CABINET : ಕಾಂಗ್ರೆಸ್ ಶಾಸಕರ ಧಮ್ಕಿಗೆ ಹೈಕಮಾಂಡ್ ಕೆಂಡ – ರಾಜೀನಾಮೆ ಅಂಗೀಕರಿಸಲು ಸೂಚನೆ

ರಾಜ್ಯ ಸಚಿವ ಸಂಪುಟ ವಿಸ್ತರಣೆಯ ನಂತರ ಕಾಂಗ್ರೆಸ್‌ನಲ್ಲಿ ರಾಜಕೀಯ ಚಟುವಟಿಕೆಗಳು ವೇಗ ಪಡೆದುಕೊಂಡಿವೆ. 20 ಮಂದಿ ಶಾಸಕರಿಗೆ ಸಚಿವ ಸ್ಥಾನ ನೀಡುವ ಪಟ್ಟಿಗೆ ಹೈಕಮಾಂಡ್ ಅನುಮೋದನೆ ನೀಡಿದ ಬೆನ್ನಲ್ಲೇ ಅವಕಾಶ ವಂಚಿತರಾದ ಕೆಲವರು ಅಸಮಾಧಾನ ಬಹಿರಂಗಪಡಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದಾರೆ. ಈ ಬೆಳವಣಿಗೆ ಪಕ್ಷದ ನಾಯಕತ್ವದ ಗಮನ ಸೆಳೆದಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ವರಿಷ್ಠರು ಸಮಾಲೋಚನೆ ನಡೆಸಿರುವ ಮಾಹಿತಿ ಲಭ್ಯವಾಗಿದೆ. ಸಚಿವ ಸ್ಥಾನ ಸಿಗದ ಕಾರಣ ಪಕ್ಷದೊಳಗಿನ ಅಸಮಾಧಾನ ಬಹಿರಂಗವಾಗಿರುವುದು ಕಾಂಗ್ರೆಸ್‌ಗೆ […]
CABINET: ಸಂಪುಟ ವಿಸ್ತರಣೆ ಹಗ್ಗಜಗ್ಗಾಟ – ಕೊನೆ ಕ್ಷಣದಲ್ಲಿ ಪಟ್ಟಿ ಬದಲಾವಣೆ..? ಪ್ರಮಾಣವಚನ ಸಮಯ ಮುಂದೂಡಿಕೆ..!

ಕರ್ನಾಟಕ ಸರ್ಕಾರದ ನೂತನ ಸಚಿವ ಸಂಪುಟ ವಿಸ್ತರಣೆಯ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ವೇಳಾಪಟ್ಟಿಯಲ್ಲಿ ಅಂತಿಮ ಕ್ಷಣದಲ್ಲಿ ಮಾರ್ಪಾಡು ಮಾಡಲಾಗಿದೆ. ಮೊದಲು ನಿಗದಿಯಾಗಿದ್ದ ಸಂಜೆ 4:05ರ ಸಮಯವನ್ನು ಸಂಜೆ 5:00 ಗಂಟೆಗೆ ಮುಂದೂಡಲಾಗಿದ್ದು, ರಾಜಭವನದ ಗಾಜಿನಮನೆಯಲ್ಲಿ ಸಮಾರಂಭಕ್ಕೆ ಅಗತ್ಯವಿರುವ ಎಲ್ಲಾ ಆಡಳಿತಾತ್ಮಕ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ವರಿಷ್ಠರ ಹಂತದಲ್ಲಿ ನಡೆದ ಆಂತರಿಕ ಚರ್ಚೆಗಳು ಹಾಗೂ ನಾಯಕರ ನಡುವಿನ ಹಗ್ಗಜಗ್ಗಾಟವೇ ಈ ಸಮಯ ಬದಲಾವಣೆಗೆ ಮುಖ್ಯ ಕಾರಣವಾಗಿದೆ. ದೆಹಲಿ ಹೈಕಮಾಂಡ್ ಕಳುಹಿಸಿದ ಪಟ್ಟಿಯಲ್ಲಿ ದಿಢೀರ್ ಹೆಣೆಯಲಾದ ರಾಜಕೀಯ ತಂತ್ರಗಾರಿಕೆಯಿಂದಾಗಿ ಪ್ರಮುಖ […]
CABINET: ಅಂತೂ ಇಂತೂ ಬಂತು ಹೈಕಮಾಂಡ್ ನಿಂದ ಅಂತಿಮ ಪಟ್ಟಿ – ಒಂದೆಡೆ ಸಂಭ್ರಮ ಮತ್ತೊಂದೆಡೆ ಪ್ರತಿಭಟನೆ !

