☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

Daily Horoscope: ಇಂದು ಈ ರಾಶಿಯವರಿಗೆ ಆರ್ಥಿಕ ವ್ಯವಹಾರ ಹಾಗೂ ಸವಾಲುಗಳ ದಿನ

Daily Horoscope: October 13 Zodiac Predictions And Astrological Insights

Daily Horoscope: ಅಕ್ಟೋಬರ್ 13ರ ಇಂದಿನ ರಾಶಿ ಭವಿಷ್ಯದ ಪ್ರಕಾರ, ಕೆಲವು ರಾಶಿಗಳಾದ ಧನು, ವೃಷಭ ಮತ್ತು ಮಿಥುನ ರಾಶಿಯವರು ಆರ್ಥಿಕ ವ್ಯವಹಾರಗಳು ಹಾಗೂ ವೈಯಕ್ತಿಕ ಸವಾಲುಗಳನ್ನು ಎದುರಿಸಬೇಕಾಗಬಹುದು. ಮಕರ ರಾಶಿಗೆ ಉತ್ತಮ ಲಾಭವಿರಲಿದ್ದು, ಸಿಂಹ ರಾಶಿಗೆ ಸಮಾಜದಲ್ಲಿ ವಿಶೇಷ ಗೌರವ ಸಿಗಲಿದೆ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಶರತ್ ಋತು, ಆಶ್ವಯುಜ ಮಾಸದ ಶುಕ್ಲ ಪಕ್ಷದ ತೃತೀಯಾ ತಿಥಿಯ ಮಂಗಳವಾರದ ದಿನ ಇದಾಗಿದೆ. ಇಂದು ಪ್ರೀತಿ, ವೃತ್ತಿ ಹಾಗೂ ಕುಟುಂಬದ ಕುರಿತಾದ ನಿಖರ ಫಲಿತಾಂಶಗಳು ಹೇಗಿವೆ ಎಂಬುದನ್ನು ಸಂಪೂರ್ಣವಾಗಿ ತಿಳಿಯಿರಿ.

ಶರನ್ನವರಾತ್ರದ ಎರಡನೇ ದಿನವಾದ ಇಂದು ಜಗನ್ಮಾತೆಯ ಆರಾಧನೆಯು ಎಲ್ಲರಿಗೂ ಶುಭ ತರಲಿ. ಚಂದ್ರಘಂಟಾ ದೇವಿಯು ಸಕಲರ ಸಂಕಟವನ್ನೂ ಸಂಹರಿಸಿ, ಚಂದ್ರನಂತೆ ಎಲ್ಲರ ಜೀವನದಲ್ಲೂ ತಂಪನ್ನು ಹಾಗೂ ನೆಮ್ಮದಿಯನ್ನು ಕರುಣಿಸಲಿ ಎಂದು ಹಾರೈಸೋಣ.

ಮೇಷ ರಾಶಿ

ನಿಮಗೆ ಸಹಾಯ ಮಾಡುವ ಮನೋಭಾವ ಇಂದು ಅಧಿಕವಾಗಲಿದೆ. ಸಮಯಕ್ಕೆ ಸರಿಯಾಗಿ ಕೆಲಸ ಮಾಡದ ಕಾರಣ ಮನೆಯಲ್ಲಿ ನಿಂದನೆ ಎದುರಾಗಬಹುದು. ವಾಹನ ಚಾಲನೆಯಲ್ಲಿ ಎಚ್ಚರವಿರಲಿ. ಮೃದು ಮಾತಿನಿಂದ ಹೆಚ್ಚು ಪ್ರಯೋಜನ ಪಡೆಯಬಹುದು.

