Photo Credits: AI Generated
ಆಗಸ್ಟ್ 27, 2026 ರ ನಿತ್ಯ ಭವಿಷ್ಯವು ನಿಮ್ಮ ರಾಶಿ ಫಲವನ್ನು ವಿವರವಾಗಿ ತಿಳಿಸುತ್ತದೆ. ಮೇಷದಿಂದ ಮೀನದವರೆಗಿನ ಎಲ್ಲಾ 12 ರಾಶಿಗಳಿಗೆ ಇಂದು ಪ್ರೀತಿ, ವೃತ್ತಿ, ಹಣಕಾಸು ಮತ್ತು ಆರೋಗ್ಯ ಹೇಗಿರಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಸವಾಲುಗಳನ್ನು ಎದುರಿಸುವ ಧೈರ್ಯ, ನಿರ್ಧಾರಗಳು ಹಾಗೂ ದಿನದ ಆರ್ಥಿಕ ಸ್ಥಿತಿಯ ಕುರಿತು ಮಾರ್ಗದರ್ಶನ ಇಲ್ಲಿದೆ.
ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಶುಕ್ಲ ಪಕ್ಷದ ಚತುರ್ದಶೀ ತಿಥಿಯ ಗುರುವಾರದಂದು ಹೂಡಿಕೆಗೆ ಕುತೂಹಲ, ಆಪ್ತರಿಂದ ದೂರ, ವಿದ್ಯಾಭ್ಯಾಸಕ್ಕೆ ಸ್ಥಾನ, ದೂರ ವಾಸ, ಮಹಾತ್ಮ ಭೇಟಿ, ದೈವಾನುಗ್ರಹ ಇವೆಲ್ಲ ಇಂದಿನ ಭವಿಷ್ಯ.
ಗ್ರಹಗಳ ಪ್ರಭಾವವು ನಿಮ್ಮ ರಾಶಿಗಳ ಮೇಲೆ ಬೀರುವ ಪರಿಣಾಮವನ್ನು ತಿಳಿದುಕೊಳ್ಳಿ. ದಿನದ ಶುಭ ಹಾಗೂ ಅಶುಭ ಸಮಯಗಳ ಪಂಚಾಂಗ ವಿವರಗಳು ಇಲ್ಲಿವೆ. ಯಾವ ರಾಶಿಯವರು ಇಂದು ಮುನ್ನೆಚ್ಚರಿಕೆ ವಹಿಸಬೇಕು ಎಂದು ಈ ಕೆಳಗೆ ನೋಡಿ.
ಮೇಷ ರಾಶಿ…
ವಾದ ಮಾಡಿ ಗೆಲ್ಲುವುದಕ್ಕಿಂತ ವಾಸ್ತವವನ್ನು ಅರಿತು ಮೌನವಾಗಿರುವುದು ಒಳಿತು. ಕಳೆದುಕೊಂಡದ್ದರ ಬಗ್ಗೆ ಚಿಂತಿಸಿ ಭವಿಷ್ಯ ಹಾಳುಮಾಡಿಕೊಳ್ಳಬೇಡಿ. ದಿನಚರಿಯನ್ನು ವ್ಯವಸ್ಥಿತಗೊಳಿಸಿ. ಕೆಲಸಗಳು ಮಂದಗತಿಯಲ್ಲಿ ಸಾಗಿದರೂ ತಾಳ್ಮೆಯಿಂದ ಇರಿ.
ವೃಷಭ ರಾಶಿ…
ದುಡುಕಿನ ನಿರ್ಧಾರಗಳಿಂದ ಬೇಸರಪಡಬೇಕಾದೀತು. ಅನಿರೀಕ್ಷಿತ ಪ್ರಯಾಣ ಎದುರಾಗಿ ಉದ್ಯೋಗದಲ್ಲಿ ಕೊಂಚ ಅಡಚಣೆಯಾಗಬಹುದು. ಪರರ ಭಾವನೆಗಳಿಗೆ ಗೌರವ ನೀಡಿ. ನಿಮ್ಮದಲ್ಲದ ವಸ್ತುಗಳ ಮೇಲೆ ಆಸೆ ಬೇಡ.
