☔ Weather
Bengaluru: ☁️ 23°C | AQI 112
Mysore: 🌤️ 24°C | AQI 139
Mangalore: ☀️ 28°C | AQI 143
Bengaluru: ☁️ 23°C | AQI 112
☔ Weather
Bengaluru: ☁️ 23°C | AQI 112
Mysore: 🌤️ 24°C | AQI 139
Mangalore: ☀️ 28°C | AQI 143
Bengaluru: ☁️ 23°C | AQI 112

Daily Horoscope: ಸಂಗಾತಿಯ ಒತ್ತಡದಿಂದ ಧನನಷ್ಟ; ಇಂದು ನಿಮ್ಮ ರಾಶಿ ಭವಿಷ್ಯ

Daily Horoscope: October 28 Zodiac Predictions And Astrological Updates
ಅಕ್ಟೋಬರ್ 28ರ ಇಂದಿನ ದ್ವಾದಶ ರಾಶಿಗಳ ಭವಿಷ್ಯ ಇಲ್ಲಿದೆ. ಯಾವ ರಾಶಿಯವರಿಗೆ ಇಂದು ಎಚ್ಚರಿಕೆ ಅಗತ್ಯ ಹಾಗೂ ಯಾವ ರಾಶಿಗೆ ಶುಭಫಲವಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಕ್ಟೋಬರ್ 28ರ ಇಂದಿನ ರಾಶಿ ಭವಿಷ್ಯದ (Daily Horoscope) ಪ್ರಕಾರ, ಕೆಲ ರಾಶಿಯವರು ಸಂಗಾತಿಯ ಅತಿಯಾದ ಒತ್ತಡ ಅಥವಾ ಅನಗತ್ಯ ಖರ್ಚುಗಳಿಂದಾಗಿ ಧನನಷ್ಟ ಅನುಭವಿಸಬೇಕಾಗಬಹುದು. ಇಂದಿನ ದಿನದಲ್ಲಿ ಹಣಕಾಸು ಹಾಗೂ ವೈಯಕ್ತಿಕ ವಿಚಾರಗಳಲ್ಲಿ ಎಚ್ಚರಿಕೆ ವಹಿಸುವುದು ಅತ್ಯಂತ ಅವಶ್ಯವಾಗಿದೆ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಶರತ್ ಋತು, ಆಶ್ವಯುಜ ಮಾಸದ ಕೃಷ್ಣ ಪಕ್ಷದ ದ್ವಿತೀಯಾ ತಿಥಿಯ ಬುಧವಾರದ ದಿನ ಇದಾಗಿದೆ. ಇಂದು ಅವಿಶ್ರಾಂತಿ ಕಾರ್ಯ, ವಿದೇಶದಿಂದ ಕರೆ ಹಾಗೂ ಹಣದ ಮೋಹದಂತಹ ವಿಶೇಷ ಸಂಗತಿಗಳು ನಡೆಯಲಿವೆ.

ಇಂದಿನ ದ್ವಾದಶ ರಾಶಿಗಳ ಸಂಪೂರ್ಣ ಜ್ಯೋತಿಷ್ಯ ಫಲಗಳು ಮತ್ತು ದೈನಂದಿನ ಭವಿಷ್ಯವು ಹೇಗಿರಲಿದೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಂಡು ಮುನ್ನೆಚ್ಚರಿಕೆ ವಹಿಸುವುದು ಉತ್ತಮ.

ಮೇಷ ರಾಶಿ

ಬಹಳ ಪರಿಶ್ರಮದಿಂದ ಇಂದು ನೀವು ಅಂದುಕೊಂಡ ಸ್ಥಳವನ್ನು ತಲುಪುವಿರಿ. ದೂರದಲ್ಲಿರುವ ಮಕ್ಕಳನ್ನು ಕಾಣದೆ ನಿಮ್ಮ ಮನಸ್ಸಿಗೆ ಸ್ವಲ್ಪ ಬೇಸರವಾಗಲಿದೆ. ದಾಂಪತ್ಯ ಜೀವನದಲ್ಲಿ ಹಳೆಯ ಬೇಸರಗಳೆಲ್ಲ ದೂರವಾಗಿ ಸಂತೋಷ ನೆಲೆಸಲಿದೆ.

