PARLIAMENT SESSION : ಸಂಸತ್ ಮುಂಗಾರು ಅಧಿವೇಶನಕ್ಕೆ ತೆರೆ – 11 ವಿಧೇಯಕಗಳಿಗೆ ಉಭಯ ಸದನಗಳ ಒಪ್ಪಿಗೆ

ವಿಪಕ್ಷಗಳ ತೀವ್ರ ಪ್ರತಿಭಟನೆ ಹಾಗೂ ಗೊಂದಲಮಯ ವಾತಾವರಣದ ನಡುವೆಯೇ ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ತೆರೆಬಿದ್ದಿದ್ದು, ಈ ಅವಧಿಯಲ್ಲಿ ಕೇಂದ್ರ ಸರ್ಕಾರ ಮಂಡಿಸಿದ್ದ 12 ಪ್ರಮುಖ ಮಸೂದೆಗಳ ಪೈಕಿ 11 ವಿಧೇಯಕಗಳಿಗೆ ಉಭಯ ಸದನಗಳ ಒಪ್ಪಿಗೆ ದೊರೆತಿದೆ. ಲೋಕಸಭೆ ಮತ್ತು ರಾಜ್ಯಸಭೆಗಳೆರಡೂ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದ್ದು, ‘ಭಾರತೀಯ ಸಾಂಖ್ಯಿಕ ಸಂಸ್ಥೆ ಮಸೂದೆ-2026’ ಒಂದನ್ನು ಹೊರತುಪಡಿಸಿ ಉಳಿದೆಲ್ಲವೂ ಶಾಸನ ರೂಪ ಪಡೆಯಲು ಸಿದ್ಧವಾಗಿವೆ. ಅಧಿವೇಶನದ ಕೊನೆಯ ದಿನದಂದು ರಾಜ್ಯಸಭೆ ಗಣಿಗಾರಿಕೆ ಮತ್ತು ಖನಿಜಗಳ ತಿದ್ದುಪಡಿ ಮಸೂದೆಗೆ ಸಮ್ಮತಿ ನೀಡಿತು. ಆದರೆ, ಪ್ರಸಕ್ತ […]
PRIYANK KHARGE : ಹರ್ ಘರ್ ತಿರಂಗಾ – ಆರ್ ಎಂ.ಎಸ್.ಎಸ್ & ಬಿಜೆಪಿ ದೇಶಭಕ್ತಿ ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ!

ಬಿಜೆಪಿ ಹಮ್ಮಿಕೊಂಡಿರುವ ‘ಹರ್ ಘರ್ ತಿರಂಗಾ’ ಅಭಿಯಾನವನ್ನು ಕಟುವಾಗಿ ಟೀಕಿಸಿರುವ ಕರ್ನಾಟಕದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ನಾಗಪುರದಲ್ಲಿರುವ ಆರ್‌ಎಸ್‌ಎಸ್ ಪ್ರಧಾನ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಿದ ಹಳೆಯ ಇತಿಹಾಸವನ್ನು ಭಾರತೀಯ ಜನತಾ ಪಾರ್ಟಿ ಬಹಿರಂಗಪಡಿಸಬೇಕು ಎಂದು ನೇರ ಸವಾಲು ಎಸೆದಿದ್ದಾರೆ. ಬಿಜೆಪಿ ಇತರರಿಗೆ ರಾಷ್ಟ್ರಪ್ರೇಮದ ತತ್ತ್ವಗಳನ್ನು ಬೋಧಿಸುವ ಮುನ್ನ ತನ್ನ ಮೂಲ ಸಂಘಟನೆಯ ಇತಿಹಾಸವನ್ನು ಒಮ್ಮೆ ಹಿಂತಿರುಗಿ ನೋಡಿಕೊಳ್ಳುವುದು ಅಗತ್ಯ ಎಂದಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಬರೋಬ್ಬರಿ ಐದು ದಶಕಗಳಿಗೂ ಹೆಚ್ಚು ಕಾಲ ನಾಗಪುರದ ಸಂಘ […]
MALLIKARJUNA KHARGE : ಹಲ್ದ್ವಾನಿ ಮೈದಾನ ಶುದ್ಧೀಕರಣ ವಿವಾದ – ಅಸ್ಪೃಶ್ಯತೆ ವಿರುದ್ಧ ಖರ್ಗೆ ಗುಡುಗು

