BBK 13: ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಸ್ಪರ್ಧಿಗಳ ಎಡವಟ್ಟುಗಳು ವೀಕೆಂಡ್ ಪಂಚಾಯಿತಿಯಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗುತ್ತಿವೆ. ಸ್ವಿಮ್ಮಿಂಗ್ ಪೂಲ್ನಲ್ಲಿ ಬಿದ್ದು ಮೈಕ್ ಹಾಳು ಮಾಡಿಕೊಂಡ ಸ್ಪರ್ಧಿ ಪ್ರಶಾಂತ್ಗೆ ಕಿಚ್ಚ ಸುದೀಪ್ ತಮಾಷೆಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಬಿಗ್ ಬಾಸ್ ಮೈಕ್ನ ಅಸಲಿ ಬೆಲೆಯನ್ನು ಬಹಿರಂಗಪಡಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ಎರಡೂವರೆ ಲಕ್ಷ ರೂಪಾಯಿ ಮೈಕ್ ಬೆಲೆ ಕೇಳಿ ಬೆಚ್ಚಿಬಿದ್ದ ಪ್ರಶಾಂತ್
ವೀಕೆಂಡ್ ಸಂಚಿಕೆಯಲ್ಲಿ ಮೈಕ್ ಬೆಲೆ ಎಷ್ಟು ಎಂದು ಸುದೀಪ್ ಮನೆಯವರನ್ನು ಪ್ರಶ್ನಿಸಿದರು. ಪ್ರಶಾಂತ್ 25 ಸಾವಿರ ಎಂದರು, ತಾಂಡವ್ 78 ಸಾವಿರ ಎಂದರು. ಆದರೆ ಸುದೀಪ್ ಬಿಗ್ ಬಾಸ್ ಮೈಕ್ ಬೆಲೆ ಬಡಾಯಿ ಅಲ್ಲ, ಬರೋಬ್ಬರಿ ಎರಡೂವರೆ ಲಕ್ಷ ರೂಪಾಯಿ ಎಂದು ತಿಳಿಸಿದರು. ಇದನ್ನು ಕೇಳಿ ಮನೆಯವರಷ್ಟೇ ಅಲ್ಲದೆ ವೀಕ್ಷಕರೂ ಕೂಡ ಬೆರಗಾದರು. ಇಷ್ಟು ದೊಡ್ಡ ಮೊತ್ತದ ಬೆಲೆಯಲ್ಲಿ ಒಂದು ರಾಯಲ್ ಎನ್ಫೀಲ್ಡ್ ಬುಲೆಟ್ ಬೈಕೇ ಖರೀದಿಸಬಹುದು ಎಂದು ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.
ಇದನ್ನು ಓದಿ: BBK 13: ಜೋಡಿ ಇಲ್ಲ ಎಂದು ಅತ್ತ ಪ್ರಶಾಂತ್ ಕಾಲೆಳೆದು ಇಡೀ ಮನೆಯನ್ನು ನಗೆಗಡಲಲ್ಲಿ ತೇಲಿಸಿದ ಕಿಚ್ಚ ಸುದೀಪ್
ಪ್ರಶಾಂತ್ ಸಾಲದ ವಿಚಾರ ತೆಗೆದು ಸುದೀಪ್ ಕಾಲೆಳೆದ ಮಜಾ
ಬೆಲೆ ಕೇಳಿ ಬೆಚ್ಚಿಬಿದ್ದ ಪ್ರಶಾಂತ್ಗೆ ಸುದೀಪ್ ತಮಾಷೆಯಾಗಿ ಮಜಾ ಮಾಡಿದರು. “ನಿಮಗೆ ವೀಕ್ಲಿ ಪೇಮೆಂಟ್ ಬರುತ್ತದೆ ಅಲ್ವಾ, ಅದರಲ್ಲಿ ಮೈಕ್ ದುಡ್ಡು ಕಡಿತ ಮಾಡಿಕೊಳ್ಳುತ್ತೇವೆ” ಎಂದು ನಗುತ್ತಲೇ ಹೇಳಿದರು. “ಮದುವೆಯಾಗಿ ಎರಡೇ ತಿಂಗಳಲ್ಲಿ ಸಾಲ ಮಾಡಿಕೊಂಡಿದ್ದೀರಿ, ಈಗ ಬಿಗ್ ಬಾಸ್ಗೆ ಬಂದಮೇಲೆ ಹಣ ಕಡಿತವಾಗುತ್ತದೆ” ಎಂದು ಸುದೀಪ್ ಅವರ ಕಾಲೆಳೆದದ್ದು ಸಂಚಿಕೆಯ ಹೈಲೈಟ್ ಆಯಿತು. ಸುದೀಪ್ ಅವರ ಈ ಮಾತಿಗೆ ಇಡೀ ಮನೆ ನಗೆಗಡಲಲ್ಲಿ ತೇಲಿತು.
BBK 13: ಆಸಿಯಾ ಪಿಸುಮಾತು ಮತ್ತು ಬಿಗ್ ಬಾಸ್ ಕಠಿಣ ಎಚ್ಚರಿಕೆ
ಮೈಕ್ ವಿಚಾರದ ಜೊತೆಗೆ ಮನೆಯಲ್ಲಿ ನಿಯಮ ಉಲ್ಲಂಘಿಸಿದವರ ವಿರುದ್ಧವೂ ಸುದೀಪ್ ಗರಂ ಆದರು. ಬಿಗ್ ಬಾಸ್ ಮನೆಯಲ್ಲಿ ಪಿಸು ಧ್ವನಿಯಲ್ಲಿ ಮಾತನಾಡಬಾರದು ಎಂಬ ಕಠಿಣ ನಿಯಮವಿದೆ. ಆದರೆ ಸ್ಪರ್ಧಿ ಆಸಿಯಾ ಅವರು ಪಿಸುಗುಟ್ಟಿ ಮಾತನಾಡಿ ನಿಯಮ ಮೀರಿದ್ದರು. ಕ್ಯಾಪ್ಟನ್ ಧನುಷ್ ಶಿಕ್ಷೆ ನೀಡಲು ಮುಂದಾದರೂ ಆಸಿಯಾ ಅದನ್ನು ಪಾಲಿಸಿರಲಿಲ್ಲ. ಈ ಬಗ್ಗೆ ಎಚ್ಚರಿಸಿದ ಸುದೀಪ್, ಇನ್ಮುಂದೆ ಯಾರಾದರೂ ಪಿಸುಗುಟ್ಟಿದರೆ ಒಂದು ವಾರ ಪೂರ್ತಿ ಮೈಕ್ ಕೊಡುವುದಿಲ್ಲ ಎಂದು ಕಟ್ಟುನಿಟ್ಟಿನ ರೂಲ್ಸ್ ಘೋಷಿಸಿದರು.




