BBK 13: ಬಿಗ್ ಬಾಸ್ ಕನ್ನಡ 13 ಕಾರ್ಯಕ್ರಮವು ರೋಚಕ ಹಂತ ತಲುಪಿದೆ. ಪ್ರತಿದಿನ ಹೊಸ ತಿರುವುಗಳೊಂದಿಗೆ ವೀಕ್ಷಕರನ್ನು ರಂಜಿಸುತ್ತಿದೆ. ಈ ವಾರದ ವಾರದ ಪಂಚಾಯತಿಯಲ್ಲಿ ಮತ್ತೊಬ್ಬ ಸ್ಪರ್ಧಿ ಹೊರಬಂದಿದ್ದಾರೆ.
ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದ ಲಕ್ಷ್ಮಿ ಅವರು ಈಗ ಎವಿಕ್ಟ್ ಆಗಿದ್ದಾರೆ. ಬಂದಷ್ಟೇ ವೇಗವಾಗಿ ಅವರು ಮನೆಯಿಂದ ಹೊರನಡೆದಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಕಾರ್ಯಕ್ರಮ ಶುರುವಾಗಿ 50 ದಿನಗಳು ಪೂರ್ಣಗೊಂಡಿವೆ. ಈ ವಿಶೇಷ ಸಂದರ್ಭದಲ್ಲಿ ಕಿಚ್ಚ ಸುದೀಪ್ ಎಲ್ಲಾ ಸ್ಪರ್ಧಿಗಳಿಗೆ ಶುಭಾಶಯ ತಿಳಿಸಿದರು. ಅಲ್ಲದೆ, ಹಲವು ತಮಾಷೆ ಹಾಗೂ ಆಟಗಳೊಂದಿಗೆ ಭಾನುವಾರದ ಸಂಚಿಕೆಯನ್ನು ನಡೆಸಿಕೊಟ್ಟರು.
ಕೇವಲ ಎರಡೇ ವಾರದಲ್ಲಿ ಲಕ್ಷ್ಮಿ ಔಟ್
ಲಕ್ಷ್ಮಿ ಅವರು ಅಗ್ನಿಪರೀಕ್ಷೆ ಕ್ಯಾಂಡಿಡೇಟ್ ಆಗಿ ಬಿಗ್ ಬಾಸ್ ಮನೆಗೆ ಬಂದಿದ್ದರು. ಮಂಜು ಮತ್ತು ಸಂಗೀತಾ ಹೊರಬಂದ ನಂತರ ಅವರ ಸ್ಥಾನಕ್ಕೆ ಲಕ್ಷ್ಮಿ ಎಂಟ್ರಿ ಕೊಟ್ಟಿದ್ದರು. ಆದರೆ ಮನೆಗೆ ಬಂದ ಕೇವಲ ಎರಡೇ ವಾರದಲ್ಲಿ ಅವರು ಹೊರಬರಬೇಕಾಯಿತು.
ಮನೆಯಲ್ಲಿ ಕೆಲವರೊಂದಿಗೆ ಅವರು ಒಳ್ಳೆಯ ಒಡನಾಟ ಬೆಳೆಸಿಕೊಂಡಿದ್ದರು. ತಮ್ಮ ಆಟದ ಮೂಲಕವೂ ಗಮನ ಸೆಳೆದಿದ್ದರು. ಆದರೆ ಕಡಿಮೆ ಮತಗಳ ಕಾರಣದಿಂದ ಅವರು ಹೊರಬರಬೇಕಾಯಿತು.
ಇದನ್ನು ಓದಿ: BBK 13: ತಾಂಡವ್-ಗಗನ್ ಸ್ನೇಹಕ್ಕೆ ಸುದೀಪ್ ಟಾಂಗ್; ‘ನೀವು ಆ ಗೆಳೆತನಕ್ಕೆ ಅರ್ಹರಲ್ಲ’ ಎಂದ ಕಿಚ್ಚ
BBK 13: ಆಕ್ಟಿವಿಟಿ ರೂಮ್ನಲ್ಲಿ ನಡೆದ ನಿರ್ಧಾರ
ಈ ವಾರ ಹಲವು ಪ್ರಬಲ ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಸುದೀಪ್ ಅವರು ಮೊದಲು ತಾಂಡವ್, ಆಸಿಯಾ ಹಾಗೂ ಸೌಂದರ್ಯಾ ಶೆಟ್ಟಿ ಅವರನ್ನು ಸೇಫ್ ಮಾಡಿದರು. ಇದರಿಂದ ಉಳಿದ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಕಳವಳ ಹೆಚ್ಚಾಯಿತು.
ಸೋನಿಕಾ, ಕುಮಾರಿ ಮತ್ತು ಲಕ್ಷ್ಮಿ ಅವರನ್ನು ಆಕ್ಟಿವಿಟಿ ರೂಮ್ಗೆ ಕಳುಹಿಸಲಾಯಿತು. ಅಲ್ಲಿನ ಹಳೆಯ ಫೋನ್ಗೆ ಬಂದ ಕರೆಯ ಮೂಲಕ ನಿರ್ಧಾರ ತಿಳಿಯಿತು. ಕುಮಾರಿ ಸೇಫ್ ಆದರೆ, ಲಕ್ಷ್ಮಿ ಅವರಿಗೆ ಎವಿಕ್ಟೆಡ್ ಎಂಬ ಸಂದೇಶ ಬಂತು.




