BBK 13: ‘ಬಿಗ್‌ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಮಾಡರ್ನ್ ಮಹಾ ಕವಿ ಖ್ಯಾತಿಯ ಮಂಜ ಅವರನ್ನು ಬಿಗ್‌ಬಾಸ್ ಮನೆಯಿಂದ ನೇರವಾಗಿ ಹೊರಗೆ ಕಳುಹಿಸಲಾಗಿದೆ. ಪದೇ ಪದೇ ಎಚ್ಚರಿಕೆ ನೀಡಿದ್ದರೂ ಸ್ಪರ್ಧಿಗಳನ್ನು ಅವಾಚ್ಯವಾಗಿ ಬೈದಿದ್ದಕ್ಕೆ ಹಾಗೂ ಚಾರಿತ್ರ್ಯ ಹರಣ ಮಾಡಿದ್ದಕ್ಕೆ ಬಿಗ್‌ಬಾಸ್ ಈ ಕಠಿಣ ಕ್ರಮ ಕೈಗೊಂಡಿದ್ದಾರೆ. ಸಾಮಾನ್ಯವಾಗಿ ಭಾನುವಾರದಂದು ಎಪಿಸೋಡಿನ ಕೊನೆಯಲ್ಲಿ ಎವಿಕ್ಷನ್ ಘೋಷಣೆ ಆಗುತ್ತದೆ. ಆದರೆ ಮಂಜನನ್ನು ಶನಿವಾರದ ಎಪಿಸೋಡ್ ಮುಗಿಯುತ್ತಿದ್ದಂತೆ ನೇರವಾಗಿ ಆಚೆ ಹಾಕಲಾಗಿದೆ.
ವೀಕೆಂಡ್ ಪಂಚಾಯಿತಿಯಲ್ಲಿ ಸುದೀಪ್ ಆರಂಭಿಸಿದ ಗಂಭೀರ ಮಾತುಗಳು
ಮಂಜ ಹೊರಗೆ ಹೋದ ಬಳಿಕ ಸುದೀಪ್ ಅವರ ವೀಕೆಂಡ್ ಪಂಚಾಯಿತಿ ಶುರುವಾಯಿತು. ಶನಿವಾರದಷ್ಟೇ ಗಂಭೀರವಾಗಿ ಭಾನುವಾರದ ಎಪಿಸೋಡ್ ಸಹ ಆರಂಭವಾಯಿತು. ಶಿಸ್ತಿಗೆ ಹೆಸರಾದ ಸುದೀಪ್ ಅವರು ಆರಂಭದಲ್ಲೇ ಮಂಜನನ್ನು ಬಿಗ್‌ಬಾಸ್ ಹೊರಗೆ ಕಳುಹಿಸಿದ್ದರ ಬಗ್ಗೆ ಮಾತನಾಡಿದರು. ‘ಮಂಜ ಒಬ್ಬನನ್ನೇ ಮನೆಯಿಂದ ಹೊರಗೆ ಕಳಿಸಿದ್ದು ನನಗೆ ಇಷ್ಟವಾಗಲಿಲ್ಲ’ ಎಂದು ಸುದೀಪ್ ನೇರವಾಗಿ ತಮ್ಮ ಅಸಮಾಧಾನ ಹೊರಹಾಕಿದರು.
ನನಗೆ ಅಧಿಕಾರವಿದ್ದರೆ ಇನ್ನು ಕೆಲವರನ್ನು ಹೊರಗೆ ಕಳುಹಿಸುತ್ತಿದ್ದೆ
ಬಿಗ್‌ಬಾಸ್ ತನ್ನದೇ ಆದ ನಿಯಮಗಳ ಪ್ರಕಾರ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ಸುದೀಪ್ ಸ್ಪಷ್ಟಪಡಿಸಿದರು. ಆದರೆ ಮಂಜನ ಜೊತೆಗೆ ಇನ್ನೂ ಇಬ್ಬರು ಮೂವರು ಹೊರಗೆ ಹೋಗಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟರು. ‘ಒಂದು ವೇಳೆ ಈ ವೇದಿಕೆಯೇ ನನ್ನ ನ್ಯಾಯಾಲಯವಾಗಿದ್ದರೆ ಮಂಜನ ಜೊತೆಗೆ ಇನ್ನೂ ಇಬ್ಬರನ್ನು ನಾನು ಹೊರಗೆ ಕಳುಹಿಸುತ್ತಿದ್ದೆ’ ಎಂದರು.
ಇದನ್ನು ಓದಿ: BBK 13: ನಾನು ಕಂಟೆಂಟ್ ಗೋಸ್ಕರ ಅತ್ತಿಲ್ಲ; ಬಿಗ್‌ಬಾಸ್ ವೇದಿಕೆಯಲ್ಲಿ ಸ್ಪಷ್ಟನೆ ನೀಡಿದ ಕಿಚ್ಚ ಸುದೀಪ್
ನನ್ನ ಕೈಯಲ್ಲಿ ಏನೂ ಇಲ್ಲ, ಬಿಗ್‌ಬಾಸ್ ನಿರ್ಣಯವೇ ಅಂತಿಮ
‘ನನ್ನ ಕೈಯಲ್ಲಿ ಏನೂ ಇಲ್ಲ, ಇದು ಬಿಗ್‌ಬಾಸ್ ನಿರ್ಣಯ’ ಎಂದು ಸುದೀಪ್ ಹೇಳಿದರು. ‘ನೀವುಂಟು, ಬಿಗ್‌ಬಾಸ್ ಉಂಟು, ಅವರ ನಿಯಮಗಳುಂಟು’ ಎಂದು ಸ್ಪಷ್ಟಪಡಿಸಿದರು. ಬಿಗ್‌ಬಾಸ್ ನೀಡಿದ ಹೆಸರನ್ನು ಘೋಷಿಸಲು ಹಾಗೂ ಎಚ್ಚರಿಸಲು ಮಾತ್ರ ತಾನು ಇಲ್ಲಿಗೆ ಬರುವುದಾಗಿ ತಿಳಿಸಿದರು.
BBK 13: ತಪ್ಪು ಮಾಡಿದ್ದು ಮಂಜ ಮಾತ್ರ ಅಲ್ಲ ಎಂದ ಕಿಚ್ಚ ಸುದೀಪ್
ತಮ್ಮ ಅಭಿಪ್ರಾಯಗಳಿಗೆ ಇಲ್ಲಿ ಬೆಲೆ ಇಲ್ಲ ಎಂದು ಸುದೀಪ್ ಪುನರುಚ್ಚರಿಸಿದರು. ಆಟದ ಮೇಲೆ ತಾನು ಪ್ರಭಾವ ಬೀರುತ್ತೀನಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳುವವರಿಗೆ ಅವರು ತಿರುಗೇಟು ನೀಡಿದರು. ‘ಮಂಜ ತಪ್ಪು ಮಾಡಿದ್ದ ನಿಜ, ಆದರೆ ತಪ್ಪು ಮಾಡಿದ್ದು ಆತ ಮಾತ್ರ ಆಗಿರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.




