☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

Daily Horoscope: ಇಂದಿನ ನವರಾತ್ರಿ ಆರಂಭದ ವಿಶೇಷ ದಿನ ಭವಿಷ್ಯ ಹಾಗೂ ದ್ವಾದಶ ರಾಶಿಗಳ ಸಂಪೂರ್ಣ ಫಲಗಳು

Daily Horoscope: Navratri Special Zodiac Predictions

Daily Horoscope: ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಆಶ್ವಯುಜ ಮಾಸದ ಶುಕ್ಲ ಪಕ್ಷದ ಪ್ರತಿಪತ್ ತಿಥಿಯ ಭಾನುವಾರದ ಈ ದಿನ ನಷ್ಟವಸ್ತು ಪ್ರಾಪ್ತಿ, ಅತಿಯಾದ ಸುತ್ತಾಟ, ಆದಾಯದ ಚಿಂತೆ ಹಾಗೂ ಕಾನೂನಿನ ದುರುಪಯೋಗದ ಸೂಚನೆಗಳಿವೆ. ಸಣ್ಣ ಉದ್ಯಮಿಗಳಿಗೆ ಅನಿರೀಕ್ಷಿತ ಆದಾಯ ಸಿಗಲಿದೆ. ದಾನಧರ್ಮ ಮತ್ತು ಹಿರಿಯರ ಸೇವೆಯಿಂದ ಶುಭವಾಗಲಿದೆ.

ಇಂದಿನಿಂದ ನವರಾತ್ರಿ ಉತ್ಸವ ಆರಂಭವಾಗುತ್ತಿದ್ದು, ಶೈಲಪುತ್ರಿಯ ಆರಾಧನೆಯೊಂದಿಗೆ ಸಕಲರ ಸಂಕಟಗಳು ದೂರವಾಗಲಿ. ಇಂದಿನ ಪಂಚಾಂಗದಂತೆ ಆಶ್ವಯುಜ ಮಾಸ, ಕನ್ಯಾ ಸೌರಮಾಸ, ಹಸ್ತಾ ಮಹಾನಕ್ಷತ್ರ ಹಾಗೂ ಚಿತ್ರಾ ನಿತ್ಯನಕ್ಷತ್ರಗಳ ಶುಭ ಸಂಯೋಗವಿದೆ. ವೈಧೃತಿ ಯೋಗ ಮತ್ತು ಬವ ಕರಣವಿದ್ದು, ಸೂರ್ಯೋದಯ ಬೆಳಿಗ್ಗೆ 06:10ಕ್ಕೆ ಹಾಗೂ ಸೂರ್ಯಾಸ್ತ ಸಂಜೆ 06:02ಕ್ಕೆ ಆಗಲಿದೆ.

ಇಂದಿನ ಶುಭಾಶುಭ ಕಾಲಗಳನ್ನು ಗಮನಿಸುವುದಾದರೆ, ಸಂಜೆ 04:33 ರಿಂದ 06:02 ರವರೆಗೆ ರಾಹು ಕಾಲವಿರುತ್ತದೆ. ಯಮಗಂಡ ಕಾಲ ಮಧ್ಯಾಹ್ನ 12:06 ರಿಂದ 01:35 ಹಾಗೂ ಗುಳಿಕ ಕಾಲ ಮಧ್ಯಾಹ್ನ 03:04 ರಿಂದ 04:33 ರವರೆಗೆ ಇರಲಿದೆ.

ಮೇಷ ರಾಶಿ

ತಾಳ್ಮೆಯಿಂದ ಕೆಲಸ ಸಾಧಿಸಿ. ಆಸ್ತಿ ತಕರಾರು ಬಗೆಹರಿಯುವ ಸಮಯ ಹತ್ತಿರವಿದೆ. ವೃತ್ತಿಯಲ್ಲಿ ಉನ್ನತ ಸ್ಥಾನ ಸಿಗಲಿದೆ. ಸ್ವಂತ ಉದ್ಯಮದಲ್ಲಿ ಹೆಚ್ಚಿನ ಲಾಭ ಬರಲಿದೆ. ಸಂಗಾತಿಯ ಸಹಕಾರ ಸಿಕ್ಕರೂ ಸಹೋದರನಿಂದ ಮನೆಯಲ್ಲಿ ಕಿರಿಕಿರಿ ಉಂಟಾಗಬಹುದು.

