BBK 13: ಬಿಗ್‌ಬಾಸ್ ರಿಯಾಲಿಟಿ ಶೋನ ವಾರದ ಪಂಚಾಯ್ತಿಯಲ್ಲಿ ನಿರೂಪಕ ಕಿಚ್ಚ ಸುದೀಪ್ ಅವರು ಭಾವುಕರಾಗಿ ಕಣ್ಣೀರಿಟ್ಟಿದ್ದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಭಾನುವಾರದ ಸಂಚಿಕೆಯಲ್ಲಿ ಸ್ಪಷ್ಟನೆ ನೀಡಿರುವ ಸುದೀಪ್, ತಾವು ಯಾವುದೇ ಕಾರಣಕ್ಕೂ ಕಂಟೆಂಟ್ ಗೋಸ್ಕರ ಅತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಾಯಿಯ ನೆನಪಾಗಿ ತಾವಾಗಿ ಅತ್ತಿರುವುದಾಗಿ ತಿಳಿಸಿರುವ ಅವರ ಈ ಭಾವನಾತ್ಮಕ ಮಾತುಗಳು ವೀಕ್ಷಕರ ಹಾಗೂ ಸ್ಪರ್ಧಿಗಳ ಕಣ್ಣಲ್ಲಿ ನೀರು ತರಿಸಿವೆ.
ಸ್ಪರ್ಧಿ ತಾಂಡವ್ ರಾಮ್ ಪ್ರಶ್ನೆಗೆ ಸುದೀಪ್ ನೀಡಿದ ಉತ್ತರವೇನು?
ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಶನಿವಾರದ ಸಂಚಿಕೆಯಲ್ಲಿ ಕಣ್ಣೀರಿಟ್ಟಿದ್ದು ಎಲ್ಲರಿಗೂ ಆಘಾತ ತಂದಿತ್ತು. ಭಾನುವಾರದ ಸಂಚಿಕೆಯಲ್ಲಿ ಸ್ಪರ್ಧಿ ತಾಂಡವ್ ರಾಮ್ ಈ ವಿಷಯವನ್ನು ಪ್ರಸ್ತಾಪಿಸಿ ಮಾತನಾಡಿದರು. ‘ನಿಮ್ಮ ಕಣ್ಣಲ್ಲಿ ನೀರು ಹಾಕಿಸಿದ್ದಕ್ಕೆ ನಮಗೆ ತುಂಬಾ ಬೇಸರವಾಗುತ್ತಿದೆ’ ಎಂದು ತಾಂಡವ್ ತಮ್ಮ ಅಳಲನ್ನು ತೋಡಿಕೊಂಡರು.
ಕಂಟೆಂಟ್ ಗೋಸ್ಕರ ಅತ್ತಿಲ್ಲ ಎಂದ ಕಿಚ್ಚ ಸುದೀಪ್ ಮಾತುಗಳು
ತಾಂಡವ್ ಅವರ ಮಾತಿಗೆ ಉತ್ತರಿಸಿದ ಕಿಚ್ಚ ಸುದೀಪ್ ಅಚ್ಚರಿಯ ವಿಚಾರವೊಂದನ್ನು ಬಿಚ್ಚಿಟ್ಟಿದ್ದಾರೆ. ‘ನಾನು ಕಂಟೆಂಟ್ಗೋಸ್ಕರ ಅತ್ತಿದ್ದು ಅಲ್ಲ, ಅಳಬೇಕು ಅಂತ ಆಟಕ್ಕು ಅತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು. ಸುದೀಪ್ ಅವರ ಈ ನೇರ ಮಾತನ್ನು ಕೇಳಿ ಮನೆಯಲ್ಲಿದ್ದ ಎಲ್ಲಾ ಸ್ಪರ್ಧಿಗಳು ಒಮ್ಮೆ ಶಾಕ್ ಆದರು.
ಇದನ್ನು ಓದಿ: BBK 13: ಮತ್ತೆರಡು ವೈಲ್ಡ್ ಕಾರ್ಡ್ ಎಂಟ್ರಿ ಫಿಕ್ಸ್? ಮಂಜ ಔಟ್..ಹಳ್ಳಿ ಹುಡುಗಿ ಕುಮಾರಿ ಇನ್, ಲಕ್ಷ್ಮಿ ಯಾರು?
ತಾಯಿಯ ನೆನಪು ಮತ್ತು ಅಗಲಿಕೆಯ ಅಸಲಿ ನೋವು
ತಕ್ಷಣವೇ ಕಣ್ಣೀರಿನ ಅಸಲಿ ಕಾರಣವನ್ನು ವಿವರಿಸಿ ಸುದೀಪ್ ಮಾತನಾಡಿದರು. ‘ನಾನು ಅತ್ತಿದ್ದು ತಾಯಿ ನೆನಪಾಗಿ’ ಎಂದು ಹೇಳಿ ಮತ್ತೊಮ್ಮೆ ಭಾವುಕರಾದರು. ‘ಎಲ್ಲರೂ ಒಂದು ದಿನ ತಮ್ಮ ತಾಯಿಯನ್ನು ಕಳೆದುಕೊಳ್ಳುತ್ತಾರೆ, ಆಗ ಎಲ್ಲರಿಗೂ ಇದರ ನೋವು ಗೊತ್ತಾಗುತ್ತದೆ’ ಎಂದು ಹಂಚಿಕೊಂಡರು.
BBK 13: ವೇದಿಕೆಯಲ್ಲಿ ಮೂಡಿದ ಭಾರವಾದ ವಾತಾವರಣ ಮತ್ತು ನೆನಪುಗಳು
ತಾಯಿಯ ನೆನಪು ಹಾಗೂ ಅಗಲಿಕೆಯ ನೋವು ಎಲ್ಲರಿಗೂ ಸಾಮಾನ್ಯ ಎಂಬ ಸುದೀಪ್ ಮಾತುಗಳು ಎಲ್ಲರ ಮನಸ್ಸನ್ನು ಭಾರವಾಗಿಸಿತು. ಬಿಗ್‌ಬಾಸ್ ವೇದಿಕೆಯಲ್ಲಿ ಮತ್ತೊಮ್ಮೆ ಇದರಿಂದಾಗಿ ಬಹಳ ಭಾವುಕ ವಾತಾವರಣ ನಿರ್ಮಾಣವಾಯಿತು. ಕಿಚ್ಚ ಸುದೀಪ್ ಅವರು ತಮ್ಮ ತಾಯಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದು, ಅವರನ್ನು ಕಳೆದುಕೊಂಡ ಬಳಿಕ ಸಾಕಷ್ಟು ನೋವು ಅನುಭವಿಸುತ್ತಿದ್ದಾರೆ.