ವೃಷಭ ರಾಶಿ

ಕುಟುಂಬದಲ್ಲಿ ಇಂದು ಅನಿರೀಕ್ಷಿತ ತಿರುವುಗಳು ಎದುರಾಗಬಹುದು. ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿ ಸ್ವಲ್ಪ ಕಷ್ಟಪಡುವಿರಿ. ಬೇರೆಯವರಿಗೆ ನೀಡಿದ್ದ ಹಣವು ಅಂತಿಮವಾಗಿ ನಿಮ್ಮ ಕೈಸೇರಲಿದೆ.

ಮಿಥುನ ರಾಶಿ

ಸಂಗಾತಿಯ ಜೊತೆ ನೀವು ಇಂದು ಹೆಚ್ಚಿನ ಸಮಯವನ್ನು ಖುಷಿಯಿಂದ ಕಳೆಯುವಿರಿ. ಮಗಳು ಅಥವಾ ಮಗನ ಸಂತಾನದ ಬಯಕೆಯನ್ನು ಪರಸ್ಪರ ಹಂಚಿಕೊಳ್ಳುವಿರಿ. ಹಿರಿಯರ ಎದುರು ಮಾತನಾಡುವಾಗ ವಿನಯತೆ ಇರಲಿ.

ಕರ್ಕಾಟಕ ರಾಶಿ

ಅಧ್ಯಾತ್ಮದ ಆಸಕ್ತಿಗೆ ತಕ್ಕ ಯೋಗ್ಯವಾದ ಜನ ಹಾಗೂ ವಿಷಯಗಳು ನಿಮಗೆ ಸಿಗಲಿವೆ. ಮಾಹಿತಿಯ ಕೊರತೆಯಿಂದ ತಪ್ಪಾದ ಕೆಲಸ ಮಾಡಿ ನಂತರ ಪಶ್ಚಾತಾಪ ಪಡುವಿರಿ. ನಿಮಗೆ ಗೌರವ ಸಿಗದ ಜಾಗಕ್ಕೆ ಹೋಗದಿರಿ.

ಸಿಂಹ ರಾಶಿ

ನಿಮ್ಮ ಮನಸ್ಸಿನ ಸಂಕಟವನ್ನು ಆಪ್ತ ಸ್ನೇಹಿತರ ಜೊತೆ ಹಂಚಿಕೊಂಡು ಸಮಾಧಾನ ಪಟ್ಟುಕೊಳ್ಳಿ. ನಿದ್ರೆಯಲ್ಲಿ ಕಂಡ ಯಾವುದೋ ಕೆಟ್ಟ ಕನಸಿನಿಂದ ನೀವು ಭೀತರಾಗುವಿರಿ. ಚರಾಸ್ತಿಯನ್ನು ರಕ್ಷಿಸಿಕೊಳ್ಳಲು ಹೋರಾಟ ನಡೆಸಬೇಕಾಗುತ್ತದೆ.

ಕನ್ಯಾ ರಾಶಿ

ದಿನದ ಆರಂಭದಲ್ಲಿಯೇ ನಿಮ್ಮಲ್ಲಿ ಉತ್ಸಾಹದ ಕೊರತೆ ಸ್ಪಷ್ಟವಾಗಿ ಕಾಣಿಸುವುದು. ಹಿರಿಯ ವ್ಯಕ್ತಿಗಳಿಗೆ ಕೊಡಬೇಕಾದ ಸರಿಯಾದ ಗೌರವವನ್ನು ಸಲ್ಲಿಸಿ. ಕುಟುಂಬದಲ್ಲಿ ಇದ್ದ ಮನಸ್ತಾಪಗಳು ದೂರವಾಗಿ ಅನ್ಯೋನ್ಯತೆ ಹೆಚ್ಚಾಗಲಿದೆ.

