Darshan Case: ದರ್ಶನ್ ನಟನೆಯ ರೇಣುಕಾಸ್ವಾಮಿ ಕೊಲೆ ಪ್ರಕರಣವು ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಈಗ ಮಹತ್ವದ ಆದೇಶ ಹೊರಬಿದ್ದಿದೆ.
ಪ್ರಕರಣದ ಸಾಕ್ಷಿದಾರರೊಬ್ಬರು ವಿಚಾರಣೆಗೆ ಗೈರಾಗಿದ್ದಾರೆ. ಇದರಿಂದಾಗಿ ಕೋರ್ಟ್ ಕಡೆಯಿಂದ ಕಠಿಣ ಕ್ರಮ ಕೈಗೊಳ್ಳಲಾಗಿದೆ. ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಸಾಕ್ಷಿಗೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದೆ. ಇದು ಕಾನೂನು ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಸಾಕ್ಷಿ ಪುನೀತ್‌ಗೆ ಜಾಮೀನು ರಹಿತ ವಾರೆಂಟ್
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದ ಪ್ರಮುಖ ಸಾಕ್ಷಿದಾರನಿಗೆ ನಾನ್ ಬೇಲೇಬಲ್ ವಾರೆಂಟ್ ಜಾರಿಯಾಗಿದೆ.
59ನೇ ಸೆಷನ್ಸ್ ಕೋರ್ಟ್ ಈ ವಾರೆಂಟ್ ಜಾರಿ ಮಾಡಿದೆ. ಕೊಲೆ ಪ್ರಕರಣದ 91ನೇ ಸಾಕ್ಷಿಯಾದ ಪುನೀತ್ ವಿರುದ್ಧ ಈ ಆದೇಶ ಹೊರಬಿದ್ದಿದೆ. ಪುನೀತ್ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಕಡೆಯಿಂದ ಸಮನ್ಸ್ ನೀಡಲಾಗಿತ್ತು. ಆದರೆ ಸಮನ್ಸ್ ಪಡೆದರೂ ಅವರು ವಿಚಾರಣೆಗೆ ಗೈರಾಗಿದ್ದರು.
ಇದನ್ನು ಓದಿ: Darshan: ದರ್ಶನ್ ಕುಟುಂಬದ ಸುತ್ತ ಎದ್ದಿರುವ ವಿವಾದಗಳು ಮತ್ತು ಪ್ರಶ್ನೆಗಳಿಗೆ ಉತ್ತರ ಯಾವಾಗ?
Darshan Case: ಗೈರಾದ ಪುನೀತ್, ನಾಳೆಗೆ ಕಿರಣ್ ವಿಚಾರಣೆ ಮುಂದೂಡಿಕೆ
ಇಂದು ಇಬ್ಬರು ಸಾಕ್ಷಿಗಳ ಹೇಳಿಕೆ ದಾಖಲಿಸಲು ದಿನಾಂಕ ನಿಗದಿಯಾಗಿತ್ತು. ಕಿರಣ್ ಹಾಗೂ ಪುನೀತ್ ಇಬ್ಬರಿಗೂ ಕೋರ್ಟ್ ಸಮನ್ಸ್ ನೀಡಿತ್ತು. ವಿಚಾರಣೆಗೆ ಬರುವಂತೆ ಕೋರ್ಟ್ ಸ್ಪಷ್ಟವಾಗಿ ಸೂಚನೆ ನೀಡಿತ್ತು. ಅದರಂತೆ ಸಾಕ್ಷಿ ಕಿರಣ್ ಅವರು ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
ಆದರೆ ಮತ್ತೊಬ್ಬ ಸಾಕ್ಷಿ ಪುನೀತ್ ಮಾತ್ರ ಗೈರಾಗಿದ್ದಾರೆ. ಇದರಿಂದ ಕೋರ್ಟ್ ಗಂಭೀರವಾಗಿ ಪರಿಗಣಿಸಿ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ಕಿರಣ್ ಅವರ ಹೇಳಿಕೆ ದಾಖಲು ಪ್ರಕ್ರಿಯೆಯನ್ನು ನಾಳೆಗೆ ಮುಂದೂಡಲಾಗಿದೆ.




