ACTOR DARSHAN : ಕರಗದಲ್ಲಿ ಡಿ-ಬಾಸ್ ಗದ್ದಲ: ಡಿಕೆಗೆ ಇರಿಸು ಮುರಿಸು..ದರ್ಶನ್ ಫ್ಯಾನ್ಸ್ ಯಾಕಿಂಗೆ ..?

ರಾಮನಗರದ ಐತಿಹಾಸಿಕ ಚಾಮುಂಡೇಶ್ವರಿ ಕರಗ ಮಹೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮದ ವೇಳೆ ಗೊಂದಲಮಯ ವಾತಾವರಣ ನಿರ್ಮಾಣವಾಗಿತ್ತು. ಸಮಾರಂಭವನ್ನು ಉದ್ದೇಶಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾಷಣ ಮಾಡಲು ಮೈಕ್ ಕೈಗೆತ್ತಿಕೊಳ್ಳುತ್ತಿದ್ದಂತೆ, ಸಭೆಯಲ್ಲಿದ್ದ ನಟ ದರ್ಶನ್ ಅವರ ಅಭಿಮಾನಿ ಬಳಗ ಒಮ್ಮೆಲೇ ‘ಡಿ ಬಾಸ್’ ಎಂದು ಜೈಕಾರಗಳನ್ನು ಕೂಗಲು ಪ್ರಾರಂಭಿಸಿತು. ಈ ದಿಢೀರ್ ಗದ್ದಲದಿಂದಾಗಿ ಸಭೆಯ ವಾತಾವರಣ ಕೆಲಕಾಲ ಗೊಂದಲಮಯವಾಗಿ ಸಿಎಂ ಭಾಷಣಕ್ಕೆ ಅಡಚಣೆ ಉಂಟಾಯಿತು. ಈ ವೇಳೆ ಆಯೋಜಕರ ಹಾಗೂ ನಾಯಕರ ಸಮಾಧಾನದ […]
CABINET EXPANSION: ಡಿಕೆ ಸಂಪುಟದಲ್ಲಿ ಶೂನ್ಯ ಸ್ಥಾನ – ಬ್ರಾಹ್ಮಣ ಮಹಾಸಭೆ ತೀವ್ರ ಅಸಮಾಧಾನ

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಬ್ರಾಹ್ಮಣ ಸಮುದಾಯದ ಒಬ್ಬರಿಗೂ ಅವಕಾಶ ದೊರೆಯದಿರುವ ವಿಚಾರ ಇದೀಗ ಚರ್ಚೆಗೆ ಕಾರಣವಾಗಿದೆ. ಈ ಬೆಳವಣಿಗೆಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು ತಮ್ಮ ಅಭಿಪ್ರಾಯವನ್ನು ತಿಳಿಸಿದೆ. ಸಮುದಾಯದ ಪರವಾಗಿ ಮಾತನಾಡಿರುವ ಮಹಾಸಭೆ ಅಧ್ಯಕ್ಷ ಎಸ್. ರಘುನಾಥ್, ಸಚಿವ ಸಂಪುಟದ ರಚನೆಯಲ್ಲಿ ಬ್ರಾಹ್ಮಣ ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸಿರುವುದನ್ನು ಮರುಪರಿಶೀಲಿಸಬೇಕು ಎಂದು ಮನವಿ ಮಾಡಿದ್ದಾರೆ. ಯಾವುದೇ ಸಮುದಾಯವನ್ನು ಪ್ರತಿನಿಧಿತ್ವದಿಂದ ವಂಚಿಸಬಾರದು ಎಂಬುದು […]
YATNAL : ಪಕ್ಷ ನಿಷ್ಠರಿಗೆ ಕಾಂಗ್ರೆಸ್ ನಲ್ಲಿ ಕಾಲವಿಲ್ಲ – ಗೂಂಡಾಗಳಿಗೆ ಮಾತ್ರ ಮಂತ್ರಿಗಿರಿ : ಯತ್ನಾಳ್ ಟೀಕೆ