ರಾಜ್ಯ ಹಾಗೂ ರಾಷ್ಟ್ರ ನಾಯಕರ ವ್ಯಾಪಕ ಕಸರತ್ತಿನ ನಂತರ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಗೆ ದೆಹಲಿಯ ವರಿಷ್ಠರು ಅಂತಿಮ ಸ್ಪರ್ಶ ನೀಡಿದ್ದಾರೆ. ಕಾಂಗೆಸ್ ಹೈಕಮಾಂಡ್‌ನಿಂದ ನೂತನವಾಗಿ ಆಯ್ಕೆಯಾದ ಶಾಸಕರ ಅಧಿಕೃತ ಪಟ್ಟಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ತಲುಪಿದ್ದು, ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ರಾಜಭವನದ ಗಾಜಿನಮನೆಯಲ್ಲಿ ಅಗತ್ಯ ಸಿದ್ಧತೆಗಳು ಚಾಲ್ತಿಯಲ್ಲಿವೆ. ಈ ಬಾರಿ ಆಯ್ಕೆಯಾದ ನೂತನ ಸಚಿವರ ಪಟ್ಟಿಯಲ್ಲಿ ಪಿ.ಎಂ. ನರೇಂದ್ರಸ್ವಾಮಿ, ಶಿವರಾಜ್ ತಂಗಡಗಿ, ರುದ್ರಪ್ಪ ಲಮಾಣಿ, ಕೆ.ಎಸ್. ಬಸವಂತಪ್ಪ, ಬಿ. […]
R ASHOK : ಪೊಲೀಸ್ ಪರೀಕ್ಷಾ ಗೊಂದಲ: ಪ್ರಿಯಾಂಕ್ ರಾಜೀನಾಮೆಗೆ ಆರ್. ಅಶೋಕ್ ಪಟ್ಟು

ಪೊಲೀಸ್ ಕಾನ್‌ಸ್ಟೇಬಲ್ ಅಭ್ಯರ್ಥಿಗಳ ಆಯ್ಕೆ ಪರೀಕ್ಷೆಯಲ್ಲಿ ಭಾರಿ ತಾಂತ್ರಿಕ ಹಾಗೂ ಆಡಳಿತಾತ್ಮಕ ಲೋಪಗಳು ಕಂಡುಬಂದಿವೆ. ವಿಜಯಪುರ ಜಿಲ್ಲೆಯ ಪರೀಕ್ಷಾ ಕೇಂದ್ರವೊಂದರಲ್ಲಿ ಪ್ರಶ್ನೆಪತ್ರಿಕೆ ವಿತರಣೆಯಲ್ಲಿ ವಿಳಂಬ ಹಾಗೂ ಓಎಂಆರ್ ಶೀಟ್ ಹಂಚಿಕೆಯಲ್ಲಿ ಉಂಟಾದ ಗೊಂದಲದಿಂದ ಆಕ್ರೋಶಗೊಂಡ ಹಲವು ನಿರುದ್ಯೋಗಿ ಯುವಕರು ಪರೀಕ್ಷೆಯಿಂದ ಹೊರನಡೆದಿದ್ದಾರೆ. ಈ ಘಟನೆಯನ್ನು ಸರ್ಕಾರದ ತೀವ್ರ ಆಡಳಿತಾತ್ಮಕ ವೈಫಲ್ಯವೆಂದು ಬಣ್ಣಿಸಿರುವ ವಿಪಕ್ಷ ನಾಯಕ ಆರ್. ಅಶೋಕ್ ಅವರು, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ನೈತಿಕ ಹೊಣೆ ಹೊತ್ತು ತಕ್ಷಣ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಈ […]
BY-ELECTION : ಪರೀಕ್ಷಾ ಅಕ್ರಮಗಳ ವಿರುದ್ಧದ Gen-Z ಆಕ್ರೋಶ: ಉಪಚುನಾವಣೆ ಅಖಾಡದಲ್ಲಿ ಬಿಜೆಪಿಗೆ ಅಗ್ನಿಪರೀಕ್ಷೆ

