☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

Daily Horoscope: ಅನಿರೀಕ್ಷಿತ ನೆರವು, ಸಂಶಯ; ಇಂದು ನಿಮ್ಮ ರಾಶಿ ಭವಿಷ್ಯ

Daily Horoscope: October 16 Zodiac Predictions And Astrological Updates

Image: AI Generated

Daily Horoscope: ಅಕ್ಟೋಬರ್ 16ರ ಇಂದಿನ ರಾಶಿ ಭವಿಷ್ಯದ ಪ್ರಕಾರ, ಕೆಲ ರಾಶಿಯವರಿಗೆ ಅನಿರೀಕ್ಷಿತ ನೆರವು ದೊರೆಯಲಿದ್ದು, ಇನ್ನು ಕೆಲವರಿಗೆ ಮನಸ್ಸಿನಲ್ಲಿ ಸಂಶಯ ಹಾಗೂ ಆತಂಕ ಕಾಡಲಿದೆ. ಇಂದಿನ ದಿನದಲ್ಲಿ ಪ್ರತಿಯೊಂದು ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳುವುದು ಉತ್ತಮ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಶರತ್ ಋತು, ಆಶ್ವಯುಜ ಮಾಸದ ಶುಕ್ಲ ಪಕ್ಷದ ಷಷ್ಠಿ ತಿಥಿಯ ಶುಕ್ರವಾರದ ದಿನ ಇದಾಗಿದೆ. ಇಂದು ದುಂದುವೆಚ್ಚ, ಶತ್ರುಕಾಟ ಹಾಗೂ ದೇವಾಲಯ ಭೇಟಿಯಂತಹ ಮಿಶ್ರ ಫಲಗಳು ಕಂಡುಬರಲಿವೆ.

ಶರನ್ನವರಾತ್ರದ ಆರನೇ ದಿನವಾದ ಇಂದು ಜಗನ್ಮಾತೆಯ ಸ್ವರೂಪಳಾದ ಕಾತ್ಯಾಯನೀ ದೇವಿಯ ಆರಾಧನೆ ಎಲ್ಲರಿಗೂ ಲಭಿಸಲಿ. ತಾಯಿಯು ಸಕಲರ ಸಂಕಟಗಳನ್ನು ಸಂಹರಿಸಿ, ಎಲ್ಲರ ಬಾಳಿನಲ್ಲಿ ಶಾಂತಿ ನೆಮ್ಮದಿ ಕರುಣಿಸಲಿ ಎಂದು ಪ್ರಾರ್ಥಿಸೋಣ.

ಮೇಷ ರಾಶಿ

ಸಂಗಾತಿಯ ಅನಗತ್ಯ ಖರ್ಚಿಗೆ ಕಡಿವಾಣ ಹಾಕಿ. ಈ ವಿಚಾರವಾಗಿ ಸಣ್ಣ ವಾಗ್ವಾದ ನಡೆಯಬಹುದು. ಮಕ್ಕಳ ಬಗ್ಗೆ ನಿರ್ಲಕ್ಷ್ಯ ಬೇಡ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ.

ವೃಷಭ ರಾಶಿ

ಕೆಲವು ಕೆಲಸಗಳಲ್ಲಿ ಆಲಸ್ಯ ತೋರುವಿರಿ. ನಕಾರಾತ್ಮಕ ಆಲೋಚನೆಗಳನ್ನು ಆದಷ್ಟು ಕಡಿಮೆ ಮಾಡಿ. ಅಪವಾದದ ಭಯ ನಿಮ್ಮನ್ನು ಕಾಡಬಹುದು. ಹೊಸ ವಿಷಯಗಳನ್ನು ಕಲಿಯಲು ಪ್ರಯತ್ನಿಸಿ.

ಮಿಥುನ ರಾಶಿ

ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ, ಅಪವಾದ ಬರಬಹುದು. ದಾಂಪತ್ಯದಲ್ಲಿ ಅನಗತ್ಯ ವಾಗ್ವಾದಗಳು ನಡೆಯಬಹುದು. ಯಾರ ಮೇಲೋ ಇರುವ ಸಿಟ್ಟನ್ನು ಬೇರೆಯವರ ಮೇಲೆ ತೋರಿಸಬೇಡಿ.

ಕರ್ಕಾಟಕ ರಾಶಿ

ಸರಕಾರಿ ದಾಖಲೆಗಳನ್ನು ಭದ್ರವಾಗಿ ಕಾಪಾಡಿಕೊಳ್ಳಿ. ಹಣಕಾಸಿನ ವಿಚಾರವಾಗಿ ಸಹೋದರರೊಂದಿಗೆ ಚರ್ಚೆ ನಡೆಯಬಹುದು. ಸಾಹಿತ್ಯಾಸಕ್ತರಿಗೆ ತಮ್ಮ ಕ್ಷೇತ್ರದಲ್ಲಿ ಉತ್ತಮ ಅವಕಾಶ ಸಿಗಲಿದೆ.