ರಾಜ್ಯದಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಭುಗಿಲೆದ್ದಿರುವ ಶಾಸಕರ ಅಸಮಾಧಾನ ಮತ್ತು ರಾಜೀನಾಮೆ ಪರ್ವದ ಕುರಿತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೀರ್ಘಾವಧಿಯ ಚಿಂತನೆಯ ನಂತರವೂ ಸರ್ಕಾರ ಪಕ್ಷಕ್ಕಾಗಿ ಶ್ರಮಿಸಿದ ಮೂಲ ನಿಷ್ಠಾವಂತ ನಾಯಕರನ್ನು ಕಡೆಗಣಿಸಿ, ಪಕ್ಷಾಂತರ ಮಾಡಿದವರಿಗೆ ಹಾಗೂ ಸೂಕ್ತ ಅರ್ಹತೆಯಿಲ್ಲದವರಿಗೆ, ಗೂಂಡಾಗಳಿಗೆ , ಹಗರಣ ಮಾಡಿದವರಿಗೆ ಮಂತ್ರಿಗಿರಿ ನೀಡಿದೆ ಎಂದು ಅವರು ಆರೋಪಿಸಿದ್ದಾರೆ. ವಿಜಯಪುರ ಮತ್ತು ದಾವಣಗೆರೆ ಮೂಲದ ಹಿರಿಯ ನಾಯಕರಿಗೆ ಆದ್ಯತೆ […]
UDAYANIDHI STALIN : ನಟಿ ತ್ರಿಷಾ ಕುರಿತ ಹೇಳಿಕೆ ವಿವಾದ: ಉದಯನಿಧಿ ಬಂಧನ & ಬಿಡುಗಡೆ – ತಮಿಳುನಾಡು ರಾಜಕೀಯದಲ್ಲಿ ಬಿರುಗಾಳಿ

ತಮಿಳುನಾಡಿನ ರಾಜಕೀಯ ರಂಗದಲ್ಲಿ ನಡೆದ ವಿದ್ಯಮಾನವೊಂದು ಭಾರಿ ಚರ್ಚೆಗೆ ಗ್ರಾಸವಾಗಿದೆ. ತಂಜಾವೂರಿನಲ್ಲಿ ಆಯೋಜಿಸಲಾಗಿದ್ದ ರೈತರ ಸಭೆಯಲ್ಲಿ ಭಾಗವಹಿಸಿದ್ದ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್, ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರನ್ನು ಟೀಕಿಸುವ ವೇಳೆ ನಟಿ ತ್ರಿಷಾ ಅವರ ಹೆಸರನ್ನು ಪ್ರಸ್ತಾಪಿಸಿ ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿವೆ. ಸಾರ್ವಜನಿಕರ ಘೋಷಣೆಗಳಿಗೆ ಸ್ಪಂದಿಸಿ ಅವರು ನೀಡಿದ ಹೇಳಿಕೆ ದ್ವಂದ್ವಾರ್ಥ ಹಾಗೂ ಅವಹೇಳನಕಾರಿಯಾಗಿದೆ ಎಂಬ ಆರೋಪದಡಿ, ಚೆನ್ನೈನ ಅವರ ನಿವಾಸದಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು. ಪೊಲೀಸರ ಈ ಕ್ರಮವನ್ನು ಎದುರಿಸುವ ವೇಳೆ […]
CABINET: ಬೂಟಾಟಿಕೆ ಮಾತು, ಬೆನ್ನಿಗೆ ಚೂರಿ – ಡಿಕೆ ವಿರುದ್ಧ ಎಂ.ಸಿ ಸುಧಾಕರ್ ನಿಗಿ ನಿಗಿ

ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ವಿಸ್ತರಣೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಳಗೆ ತೀವ್ರ ಸ್ವರೂಪದ ಆಂತರಿಕ ಭಿನ್ನಾಭಿಪ್ರಾಯಗಳನ್ನು ಮತ್ತೆ ಮುನ್ನೆಲೆಗೆ ತಂದಿದೆ. ಆಕಾಂಕ್ಷಿಯಾಗಿದ್ದರೂ ಸಚಿವ ಸ್ಥಾನ ಸಿಗದಿದ್ದಕ್ಕೆ ತೀವ್ರ ನಿರಾಶೆಗೊಂಡಿರುವ ಹಿರಿಯ ನಾಯಕ ಎಂ.ಸಿ. ಸುಧಾಕರ್ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಕೆ.ಎಚ್. ಮುನಿಯಪ್ಪ ಹಾಗೂ ಪಕ್ಷದ ಕೇಂದ್ರ ನಾಯಕತ್ವದ ವಿರುದ್ಧ ಬಹಿರಂಗವಾಗಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಸಂಪುಟದಲ್ಲಿ ಸಮಾನ ಹಾಗೂ ಸೂಕ್ತ ಪ್ರಾತಿನಿಧ್ಯ ನೀಡುವಲ್ಲಿ ಹೈಕಮಾಂಡ್ ವಿಫಲವಾಗಿದೆ ಎಂದು ಪ್ರತಿಪಾದಿಸಿರುವ ಅವರು, […]
DK SHIVAKUMAR: ರಾಜೀನಾಮೆ ಕೊಟ್ರೆ ತಕ್ಷಣ ಸ್ವೀಕರಿಸುತ್ತೇನೆ – ಬ್ಲ್ಯಾಕ್ಮೇಲ್ ಗಳಿಗೆ ಡಿಕೆ ಡೋಂಟ್ ಕೇರ್

