ರಾಕಿಂಗ್ ಸ್ಟಾರ್ ಯಶ್ ಸಿನಿಮಾ ‘ಟಾಕ್ಸಿಕ್’ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಗಸ್ಟ್ 26 ರಂದು ಅದ್ಧೂರಿಯಾಗಿ ವಿಶ್ವದಾದ್ಯಂತ ರಿಲೀಸ್ ಆಗಿತ್ತು. ಮೊದಲ ದಿನವೇ ವರ್ಲ್ಡ್ವೈಡ್ ಸುಮಾರು ₹150 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಅಚ್ಚರಿ ಮೂಡಿಸಿತ್ತು. ಫಸ್ಟ್ ಡೇ ಫಸ್ಟ್ ಶೋಯಿಂದಲೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಈ ಸಿನಿಮಾ ನೋಡುವುದನ್ನು ಸಿನಿ ಪ್ರಿಯರು ನಿಲ್ಲಿಸಿರಲಿಲ್ಲ. ಆದರೆ, 2ನೇ ದಿನ ಸಿನಿಮಾದ ಕಲೆಕ್ಷನ್ನಲ್ಲಿ ಗಣನೀಯ ಇಳಿಕೆ ಕಂಡಿದೆ. ಅದಕ್ಕೆ ವರ್ಕಿಂಗ್ ಡೇ ಕಾರಣ ಅನ್ನೋದು ವಿತರಕರ ವಾದ.
‘ಟಾಕ್ಸಿಕ್’ ಬಗ್ಗೆ ಏನೇ ರಿವ್ಯೂ ಇದ್ದರೂ ಸಿನಿಮಾ ಎಷ್ಟು ಬ್ಯುಸಿನೆಸ್ ಮಾಡುತ್ತೆ ಅನ್ನೋದರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಟ್ರೇಡ್ ಎಕ್ಸ್ಪರ್ಟ್ಗಳು ತಮಗೆ ಸಿಕ್ಕಿರೋ ಅಂಕಿ-ಅಂಶಗಳನ್ನು ಲೆಕ್ಕ ಹಾಕುತ್ತಿದ್ದಾರೆ. ಮೊದಲ ದಿನ ಕಲೆಕ್ಷನ್ ನಿರ್ಮಾಣ ಸಂಸ್ಥೆಗೆ ಭರವಸೆ ಮೂಡಿಸಿದ್ದರೂ, ವೀಕೆಂಡ್ನಲ್ಲಿ ಸಿನಿಮಾದ ಕಲೆಕ್ಷನ್ ಮೇಲೆ ಯಶಸ್ಸು ನಿಂತಿದೆ ಅಂತ ಹೇಳಬಹುದು. ಹಾಗಂತ ಕೇವಲ ಥಿಯೇಟರ್ ಕಲೆಕ್ಷನ್ ಒಂದೇ ಅಲ್ಲ. ಚಿತ್ರಮಂದಿರಗಳಿಂದ ಆಗುವ ಕಲೆಕ್ಷನ್ ಅನ್ನು ಹೊರತು ಪಡಿಸಿ ಆಗುವ ಗಳಿಕೆ ಮೇಲೆ ಕಣ್ಣಿಟ್ಟಿದ್ದರು.
ಜೀ 5 ತೆಕ್ಕೆಗೆ ‘ಟಾಕ್ಸಿಕ್’ ಓಟಿಟಿ ಹಕ್ಕು
‘ಕೆಜಿಎಫ್ 2’ ಬಳಿಕ ಯಶ್ ಸಿನಿಮಾ ಬಿಡುಗಡೆಯಾಗುತ್ತಿರುವುದರಿಂದ ಟ್ರೇಡ್ ಎಕ್ಸ್ಪರ್ಟ್ಗಳು ‘ಟಾಕ್ಸಿಕ್’ ಮೇಲೆ ಬ್ಯುಸಿನೆಸ್ ಮೇಲೆ ವಿಶೇಷ ಗಮನ ಇಟ್ಟಿದ್ದರು. ‘ಟಾಕ್ಸಿಕ್’ ಈ ವರ್ಷದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ಆಗಿದ್ದರಿಂದ ಓಟಿಟಿ ಹಾಗೂ ಸ್ಯಾಟಲೈಟ್ ಹಕ್ಕುಗಳ ಮೇಲೆ ವಿಶೇಷ ಗಮನವಿಟ್ಟಿದ್ದರು. ಆದರೆ, ಬಿಡುಗಡೆಗೂ ಮುನ್ನ ಈ ಎರಡೂ ಹಕ್ಕುಗಳ ಖರೀದಿಗೆ ಕಾಂಪಿಟೇಷನ್ ಇದ್ದರೂ, ಸಿನಿಮಾವನ್ನು ಯಾರೂ ಕೊಂಡು ಕೊಂಡಿರಲಿಲ್ಲ. ಈ ಕೊನೆಗೂ ಅದು ಜಿ5 ಓಟಿಟಿ ಹಾಗೂ ಸ್ಯಾಟಲೈಟ್ ಹಕ್ಕುಗಳನ್ನು ಖರೀದಿ ಮಾಡಿದೆ.
