Daily Horoscope: ಅಕ್ಟೋಬರ್ 27ರ ಇಂದಿನ ರಾಶಿ ಭವಿಷ್ಯದ ಪ್ರಕಾರ, ಕೆಲ ರಾಶಿಯವರು ಗುಪ್ತವಾಗಿ ಅಥವಾ ಮನಃಪೂರ್ವಕವಾಗಿ ಮಾಡಿದ ದಾನದಿಂದ ಜೀವನದಲ್ಲಿ ದೊಡ್ಡ ಮಟ್ಟದ ಯಶಸ್ಸು ಗಳಿಸಲಿದ್ದಾರೆ. ಇಂದಿನ ದಿನದಲ್ಲಿ ಪ್ರತಿಯೊಂದು ವಿಚಾರದಲ್ಲೂ ತಾಳ್ಮೆ ಹಾಗೂ ಎಚ್ಚರಿಕೆ ವಹಿಸುವುದು ಅತ್ಯಂತ ಅವಶ್ಯವಾಗಿದೆ.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಶರತ್ ಋತು, ಆಶ್ವಯುಜ ಮಾಸದ ಕೃಷ್ಣ ಪಕ್ಷದ ಪ್ರತಿಪತ್ ತಿಥಿಯ ಮಂಗಳವಾರದ ದಿನ ಇದಾಗಿದೆ. ಇಂದು ತಿದ್ದುಪಡಿಗೆ ಅವಕಾಶ, ಮಾನಸಿಕ ದ್ವಂದ್ವ ಹಾಗೂ ಹಿರಿಯರ ಜೊತೆಗಿನ ಮನಸ್ತಾಪದ ದಿನವಾಗಿದೆ.
ಇಂದಿನ ದ್ವಾದಶ ರಾಶಿಗಳ ಸಂಪೂರ್ಣ ಜ್ಯೋತಿಷ್ಯ ಫಲಗಳು ಮತ್ತು ದೈನಂದಿನ ಭವಿಷ್ಯವು ಹೇಗಿರಲಿದೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಂಡು ಮುನ್ನೆಚ್ಚರಿಕೆ ವಹಿಸುವುದು ಉತ್ತಮ.
ಮೇಷ ರಾಶಿ
ಸಹೋದರರ ಜೊತೆ ಮನೆಯ ಆಸ್ತಿಯ ಬಗ್ಗೆ ಕುಳಿತು ಶಾಂತವಾಗಿ ಮಾತನಾಡುವಿರಿ. ವ್ಯವಹಾರದಲ್ಲಿ ನಿಮ್ಮ ಬಿಗುಮಾನವನ್ನು ಸ್ವಲ್ಪ ಸಡಿಲ ಮಾಡಿಕೊಳ್ಳುವುದು ಒಳ್ಳೆಯದು. ಮನಸ್ಸು ಹಗುರವಾಗಿದ್ದು ಉತ್ಸಾಹವು ನಿಮ್ಮ ಮುಖದಲ್ಲಿ ಕಾಣಲಿದೆ.
ವೃಷಭ ರಾಶಿ
ನೀವು ಯಾರ ಮಾತನ್ನು ಒಪ್ಪಿದರೂ ನಿಮ್ಮ ಸ್ವಂತ ಆಲೋಚನೆಯನ್ನು ಮಾತ್ರ ಬದಲಾಯಿಸುವುದಿಲ್ಲ. ಹಿರಿಯರ ಮಾರ್ಗದರ್ಶನದಲ್ಲಿ ಇಂದಿನ ಇಡೀ ದಿನವನ್ನು ಕಳೆಯುವಿರಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಶ್ರಮದ ಅವಶ್ಯಕತೆಯಿದೆ.
ಮಿಥುನ ರಾಶಿ
ಇನ್ನೊಬ್ಬರ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡುವುದನ್ನು ಇಂದೇ ನಿಲ್ಲಿಸಿ. ತಂದೆಯು ಯಾವುದಾದರೂ ಪ್ರಮುಖ ಕಾರ್ಯಕ್ಕಾಗಿ ನಿಮ್ಮ ಸಹಾಯ ಕೋರಬಹುದು. ಸಂಗಾತಿ ಜೊತೆ ಹಣಕಾಸಿನ ವಿಚಾರಕ್ಕೆ ಸಣ್ಣ ಜಗಳವಾಗಲಿದೆ.
ಕರ್ಕಾಟಕ ರಾಶಿ
ಉದ್ಯೋಗದ ಕಾರಣಕ್ಕಾಗಿ ಇಂದು ನೀವು ಬೇರೆ ಊರಿಗೆ ಪ್ರಯಾಣ ಮಾಡಬೇಕಾಗಬಹುದು. ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಅನಿವಾರ್ಯ ಪರಿಸ್ಥಿತಿ ಎದುರಾಗಲಿದೆ. ಶರೀರಕ್ಕೆ ತಕ್ಕ ವಿಶ್ರಾಂತಿ ಹಾಗೂ ಉತ್ತಮ ಆಹಾರ ನೀಡಿ.
ಸಿಂಹ ರಾಶಿ
ಉದ್ಯೋಗದಲ್ಲಿ ನಿಮಗೆ ಬೇಸರ ಮೂಡಿ ಹೊಸ ಬದಲಾವಣೆ ಬೇಕು ಎನಿಸುವುದು. ಸಹೋದ್ಯೋಗಿಗಳ ಸಣ್ಣಪುಟ್ಟ ಕಿರಿಕಿರಿಯನ್ನು ಇಂದು ನೀವು ಸಹಿಸಿಕೊಳ್ಳಬೇಕಾಗುತ್ತದೆ. ಸ್ನೇಹಿತರ ಸಹಕಾರದಿಂದ ಹೊರಗೆ ಪ್ರವಾಸ ಹೋಗುವಿರಿ.