ದೇಶದಾದ್ಯಂತ ನೀಟ್ ಪರೀಕ್ಷೆಗಳಲ್ಲಿ ನಡೆದ ಸಾಲು ಸಾಲು ಅಕ್ರಮಗಳು ಹಾಗೂ ಅದನ್ನು ವಿರೋಧಿಸಿ ಯುವಜನರು ನಡೆಸಿದ ಬೃಹತ್ ಹೋರಾಟಗಳು ಪ್ರಸ್ತುತ ರಾಜಕೀಯ ರಂಗದಲ್ಲಿ ತೀವ್ರ ಸಂಚಲನ ಮೂಡಿಸಿವೆ. ಬಿಹಾರದ ಪಟ್ನಾ ವ್ಯಾಪ್ತಿಯ ಬಂಕಿಪುರ ಸೇರಿದಂತೆ ವಿವಿಧ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಇಂದು (ಆ.3) ನಡೆಯುತ್ತಿದ್ದು, ವಿದ್ಯಾರ್ಥಿಗಳ ಸಾರ್ವಜನಿಕ ಆಕ್ರೋಶ ಚುನಾವಣಾ ಫಲಿತಾಂಶದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಆಡಳಿತಾರೂಢ ಬಿಜೆಪಿಗೆ ಈ ಫಲಿತಾಂಶ ಅತ್ಯಂತ ನಿರ್ಣಾಯಕವೆನಿಸಿದ್ದು, ಯುವ ಮತದಾರರ ನಿರ್ಧಾರದತ್ತ […]
CABINET : ಕರ್ನಾಟಕ ಸಂಪುಟ ವಿಸ್ತರಣೆ ಕೌತುಕ: ಹೈಕಮಾಂಡ್ ಅಂತಿಮ ನಿರ್ಧಾರದತ್ತ ಡಿಕೆ ಚಿತ್ತ

ಕರ್ನಾಟಕದಲ್ಲಿ ಸಚಿವ ಸಂಪುಟ ಪುನಾರಚನೆ ಮತ್ತು ವಿಸ್ತರಣೆಯ ಪ್ರಕ್ರಿಯೆ ಹಲವು ಸುತ್ತಿನ ದೆಹಲಿ ಸಭೆಗಳ ನಂತರವೂ ತಕ್ಷಣಕ್ಕೆ ಇತ್ಯರ್ಥವಾಗದೆ ಕಗ್ಗಂಟಾಗಿ ಉಳಿದಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಪ್ರಮುಖ ನಾಯಕರು ದೆಹಲಿಗೆ ಸಾಲು ಸಾಲು ಭೇಟಿ ನೀಡಿ ವರಿಷ್ಠರ ಜತೆ ಸುದೀರ್ಘ ಮಾತುಕತೆ ನಡೆಸಿದ್ದರೂ ನಿರೀಕ್ಷಿತ ಸ್ಪಷ್ಟತೆ ಸಿಕ್ಕಿರಲಿಲ್ಲ. ಆದರೆ ಪ್ರಸ್ತುತ ಎಐಸಿಸಿ ನಾಯಕರ ಮತ್ತೊಂದು ಸುತ್ತಿನ ಸಮಾಲೋಚನೆ ಪೂರ್ಣಗೊಂಡಿದ್ದು, ನೂತನ ಸಚಿವರ ಅಂತಿಮ ಪಟ್ಟಿಯನ್ನು ಶೀಘ್ರವೇ ಮುಖ್ಯಮಂತ್ರಿಗಳ ಕೈಸೇರುವಂತೆ ರವಾನಿಸಲಾಗುತ್ತದೆ ಎನ್ನಲಾಗಿದೆ. ಇಂದು (ಆ.3) […]
TERROR: ಮತ್ತೆ ಮರುಕಳಿಸ್ತಾ ಪುಲ್ವಾಮ ಮಾದರಿ..? ಧರ್ಮ ಕೇಳಿ ಹತ್ಯೆಗೈದ ಉಗ್ರರು !

ಜಮ್ಮು-ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಕುಲ್ಗಾಮ್ ಪ್ರದೇಶದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಛತ್ತೀಸ್‌ಗಢ ಮೂಲದ ಇಬ್ಬರು ವಲಸೆ ಕಾರ್ಮಿಕರು ಮೃತಪಟ್ಟಿರುವ ಘಟನೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಮೃತರಾದವರಲ್ಲಿ ದೀಪಕ್ ರಾತ್ರೆ ಮತ್ತು ಬೋಪಿಂದರ್ ಸೇರಿದ್ದಾರೆ. ಕುಟುಂಬ ಸದಸ್ಯರ ಆರೋಪದ ಪ್ರಕಾರ, ಉಗ್ರರು ಮೊದಲು ಅವರ ಗುರುತು, ಜಾತಿ ಹಾಗೂ ಸಮುದಾಯದ ಬಗ್ಗೆ ಪ್ರಶ್ನಿಸಿ ನಂತರ ಗುಂಡಿನ ದಾಳಿ ನಡೆಸಿದ್ದಾರೆ. ಈ ಆರೋಪ 2025ರಲ್ಲಿ ಪಹಲ್ಗಾಂನಲ್ಲಿ ನಡೆದ ಭೀಕರ ಉಗ್ರ ದಾಳಿಯ ಮಾದರಿಯನ್ನು ಮತ್ತೆ ನೆನಪಿಸುವಂತಿದೆ. ಈ ದಾಳಿಯಲ್ಲಿ ಗಂಭೀರವಾಗಿ […]
CABINET: ಕ್ಯಾಬಿನೆಟ್ ಕಥೆ ಮುಗಿಲಿ – ಶಾಸಕರ ದಂಡೇ ಬಿಜೆಪಿಗೆ ಬರೂಟೆ : ಮುರುಗೇಶ್ ನಿರಾಣಿ

ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಮುರಗೇಶ್ ನಿರಾಣಿ, ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್‌ನಲ್ಲಿ ಅಸಮಾಧಾನದ ವಾತಾವರಣ ಮತ್ತಷ್ಟು ಗಾಢವಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಚಿವ ಸ್ಥಾನಕ್ಕಾಗಿ ಆಡಳಿತ ಪಕ್ಷದ ಅನೇಕ ಶಾಸಕರು ನಿರೀಕ್ಷೆಯಲ್ಲಿದ್ದು, ಎಲ್ಲರಿಗೂ ಅವಕಾಶ ಕಲ್ಪಿಸುವುದು ಅಸಾಧ್ಯ ಎಂಬುದು ವಾಸ್ತವ. ಸೀಮಿತ ಶಾಸಕರಿಗೆ ಮಾತ್ರ ಸ್ಥಾನ ದೊರೆಯುವ ಹಿನ್ನೆಲೆಯಲ್ಲಿ ಉಳಿದವರಲ್ಲಿ ಅತೃಪ್ತಿ ಹೆಚ್ಚಾಗುವ ಸಾಧ್ಯತೆ ಇದೆ. ಇದೇ ಬೆಳವಣಿಗೆ ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಹೊಸ ಸಮೀಕರಣಗಳಿಗೆ […]
CAUVERY DISPUTE: ರಾಜ್ಯದ ಹಿತರಕ್ಷಣೆಯೇ ಮುಖ್ಯ – ಕಾವೇರಿ ವಿಚಾರದಲ್ಲಿ ಒಗ್ಗಟ್ಟಾಗಿರುತ್ತೇವೆ

ಹಲವು ವರ್ಷಗಳಿಂದ ಬಗೆಹರಿಯದೇ ಮುಂದುವರೆದಿರುವ ಕಾವೇರಿ ಜಲ ವಿವಾದವನ್ನು ಪ್ರಸ್ತಾಪಿಸಿದ ಕೇಂದ್ರ ಸಚಿವ ವಿ. ಸೋಮಣ್ಣ, ಮುಖ್ಯಮಂತ್ರಿಗಳು ಕರೆದಿರುವ ಸರ್ವಪಕ್ಷ ಸಭೆಯಲ್ಲಿ ತಾವು ಭಾಗವಹಿಸುವುದಾಗಿ ತಿಳಿಸಿದರು. ಈ ಹಿಂದೆ ದೇವೇಗೌಡರು, ಜಗದೀಶ್ ಶೆಟ್ಟರ್ ಹಾಗೂ ಜೆ.ಎಚ್. ಪಟೇಲರ ಅವಧಿಯಲ್ಲೂ ಇಂತಹ ಕಠಿಣ ಪರಿಸ್ಥಿತಿ ಬಂದಿತ್ತು ಎಂಬುದನ್ನು ನೆನಪಿಸಿದ ಅವರು, ರಾಜ್ಯದ ಹಿತರಕ್ಷಣೆಯ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ ಎಂದರು. ತಮಗೆ ಕೇಂದ್ರ ಮಂತ್ರಿಗಿಂತ ರಾಜ್ಯದ ಹಿತಾಸಕ್ತಿಯೇ ಮೊದಲ ಆದ್ಯತೆಯಾಗಿದ್ದು, ಕುಡಿಯುವ ನೀರಿನ ಅಭಾವ ಹೆಚ್ಚಿರುವುದರಿಂದ ಈ ಬಿಕ್ಕಟ್ಟು […]
PRIYANK KHARGE : ಆರ್‌ಎಸ್‌ಎಸ್ ವಿರುದ್ಧ ನಿಂದನೆ – ಕೋರ್ಟ್ ಗೆ ಹಾಜರಾಗ್ತಾರಾ ಪ್ರಿಯಾಂಕ್ ಖರ್ಗೆ ..?

ಆರ್‌ಎಸ್‌ಎಸ್ ಹಾಗೂ ಕಾರ್ಯಕರ್ತರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮತ್ತು ನಿಂದನೀಯ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ. ಆರ್‌ಎಸ್‌ಎಸ್ ಕಾರ್ಯಕರ್ತ ತೇಜಸ್ ಎ. ನೀಡಿದ ಖಾಸಗಿ ಮಾನನಷ್ಟ ದೂರಿನ ವಿಚಾರಣೆ ನಡೆಸಿದ ಕೋರ್ಟ್, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 356 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ. ಈ ಸಂಬಂಧ ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಸಂವಿಧಾನ ಹಾಗೂ […]