☔ Weather
Bengaluru: ☁️ 21°C | AQI 60
Mysore: ☁️ 22°C | AQI 62
Mangalore: ☁️ 26°C | AQI 70
Bengaluru: ☁️ 21°C | AQI 60

AJAY DEVGN: ಕಿರುತೆರೆಗೆ ಅಜಯ್ ದೇವಗನ್ ಎಂಟ್ರಿ; ‘ಕ್ರೈಮ್ ಪೆಟ್ರೋಲ್’ ನಡೆಸಿಕೊಡಲು ಪಡೆದ ಸಂಭಾವನೆ ಎಷ್ಟು?

ಅನೂಪ್ ಸೋನಿ ಜಾಗಕ್ಕೆ ಅಜಯ್ ದೇವಗನ್

Photo Credits: @anupsoni (Instagram)

                        @ajaydevgn (Instagram)

ಬಾಲಿವುಡ್‌ನ ಮಾಸ್ ಅಂಡ್ ಸ್ಟಾರ್ ನಟ ಅಜಯ್ ದೇವಗನ್ ಇದೀಗ ಕಿರುತೆರೆಗೆ ಅದ್ಧೂರಿಯಾಗಿ ಪದಾರ್ಪಣೆ ಮಾಡಿದ್ದಾರೆ. ದೇಶದ ಜನಪ್ರಿಯ ಅಪರಾಧ ಆಧಾರಿತ ರಿಯಾಲಿಟಿ ಶೋ ‘ಕ್ರೈಮ್ ಪೆಟ್ರೋಲ್ 2026 – ಕ್ರೈಮ್ ಕಾ ಕರೆಂಟ್ ಸೀಸನ್’ ಶೋಗೆ ಅವರು ನೂತನ ನಿರೂಪಕರಾಗಿ ಎಂಟ್ರಿ ಕೊಟ್ಟಿದ್ದಾರೆ.

ವರ್ಷಗಳಿಂದ ಈ ರಿಯಾಲಿಟಿ ಶೋನ ಮುಖವಾಗಿದ್ದ ನಟ ಅನೂಪ್ ಸೋನಿ ಅವರ ನಿರ್ಗಮನದ ನಂತರ, ಆ ಜಾಗವನ್ನು ಅಜಯ್ ದೇವಗನ್ ತುಂಬಿದ್ದಾರೆ. ಆಗಸ್ಟ್ 31 ರಿಂದಲೇ ಈ ಹೊಸ ಸೀಸನ್ ಸೋನಿ ಟಿವಿ ಹಾಗೂ ಸೋನಿ ಲಿವ್‌ ಒಟಿಟಿ ವೇದಿಕೆಯಲ್ಲಿ ಪ್ರಸಾರ ಆರಂಭಿಸಿದೆ.

15 ಎಪಿಸೋಡ್‌ಗೆ ಬರೋಬ್ಬರಿ 90 ಕೋಟಿ ರೂ. ಪಡೆದ್ರು ಅಜಯ್?

ಹಿಂದೂಸ್ತಾನ್ ಟೈಮ್ಸ್ ಹಾಗೂ ಪ್ರಮುಖ ರಾಷ್ಟ್ರೀಯ ಮಾಧ್ಯಮಗಳ ವರದಿ ಪ್ರಕಾರ, ಅಜಯ್ ದೇವಗನ್ ಈ ಶೋಗಾಗಿ ಕೇವಲ 15 ಎಪಿಸೋಡ್‌ಗಳ ವಿಶೇಷ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ 15 ಎಪಿಸೋಡ್‌ಗಳನ್ನು ನಡೆಸಿ ಕೊಡಲು ಅವರು ಬರೋಬ್ಬರಿ 90 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಅಂದರೆ ಪ್ರತಿಯೊಂದು ಎಪಿಸೋಡ್‌ಗೆ ಸುಮಾರು 6 ಕೋಟಿ ರೂಪಾಯಿ ಸಂಭಾವನೆ ಸಿಗಲಿದೆ. ಈ ಬೃಹತ್ ಮೊತ್ತದ ಸಂಭಾವನೆಯು ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಕಿರುತೆರೆ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಸಂಸ್ಥೆಯಿಂದ ಬಾರದ ಅಧಿಕೃತ ಸ್ಪಷ್ಟನೆ ಹಾಗೂ ಹೊಸ ಲುಕ್

ಮಾಧ್ಯಮಗಳಲ್ಲಿ ವರದಿಯಾಗಿರುವ ಈ 90 ಕೋಟಿ ರೂಪಾಯಿ ಸಂಭಾವನೆಯ ಬಗ್ಗೆ ನಟ ಅಜಯ್ ದೇವಗನ್ ಆಗಲಿ ಅಥವಾ ಸೋನಿ ಟಿವಿ ಅವರಾಗಲಿ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.

ಆದಾಗ್ಯೂ, ಸಿಂಗಂ, ದೃಶ್ಯಂನಂತಹ ಹಿಟ್ ಸಿನಿಮಾಗಳಲ್ಲಿ ಪೊಲೀಸ್ ಅಧಿಕಾರಿಯಾಗಿ ಮತ್ತು ತನಿಖಾಧಿಕಾರಿಯಾಗಿ ನಟಿಸಿರುವ ಅಜಯ್ ದೇವಗನ್ ಎಂಟ್ರಿಯಿಂದ ‘ಕ್ರೈಮ್ ಪೆಟ್ರೋಲ್’ ಶೋಗೆ ಬಿಗ್ ಸ್ಕ್ರೀನ್ ಸಿನಿಮಾ ಶೈಲಿಯ ಹೊಸ ಮೆರುಗು ಸಿಕ್ಕಂತಾಗಿದೆ.

ಜನರಲ್ಲಿ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಜಾಗರೂಕರಾಗಿರಲು ಈ ಹೊಸ ಸೀಸನ್ ಹೆಚ್ಚು ನೆರವಾಗಲಿದೆ ಎಂದು ಅಜಯ್ ದೇವಗನ್ ಹೇಳಿದ್ದಾರೆ. ಬಾಲಿವುಡ್‌ನ ಉನ್ನತ ನಟನ ಆಗಮನದಿಂದಾಗಿ ವೀಕ್ಷಕರಲ್ಲಿ ಈ ಹೊಸ ಸರಣಿಯ ಮೇಲಿನ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.