ವೃಷಭ ರಾಶಿ

ಬಂಧುಗಳ ನಾನಾ ಪ್ರಶ್ನೆಗಳಿಗೆ ಉತ್ತರಿಸಿ ನಿಮಗೆ ಬೇಸರವಾಗುವುದು. ಎಷ್ಟೇ ಪ್ರಯತ್ನಿಸಿದರೂ ಕೆಲಸಗಳಲ್ಲಿ ಅಡೆತಡೆಗಳು ಎದುರಾಗಬಹುದು. ಮನೆಯ ಕೆಲಸಗಳಲ್ಲಿ ನಿರಾಸಕ್ತಿ ಮೂಡಲಿದೆ. ಬಂದಷ್ಟು ಆದಾಯವನ್ನು ಪ್ರೀತಿಯಿಂದ ಸ್ವೀಕರಿಸಿ.

ಮಿಥುನ ರಾಶಿ

ದಾಂಪತ್ಯದಲ್ಲಿ ಸಾಮರಸ್ಯ ಮೂಡಿಸಲು ಕಷ್ಟವಾಗಬಹುದು. ಸ್ವಪ್ರತಿಷ್ಠೆಯನ್ನು ಸಂಪೂರ್ಣವಾಗಿ ಬಿಡುವುದು ಉತ್ತಮ. ವ್ಯಾಪಾರದಲ್ಲಿ ಯಾರ ಹಸ್ತಕ್ಷೇಪವನ್ನೂ ಸಹಿಸಲು ಆಗದು. ತಂದೆಯ ವಿಚಾರದಲ್ಲಿ ಮನಸ್ಸಿಗೆ ಬೇಸರವಾಗುವ ಸಾಧ್ಯತೆಯಿದೆ.

ಕರ್ಕಾಟಕ ರಾಶಿ

ಮಕ್ಕಳಿಂದ ನಿಮಗೆ ಉತ್ತಮ ಆರ್ಥಿಕ ನೆರವು ಸಿಗಲಿದೆ. ನಿಮ್ಮ ಉತ್ಸಾಹದ ಕೆಲಸಗಳು ಎಲ್ಲರಿಗೂ ಮಾದರಿಯಾಗುತ್ತವೆ. ಆತ್ಮಾಭಿಮಾನವೇ ಕೆಲವು ಕೆಲಸಗಳಿಗೆ ಅಡ್ಡಿಯಾಗಬಹುದು. ಸಹೋದರಿಯೊಂದಿಗೆ ನಿಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವಿರಿ.

ಸಿಂಹ ರಾಶಿ

ನಿದ್ರೆ ಸರಿಯಾಗಿ ಆಗದೆ ಎಲ್ಲ ಕಾರ್ಯಗಳೂ ಕಿರಿಕಿರಿ ಎನಿಸಬಹುದು. ಎಲ್ಲರ ಮೇಲೂ ಕೋಪಗೊಳ್ಳುವ ಸಾಧ್ಯತೆಯಿದೆ. ರಾಜಕಾರಣಿಗಳು ಹಾಗೂ ಸಮಾಜದ ಗಣ್ಯರು ಗೌರವವನ್ನು ಪಡೆದು ಸಂತೋಷಪಡುವಿರಿ.

ಕನ್ಯಾ ರಾಶಿ

ಸ್ಥಿರಾಸ್ತಿ ಮಾರಾಟದ ವಿಚಾರದಲ್ಲಿ ಏಕಮುಖವಾದ ನಿರ್ಧಾರ ಬೇಡ. ಶಿಕ್ಷಣ ಕ್ಷೇತ್ರದಲ್ಲಿ ನೀವು ಸಾಧನೆ ಮಾಡಲು ಇದು ಸರಿಯಾದ ಸಮಯ. ನಿಮ್ಮ ಮೇಲಿನ ಅಪವಾದವನ್ನು ಜಾಣ್ಮೆಯಿಂದ ತಪ್ಪಿಸಿಕೊಳ್ಳುವಿರಿ.