ಮಿಥುನ ರಾಶಿ…
ಲೆಕ್ಕ ಶೋಧಕರಿಗೆ ಇಂದು ಕೆಲಸದ ಒತ್ತಡ ಹೆಚ್ಚಿರಲಿದೆ. ಪ್ರಯಾಣದಲ್ಲಿ ಜಾಗ್ರತೆ ಇರಲಿ. ಕುಟುಂಬದವರ ಅನಾರೋಗ್ಯ ನಿಮಿತ್ತ ಓಡಾಟ ನಡೆಸಬೇಕಾಗಬಹುದು. ಹಣಕಾಸಿನ ವಿಚಾರದಲ್ಲಿ ಮಿತಿಯರಿತು ವ್ಯವಹರಿಸಿ.
ಕರ್ಕಾಟಕ ರಾಶಿ…
ನ್ಯಾಯಾಲಯದ ವಿಚಾರಗಳಲ್ಲಿ ಶುಭ ಫಲಿತಾಂಶದ ವಿಶ್ವಾಸ ಮೂಡಲಿದೆ. ಮೇಲಧಿಕಾರಿಗಳೊಂದಿಗೆ ಸೌಹಾರ್ದತೆಯಿಂದ ಇರಿ. ತಪ್ಪಿಗೆ ಪಶ್ಚಾತ್ತಾಪ ಪಡುವುದು ಒಳಿತು. ಆತಂಕ ಹಾಗೂ ಕಾರ್ಯದ ಒತ್ತಡದಿಂದ ಮನಸ್ಸು ಭಾರವಾಗಬಹುದು.
ಸಿಂಹ ರಾಶಿ…
ದೊಡ್ಡ ಸ್ಥಾನದಲ್ಲಿದ್ದು ಸಣ್ಣ ವಿಚಾರಗಳಿಗೆ ಮನಸ್ಸು ಕೆಡಿಸಿಕೊಳ್ಳಬೇಡಿ. ಅಪರಿಚಿತ ಕರೆಯಿಂದ ಆರ್ಥಿಕ ಲಾಭವಾಗಲಿದೆ. ಹಳೆಯ ಸ್ನೇಹಿತರ ಅಕಸ್ಮಾತ್ ಭೇಟಿಯಾಗಲಿದೆ. ಸಂಗಾತಿಯೊಂದಿಗೆ ಮಾತುಕತೆ ನಡೆಸುವಾಗ ನಿಧಾನವಿರಲಿ.
ಕನ್ಯಾ ರಾಶಿ…
ಗ್ರಾಹಕರ ಬೇಡಿಕೆಗಳನ್ನು ಸರಿಯಾಗಿ ಈಡೇರಿಸುವಿರಿ. ಅಕಾರಣವಾದ ವಿವಾದಗಳಿಂದ ದೂರವಿರಿ, ಇಲ್ಲದಿದ್ದರೆ ಸಮಯ ವ್ಯರ್ಥವಾಗಲಿದೆ. ಜಟಿಲ ಸಮಸ್ಯೆಗೆ ಆಪ್ತರಿಂದ ಸೂಕ್ತ ಪರಿಹಾರ ಸಿಗಲಿದೆ. ವಿದ್ಯಾಭ್ಯಾಸದಲ್ಲಿ ಶ್ರಮ ಅಗತ್ಯ.
ತುಲಾ ರಾಶಿ…
ಅತಿಯಾದ ಸುತ್ತಾಟದಿಂದ ಶಾರೀರಿಕ ದಣಿವು ಹೆಚ್ಚಾಗಲಿದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಶ್ರಮಪಡುವಿರಿ. ಹಿರಿಯರ ಆಶೀರ್ವಾದ ದೊರೆಯಲಿದೆ. ಆರ್ಥಿಕ ಸ್ಥಿತಿ ಉತ್ತಮಗೊಳ್ಳುವ ಸೂಚನೆಗಳಿವೆ.
ವೃಶ್ಚಿಕ ರಾಶಿ…
ಅನಗತ್ಯ ಸಲಹೆಗಳಿಗೆ ಕಿವಿಗೊಟ್ಟು ಮನಸ್ಸು ಕೆಡಿಸಿಕೊಳ್ಳಬೇಡಿ. ಅಧಿಕವಾಗಿ ಮಾತನಾಡದೆ ಮೌನವಾಗಿರುವುದು ಶ್ರೇಯಸ್ಕರ. ಭೂ ವ್ಯವಹಾರಗಳು ಸುಖಾಂತ್ಯ ಕಾಣಲಿವೆ. ಸಹೋದ್ಯೋಗಿಗಳ ಜೊತೆ ತಾಳ್ಮೆಯಿಂದ ವ್ಯವಹರಿಸಿ.
