರು ಹಾಗೂ ದಂಪತಿಯ ಆಪ್ತರು ಆಸ್ಪತ್ರೆಗೆ ಭೇಟಿ ನೀಡಿ ನವಜಾತ ಶಿಶುವನ್ನು ಹಾರೈಸುತ್ತಿದ್ದಾರೆ. ಕೃಷ್ಣ ಜನ್ಮಾಷ್ಟಮಿಯಂದೇ ಮಗು ಹುಟ್ಟಿರುವುದು ಹರ್ಷಿಕಾ ಮತ್ತು ಭುವನ್ ಅವರ ಜೀವನದಲ್ಲಿ ಎಂದೂ ಮರೆಯಲಾಗದ ಸುಂದರ ಕ್ಷಣವಾಗಿದೆ.