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬೃಹತ್ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ನಂತರ, ಬಿಜೆಪಿ ಕಾರ್ಯಕರ್ತರು ವೇದಿಕೆಯನ್ನು ಪ್ರೋಕ್ಷಣೆ ಮಾಡಿ ಶುದ್ಧೀಕರಣ ಯಜ್ಞ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಘಟನೆಯನ್ನು ದಲಿತ ಸಮುದಾಯಕ್ಕೆ ಹಾಗೂ ತಮಗೆ ಎಸಗಿದ ಘೋರ ಅವಮಾನವೆಂದು ಪರಿಗಣಿಸಿರುವ ಖರ್ಗೆಯವರು, ರಾಜ್ಯಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಅತ್ಯಂತ ಭಾವುಕರಾಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ತಾವು ಕೇವಲ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾಗ್ಯೂ, ಜಾತೀಯ […]
SESSION: ಇಂದಿನಿಂದ ಅಧಿವೇಶನ ಆರಂಭ – ಸ್ಪೀಕರ್ ಸ್ಥಾನಕ್ಕೆ ಹಿರಿಯರ ಹಿಂದೇಟು !

ರಾಜ್ಯ ವಿಧಾನಸಭೆಯ ನೂತನ ಸ್ಪೀಕರ್ ಆಯ್ಕೆಯ ಪ್ರಕ್ರಿಯೆ ಕಾಂಗ್ರೆಸ್ ವಲಯದಲ್ಲಿ ತೀವ್ರ ರಾಜಕೀಯ ಚಟುವಟಿಕೆಗಳಿಗೆ ಕಾರಣವಾಗಿದೆ. ನೂತನ ಸರ್ಕಾರದ ರಚನೆಯ ನಂತರ ಶಾಸಕರ ಸಭೆಯಲ್ಲಿ ಈ ಹುದ್ದೆಗೆ ಹಿರಿಯ ನಾಯಕರನ್ನು ಆಯ್ಕೆ ಮಾಡುವ ಕುರಿತು ಸುದೀರ್ಘ ಚರ್ಚೆಗಳು ನಡೆದಿವೆ. ಸಂಸದೀಯ ಅನುಭವ ಹೊಂದಿರುವ ಹಿರಿಯ ಶಾಸಕರನ್ನು ಈ ಗೌರವಾನ್ವಿತ ಪೀಠದಲ್ಲಿ ಅಲಂಕರಿಸಲು ಹೈಕಮಾಂಡ್ ಹಾಗೂ ರಾಜ್ಯ ನಾಯಕರು ಬಯಸಿದ್ದರೂ, ಪ್ರಮುಖ ನಾಯಕರು ಈ ಸ್ಥಾನವನ್ನು ವಹಿಸಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಹೊಸ ಕಷ್ಟವನ್ನು ತಂದೊಡ್ಡಿದೆ. ಹೌದು, ಸಚಿವಾಕಾಂಕ್ಷಿಗಳಾಗಿರುವ ಹಿರಿಯ […]
PAKISTAN: ಲಷ್ಕರ್ ಉಗ್ರರ ಜೊತೆ ವೇದಿಕೆ ಹಂಚಿಕೊಂಡ ಪಾಕ್ ಮಾಜಿ ಸಚಿವ – ಭಾರತಕ್ಕೆ ಪೊಳ್ಳು ಬೆದರಿಕೆ !