ರಾಜ್ಯ ರಾಜಕಾರಣದಲ್ಲಿ ಸಂಪುಟ ವಿಸ್ತರಣೆ ಬಳಿಕ ಶಾಸಕರ ರಾಜೀನಾಮೆ ಬೆದರಿಕೆಗಳು ಹಾಗೂ ವಿವಿಧ ಹುದ್ದೆಗಳ ಆಕಾಂಕ್ಷಿಗಳ ಆಂತರಿಕ ಅಸಮಾಧಾನದ ವದಂತಿಗಳು ಕಾವು ಪಡೆದುಕೊಳ್ಳುತ್ತಿರುವ ಹೊತ್ತಿನಲ್ಲೇ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅತ್ಯಂತ ಕಠಿಣ ಹಾಗೂ ನಿಖರವಾದ ನಿಲುವನ್ನು ತಳೆದಿದ್ದಾರೆ. ಸಾರ್ವಜನಿಕವಾಗಿ ಅಥವಾ ಪಕ್ಷದ ವೇದಿಕೆಗಳಲ್ಲಿ ರಾಜೀನಾಮೆ ನೀಡುವ ನಾಟಕವಾಡುವವರಿಗೆ ನೇರ ಸಂದೇಶ ರವಾನಿಸಿರುವ ಅವರು, ಯಾರಾದರೂ ಪದತ್ಯಾಗ ಮಾಡಲು ಮುಂದಾದರೆ ಅದನ್ನು ಕೇವಲ ಐದೇ ನಿಮಿಷದಲ್ಲಿ ಅಂಗೀಕರಿಸುವುದಾಗಿ ಎಚ್ಚರಿಸಿದ್ದಾರೆ. ನಿಗಮ ಮಂಡಳಿಗಳ ಅಧ್ಯಕ್ಷರ ಎರಡುವರೆ ವರ್ಷಗಳ ನಿಗದಿತ ಅವಧಿ […]
DK SHIVAKUMAR: ನಾನೇ ಸ್ವತಃ ಸಿದ್ದು ಅಭಿಮಾನಿ – ತೇಪೆ ಹಚ್ಚಲು ಮುಂದಾದ ಸಿಎಂ ಡಿಕೆ

ರಾಜ್ಯದಲ್ಲಿ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳದಿರುವುದು ರಾಜ್ಯದ ರಾಜಕೀಯ ಪಡಸಾಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಸಂಪುಟ ರಚನೆಯ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಶಾಸಕರಲ್ಲಿ ಭುಗಿಲೆದ್ದಿದೆ ಎನ್ನಲಾದ ಭಿನ್ನಾಭಿಪ್ರಾಯಗಳೇ ಈ ಗೈರುಹಾಜರಿಗೆ ಮುಖ್ಯ ಕಾರಣವಿರಬಹುದು ಎಂಬ ಊಹಾಪೋಹಗಳು ದಟ್ಟವಾಗಿದ್ದವು. ಈ ಎಲ್ಲಾ ರಾಜಕೀಯ ಹರಟೆಗಳು ಮತ್ತು ಅನುಮಾನಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಕ್ಷಣವೇ ಸ್ಪಷ್ಟನೆ ನೀಡುವ ಮೂಲಕ ಪೂರ್ಣವಿರಾಮ ಇಟ್ಟಿದ್ದಾರೆ. ಸಿದ್ದರಾಮಯ್ಯನವರ ಗೈರಿಗೆ ಯಾವುದೇ ರೀತಿಯ ರಾಜಕೀಯ ಮುನಿಸು ಕಾರಣವಲ್ಲ ಎಂದು […]
BIHAR : ನಾಯಿ, ಬೆಕ್ಕು ನಿಲ್ಲಿಸಿದ್ರೂ ಗೆಲ್ತಿವಿ ಅಂದಿದ್ರು- ಈಗ ಏನಾಯ್ತು..? ಬಿಜೆಪಿಗೆ ಪ್ರಶಾಂತ್ ಕಿಶೋರ್ ಕಿಂಡಲ್

