☔ Weather
Bengaluru: 🌤️ 23°C | AQI 155
Mysore: 🌤️ 21°C | AQI 122
Mangalore: ☀️ 26°C | AQI 142
Bengaluru: 🌤️ 23°C | AQI 155
☔ Weather
Bengaluru: 🌤️ 23°C | AQI 155
Mysore: 🌤️ 21°C | AQI 122
Mangalore: ☀️ 26°C | AQI 142
Bengaluru: 🌤️ 23°C | AQI 155

PRICE HIKE : ಹಾಲಿನ ಬೆಲೆ ಏರಿಕೆ ಬೆನ್ನಲ್ಲೇ ಮೊಸರಿನ ದರ 14.ರೂ ಏರಿಕೆ – ರಾಜ್ಯದ ಜನರಿಗೆ ದರ ಏರಿಕೆಯ ಬರೆ!

Image of Milk Price hike
ರಾಜ್ಯದ ಜನರ ಬದುಕಿಗೆ ಮತ್ತೊಂದು ದುಬಾರಿ ಹೊರೆ (Price hike) ಬಿದ್ದಿದೆ. ಕೆಎಂಎಫ್ ನ ನಂದಿನಿ ಹಾಲು ಮತ್ತು ಮೊಸರಿನ ಹೊಸ ದರಪಟ್ಟಿ ಪ್ರಕಟ

ಮುಖ್ಯಾಂಶಗಳು

  • ಪ್ರತಿ ಲೀಟರ್ ಹಾಲಿಗೆ 8.ರೂ ಹೆಚ್ಚಳ
  • ಪ್ರತಿ ಲೀಟರ್ ಮೊಸರಿಗೆ 9.ರೂ ಹೆಚ್ಚಳ
  • ರಾಜ್ಯದ ಜನರಿಗೆ ಬೆಲೆ ಏರಿಕೆಯ ಬರೆ

ಬೆಂಗಳೂರು : ರಾಜ್ಯದ ಜನರ ಬದುಕಿಗೆ ಮತ್ತೊಂದು ದುಬಾರಿ ಹೊರೆ (Price hike) ಬಿದ್ದಿದೆ. ಕೆಎಂಎಫ್ ನ ನಂದಿನಿ ಹಾಲು ಮತ್ತು ಮೊಸರಿನ ಹೊಸ ದರಪಟ್ಟಿ ಪ್ರಕಟವಾಗಿದ್ದು, ನವೆಂಬರ್ 1 ರಿಂದಲೇ ಪರಿಷ್ಕೃತ ದರಗಳು ಜಾರಿಗೆ ಬರಲಿವೆ. ರಾಜ್ಯ ಸರ್ಕಾರ ಹಾಲಿನ ಬೆಲೆಯನ್ನು ಪ್ರತಿ ಲೀಟರ್ ಗೆ ಒಟ್ಟಾರೆ 8 ರೂಪಾಯಿ ಹೆಚ್ಚಿಸಿದೆ. ಆದರೆ ವಿಧಗಳಿಗೆ ತಕ್ಕಂತೆ ಏರಿಕೆ ಬದಲಾಗಿದೆ. ಶುಭಂ ಮತ್ತು ಹೋಮೋಜಿನೈಸ್ಡ್ ಶುಭಂ ಹಾಲಿನ ಮೇಲೆ ಬರೋಬ್ಬರಿ 12 ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಉಳಿದ ಎಲ್ಲ ಹಾಲಿನ ದರದಲ್ಲಿ 8 ರೂಪಾಯಿ ಏರಿಕೆಯಾಗಿದೆ. ಹಾಲು ಮಾತ್ರವಲ್ಲದೆ ಪ್ರತಿದಿನದ ಅಡುಗೆಗೆ ಅನಿವಾರ್ಯವಾಗಿರುವ ಮೊಸರಿನ ದರವೂ ಗಣನೀಯವಾಗಿ ತುಟ್ಟಿಯಾಗಿದೆ. ಅರ್ಧ ಲೀಟರ್ ಮೊಸರಿನ ಪ್ಯಾಕೆಟ್ ಮೇಲೆ 6 ರೂಪಾಯಿ ಮತ್ತು ಒಂದು ಕೆಜಿ ಮೊಸರಿನ ಪ್ಯಾಕೆಟ್ ಮೇಲೆ ಒಟ್ಟಾರೆ 14 ರೂಪಾಯಿ ಹೆಚ್ಚಿಸಲಾಗಿದೆ. ಈ ನಿರ್ಧಾರದಿಂದ ಹೋಟೆಲ್, ಟೀ ಅಂಗಡಿ, ಮನೆ ಬಳಕೆಯ ವೆಚ್ಚ ಮತ್ತಷ್ಟು ಹೆಚ್ಚಲಿದೆ.

ಬೆಲೆ ಏರಿಕೆ ಬರೆ..ದುಬಾರಿ ಹೊರೆ..!