ವೃಷಭ ರಾಶಿ

ಧನಲಾಭವಾದರೂ ಮನಸ್ಸಿನಲ್ಲಿ ಬೇಸರ ಇರಲಿದೆ. ಕಚೇರಿಯ ಒತ್ತಡವನ್ನು ಮನೆಗೆ ತರಬೇಡಿ. ಪರಿಚಿತರಿಂದ ಅನುಕೂಲ ಪಡೆಯುವಿರಿ. ಸಹೋದ್ಯೋಗಿಗಳ ವರ್ತನೆ ಸಿಟ್ಟು ತರಿಸಬಹುದು. ಸಮಾಧಾನದಿಂದ ಪರಿಸ್ಥಿತಿ ನಿಭಾಯಿಸಿ.

ಮಿಥುನ ರಾಶಿ

ಸಮಾಜದಲ್ಲಿ ಸೂಕ್ತ ಗೌರವ ಸಿಗದೆ ಬೇಸರವಾಗಬಹುದು. ಬಂಧುಗಳು ನಿಮ್ಮ ನೆರವು ಕೋರಲಿದ್ದಾರೆ. ಕುಟುಂಬದ ಜೊತೆ ಸಂತೋಷದಿಂದ ಕಾಲ ಕಳೆಯುವಿರಿ. ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರಾಗಬಹುದು. ಪ್ರಯಾಣವನ್ನು ಆದಷ್ಟು ಮುಂದೂಡಿ.

ಕರ್ಕಾಟಕ ರಾಶಿ

ನಿರೀಕ್ಷಿತ ವಸ್ತುಗಳು ಕೈಸೇರಲಿವೆ. ಆಭರಣ ಖರೀದಿಗೆ ಸಾಲ ಮಾಡಬೇಕಾಗಬಹುದು. ಉದ್ಯೋಗದ ಒತ್ತಡ ದಾಂಪತ್ಯದ ಮೇಲೂ ಪ್ರಭಾವ ಬೀರಲಿದೆ. ಸಜ್ಜನರ ಸಹವಾಸ ಸಿಗಲಿದೆ. ತಂದೆಗೆ ಸೂಕ್ತ ಸಹಾಯ ಮಾಡುವಿರಿ.

ಸಿಂಹ ರಾಶಿ

ವೃತ್ತಿರಂಗದಲ್ಲಿ ಆತಂಕದ ವಾತಾವರಣ ಇರಲಿದೆ. ದೀರ್ಘಕಾಲದ ಹೂಡಿಕೆಗೆ ಮುನ್ನ ಯೋಚಿಸಿ. ಹಿರಿಯರ ಸಲಹೆ ಶ್ರದ್ಧೆಯಿಂದ ಆಲಿಸಿ. ಸಹೋದ್ಯೋಗಿಗಳು ಅಸಂಬದ್ಧ ಸಲಹೆ ನೀಡಬಹುದು, ಎಚ್ಚರದಿಂದಿರಿ.

ಕನ್ಯಾ ರಾಶಿ

ತೊಂದರೆ ಬರುವ ಮುನ್ನವೇ ಸೂಕ್ತ ಮುನ್ನೆಚ್ಚರಿಕೆ ವಹಿಸುವಿರಿ. ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗಬಹುದು. ಆಧ್ಯಾತ್ಮದತ್ತ ಮನಸ್ಸು ಇರಲಿದೆ. ನೆರೆಹೊರೆಯವರಿಂದ ಕೋಪ ಬರಬಹುದು. ಪ್ರೇಮ ವಿಚಾರದಲ್ಲಿ ಅನುಮಾನ ಬೇಡ.

