ದಿನಭವಿಷ್ಯ: ಇಂದು ಈ ರಾಶಿಯವರು ಅನ್ಯರ ಭಾವನೆಗಳ ಜೊತೆ ಆಟವಾಡಲಿದ್ದಾರೆ; ನಿಮ್ಮ ರಾಶಿ ಫಲ ಹೇಗಿದೆ?

ಇಂದು ಈ ರಾಶಿಯವರು ಅನ್ಯರ ಭಾವನೆಗಳ ಜೊತೆ ಆಟವಾಡಲಿದ್ದಾರೆ...

Photo Credits: AI Generated

ಆಗಸ್ಟ್ 20, 2026 ರ ನಿತ್ಯ ಭವಿಷ್ಯವು ನಿಮ್ಮ ರಾಶಿ ಫಲವನ್ನು ವಿವರವಾಗಿ ತಿಳಿಸುತ್ತದೆ. ಮೇಷದಿಂದ ಮೀನದವರೆಗಿನ ಎಲ್ಲಾ 12 ರಾಶಿಗಳಿಗೆ ಇಂದು ಪ್ರೀತಿ, ವೃತ್ತಿ, ಹಣಕಾಸು ಮತ್ತು ಆರೋಗ್ಯ ಹೇಗಿರಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಶುಕ್ಲ ಪಕ್ಷದ ಅಷ್ಟಮೀ ತಿಥಿಯ ಈ ಗುರುವಾರದಂದು ನಿಮ್ಮ ರಾಶಿ ಫಲ ಮತ್ತು ಇಂದಿನ ಪಂಚಾಂಗದ ವಿವರ ಇಲ್ಲಿದೆ.

ಮೇಷ ರಾಶಿ…

ಅತಿಯಾದ ಅಶಿಸ್ತು ನಿಮ್ಮ ಕೆಲಸಗಳಿಗೆ ಅಡ್ಡಿಯಾಗಬಹುದು. ಯೋಜನೆಯನ್ನು ಸಿದ್ಧಪಡಿಸಲು ಹೆಚ್ಚಿನ ಶ್ರಮ ವಹಿಸಬೇಕಾದೀತು. ಮುಚ್ಚಿಟ್ಟಿದ್ದ ವಿಚಾರವನ್ನು ಸಂಗಾತಿಗೆ ತಿಳಿಸುವಿರಿ. ಉದ್ಯೋಗ ಸಂದರ್ಶನದಲ್ಲಿ ಯಶಸ್ಸು ದೊರೆಯಲಿದೆ. ಸಾಹಸಕ್ಕೆ ಕೈಹಾಕಿ ಅನಾಹುತ ಮಾಡಿಕೊಳ್ಳಬೇಡಿ. ನಿರಂತರ ಶ್ರಮದಿಂದ ಶಿಸ್ತನ್ನು ರೂಢಿಸಿಕೊಳ್ಳಿ.

ವೃಷಭ ರಾಶಿ…

ಎದುರು ಮಾತನಾಡುವುದು ಇಂದು ನಿಮಗೇ ಮುಳುವಾಗಬಹುದು. ವ್ಯರ್ಥ ಕಾಲಹರಣ ಮಾಡುವ ಬದಲು ಉಪಯುಕ್ತ ಕೆಲಸಗಳನ್ನು ಮಾಡಿ. ಸೋಮಾರಿತನ ಹೆಚ್ಚಾಗುವ ಸಾಧ್ಯತೆ ಇದೆ. ಕುಟುಂಬದವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಅನಗತ್ಯ ವಿಚಾರಗಳನ್ನು ತಲೆಯಿಂದ ತೆಗೆದುಹಾಕಿ, ಪರಿಸ್ಥಿತಿ ನಿಭಾಯಿಸುವ ದಾರ್ಢ್ಯ ಬೆಳೆಸಿಕೊಳ್ಳಿ.

ಮಿಥುನ ರಾಶಿ…

ಎಲ್ಲರ ನಡುವೆ ಇದ್ದರೂ ಒಂಟಿತನ ಕಾಡಬಹುದು. ಮಕ್ಕಳಿಂದ ಒಳ್ಳೆಯ ಸುದ್ದಿ ಕೇಳುವಿರಿ. ಭೌತಿಕ ಸುಖ-ಸೌಕರ್ಯಗಳು ಹೆಚ್ಚಾಗಲಿವೆ. ಆರೋಗ್ಯದ ಕಡೆಗೆ ಗಮನ ಹರಿಸಿ. ಸಿಗದ ವಸ್ತುವಿಗಾಗಿ ದುಃಖಿಸಬೇಡಿ. ನಿಮ್ಮ ತಪ್ಪನ್ನು ಒಪ್ಪಿಕೊಳ್ಳಲು ಹಿಂಜರಿಯದಿರಿ. ಮನಸ್ಸಿಗೆ ಒಪ್ಪದ ಯಾವುದೇ ಕೆಲಸಕ್ಕೆ ಅಹುತಿಯಾಗಬೇಡಿ.