ತುಲಾ ರಾಶಿ

ತಂದೆಯಿಂದ ನಿಮಗೆ ಅಪರೂಪದ ಉಡುಗೊರೆಯೊಂದು ಸಿಗುವ ಸಂಭವವಿದೆ. ಸಂಗಾತಿ ಜೊತೆ ಅನಗತ್ಯ ವಸ್ತುಗಳನ್ನು ಖರೀದಿಸುವ ಕಾರಣದಿಂದ ಕಲಹವಾಗಬಹುದು. ಪಡೆದುಕೊಳ್ಳುವ ಭೂಮಿಯನ್ನು ಸರಿಯಾಗಿ ಪರಿಶೀಲಿಸಿ.

ವೃಶ್ಚಿಕ ರಾಶಿ

ದಾಂಪತ್ಯದಲ್ಲಿ ಬರುವ ಗಂಭೀರ ಸಮಸ್ಯೆಗಳು ನ್ಯಾಯಾಲಯದವರೆಗೂ ಹೋಗಬಹುದು. ಪರಸ್ಪರ ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳುವುದು ಅತ್ಯಂತ ಕ್ಷೇಮ. ಒಂದೇ ಸಮಯದಲ್ಲಿ ಹೆಚ್ಚು ಜವಾಬ್ದಾರಿ ನಿರ್ವಹಿಸಿ ದಣಿಯುವಿರಿ.

ಧನು ರಾಶಿ

ಇಂದು ಯಾವುದೇ ಪ್ರಮುಖ ಜವಾಬ್ದಾರಿಯನ್ನು ನಿಮ್ಮ ಮೇಲೆ ಹಾಕಿಕೊಳ್ಳಬೇಡಿ. ಪ್ರೀತಿ ಹಾಗೂ ಹಣಕಾಸಿನ ವಿಚಾರದಲ್ಲಿ ನಿಮಗೆ ಕೆಲವು ತೊಂದರೆಗಳು ಎದುರಾಗಬಹುದು. ಅತಿಯಾದ ವಾದ-ವಿವಾದಗಳಿಂದ ನಿಮಗೆ ನಷ್ಟವೇ ಹೊರತು ಲಾಭವಿಲ್ಲ.

ಮಕರ ರಾಶಿ

ನಿಮ್ಮ ವಿವಾಹದ ಇಚ್ಛೆಯನ್ನು ಮನೆಯವರ ಬಳಿ ಮುಕ್ತವಾಗಿ ಹೇಳಿಕೊಳ್ಳುವಿರಿ. ಹೊಸ ಉದ್ಯೋಗದ ಸ್ಥಳವು ನಿಮ್ಮಲ್ಲಿ ಹೊಸ ಉತ್ಸಾಹವನ್ನು ತುಂಬಲಿದೆ. ಸಂಗಾತಿಯಿಂದ ನಿಮಗೆ ಸುಂದರವಾದ ಉಡುಗೊರೆ ಸಿಗಲಿದೆ.

ಕುಂಭ ರಾಶಿ

ಮನೆಯ ವಾತಾವರಣವು ಇಂದು ಅತ್ಯಂತ ಸಂತೋಷ ಹಾಗೂ ನೆಮ್ಮದಿಯನ್ನು ಕೊಡುವುದು. ನಿಮ್ಮ ಬಗ್ಗೆ ನೀವೇ ಎಲ್ಲರ ಬಳಿ ಹೇಳಿಕೊಳ್ಳುವ ಪ್ರಸಂಗ ಬರಬಹುದು. ನೂತನ ವಸ್ತ್ರಗಳನ್ನು ಖರೀದಿಸುವ ಸಂಭವವಿದೆ.

ಮೀನ ರಾಶಿ (Daily Horoscope)

ಬೇರೆ ಅನ್ಯ ಮಾರ್ಗದಿಂದ ನಿಮ್ಮ ಇಂದಿನ ಕಾರ್ಯವನ್ನು ಸಾಧಿಸಿಕೊಳ್ಳುವಿರಿ. ಸರ್ಕಾರದ ಕೆಲಸಗಳನ್ನು ಬೇರೆಯವರ ಒತ್ತಡದಿಂದ ಮಾಡಿಸಿಕೊಳ್ಳಬೇಕಾಗುತ್ತದೆ. ಸಾಲದ ರೂಪದಲ್ಲಿ ಯಾರಿಗೂ ಹಣವನ್ನು ನೀಡಬೇಡಿ.