☔ Weather
Bengaluru: 🌤️ 22°C | AQI 94
Mysore: ☀️ 23°C | AQI 127
Mangalore: 🌤️ 27°C | AQI 140
Bengaluru: 🌤️ 22°C | AQI 94
☔ Weather
Bengaluru: 🌤️ 22°C | AQI 94
Mysore: ☀️ 23°C | AQI 127
Mangalore: 🌤️ 27°C | AQI 140
Bengaluru: 🌤️ 22°C | AQI 94

BHEL Recruitment 2026: SSLC, ITI ಪಾಸಾದವರಿಗೆ BHELನಲ್ಲಿ 660 ಹುದ್ದೆಗಳಿಗೆ ಅರ್ಜಿ

BHEL Recruitment 2026: Apply Online For 660 Artisan Grade 4 Posts

Image: AI Generated

BHEL Recruitment 2026: ಸರ್ಕಾರಿ ರಂಗದ ದೈತ್ಯ ಸಂಸ್ಥೆಯಾದ ‘ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್’ (BHEL) ಬೃಹತ್ ನೇಮಕಾತಿಗೆ ಚಾಲನೆ ನೀಡಿದೆ. ಕೇಂದ್ರ ಸರ್ಕಾರದ ಸಾರ್ವಜನಿಕ ವಲಯದ ಉದ್ಯೋಗ ಬಯಸುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.

ದೇಶಾದ್ಯಂತ ಇರುವ BHEL ಸಂಸ್ಥೆಯ ಒಂಬತ್ತು ಉತ್ಪಾದನಾ ಘಟಕಗಳಲ್ಲಿ ಖಾಲಿ ಇರುವ ಒಟ್ಟು 660 ‘ಕುಶಲಕರ್ಮಿ ಗ್ರೇಡ್-4’ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು ಏಳು ಪ್ರಮುಖ ತಾಂತ್ರಿಕ ಟ್ರೇಡ್‌ಗಳಲ್ಲಿ ಈ ನೇಮಕಾತಿಯು ನಡೆಯಲಿದೆ.

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿಗೆ ಸಂಬಂಧಿಸಿದ ಸಂಪೂರ್ಣ ಹುದ್ದೆಗಳ ವಿವರ ಹಾಗೂ ಅರ್ಹತೆಯ ಮಾಹಿತಿ ಕೆಳಗಿನಂತಿದೆ.

 

ಟ್ರೇಡ್‌ವಾರು ಹುದ್ದೆಗಳ ವಿವರಗಳು

  • ಫಿಟ್ಟರ್: 278 ಹುದ್ದೆಗಳು
  • ವೆಲ್ಡರ್: 104 ಹುದ್ದೆಗಳು
  • ಮೆಷಿನಿಸ್ಟ್: 101 ಹುದ್ದೆಗಳು
  • ಎಲೆಕ್ಟ್ರಿಷಿಯನ್: 90 ಹುದ್ದೆಗಳು
  • ಟರ್ನರ್: 52 ಹುದ್ದೆಗಳು
  • ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್: 23 ಹುದ್ದೆಗಳು
  • ಫೌಂಡ್ರಿಮ್ಯಾನ್: 12 ಹುದ್ದೆಗಳು

 

ಶೈಕ್ಷಣಿಕ ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆ

  • ವಿದ್ಯಾರ್ಹತೆ: ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ SSLC/10ನೇ ತರಗತಿ ಪಾಸಾಗಿರಬೇಕು. ಇದರೊಂದಿಗೆ ಸಂಬಂಧಪಟ್ಟ ಟ್ರೇಡ್‌ನಲ್ಲಿ ITI (NTC) ಅಥವಾ ಅಪ್ರೆಂಟಿಸ್‌ಶಿಪ್ (NAC) ಪ್ರಮಾಣಪತ್ರ ಹೊಂದಿರುವುದು ಕಡ್ಡಾಯ.
  • ಆಯ್ಕೆ ವಿಧಾನ: ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ (CBT) ಮೂಲಕ ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಅರ್ಹತೆ ಪಡೆದವರಿಗೆ ದಾಖಲಾತಿ ಪರಿಶೀಲನೆ ಹಾಗೂ ಕೌಶಲ್ಯ ಪರೀಕ್ಷೆ ನಡೆಸಲಾಗುತ್ತದೆ.

BHEL Recruitment 2026: ಅರ್ಜಿ ಸಲ್ಲಿಕೆ ಮತ್ತು ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ: BHEL ಅಧಿಕೃತ ಕ್ಯಾರಿಯರ್ ವೆಬ್‌ಸೈಟ್ ಮೂಲಕವೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಒಬ್ಬ ಅಭ್ಯರ್ಥಿ ಒಂದು ಘಟಕ ಮತ್ತು ಒಂದು ಟ್ರೇಡ್‌ಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.
  • ಅರ್ಜಿ ಆರಂಭದ ದಿನಾಂಕ: ಅಕ್ಟೋಬರ್ 21, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 18, 2026 (ರಾತ್ರಿ 11:45 ರವರೆಗೆ)
  • ಪರೀಕ್ಷಾ ದಿನಾಂಕ: ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಡಿಸೆಂಬರ್ 11, 2026 ರಂದು ನಡೆಸಲು ತಾತ್ಕಾಲಿಕವಾಗಿ ನಿರ್ಧರಿಸಲಾಗಿದೆ.