ಸಿಂಹ ರಾಶಿ

ಕೆಲವು ಸಂದರ್ಭಗಳಲ್ಲಿ ಗೊತ್ತಿದ್ದೂ ಗೊತ್ತಿಲ್ಲದಂತೆ ಇರುವುದು ಒಳ್ಳೆಯದು. ಹಣಕಾಸಿನ ವಿಚಾರದಲ್ಲಿ ಗೊಂದಲವಿರಲಿದೆ. ಆಪ್ತರ ಜೊತೆಗಿನ ಒಡನಾಟದಿಂದ ಮನಸ್ಸು ಹಗುರವಾಗುವುದು.

ಕನ್ಯಾ ರಾಶಿ

ಮೇಲಧಿಕಾರಿಗಳ ಜೊತೆ ಸೂಕ್ತ ಸಮಯದಲ್ಲಿ ನಿಮ್ಮ ವಿಚಾರ ಹಂಚಿಕೊಳ್ಳಿ. ವ್ಯಾಪಾರದಲ್ಲಿ ಆರ್ಥಿಕ ಬಲ ಹಾಗೂ ಪ್ರಶಂಸೆ ಸಿಗಲಿದೆ. ಆಭರಣ ಖರೀದಿಸುವ ಯೋಗವಿದೆ. ವಿವಾಹ ಮಾತುಕತೆಗಳು ಖುಷಿ ತರಲಿವೆ.

ತುಲಾ ರಾಶಿ

ಬಂಧುಗಳು ಹಾಗೂ ಹಿರಿಯರಿಂದ ಅಲಕ್ಷ್ಯಕ್ಕೆ ಒಳಗಾಗುವಿರಿ. ನಿಮ್ಮ ಮಾತಿನ ಹೊಲಸು ಮಾತುಗಳಿಂದ ಕಲಹಗಳು ಉಂಟಾಗಬಹುದು. ದಾಂಪತ್ಯದಲ್ಲಿ ಸುಖ-ಶಾಂತಿ ನೆಲೆಸಲಿದೆ. ಕಾರ್ಯಗಳಲ್ಲಿ ಎಚ್ಚರಿಕೆ ವಹಿಸಿ.

ವೃಶ್ಚಿಕ ರಾಶಿ

ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ. ಆರ್ಥಿಕತೆಯ ಮೇಲಿನ ಮೋಹ ತಗ್ಗಲಿದೆ. ಅಪರಿಚಿತ ವ್ಯಕ್ತಿಯಿಂದ ತೊಂದರೆ ಎದುರಾಗಬಹುದು. ಉದ್ಯೋಗಕ್ಕಾಗಿ ಮಾಡಿದ ಪ್ರಯತ್ನಗಳು ಫಲ ನೀಡಲಿವೆ.

ಧನು ರಾಶಿ

ದೂರದ ಬಂಧುಗಳ ಭೇಟಿಯಿಂದ ಸಂತೋಷವಾಗಲಿದೆ. ಆತುರದಿಂದ ಯಾವುದೇ ವ್ಯವಹಾರಗಳನ್ನು ಮಾಡಬೇಡಿ. ನಿಮ್ಮ ಹಾರಿಕೆಯ ಮಾತುಗಳು ಇತರರಿಗೆ ನಂಬಿಕೆ ಕಳೆದುಕೊಳ್ಳುವಂತೆ ಮಾಡಬಹುದು.

ಮಕರ ರಾಶಿ

ನಿಮ್ಮ ಮಾತಿನ ಹಾಸ್ಯವು ಕೆಲವರಿಗೆ ನೋವುಂಟುಮಾಡಬಹುದು. ವ್ಯಾಪಾರಸ್ಥರಿಗೆ ನಿರೀಕ್ಷಿತ ಲಾಭ ಸಿಗಲಿದೆ. ಹಿರಿಯರ ಆಶೀರ್ವಾದ ದೊರೆಯಲಿದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಕುಂಭ ರಾಶಿ

ಕ್ಷೇತ್ರದಲ್ಲಿ ನಿರಂತರವಾಗಿ ಶ್ರಮ ವಹಿಸಿ ಕೆಲಸ ಮಾಡುವಿರಿ. ಸ್ವತಂತ್ರವಾಗಿರಲು ಹೆಚ್ಚು ಬಯಸುವಿರಿ. ವೃತ್ತಿಯಲ್ಲಿ ಬದಲಾವಣೆ ಬಯಸುವವರಿಗೆ ಅನುಕೂಲಕರ ದಿನವಾಗಿದೆ.

ಮೀನ ರಾಶಿ (Daily Horoscope)

ಒಂದೇ ಕೆಲಸ ಮಾಡಲು ಹೆಚ್ಚು ಸಮಯ ಹಿಡಿಯಬಹುದು. ಒತ್ತಡ ನಿವಾರಣೆಗೆ ಧ್ಯಾನ ಹಾಗೂ ಯೋಗ ಮಾಡಿ. ವಿವಿಧ ಮೂಲಗಳಿಂದ ಧನಾಗಮನವಾಗಿ ಆರ್ಥಿಕತೆ ಬಲಗೊಳ್ಳಲಿದೆ.