ಧನು ರಾಶಿ…
ಸ್ಥಿರ ಮನಸ್ಸಿನಿಂದ ಕಾರ್ಯಪ್ರವೃತ್ತರಾಗಿ. ಮನೆಯಿಂದ ದೂರ ವಾಸಿಸುವ ಸನ್ನಿವೇಶ ಬರಬಹುದು. ಕೋಪ ಹಾಗೂ ಉದ್ವೇಗವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಕೆಲಸದಲ್ಲಿ ನಿಮ್ಮ ಕಾರ್ಯನೈಪುಣ್ಯತೆಯನ್ನು ಪ್ರದರ್ಶಿಸಿ.
ಮಕರ ರಾಶಿ…
ಅಂದುಕೊಂಡದ್ದನ್ನು ಸಾಧಿಸುವ ಛಾತಿ ನಿಮ್ಮಲ್ಲಿರಲಿದೆ. ನಿಮ್ಮ ನೋವಿಗೆ ಸ್ಪಂದಿಸುವ ಆಪ್ತರು ಸಿಗಲಿದ್ದಾರೆ. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಏಕಾಗ್ರತೆ ಕಾಯ್ದುಕೊಳ್ಳಿ. ಅನಗತ್ಯ ಸಂಶಯಗಳಿಂದ ದೂರವಿರಿ.
ಕುಂಭ ರಾಶಿ…
ಅತಿಯಾದ ಪ್ರದರ್ಶನಕ್ಕೆ ಹೋಗಿ ಉದ್ಯೋಗದಲ್ಲಿ ತೊಂದರೆ ತಂದೊಡ್ಡುಕೊಳ್ಳಬೇಡಿ. ವ್ಯಾಪಾರದಲ್ಲಿ ಎಚ್ಚರಿಕೆಯ ನಿರ್ಧಾರ ಅಗತ್ಯ. ದಿನದ ಆರಂಭ ಸಂತೋಷದಿಂದಿರಲಿದೆ. ಸ್ವಾಭಿಮಾನಕ್ಕೆ ಧಕ್ಕೆ ಬರದಂತೆ ನಡೆದುಕೊಳ್ಳಿ.
ಮೀನ ರಾಶಿ…
ಉದ್ವೇಗಕ್ಕೆ ಒಳಗಾಗದೆ ಶಾಂತಚಿತ್ತರಾಗಿರಿ. ಹಣಕಾಸಿನ ಮೌಲ್ಯವನ್ನು ತಿಳಿದು ಖರ್ಚು ಮಾಡಿ. ನಂಬಿಕೆಗೆ ಮೋಸವಾಗದಂತೆ ಎಚ್ಚರ ವಹಿಸಿ. ಸ್ನೇಹಿತರ ಸಂತೋಷದಲ್ಲಿ ಭಾಗಿಯಾಗಿ ಉತ್ತಮ ಸಮಯ ಕಳೆಯುವಿರಿ.
ಇಂದಿನ ಪಂಚಾಂಗ (27 ಆಗಸ್ಟ್ 2026)…
ಸಂವತ್ಸರ: ಪರಾಭವ
ಅಯನ: ದಕ್ಷಿಣಾಯನ | ಋತು: ವರ್ಷ ಋತು
ಮಾಸ: ಶ್ರಾವಣ (ಮಾಸ) | ಪಕ್ಷ: ಶುಕ್ಲ ಪಕ್ಷ
ತಿಥಿ: ಚತುರ್ದಶೀ | ವಾರ: ಗುರುವಾರ
ನಕ್ಷತ್ರ: ಶತಭಿಷಾ | ಯೋಗ: ಸೌಭಾಗ್ಯ | ಕರಣ: ತೈತಿಲ
ಸೂರ್ಯೋದಯ: ಬೆಳಿಗ್ಗೆ 06:09 | ಸೂರ್ಯಾಸ್ತ: ಸಂಜೆ 06:32
ರಾಹು ಕಾಲ: 01:54 PM – 03:27 PM
ಯಮಗಂಡ ಕಾಲ: 06:09 AM – 07:42 AM
ಗುಳಿಕ ಕಾಲ: 09:15 AM – 10:48 AM