ಕರ್ಕಾಟಕ ರಾಶಿ…

ಅನಾಮಧೇಯ ಕರೆಗಳನ್ನು ನಂಬಿ ಹೂಡಿಕೆ ಮಾಡಬೇಡಿ. ಪರಿಶ್ರಮಕ್ಕೆ ತಕ್ಕ ಫಲ ಲಭಿಸಲಿದೆ. ಇಂದಿನ ನಿರ್ಧಾರಗಳಿಗೆ ತಂದೆಯ ಪೂರ್ಣ ಸಹಕಾರ ಸಿಗಲಿದೆ. ಬರವಣಿಗೆ ಮತ್ತು ಬೌದ್ಧಿಕ ಕೆಲಸಗಳಲ್ಲಿ ನಿರತತೆ ಹೆಚ್ಚಾಗಲಿದೆ. ನಿಮ್ಮ ಮಾತುಗಳನ್ನು ಇತರರು ತಪ್ಪಾಗಿ ಗ್ರಹಿಸಬಹುದು, ಜಾಗ್ರತೆ.

ಸಿಂಹ ರಾಶಿ…

ತಾಳ್ಮೆ ಪರೀಕ್ಷಿಸುವ ಸನ್ನಿವೇಶಗಳು ಎದುರಾಗಲಿವೆ. ದುರಾಲೋಚನೆಗಳನ್ನು ಬಿಡುವುದು ಒಳಿತು. ಅಹಂಕಾರದಿಂದ ನಷ್ಟ ಅನುಭವಿಸುವಿರಿ. ಮೇಲಾಧಿಕಾರಿಗಳಿಂದ ಬೆಂಬಲ ದೊರೆಯಲಿದ್ದು, ಬೌದ್ಧಿಕ ಕೆಲಸದಿಂದ ಧನಲಾಭವಾಗಲಿದೆ. ಕೆಲಸದ ಹೊರೆ ಹೆಚ್ಚಾಗಬಹುದು. ವ್ಯಾವಹಾರಿಕವಾಗಿ ಅಪವಾದಗಳು ಬರದಂತೆ ನೋಡಿಕೊಳ್ಳಿ.

ಕನ್ಯಾ ರಾಶಿ…

ಕಚೇರಿಯ ಉಸ್ತುವಾರಿ ವಹಿಸಿಕೊಂಡು ವರದಿ ನೀಡುವ ಜವಾಬ್ದಾರಿ ಬರಲಿದೆ. ಕಷ್ಟಗಳನ್ನು ಧೈರ್ಯವಾಗಿ ಎದುರಿಸುವಿರಿ. ವಾಹನ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ. ಉದ್ಯೋಗ ಸಂದರ್ಶನಗಳಲ್ಲಿ ಯಶಸ್ಸು ಸಿಗಲಿದೆ. ಸರ್ಕಾರದಿಂದ ಬೆಂಬಲ ಲಭಿಸಲಿದ್ದು, ಸಂಭಾಷಣೆಯಲ್ಲಿ ಸಮತೋಲನ ಕಾಯ್ದುಕೊಳ್ಳಿ.

ತುಲಾ ರಾಶಿ…

ಸಣ್ಣ ವ್ಯತ್ಯಾಸದಿಂದ ಹೆಚ್ಚಿನ ತೊಂದರೆ ಅನುಭವಿಸಬೇಕಾದೀತು. ವಿದ್ಯಾರ್ಥಿಗಳು ಪರೀಕ್ಷೆಯ ಭಯದಿಂದ ಓದಿದ್ದನ್ನು ಮರೆಯುವ ಸಾಧ್ಯತೆ ಇದೆ. ತಂದೆಯಿಂದ ಆರ್ಥಿಕ ನೆರವು ಸಿಗಲಿದೆ. ಮನಸ್ಸು ವಿಚಲಿತವಾಗದಂತೆ ನೋಡಿಕೊಳ್ಳಿ. ಹೆಚ್ಚಿನ ಆದಾಯಕ್ಕಾಗಿ ಆಯ್ದುಕೊಂಡ ಕ್ಷೇತ್ರವು ಕೊಂಚ ಸವಾಲಿನಿಂದ ಕೂಡಿರಲಿದೆ.

ವೃಶ್ಚಿಕ ರಾಶಿ…

ನಿಮ್ಮ ಸೃಜನಶೀಲ ಯೋಚನೆಗಳು ನಿಮಗೆ ಕೀರ್ತಿ ತಂದುಕೊಡಲಿವೆ. ಸ್ವತಂತ್ರ ಕಾರ್ಯಗಳಿಂದ ಶ್ರೇಯಸ್ಸು ಸಿಗಲಿದೆ. ಕುಟುಂಬದಲ್ಲಿ ಸಣ್ಣಪುಟ್ಟ ವಿವಾದಗಳು ಉಂಟಾಗಬಹುದು. ಉದ್ಯೋಗ ನಿಮಿತ್ತ ಪ್ರಯಾಣ ಬೆಳೆಸುವಿರಿ. ದೇವತಾ ಕಾರ್ಯಗಳ ತಯಾರಿಯಲ್ಲಿ ತೊಡಗುವಿರಿ. ಸಂಗಾತಿಯ ಹೆಸರಿನಲ್ಲಿ ಸ್ಥಿರಾಸ್ತಿ ಖರೀದಿಸುವ ಯೋಗವಿದೆ.

