☔ Weather
Bengaluru: ☁️ 23°C | AQI 58
Mysore: 🌤️ 25°C | AQI 63
Mangalore: ☁️ 29°C | AQI 72
Bengaluru: ☁️ 23°C | AQI 58

Daily Horoscope: ಯಾವ ರಾಶಿಯವರಿಗೆ ಇಂದು ಎಚ್ಚರಿಕೆ ಅಗತ್ಯ ಹಾಗೂ ಯಾವ ರಾಶಿಗೆ ಶುಭಫಲವಿದೆ?

Daily Horoscope: October 21 Zodiac Predictions And Astrological Updates

Daily Horoscope: ಅಕ್ಟೋಬರ್ 21ರ ಇಂದಿನ ರಾಶಿ ಭವಿಷ್ಯದ ಪ್ರಕಾರ, ಕೆಲ ರಾಶಿಯವರ ಸ್ವಾತಂತ್ರ್ಯಕ್ಕೆ ಹಲವರಿಂದ ತೊಂದರೆಗಳು ಎದುರಾಗುವ ಸಾಧ್ಯತೆಯಿದೆ. ಇಂದಿನ ದಿನದಲ್ಲಿ ಪ್ರತಿಯೊಂದು ವಿಚಾರದಲ್ಲೂ ಎಚ್ಚರಿಕೆ ಹಾಗೂ ಸಂಯಮ ವಹಿಸುವುದು ಅತ್ಯಂತ ಅವಶ್ಯವಾಗಿದೆ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಶರತ್ ಋತು, ಆಶ್ವಯುಜ ಮಾಸದ ಶುಕ್ಲ ಪಕ್ಷದ ದಶಮೀ ತಿಥಿಯ ಬುಧವಾರದ ದಿನ ಇದಾಗಿದೆ. ಇಂದು ತಾಯಿಯ ಸೇವೆ, ನಿರಂತರ ಕಾರ್ಯ ಹಾಗೂ ಉದ್ಯಮದಲ್ಲಿ ಒತ್ತಡ ಹೆಚ್ಚಾಗುವ ದಿನವಾಗಿದೆ.

ಜಗನ್ಮಾತೆಯ ಆರಾಧನೆಯೊಂದಿಗೆ ಇಂದಿನ ದಿನವು ಎಲ್ಲರಿಗೂ ಶುಭ ತರಲಿ. ಉದ್ಯೋಗ, ವ್ಯಾಪಾರ, ಹಣಕಾಸು ಹಾಗೂ ಕೌಟುಂಬಿಕ ಜೀವನದಲ್ಲಿ ಒಳಿತುಂಟಾಗಲಿ ಎಂದು ಆಶಿಸುತ್ತಾ ಇಂದಿನ ದ್ವಾದಶ ರಾಶಿಗಳ ಸಂಪೂರ್ಣ ಫಲಗಳನ್ನು ತಿಳಿಯಿರಿ.

ಮೇಷ ರಾಶಿ

ಬಹಳ ದಿನಗಳಿಂದ ಮಾಡಬೇಕಿದ್ದ ಆಭರಣ ಖರೀದಿಯನ್ನು ಇಂದು ಮಾಡುವಿರಿ. ಬೇಡದ ಕಾರ್ಯಗಳಿಗೆ ಹಣ ಹಾಕಿ ನಷ್ಟ ಅನುಭವಿಸುವಿರಿ. ವೃತ್ತಿಯಲ್ಲಿ ಹಠಾತ್ ಬದಲಾವಣೆಗಳು ಎದುರಾಗಬಹುದು. ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಆಪಾದನೆಗಳು ಬರಬಹುದು.

ವೃಷಭ ರಾಶಿ

ನಿಮ್ಮ ಅಂತಶ್ಶಕ್ತಿಯೇ ನಿಮ್ಮ ನಿಜವಾದ ಬಲವಾಗಿದೆ. ಮಕ್ಕಳ ವಿದ್ಯಾಭ್ಯಾಸದ ಕಡೆಗೆ ವಿಶೇಷ ಕಾಳಜಿ ವಹಿಸಿ ಪ್ರೇರಣೆ ನೀಡುವಿರಿ. ಇಂದು ಕೆಲಸದೊತ್ತಡ ಹೆಚ್ಚಿರಲಿದ್ದು, ತಾಳ್ಮೆ ಕಾಯ್ದುಕೊಳ್ಳುವುದು ಅವಶ್ಯಕವಾಗಿದೆ.

ಮಿಥುನ ರಾಶಿ

ವಿದ್ಯಾಭ್ಯಾಸದ ಬಗ್ಗೆ ನಿಮ್ಮ ಗಮನವು ಬದಲಾಗಲಿದೆ. ವಾಹನ ನಿರ್ವಹಣೆಗಾಗಿ ಅಧಿಕ ಖರ್ಚು ಮಾಡಬೇಕಾಗಿ ಬರಬಹುದು. ಆಲಸ್ಯದಿಂದ ಇರುವುದರಿಂದ ಮೇಲಾಧಿಕಾರಿಗಳಿಂದ ಎಚ್ಚರಿಕೆ ಮಾತುಗಳನ್ನು ಕೇಳಬೇಕಾದೀತು.

ಕರ್ಕಾಟಕ ರಾಶಿ

ಚಾಂಚಲ್ಯವನ್ನು ನಿಯಂತ್ರಿಸುವುದು ನಿಮಗೆ ಸ್ವಲ್ಪ ಕಷ್ಟವಾಗಲಿದೆ. ವಿವಾಹಕ್ಕೆ ಸಂಬಂಧಿಸಿದ ಕಾರ್ಯಗಳು ಅನ್ಯ ಕಾರಣಗಳಿಂದ ಮುಂದೆ ಹೋಗಬಹುದು. ಅಶಕ್ತರಿಗೆ ನಿಮ್ಮ ಕೈಲಾದ ಸಹಾಯವನ್ನು ಮಾಡುವಿರಿ.

