☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

Jailer 2: ತಲೈವಾ ಮಾಸ್ ಎಂಟ್ರಿಗೆ ಫಿದಾ; ಮೊದಲ ಭಾಗದಷ್ಟು ಮ್ಯಾಜಿಕ್ ಮಾಡಿತಾ ‘ಜೈಲರ್ 2’?

Jailer 2: Rajinikanth Mass Avatar and Star Cameos Shine in Sequel

Image: remux.exe/Instagram

Jailer 2: ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್ 2’ ಸಿನಿಮಾ ಅದ್ಧೂರಿಯಾಗಿ ತೆರೆಕಂಡಿದ್ದು, ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ತಲೈವಾ ಮಾಸ್ ಸ್ಟೈಲ್, ಶಿವಣ್ಣನ ಖಡಕ್ ಲುಕ್ ಹಾಗೂ ಮೋಹನ್‌ಲಾಲ್ ಖದರ್ ಪ್ರಮುಖ ಆಕರ್ಷಣೆಯಾಗಿವೆ. ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸಿನಿಮಾ ಪ್ರೇಕ್ಷಕರನ್ನು ಯಾವ ರೀತಿ ತಲುಪಿದೆ ಎಂಬ ವಿಮರ್ಶೆ ಇಲ್ಲಿದೆ.

ಮೊದಲಾರ್ಧದಲ್ಲಿ ಮಾಸ್ ಎಲಿವೇಷನ್ ಅಬ್ಬರ

ಚಿತ್ರದ ಆರಂಭದಲ್ಲೇ ರಜನಿಕಾಂತ್ ಮಾಸ್ ಎಂಟ್ರಿ ಹಾಗೂ ಅನಿರುದ್ಧ್ ಹಿನ್ನೆಲೆ ಸಂಗೀತ ಥಿಯೇಟರ್‌ನಲ್ಲಿ ರೋಮಾಂಚನ ಮೂಡಿಸುತ್ತದೆ. ಮೂರ್ತಿ ಪಾತ್ರದ ಕಾಮಿಡಿ ದೃಶ್ಯಗಳು ಪ್ರೇಕ್ಷಕರನ್ನು ನಗಿಸುವಲ್ಲಿ ಯಶಸ್ವಿಯಾಗಿವೆ. ಶಿವರಾಜ್‌ಕುಮಾರ್, ಮೋಹನ್‌ಲಾಲ್ ಹಾಗೂ ಜಾಕಿ ಶ್ರಾಫ್ ಅವರ ಎಂಟ್ರಿ ಇಂಟರ್ವಲ್ ಬ್ಲಾಕ್‌ಗೆ ವಿಶೇಷ ಮೆರುಗು ನೀಡಿದೆ.

ದ್ವಿತೀಯಾರ್ಧದಲ್ಲಿ ಭಾವನೆ ಮತ್ತು ಸೂಪರ್ ಕ್ಯಾಮಿಯೋಗಳು

ಎರಡನೇ ಭಾಗದ ಆರಂಭ ಕೊಂಚ ನಿಧಾನವಾಗಿದ್ದರೂ, ರಜನಿಕಾಂತ್ ಅವರ ಜೈಲರ್ ರೂಪಾಂತರ ಮತ್ತೆ ಜಿಂಗ್ ತರುತ್ತದೆ. ಚಿತ್ರದ ಬಹುನಿರೀಕ್ಷಿತ ಅತಿಥಿ ಪಾತ್ರಗಳು ತೆರೆಯ ಮೇಲೆ ಕಾಣಿಸಿಕೊಂಡಾಗ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟುತ್ತದೆ. ಆದರೆ ಕ್ಲೈಮ್ಯಾಕ್ಸ್ ದೃಶ್ಯಗಳು ಕೊಂಚ ಸಾಧಾರಣವಾಗಿದ್ದು, ಇನ್ನಷ್ಟು ಬಲವಾದ ಅಂತ್ಯವಿರಬೇಕಿತ್ತು ಎಂಬ ಮಾತು ಕೇಳಿಬಂದಿದೆ.

ರಜನಿಕಾಂತ್ ಸ್ಕ್ರೀನ್ ಪ್ರೆಸೆನ್ಸ್ ಮತ್ತು ಅನಿರುದ್ಧ್ ಸಂಗೀತ

ತಲೈವಾ ಅವರ ಸ್ಟೈಲ್, ಸ್ಲೋ ಮೋಷನ್ ಶಾಟ್‌ಗಳು ಮತ್ತು ಮಾಸ್ ಎಲಿವೇಷನ್‌ಗಳು ಅಭಿಮಾನಿಗಳಿಗೆ ಹಬ್ಬದ ಅನುಭವ ನೀಡುತ್ತವೆ. ಅನಿರುದ್ಧ್ ಅವರ BGM ಹಲವು ದೃಶ್ಯಗಳಿಗೆ ಹೈಪ್ ನೀಡಿದರೂ, ಮೊದಲ ಭಾಗದ ಹೋಲಿಕೆಯಲ್ಲಿ ಹೊಸತನ ಕೊಂಚ ಕಡಿಮೆಯಿದೆ. ಕಥೆಯಲ್ಲಿ ಕೆಲವು ತಿರುವುಗಳು ಊಹಿಸುವಂತಿದ್ದು, ಮೊದಲ ಭಾಗದ ಸೂತ್ರವನ್ನೇ ಮುಂದುವರಿಸಿದಂತಿದೆ.

Jailer 2: ಅಂತಿಮ ತೀರ್ಪು: ರಜನಿ ಫ್ಯಾನ್ಸ್‌ಗೆ ಪಕ್ಕಾ ಪೈಸಾ ವಸೂಲ್

‘ಜೈಲರ್ 2’ ಒಮ್ಮೆ ನೋಡಬಹುದಾದ ಪಕ್ಕಾ ಮಾಸ್ ಮನರಂಜನಾ ಸಿನಿಮಾವಾಗಿದೆ. ರಜನಿಕಾಂತ್ ಅವರ ಮ್ಯಾನರಿಸಂ ಹಾಗೂ ಸ್ಟಾರ್‌ಗಳ ಖದರ್ ಚಿತ್ರದ ಪ್ರಮುಖ ಬಲವಾಗಿದೆ. ಮೊದಲ ಭಾಗದಷ್ಟು ಮ್ಯಾಜಿಕ್ ಮಾಡದಿದ್ದರೂ, ತಲೈವಾ ಅಭಿಮಾನಿಗಳಿಗೆ ಈ ಸಿನಿಮಾ ಸಂಭ್ರಮಿಸಲು ಬೇಕಾದಷ್ಟು ವಿಚಾರಗಳನ್ನು ನೀಡಿದೆ.