ಇದನ್ನು ಓದಿ: TOXIC BOX OFFICE: 200 ಕೋಟಿ ಕ್ಲಬ್ನತ್ತ ಯಶ್ ‘ಟಾಕ್ಸಿಕ್’; 2ನೇ ದಿನ ಈ ಸಿನಿಮಾ ಗಳಿಸಿದ್ದೆಷ್ಟು?
ಎಷ್ಟಕ್ಕೆ ಸೇಲ್ ಆಯ್ತು ‘ಟಾಕ್ಸಿಕ್’?
ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಖರೀದಿಗೆ ಪ್ರಮುಖ ಓಟಿಟಿ ವೇದಿಕೆಗಳು ಮುಗಿಬಿದ್ದಿದ್ದವು. ಈ ಹಿಂದೆ ವರದಿಯಾದಂತೆ ಅಮೆಜಾನ್ ಪ್ರೈಮ್ ವಿಡಿಯೋ, ನೆಟ್ಪ್ಲಿಕ್ಸ್ ಹಾಗೂ ಜೀ 5 ಸಂಸ್ಥೆಗಳು ಮುಂದಾಗಿದ್ದವು. ಆದರೆ, ಅಮೆಜಾನ್ ಹಾಗೂ ಜೀ 5 ಓಟಿಟಿ ಹಕ್ಕುಗಳ ಖರೀದಿಗೆ ಪೈಪೋಟಿ ನಡೆಸಿದ್ದವು ಎನ್ನಲಾಗಿದೆ. ಆದರೆ, ಯಶ್ ಅಂಡ್ ಟೀಮ್ ಅಮೆಜಾನ್ ಹಾಗೂ ನೆಟ್ಫ್ಲಿಕ್ಸ್ ನೀಡಿದ ಆಫರ್ ಅನ್ನು ಒಪ್ಪಿಕೊಳ್ಳಲಿಲ್ಲ. ಹೀಗಾಗಿ ಡೀಲ್ ಕುದುರಿರಲಿಲ್ಲ. ಆದ್ರೀಗ 235 ಕೋಟಿ ರೂಪಾಯಿಗೆ ಜೀ 5 ಖರೀದಿ ಮಾಡಿದೆ ಎಂದು ಟ್ರೇಡ್ ಎಕ್ಸ್ಪರ್ಟ್ಗಳು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಅತೀ ದುಬಾರಿ ಮೊತ್ತಕ್ಕೆ ಸೇಲ್
‘ಟಾಕ್ಸಿಕ್’ ಸಿನಿಮಾವನ್ನು ಜೀ 5 ದುಬಾರಿ ಮೊತ್ತಕ್ಕೆ ಖರೀದಿ ಮಾಡಿದೆ. ಎಲ್ಲಾ ಭಾಷೆಯಲ್ಲಿಯೂ ಸ್ಟ್ರೀಮಿಂಗ್ ಮಾಡುವ ಹಕ್ಕು ಪಡೆಯುವುದರ ಜೊತೆಗೆ, ಸ್ಯಾಟಲೈಟ್ ಹಕ್ಕುಗಳು ಕೂಡ ಸೇರಿಕೊಂಡಿದೆ. ಇಷ್ಟೇ ಅಲ್ಲದೆ, ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯಾದ ಒಂದು ತಿಂಗಳು ಇಲ್ಲವೇ 2 ತಿಂಗಳ ಅಂತಿರದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗುತ್ತಿದೆ. ಓಟಿಟಿ ಹಾಗೂ ಸ್ಯಾಟಲೈಟ್ ಡೀಲ್ಗಳ ಬಗ್ಗೆ ಅಧಿಕೃತ ಮಾಹಿತಿ ಸಿಗದೇ ಹೋದರೂ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸಂಚಲ ಸೃಷ್ಟಿಸುತ್ತಿದೆ.