ಬಿಹಾರ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಬಂಕಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ನೇತೃತ್ವದ ಜನ ಸುರಾಜ್ ಪಕ್ಷ ಅಚ್ಚರಿಯ ಹಾಗೂ ಅಭೂತಪೂರ್ವ ಗೆಲುವು ಸಾಧಿಸಿದೆ. 1995ರಿಂದ ಅಂದರೆ ಸುದೀರ್ಘ ಮೂರು ದಶಕಗಳಿಂದ ಭಾರತೀಯ ಜನತಾ ಪಾರ್ಟಿಯ ಪಾಲಿಗೆ ಭೇದ್ಯ ಕೋಟೆಯಂತಿದ್ದ ಈ ಕ್ಷೇತ್ರದಲ್ಲಿ, ತಮ್ಮ ಮೊದಲ ಚುನಾವಣಾ ಪ್ರವೇಶದಲ್ಲೇ ಕಮಲ ಪಡೆಯನ್ನು ಮಣಿಸುವ ಮೂಲಕ ಪ್ರಶಾಂತ್ ಕಿಶೋರ್ ಹೊಸ ಇತಿಹಾಸ ಬರೆದಿದ್ದಾರೆ. ಎದುರಾಳಿಗಳ ಅತಿಯಾದ ಆತ್ಮವಿಶ್ವಾಸ ಮತ್ತು ಮತದಾರರನ್ನು ಹಗುರವಾಗಿ ಪರಿಗಣಿಸಿದ ಧೋರಣೆಯನ್ನು ತಮ್ಮ […]
AICC : ಒಂದಲ್ಲ..ಎರಡಲ್ಲ.. ಮೂರು ಬಾರಿ ಉಲ್ಟಾ ಹೊಡೆದ ಕೈ ಹೈಕಮಾಂಡ್- ತಲೆಕೆಳಗಯ್ತಾ ಸಿದ್ದು ಲೆಕ್ಕಾಚಾರ ..?

ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಹಾಗೂ ವಿಧಾನಸಭೆಯ ಸ್ಪೀಕರ್ ಆಯ್ಕೆ ಪ್ರಕ್ರಿಯೆ ಅಂತಿಮ ಹಂತದವರೆಗೂ ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳಿಂದ ಕೂಡಿತ್ತು. ಸರ್ಕಾರದ ನಾಯಕತ್ವ ಮತ್ತು ಎಐಸಿಸಿ ಹೈಕಮಾಂಡ್ ನಡುವೆ ನಡೆದ ಸತತ ಸಮಾಲೋಚನೆಗಳ ಪರಿಣಾಮವಾಗಿ ಸಚಿವರು ಹಾಗೂ ಸ್ಪೀಕರ್ ಹುದ್ದೆಗೆ ಸಂಬಂಧಿಸಿದ ಪಟ್ಟಿಯಲ್ಲಿ ಹಲವು ಬಾರಿ ಬದಲಾವಣೆ ಕಂಡುಬಂದಿದೆ. ಕೆಲವೇ ಗಂಟೆಗಳ ಅವಧಿಯಲ್ಲಿ ಮೂರು ಬಾರಿ ಹೆಸರುಗಳ ಪರಿಷ್ಕರಣೆ ನಡೆದಿರುವುದು ಅಧಿಕಾರದ ಕೇಂದ್ರದಲ್ಲಿ ತೀವ್ರ ಚರ್ಚೆ ಮತ್ತು ರಾಜಕೀಯ ಲೆಕ್ಕಾಚಾರ ನಡೆದಿದ್ದನ್ನು ಸೂಚಿಸಿದೆ. ಆರಂಭಿಕ […]
CABINET : ಬರೀ ಹಣ ಲಪಟಾಯಿಸಿದವ್ರೇ ಇದ್ದಾರೆ – ಡಿಕೆ ನೂತನ ಕ್ಯಾಬಿನೆಟ್ ವಿರುದ್ಧ ಬಿಜೆಪಿ ವಾಗ್ದಾಳಿ

ರಾಜ್ಯ ಸಚಿವ ಸಂಪುಟ ವಿಸ್ತರಣೆಯ ನಂತರ ರಾಜ್ಯ ರಾಜಕೀಯದಲ್ಲಿ ಆರೋಪ-ಪ್ರತ್ಯಾರೋಪಗಳು ಮತ್ತಷ್ಟು ತೀವ್ರಗೊಂಡಿವೆ. ನೂತನ ಸಚಿವರ ಆಯ್ಕೆಯನ್ನು ಪ್ರಶ್ನಿಸಿರುವ ಬಿಜೆಪಿ, ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಮೂಲಕ ಹಲವು ಗಂಭೀರ ಆರೋಪಗಳನ್ನು ಮುಂದಿಟ್ಟಿದೆ. ಸಚಿವ ಸ್ಥಾನ ಪಡೆದಿರುವ ಕೆಲ ನಾಯಕರ ವಿರುದ್ಧ ಈಗಾಗಲೇ ವಿವಿಧ ತನಿಖೆಗಳು, ನ್ಯಾಯಾಲಯದ ಪ್ರಕರಣಗಳು ಹಾಗೂ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾದ ಆರೋಪಗಳಿರುವುದರಿಂದ ಇಂತಹ ವ್ಯಕ್ತಿಗಳಿಗೆ ಸಚಿವ ಸ್ಥಾನ ನೀಡಿರುವುದು ಸರ್ಕಾರದ ನೈತಿಕ ಬದ್ಧತೆಯ ಬಗ್ಗೆ ಅನುಮಾನ ಮೂಡಿಸುತ್ತದೆ ಎಂದು ಬಿಜೆಪಿ ವಾಗ್ದಾಳಿ […]