ಈ ದರ ಏರಿಕೆಗೆ ಪ್ರಮುಖ ಕಾರಣ ರಾಜ್ಯದಲ್ಲಿ ಕಾಡಿರುವ ತೀವ್ರ ಬರಗಾಲ ಮತ್ತು ಹೈನುಗಾರಿಕೆ ನಿರ್ವಹಣಾ ಖರ್ಚು ದುಬಾರಿಯಾಗಿರುವುದು ಎಂದು ಕೆಎಂಎಫ್ ಸ್ಪಷ್ಟಪಡಿಸಿದೆ. ರೈತರು ನಷ್ಟ ಅನುಭವಿಸಿ ಹೈನುಗಾರಿಕೆಯಿಂದ ದೂರ ಸರಿಯಬಾರದು ಎಂಬ ಕಾರಣಕ್ಕೆ ಸರ್ಕಾರ ಈ ಹೆಜ್ಜೆ ಇಟ್ಟಿದೆ. ಹಾಲಿನ ದರದಲ್ಲಿ ಏರಿಕೆಯಾಗಿರುವ 8 ರೂಪಾಯಿಯಲ್ಲಿ 7 ರೂಪಾಯಿ ನೇರವಾಗಿ ಹಾಲು ಉತ್ಪಾದಕ ರೈತರಿಗೆ ತಲುಪಲಿದ್ದು, ಉಳಿದ 1 ರೂಪಾಯಿ ಹಾಲು ಒಕ್ಕೂಟಗಳಿಗೆ ಸಿಗಲಿದೆ ಎಂದು ತಿಳಿಸಲಾಗಿದೆ. ಈ ಮೂಲಕ ರೈತರಿಗೆ ನೆರವಾಗುವ ಉದ್ದೇಶವನ್ನು ಸರ್ಕಾರ ಮುಂದಿಟ್ಟಿದೆ.

ಇದನ್ನೂ ಓದಿ: ಬಿಜೆಪಿಗೆ ಮರಳಲು ಯತ್ನಾಳ್ 2 ಕಂಡೀಶನ್ : ಓಕೆ ಅಂದ್ರಾ ಬಿ.ವೈ.ವಿಜಯೇಂದ್ರ..?

ಈ ಹೆಚ್ಚಳವು ಮೇಲ್ನೋಟಕ್ಕೆ ರೈತರ ಹಿತರಕ್ಷಣೆಯ ಕ್ರಮದಂತೆ ಕಂಡರೂ, ಇದರ ನೇರ ಹೊರೆ ಮಾತ್ರ ಸಾಮಾನ್ಯ ಗ್ರಾಹಕರ ಮೇಲೆ ಬೀಳುತ್ತಿದೆ. ಹಾಲು ಮತ್ತು ಮೊಸರು ಪ್ರತಿದಿನದ ಅಗತ್ಯ ವಸ್ತುಗಳಾಗಿರುವುದರಿಂದ ಮಧ್ಯಮ ವರ್ಗ ಮತ್ತು ಬಡ ಕುಟುಂಬಗಳ ಮಾಸಿಕ ಬಜೆಟ್ ಮೇಲೆ ಇದು ದೊಡ್ಡ ಏಟು ನೀಡಲಿದೆ. ರೈತರಿಗೆ 7 ರೂಪಾಯಿ ಸಿಗುವುದು ಸಮಾಧಾನದ ವಿಷಯವಾದರೂ, ಒಕ್ಕೂಟಗಳ ನಿರ್ವಹಣಾ ವೆಚ್ಚ ಮತ್ತು ಮಧ್ಯವರ್ತಿಗಳ ಲಾಭದ ಬಗ್ಗೆ ಸರ್ಕಾರ ಪಾರದರ್ಶಕತೆ ಕಾಯ್ದುಕೊಳ್ಳಬೇಕಿದೆ. ಇಲ್ಲವಾದರೆ ಪ್ರತಿ ಬಾರಿ ಬರಗಾಲದ ನೆಪದಲ್ಲಿ ಬೆಲೆ ಏರಿಸಿ ಗ್ರಾಹಕರನ್ನೇ ಶೋಷಿಸುವ ಪದ್ಧತಿ ಮುಂದುವರಿಯುತ್ತದೆ. ಬೆಲೆ ಏರಿಕೆಯ ಜೊತೆಗೆ ಹಾಲಿನ ಗುಣಮಟ್ಟ, ಪೂರೈಕೆ ಮತ್ತು ರೈತರಿಗೆ ನಿಜವಾಗಿಯೂ ಹಣ ತಲುಪುತ್ತಿದೆಯೇ ಎಂಬುದನ್ನು ಸರ್ಕಾರ ಕಟ್ಟುನಿಟ್ಟಾಗಿ ಗಮನಿಸಬೇಕಿದೆ. ಇಲ್ಲದಿದ್ದರೆ ಈ ನಿರ್ಧಾರ ರೈತರಿಗೂ ಪೂರ್ಣ ಲಾಭ ತರದೆ, ಜನಸಾಮಾನ್ಯರಿಗೆ ಮಾತ್ರ ದುಬಾರಿಯಾಗಿ ಪರಿಣಮಿಸಲಿದೆ.