ಧನು ರಾಶಿ…

ಉನ್ನತ ಶಿಕ್ಷಣದಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಉದ್ಯಮ ವಿಸ್ತರಣೆಗೆ ಮನಸ್ಸು ಮಾಡುವಿರಿ. ಸಂಗಾತಿಗೆ ಇಷ್ಟವಾದ ವಸ್ತುಗಳನ್ನು ಖರೀದಿಸುವಿರಿ. ಆಸ್ತಿಯಿಂದ ಆದಾಯ ಬರಲಿದೆ. ಧಾರ್ಮಿಕ ಕೇಂದ್ರಗಳಲ್ಲಿ ಹೆಚ್ಚಿನ ಸಮಯ ಕಳೆಯುವಿರಿ. ಸರ್ಜನಶೀಲ ವ್ಯಕ್ತಿಗಳಿಗೆ ಹೊಸ ಅವಕಾಶಗಳು ಅರಸಿ ಬರಲಿವೆ.

ಮಕರ ರಾಶಿ…

ನಿರೀಕ್ಷಿಸದ ಉನ್ನತ ಸ್ಥಾನಮಾನ ಅಥವಾ ಅವಕಾಶ ನಿಮ್ಮದಾಗಲಿದೆ. ಅದೃಷ್ಟದ ಬಾಗಿಲು ತೆರೆಯಲಿದ್ದು, ಸರಿಯಾಗಿ ಬಳಸಿಕೊಳ್ಳಿ. ವಿದೇಶ ಪ್ರಯಾಣದ ಯೋಗವಿದೆ. ಅನಗತ್ಯ ಚರ್ಚೆಗಳನ್ನು ತಪ್ಪಿಸಿ. ಕೋಪದ ಕೈಗೆ ಬುದ್ಧಿ ಕೊಟ್ಟು ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.

ಕುಂಭ ರಾಶಿ…

ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳನ್ನು ವೇಗವಾಗಿ ಮುಗಿಸಿ ನಿರಾಳವಾಗುವಿರಿ. ವಾಹನ ಚಾಲನೆಯಿಂದ ಸಂತಸ ಸಿಗಲಿದೆ. ಸ್ನೇಹಿತರ ಬೆಂಬಲ ಸದಾ ಇರಲಿದೆ. ಕಲೆ ಮತ್ತು ಸಂಗೀತದ ಕಡೆಗೆ ಆಸಕ್ತಿ ಹೆಚ್ಚಾಗಲಿದೆ. ಕೋಪ ಮತ್ತು ಸಮಾಧಾನದ ಮಿಶ್ರಫಲ ಇಂದಿನ ದಿನವಾಗಿರಲಿದೆ.

ಮೀನ ರಾಶಿ…

ವ್ಯಾಪಾರ-ವಹಿವಾಟಿನಲ್ಲಿ ಸುಧಾರಣೆ ಕಂಡುಬರಲಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಯಶಸ್ಸು ಲಭಿಸಲಿದೆ. ಸಂಗಾತಿಯೊಂದಿಗೆ ಸಿದ್ಧಾಂತದ ವಿಷಯದಲ್ಲಿ ಭಿನ್ನಾಭಿಪ್ರಾಯ ಮೂಡಬಹುದು. ಯಾರನ್ನೂ ಅತಿಯಾಗಿ ಹಚ್ಚಿಕೊಳ್ಳಬೇಡಿ. ದಾಂಪತ್ಯ ಸುಖಕರವಾಗಿರಲು ಪ್ರೀತಿಯ ಉಡುಗೊರೆ ನೀಡುವುದು ಒಳಿತು.

ಇಂದಿನ ಪಂಚಾಂಗ (20 ಆಗಸ್ಟ್ 2026)…

ಸಂವತ್ಸರ: ಪರಾಭವ

ಅಯನ: ದಕ್ಷಿಣಾಯನ | ಋತು: ವರ್ಷ ಋತು

ಮಾಸ: ಶ್ರಾವಣ (ಮಾಸ) | ಪಕ್ಷ: ಶುಕ್ಲ ಪಕ್ಷ

ತಿಥಿ: ಅಷ್ಟಮೀ | ವಾರ: ಗುರುವಾರ

ನಕ್ಷತ್ರ: ಅನೂರಾಧಾ | ಯೋಗ: ಶುಕ್ಲ | ಕರಣ: ತೈತಿಲ

ಸೂರ್ಯೋದಯ: ಬೆಳಿಗ್ಗೆ 06:08 | ಸೂರ್ಯಾಸ್ತ: ಸಂಜೆ 06:36

ರಾಹು ಕಾಲ: 01:56 PM – 03:30 PM

ಯಮಗಂಡ ಕಾಲ: 06:09 AM – 07:42 AM

ಗುಳಿಕ ಕಾಲ: 09:16 AM – 10:49 AM