ಪಾಕಿಸ್ತಾನದ ಮಾಜಿ ಸಚಿವ ಶೇಖ್ ರಶೀದ್ ಅಹ್ಮದ್ ನಿಷೇಧಿತ ಲಷ್ಕರ್-ಎ-ತೊಯ್ಬಾ ಉಗ್ರಗಾಮಿ ಸಂಘಟನೆಯ ಪ್ರಮುಖ ನಾಯಕರೊಂದಿಗೆ ಬಹಿರಂಗವಾಗಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು, ಭಾರತಕ್ಕೆ ಬೆದರಿಕೆ ಹಾಕುವ ಮೂಲಕ ತೀವ್ರ ವಿವಾದ ಸೃಷ್ಟಿಸಿದ್ದಾನೆ. ಇತ್ತೀಚೆಗೆ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಲಷ್ಕರ್ ನಾಯಕ ಹಾಗೂ ಪಾಕಿಸ್ತಾನ್ ಮರ್ಕಜಿ ಮುಸ್ಲಿಂ ಲೀಗ್ ಅಧ್ಯಕ್ಷ ಖಾಲಿದ್ ಮಸೂದ್ ಸಂಧು ಮತ್ತು ಉಗ್ರ ಸಂಘಟನೆಯ ಸಲಹಾ ಸಮಿತಿ ಸದಸ್ಯ ಖಾರಿ ಮುಹಮ್ಮದ್ ಯಾಕೂಬ್ ಶೇಖ್ ಜೊತೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾನೆ. ಪ್ರಸ್ತುತ ಅವಾಮಿ ಮುಸ್ಲಿಂ ಲೀಗ್ […]
CJP : ಸಿಜೆಪಿ ಪ್ರೊಟೆಸ್ಟ್ 2.O – ಶೀಘ್ರದಲ್ಲೇ ಜಂತರ್ ಮಂತರ್‌ನಲ್ಲಿ ಹೋರಾಟದ ಕಹಳೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಶೀಘ್ರದಲ್ಲೇ ‘ಜಂತರ್ ಮಂತರ್ ಸೀಸನ್ ೨’ ಹೆಸರಿನಲ್ಲಿ ಹೊಸ ಸರಣಿಯ ಪ್ರತಿಭಟನೆಯನ್ನು ಪ್ರಾರಂಭಿಸುವುದಾಗಿ ಕಾಕ್‌ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಘೋಷಿಸಿದ್ದಾರೆ. ದೆಹಲಿಯ ನಾರಾಯಣ ಪ್ರದೇಶದಲ್ಲಿ ಆಯೋಜಿಸಲಾಗಿದ್ದ ಪಕ್ಷದ ಕಾರ್ಯಕರ್ತರ ಸಭೆಯ ಸಭಾಂಗಣದ ಬುಕಿಂಗ್ ಕೊನೆ ಕ್ಷಣದಲ್ಲಿ ರದ್ದಾದ ನಂತರ ಈ ಮಹತ್ವದ ನಿರ್ಧಾರ ಹೊರಬಿದ್ದಿದೆ. ಆಡಳಿತಾರೂಢ ಬಿಜೆಪಿ ಪಕ್ಷದಿಂದ ಬಂದ ತೀವ್ರ ರಾಜಕೀಯ ಒತ್ತಡ ಹಾಗೂ ಬೆದರಿಕೆಗಳಿಂದಾಗಿ ಹಾಲ್ ಮಾಲೀಕರು ಕಾರ್ಯಕ್ರಮಕ್ಕೆ ಅವಕಾಶ ನಿರಾಕರಿಸಿದ್ದಾರೆ ಎಂದು ದೀಪ್ಕೆ ಗಂಭೀರ […]
SESSION: ಇಂದಿನಿಂದ ಮುಂಗಾರು ಅಧಿವೇಶನ ಆರಂಭ – ಸಿಎಂ ಡಿಕೆಗೆ ಸಾಲು ಸಾಲು ಸವಾಲು ..?

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅಧಿಕಾರಕ್ಕೇರಿದ ನಂತರ ವಿಧಾನಮಂಡಲದ ಮುಂಗಾರು ಅಧಿವೇಶನ ಆರಂಭಗೊಳ್ಳುತ್ತಿದ್ದು, ಆಡಳಿತ ಪಕ್ಷದ ಪರವಾಗಿ ಪ್ರತಿಪಕ್ಷಗಳ ವೀರೋಧವನ್ನು ಎದುರಿಸುವ ನಾಯಕತ್ವ ಪರೀಕ್ಷೆಗೆ ವೇದಿಕೆ ಸಿದ್ಧವಾಗಿದೆ. ಹತ್ತು ದಿನಗಳ ಕಾಲ ನಿಗದಿಯಾಗಿರುವ ಈ ಕಲಾಪಗಳ ಪೈಕಿ ಮೊದಲ ದಿನ ಅಗಲಿದ ಗಣ್ಯರಿಗೆ ಮತ್ತು ಸಚಿವ ಡಿ. ಸುಧಾಕರ್ ಅವರಿಗೆ ಸಂತಾಪ ಸೂಚಿಸಲಾಗುತ್ತದೆ. ತದನಂತರ ಸಭಾಧ್ಯಕ್ಷ ಹಾಗೂ ಉಪಸಭಾಧ್ಯಕ್ಷರ ಆಯ್ಕೆಯ ಪ್ರಕ್ರಿಯೆ ಜರುಗಲಿದ್ದು, ಸ್ವಾತಂತ್ರ್ಯ ದಿನಾಚರಣೆ ಮತ್ತು ವಾರಾಂತ್ಯದ ವಿರಾಮದ ಬಳಿಕ ಪೂರ್ಣಪ್ರಮಾಣದ ರಾಜಕೀಯ ಚರ್ಚೆಗಳು […]
KARNATAKA BUNDH : ರಾಜ್ಯದಲ್ಲಿ ಕಾವೇರಿ ಕಿಚ್ಚು – ‘ಬಂದ್’ ಆಗಲಿಲ್ಲ ಕರುನಾಡು..!

ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ನೆರೆ ರಾಜ್ಯ ತಮಿಳುನಾಡಿಗೆ ಮುಂದಿನ ಹದಿನೈದು ದಿನಗಳ ಕಾಲ ಪ್ರತಿ ದಿನ ಹನ್ನೆರಡು ಸಾವಿರ ಕ್ಯೂಸೆಕ್ ಪ್ರಮಾಣದ ನೀರನ್ನು ಹರಿಸಬೇಕು ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿಯ (CWRC) ನಿರ್ದೇಶನವನ್ನು ಖಂಡಿಸಿ, ಕನ್ನಡ ಒಕ್ಕೂಟದ ಅಧ್ಯಕ್ಷರಾದ ವಾಟಾಳ್ ನಾಗರಾಜ್ ಅವರು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಹನ್ನೆರಡು ಗಂಟೆಗಳ ಕಾಲ ‘ಕರ್ನಾಟಕ ಬಂದ್’ಗೆ ಕರೆ ನೀಡಿದ್ದಾರೆ. ತಮಿಳುನಾಡಿಗೆ ನೀರು ಹರಿಸುವ ಸರ್ಕಾರದ ಕ್ರಮವನ್ನು ವಿರೋಧಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದರೂ, ರಾಜ್ಯದ ಪ್ರಮುಖ ಕನ್ನಡ […]
RAJYA SABHA : ರಾಜ್ಯಸಭೆಯಲ್ಲಿ ‘ಲುಂಗಿವಾಲಾ’ ಗದ್ದಲ – ತಾರಕಕ್ಕೇರಿದ ಸಾಂಸ್ಕೃತಿಕ ಘನತೆಯ ಸಂಘರ್ಷ

ರಾಜ್ಯಸಭೆಯ ಕಲಾಪದ ವೇಳೆ ಬಳಕೆ ಮಾಡಲಾಗಿದೆ ಎನ್ನಲಾದ ‘ಲುಂಗಿವಾಲಾ’ ಎಂಬ ಅಸಂಸದೀಯ ಶಬ್ದ ಸಂಸತ್ತಿನ ಉಭಯ ಅಂಗಳದಲ್ಲಿ ತೀವ್ರ ಗೊಂದಲ ಹಾಗೂ ವಾಕ್ಸಮರಕ್ಕೆ ಕಾರಣವಾಗಿದೆ. ಸಿಪಿಎಂ ಪಕ್ಷದ ಜನಪ್ರತಿನಿಧಿ ಜಾನ್ ಬ್ರಿಟ್ಟಾಸ್ ಅವರನ್ನು ಗುರಿಯಾಗಿಸಿಕೊಂಡು ಆಡಳಿತಾರೂಢ ಬಿಜೆಪಿಯ ಸಂಸದೆ ಸುಶ್ಮಿತಾ ದೇವ್ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂಬ ದೂರು ಕೇಳಿಬಂದಿದ್ದು, ಇದು ದಕ್ಷಿಣ ಭಾರತದ ಪರಂಪರೆ ಮತ್ತು ಉಡುಪಿಗೆ ಮಾಡಿದ ಬಹುದೊಡ್ಡ ಅಪಮಾನ ಎಂದು ವಿರೋಧ ಪಕ್ಷಗಳು ಖಂಡಿಸಿವೆ. ಈ ಸಂಬಂಧ ಬ್ರಿಟ್ಟಾಸ್ ಅವರು ಹಕ್ಕುಚ್ಯುತಿ […]
DK SHIVAKUMAR: ಸಚಿವ ಸಂಪುಟ ಖಾತೆ ಹಂಚಿಕೆ – ಸಿಎಂ ಡಿ.ಕೆ ಬಳಿಯೇ ಉಳಿದ ಪ್ರಮುಖ ಖಾತೆಗಳು !

ರಾಜ್ಯ ಸಚಿವ ಸಂಪುಟದ ಖಾತೆ ಹಂಚಿಕೆ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಬಳಿಯೇ ಹಲವು ಪ್ರಮುಖ ಹಾಗೂ ನಿರ್ಣಾಯಕ ಖಾತೆಗಳನ್ನು ಉಳಿಸಿಕೊಂಡಿದ್ದಾರೆ. ಹಣಕಾಸು, ಸಂಪುಟ ವ್ಯವಹಾರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಗುಪ್ತಚರ, ಮಾಹಿತಿ, ಕಾನೂನು-ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ ಹಾಗೂ ಶಾಸನದಂತಹ ಮಹತ್ವದ ಜವಾಬ್ದಾರಿಗಳು ಮುಖ್ಯಮಂತ್ರಿಯವರ ಬಳಿಯೇ ಮುಂದುವರಿದಿವೆ. ಕೃಷಿ ಮಾರುಕಟ್ಟೆ, ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಆಯುಕ್ತಾಲಯ, ಬಿಡಿಎ ಹಾಗೂ ಬಿಎಂಆರ್‌ಡಿಎ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳ ಹೊಣೆಗಾರಿಕೆಯೂ ಸಿಎಂಗೆ […]