☔ Weather
Bengaluru: ☁️ 21°C | AQI 60
Mysore: ☁️ 22°C | AQI 62
Mangalore: ☁️ 26°C | AQI 70
Bengaluru: ☁️ 21°C | AQI 60

BBK 13: ಕಿರಣ್ ಶಾಸ್ತ್ರಿಗೆ ಸುದೀಪ್ ಶಬ್ಬಾಶ್; ಲಿಖಿತ್-ಯಶಸ್ಗೆ ಬಿತ್ತು ಖಡಕ್ ಕ್ಲಾಸ್

BBK 13: Sudeep Warns Likhith

BBK 13: ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಪ್ರತಿದಿನವೂ ಹೊಸ ಡ್ರಾಮಾಗಳು ನಡೆಯುತ್ತಿವೆ. ಈ ವಾರದ ವಾರಾಂತ್ಯದ ಎಪಿಸೋಡ್‌ನಲ್ಲಿ ಹಲವು ಮಹತ್ವದ ಘಟನೆಗಳು ಜರುಗಿವೆ. ಕಿಚ್ಚ ಸುದೀಪ್ ಅವರು ಕೆಲ ಸ್ಪರ್ಧಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅದೇ ರೀತಿ ನಿಯಮ ಉಲ್ಲಂಘನೆ ಮಾಡಿದ ಕೆಲ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಕಳೆದ ವಾರ ಸುದೀಪ್ ಅವರಿಂದ ಪಾಠ ಹೇಳಿಸಿಕೊಂಡಿದ್ದ ಕಿರಣ್ ಶಾಸ್ತ್ರಿ, ಈ ವಾರ ಸಂಪೂರ್ಣವಾಗಿ ತಮ್ಮ ಆಟದ ಶೈಲಿಯನ್ನು ಬದಲಾಯಿಸಿಕೊಂಡಿದ್ದರು.

ಕಿರಣ್ ಅವರ ಈ ಬದಲಾವಣೆ ಮತ್ತು ಶ್ರಮಕ್ಕೆ ಸುದೀಪ್ ಕಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ. ಕಿರಣ್ ಶಾಸ್ತ್ರಿ ಅವರ ಆಟವನ್ನು ಮೆಚ್ಚಿದ ಸುದೀಪ್ ಅವರು ” ಶಬ್ಬಾಶ್” ಎಂದಿದ್ದಾರೆ. ಇದರಿಂದ ಕಿರಣ್ ಶಾಸ್ತ್ರಿಗೆ ತುಂಬಾ ಖುಷಿಯಾಗಿದೆ.

ಎಮರ್ಜೆನ್ಸಿ ಎಕ್ಸಿಟ್‌ನಿಂದ ಸೇವ್ ಆದ ಕಿರಣ್

ಈ ವಾರದ ಬಿಗ್ ಬಾಸ್ ಎಮರ್ಜೆನ್ಸಿ ಎಕ್ಸಿಟ್‌ನಿಂದ ಕಿರಣ್ ಶಾಸ್ತ್ರಿ ಸೇವ್ ಆಗಿದ್ದಾರೆ. ಕಳೆದ ವಾರಕ್ಕೆ ಹೋಲಿಸಿದರೆ ಕಿರಣ್ ಮನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಈ ವಿಷಯ ಕಿರಣ್ ಅವರಿಗೆ ದೊಡ್ಡ ರಿಲೀಫ್ ನೀಡಿದೆ.

ಕಿರಣ್ ಅವರ ಪ್ರಯತ್ನವನ್ನು ಸುದೀಪ್ ಮೆಚ್ಚಿಕೊಂಡಿದ್ದಾರೆ. “ಕಿರಣ್ ಶಾಸ್ತ್ರಿ ಸೇಫ್ ಆಗಿದ್ದಾರೆ. ನಿಮ್ಮ ಎಫರ್ಟ್ಸ್ ಎದ್ದು ಕಾಣಿಸಿದೆ. ನಿಮಗಾಗಿ ನೀವು ನಿಂತುಕೊಂಡಿದ್ದೀರಿ. ಆಡುವಲ್ಲಿ ಆಡಿದ್ರಿ, ಮಾತನಾಡುವಾಗ ಮಾತನಾಡಿದ್ರಿ” ಎಂದು ಸುದೀಪ್ ಕಿರಣ್ ಅವರ ಆಟವನ್ನು ಹೊಗಳಿದರು.