ಕನ್ಯಾ ರಾಶಿ
ದಾಂಪತ್ಯದಲ್ಲಿ ಬರುವ ಸಣ್ಣಪುಟ್ಟ ಕಲಹಗಳು ಸಹಜವೆಂದು ಸುಮ್ಮನಿರಬೇಡಿ. ಹಣದ ಹೂಡಿಕೆಯನ್ನು ಮಾಡುವ ಒಳ್ಳೆಯ ಆಲೋಚನೆ ನಿಮ್ಮಲ್ಲಿ ಮೂಡಲಿದೆ. ನಿಮ್ಮ ಕೆಲವು ಮಾತುಗಳು ಬೇರೆಯವರಿಗೆ ಬೇಸರ ತರಿಸಬಹುದು.
ತುಲಾ ರಾಶಿ
ಬಂಧುಗಳ ಮನೆಗೆ ತೆರಳಿ ಎಲ್ಲರೊಂದಿಗೆ ಖುಷಿಯಿಂದ ಕಾಲ ಕಳೆಯುವಿರಿ. ನೀವು ದಾನವಾಗಿ ಕೊಟ್ಟ ಸಹಾಯವನ್ನು ಎಲ್ಲೂ ಹೇಳಿಕೊಳ್ಳಲು ಹೋಗಬೇಡಿ. ಔಷಧ ವ್ಯಾಪಾರ ಮಾಡುವವರಿಗೆ ಇಂದು ಉತ್ತಮ ಲಾಭ ಸಿಗಲಿದೆ.
ವೃಶ್ಚಿಕ ರಾಶಿ
ಮುಂದೆ ಮಾಡಬೇಕಾದ ಪ್ರಮುಖ ಕಾರ್ಯಗಳ ಬಗ್ಗೆ ಸ್ಪಷ್ಟ ನಿರ್ಧಾರ ಮಾಡಿ ಮುಂದುವರಿಯಿರಿ. ನಿರಂತರ ಕೆಲಸಗಳಿಂದ ನಿಮ್ಮ ದೇಹಕ್ಕೆ ಸ್ವಲ್ಪ ಆಯಾಸವಾಗಬಹುದು. ಪ್ರೀತಿಯಿಂದ ಕೊಟ್ಟ ಉಡುಗೊರೆಯನ್ನು ಸಂತೋಷದಿಂದ ಸ್ವೀಕರಿಸಿ.
ಧನು ರಾಶಿ
ಯಾವುದೇ ಹೊಸ ಹಣಕಾಸಿನ ಒಪ್ಪಂದಗಳನ್ನು ಮಾಡುವಾಗ ಎಚ್ಚರಿಕೆ ವಹಿಸಿ. ಹಣಕಾಸಿನ ವಿಚಾರದಲ್ಲಿ ನೀವು ಸ್ವಲ್ಪ ಹತಾಶೆಯ ಭಾವನೆ ಹೊಂದಿರುವಿರಿ. ಸಾಹಸಮಯವಾದ ಕೆಲಸಗಳಿಗೆ ಇಂದು ಕೈಹಾಕಬೇಡಿ.
ಮಕರ ರಾಶಿ
ನಿಮ್ಮ ಹಠದ ಸ್ವಭಾವಕ್ಕೆ ಎಲ್ಲರೂ ಒಗ್ಗಿಕೊಳ್ಳಬೇಕು ಎಂದೇನಿಲ್ಲ. ಉದ್ಯೋಗವನ್ನು ಅತ್ಯಂತ ಪ್ರಾಮಾಣಿಕತೆಯಿಂದ ಮತ್ತು ನಿಷ್ಠೆಯಿಂದ ನಿರ್ವಹಿಸುವಿರಿ. ವಿದ್ಯಾರ್ಥಿಗಳು ಆಟೋಟಗಳಲ್ಲಿ ಹೆಚ್ಚು ಸಮಯ ಕಳೆಯುವರು.
ಕುಂಭ ರಾಶಿ
ನೀವು ಬಹಳ ಪ್ರಾಮಾಣಿಕ ಎಂದು ತೋರಿಸಲು ಹೋಗಿ ಉದ್ಯೋಗದಲ್ಲಿ ಸಿಲುಕಿಕೊಳ್ಳುವಿರಿ. ಸಮಾರಂಭಗಳಿಗೆ ಮುಖ್ಯ ಅತಿಥಿಯಾಗಿ ಭಾಗವಹಿಸುವ ಅವಕಾಶ ಸಿಗಲಿದೆ. ನಿಮ್ಮ ಕೋಪವನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ.
ಮೀನ ರಾಶಿ (Daily Horoscope)
ಯಾವುದೇ ಉದ್ವೇಗಕ್ಕೆ ಒಳಗಾಗದೇ ಇಂದಿನ ದಿನವನ್ನು ಶಾಂತವಾಗಿ ಕಳೆಯಲು ನಿರ್ಧರಿಸುವಿರಿ. ದಿನವಿಡೀ ಮನಸ್ಸು ಅತ್ಯಂತ ಖುಷಿಯಿಂದ ಕೂಡಿರಲಿದೆ. ಯಂತ್ರೋಪಕರಣಗಳೊಂದಿಗೆ ಕೆಲಸ ಮಾಡುವಾಗ ಎಚ್ಚರವಿರಲಿ.