ಸಿಂಹ ರಾಶಿ

ಅನಿರೀಕ್ಷಿತ ಬಂಧುಗಳ ಆಗಮನದಿಂದ ಪೂರ್ವಯೋಜಿತ ಕಾರ್ಯಗಳನ್ನು ಬದಲಿಸಬೇಡಿ. ಆಸ್ತಿ ಖರೀದಿಯ ವಿಚಾರದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಪರದಾಡುವಿರಿ. ಆರೋಗ್ಯದ ಬಗ್ಗೆ ಎಚ್ಚರವಿರಲಿ.

ಕನ್ಯಾ ರಾಶಿ

ನೀವು ಇಂದು ಯಾವುದಾದರೂ ಉತ್ತಮ ಸತ್ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ. ಬಂಧುಗಳಿಗೆ ಸಹಾಯ ಮಾಡುವಾಗ ಪ್ರತಿಫಲದ ಅಪೇಕ್ಷೆ ಇಟ್ಟುಕೊಳ್ಳಬೇಡಿ. ಕುಲದೇವರ ಉಪಾಸನೆಯಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.

ತುಲಾ ರಾಶಿ

ದೈವದ ಯೋಜನೆ ನಿಮ್ಮ ಪ್ರಯತ್ನಕ್ಕಿಂತ ಭಿನ್ನವಾಗಿರಲಿದೆ. ನಿಮಗೆ ಗೊತ್ತೇ ಇಲ್ಲದ ಕೆಲಸದಿಂದ ಅನಿರೀಕ್ಷಿತ ಅಪವಾದಗಳು ಕೇಳಿಬರಬಹುದು. ಮಾತಿನಲ್ಲಿ ಸಂಯಮವಿರಲಿ.

ವೃಶ್ಚಿಕ ರಾಶಿ

ಗೆಳೆಯರು ಮಾಡಿದ ತಮಾಷೆಯು ನಿಮಗೆ ಮುಳುವಾಗಬಹುದು. ಇಂದಿನ ದಿನವನ್ನು ಬಹಳ ಕಷ್ಟದಿಂದ ಕಳೆಯಬೇಕಾಗಿ ಬರಬಹುದು. ಸಂಗಾತಿಯ ಮನಸ್ಥಿತಿಗೆ ತಕ್ಕಂತೆ ಆಲೋಚಿಸಿ ನಡೆದುಕೊಳ್ಳಿ.

ಧನು ರಾಶಿ

ಅಧಿಕಾರ ಪ್ರಾಪ್ತಿಯ ಬೆನ್ನಲ್ಲೇ ಶತ್ರುಗಳ ಕಾಟ ಹೆಚ್ಚಾಗಲಿದೆ. ಹಿತಶತ್ರುಗಳಿಂದ ಎಚ್ಚರದಿಂದಿರಬೇಕು. ಚಂಚಲ ಮನಸ್ಸಿನಿಂದ ನಕಾರಾತ್ಮಕ ಚಿಂತೆಗಳು ಕಾಡಬಹುದು. ದಾಂಪತ್ಯದಲ್ಲಿ ಮಿಶ್ರಫಲವಿರಲಿದೆ.

ಮಕರ ರಾಶಿ

ಹೆಚ್ಚು ಯೋಚಿಸಿದಷ್ಟು ನಿಮ್ಮ ಮನಸ್ಸು ದುರ್ಬಲವಾಗುವುದು. ಯಾರಿಗೂ ಮುನ್ಸೂಚನೆ ಇಲ್ಲದೆ ಸಾಲವಾಗಿ ಹಣವನ್ನು ಕೊಡುವುದು ಬೇಡ. ಕುಟುಂಬದಲ್ಲಿ ಅನಗತ್ಯ ಕಲಹಗಳನ್ನು ಸೃಷ್ಟಿಸಿಕೊಳ್ಳಬೇಡಿ.

ಕುಂಭ ರಾಶಿ

ಸ್ನೇಹಿತರ ಬೆಂಬಲದಿಂದ ನಿಮ್ಮ ಪ್ರಮುಖ ಕಾರ್ಯಗಳು ಸುಲಭವಾಗಿ ನೆರವೇರಲಿದೆ. ದೀರ್ಘಕಾಲದ ಸ್ನೇಹವು ಮತ್ತೆ ಹೊಸದಾಗಿ ಆರಂಭವಾಗಲಿದೆ. ವಿಶ್ರಾಂತಿಯ ಅವಶ್ಯಕತೆ ತುಂಬಾ ಇದೆ.

ಮೀನ ರಾಶಿ (Daily Horoscope)

ನಿಮ್ಮ ಆದಾಯವನ್ನು ಹೆಚ್ಚು ಮಾಡಿಕೊಳ್ಳುವ ಬಗ್ಗೆ ಹೆಚ್ಚು ಆಲೋಚಿಸುವಿರಿ. ಸಹೋದ್ಯೋಗಿಗಳ ಸಹಕಾರದಿಂದ ಕೆಲಸದ ಒತ್ತಡ ನಿವಾರಣೆಯಾಗಲಿದೆ. ಸಂಗಾತಿಯ ಮಾತುಗಳು ನಿಮಗೆ ಅಚ್ಚರಿ ತರಲಿವೆ.