ತುಲಾ ರಾಶಿ

ಕಳೆದು ಹೋದ ವಸ್ತುಗಳಿಗಾಗಿ ಹುಡುಕಾಟ ನಡೆಸಬೇಕಾಗಬಹುದು. ಮನಸ್ಸಿಗೆ ಹಿಡಿಸದ ಕೆಲಸಗಳನ್ನು ಮಾಡಲು ಹಿಂಜರಿಯುವಿರಿ. ಕುಟುಂಬದ ಜೊತೆಗೂಡಿ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಉತ್ತಮ ಯೋಗವಿದೆ.

ವೃಶ್ಚಿಕ ರಾಶಿ

ಹಣವನ್ನು ಹೊಂದಿಸಲು ನಿಮಗೆ ತುಸು ಕಷ್ಟವಾಗಬಹುದು. ಸ್ಥಿರಾಸ್ತಿಗಳಿಂದ ನಿಮಗೆ ಉತ್ತಮ ಲಾಭ ಸಿಗಲಿದೆ. ಇಂದಿನ ದೈಹಿಕ ಆಯಾಸದಿಂದ ವಿಶ್ರಾಂತಿ ಪಡೆಯುವುದು ಒಳ್ಳೆಯದು. ಮನೆಯಲ್ಲಿ ನಿಮ್ಮ ಸಹಕಾರ ಪ್ರಶಂಸೆಗೆ ಪಾತ್ರವಾಗಲಿದೆ.

ಧನು ರಾಶಿ

ತಪ್ಪು ತಿಳಿವಳಿಕೆಯಿಂದ ಸಂಬಂಧಗಳಲ್ಲಿ ದೂರಾಗುವ ಸಂಭವವಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಮನಸ್ಸಿಡುವುದು ಕಷ್ಟವಾಗಬಹುದು. ಅಮೂಲ್ಯ ವಸ್ತುಗಳನ್ನು ಕಳೆದುಕೊಂಡು ಸಂಕಟಪಡುವಿರಿ. ಹಿರಿಯರ ಬಗ್ಗೆ ಗೌರವವಿರಲಿ.

ಮಕರ ರಾಶಿ

ಕಲಾವಿದರು ತಮ್ಮ ಇಂದಿನ ದಿನವನ್ನು ಸಂತೋಷದಿಂದ ಕಳೆಯುವರು. ಆರ್ಥಿಕ ಲಾಭವು ನಿಮ್ಮ ಕೈ ಸೇರಲಿದೆ. ವ್ಯಾಪಾರಕ್ಕೆ ಸಂಬಂಧಿಸಿದಂತೆ ಕೆಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ.

ಕುಂಭ ರಾಶಿ

ಮಿತ್ರರ ಜೊತೆ ಪಾಲುದಾರಿಕೆಯಲ್ಲಿ ಒಪ್ಪಂದ ಮಾಡಿಕೊಳ್ಳುವಿರಿ. ಸಂಬಂಧಗಳಲ್ಲಿ ಹಣದ ವ್ಯವಹಾರ ಮಾಡದಿರುವುದು ಒಳ್ಳೆಯದು. ಶತ್ರುಗಳು ನಿಮ್ಮಿಂದ ಅಪ್ರತ್ಯಕ್ಷವಾಗಿ ಪ್ರಯೋಜನ ಪಡೆಯಬಹುದು.

ಮೀನ ರಾಶಿ (Daily Horoscope)

ಹೊಸ ಜವಾಬ್ದಾರಿಗಳನ್ನು ನಿರ್ವಹಿಸುವ ಉತ್ಸಾಹವಿರುತ್ತದೆ. ವ್ಯವಹಾರದ ವಿಚಾರದಲ್ಲಿ ಪೂರ್ವಾಪರ ಯೋಚಿಸಿ ಮುಂದುವರಿಯಿರಿ. ಆಪ್ತರನ್ನು ದೂರ ಮಾಡಿಕೊಳ್ಳುವ ಪರಿಸ್ಥಿತಿ ಬರಬಹುದು. ಭಕ್ತಿಗಾಗಿ ಹೆಚ್ಚಿನ ಸಮಯ ಮೀಸಲಿಡುವಿರಿ.