ಲಿಖಿತ್ ಮತ್ತು ಯಶಸ್ಗೆ ಸುದೀಪ್ ಪಾಠ

ಒಂದೆಡೆ ಕಿರಣ್ ಶಾಸ್ತ್ರಿಗೆ ಪ್ರಶಂಸೆ ಸಿಕ್ಕಿದರೆ, ಇನ್ನೊಂದೆಡೆ ಲಿಖಿತ್ ಬೋಂಧಿ ಹಾಗೂ ಯಶಸ್ ಅವರಿಗೆ ಸುದೀಪ್ ಸರಿಯಾಗಿ ಬೆಂಡೆತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಜವಾಬ್ದಾರಿ ನಿರ್ವಹಿಸದೇ ಇರುವುದು ಸುದೀಪ್ ಕೋಪಕ್ಕೆ ಕಾರಣವಾಗಿದೆ.

ಈ ವಾರ ಬಾತ್‌ರೂಂ ಸ್ವಚ್ಛಗೊಳಿಸುವ ಜವಾಬ್ದಾರಿ ಲಿಖಿತ್ ಮತ್ತು ಯಶಸ್ ಅವರ ಮೇಲಿತ್ತು. ಆದರೆ ಅವರು ಅದನ್ನು ಸರಿಯಾಗಿ ಮಾಡಿರಲಿಲ್ಲ. ನಿಯಮಗಳನ್ನು ಮೀರಿ ನಡೆದುಕೊಳ್ಳುತ್ತಿದ್ದ ಲಿಖಿತ್ ಅವರಿಗೆ, “ಇದೆಲ್ಲ ನಮ್ಮ ಬಳಿ ಬೇಡ” ಎಂದು ಸುದೀಪ್ ನೇರವಾಗಿಯೇ ಎಚ್ಚರಿಕೆ ಕೊಟ್ಟಿದ್ದಾರೆ.

BBK 13: ಕಿರಣ್ ಶಾಸ್ತ್ರಿಗೂ ಬಿತ್ತು ಎಚ್ಚರಿಕೆ

ಆಟದಲ್ಲಿ ಮೆಚ್ಚುಗೆ ಪಡೆದ ಕಿರಣ್ ಶಾಸ್ತ್ರಿ ಕೂಡ ಒಂದು ತಪ್ಪು ಮಾಡಿ ಸುದೀಪ್ ಅವರಿಂದ ಬೈಗುಳ ತಿಂದಿದ್ದಾರೆ. ಈ ವಾರ ಕಿರಣ್ ಬಿಟ್ಟು ಬಿಡದೇ ಮನೆಯಲ್ಲಿ ನಿದ್ದೆ ಮಾಡಿದ್ದರು.

ಬಿಗ್ ಬಾಸ್ ಮನೆಯ ಮುಖ್ಯ ನಿಯಮಗಳಲ್ಲಿ ನಿದ್ದೆ ಮಾಡದಿರುವುದು ಒಂದಾಗಿದೆ. ಆದರೆ ಕಿರಣ್ ಪದೇ ಪದೇ ನಿದ್ದೆ ಮಾಡಿ ನಿಯಮ ಉಲ್ಲಂಘಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸುದೀಪ್, “ಇದು ಸರಿ ಅಲ್ಲ” ಎಂದು ಕಿರಣ್‌ಗೆ ಖಡಕ್ ಆಗಿಯೇ ಕಿವಿಮಾತು ಹೇಳಿದ್ದಾರೆ. Overall ಆಗಿ ಈ ವಾರದ ವಾರಾಂತ್ಯದ ಎಪಿಸೋಡ್ ವೀಕ್ಷಕರಿಗೆ ಸಖತ್ ಎಂಟರ್‌ಟೇನ್‌ಮೆಂಟ್ ನೀಡಿದೆ.