ತುಲಾ ರಾಶಿ

ವಿವಾಹಕ್ಕೆ ಉತ್ತಮ ಪ್ರಸ್ತಾಪಗಳು ಬರಲಿವೆ. ಅನಗತ್ಯ ವಸ್ತುಗಳ ಖರೀದಿಗೆ ವೆಚ್ಚ ಮಾಡುವಿರಿ. ಸಣ್ಣ ಉಳಿತಾಯ ಇಂದು ನೆರವಿಗೆ ಬರಲಿದೆ. ವೃತ್ತಿಜೀವನದಲ್ಲಿ ಸಂತಸದ ವಾತಾವರಣ ಇರಲಿದೆ. ಹೊಸ ಉದ್ಯಮ ಅಭಿವೃದ್ಧಿ ಹೊಂದಲಿದೆ.

ವೃಶ್ಚಿಕ ರಾಶಿ

ಹೊಸ ಆಲೋಚನೆಗಳು ನಿಮ್ಮನ್ನು ಹುರಿದುಂಬಿಸಲಿವೆ. ಮಾನಸಿಕ ನೆಮ್ಮದಿಗಾಗಿ ಧ್ಯಾನ ಮಾಡಿ. ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ಆದಾಯದ ಮೂಲಗಳನ್ನು ಗಟ್ಟಿ ಮಾಡಿಕೊಳ್ಳಿ. ಎದುರಿನವರ ಮನಸ್ಥಿತಿ ತಿಳಿದು ಮಾತನಾಡಿ.

ಧನು ರಾಶಿ

ಉದ್ಯೋಗದಲ್ಲಿ ಅನಪೇಕ್ಷಿತ ಸ್ಥಳಕ್ಕೆ ವರ್ಗಾವಣೆಯಾಗಬಹುದು. ಸಹೋದ್ಯೋಗಿಗಳ ಬಗ್ಗೆ ಅಸಮಾಧಾನ ಇರಲಿದೆ. ದುರಭ್ಯಾಸಗಳಿಂದ ಧನನಷ್ಟವಾಗಬಹುದು. ಮನೆಗೆ ಬಂದ ಅತಿಥಿಗಳನ್ನು ಸತ್ಕರಿಸುವಿರಿ.

ಮಕರ ರಾಶಿ

ಅನಗತ್ಯ ಹರಟೆಯಿಂದ ಸಮಯ ವ್ಯರ್ಥ ಮಾಡಬೇಡಿ. ಹಣಕಾಸಿನ ವ್ಯವಹಾರದಲ್ಲಿ ಉತ್ತಮ ಲಾಭ ಸಿಗಲಿದೆ. ಕಚೇರಿಯಲ್ಲಿ ಕಾರ್ಯಕ್ಷೇತ್ರದ ಬಗ್ಗೆ ಎಚ್ಚರವಿರಲಿ. ಮಕ್ಕಳಿಗೆ ಇಷ್ಟವಾದದ್ದನ್ನು ಮಾಡುವಿರಿ. ಕಳೆದುಕೊಂಡ ವಸ್ತು ಸಿಗಲಿದೆ.

ಕುಂಭ ರಾಶಿ

ಭವಿಷ್ಯದ ಬಗ್ಗೆ ಹೆಚ್ಚಿನ ಆಲೋಚನೆ ಮಾಡುವಿರಿ. ನೆರೆಹೊರೆಯವರಿಗೆ ನೆರವಿನ ಹಸ್ತ ಚಾಚುವಿರಿ. ವಿವಾಹ ಮಾತುಕತೆ ಸಂತಸ ತರಲಿದೆ. ಪ್ರಯತ್ನಕ್ಕೆ ತಕ್ಕ ಯಶಸ್ಸು ಸಿಗಲಿದೆ. ಮಾತನಾಡುವಾಗ ಜಾಗರೂಕರಾಗಿರಿ.

ಮೀನ ರಾಶಿ (Daily Horoscope)

ಭೂಮಿಗೆ ಸಂಬಂಧಿಸಿದ ಮಾತುಕತೆಯಲ್ಲಿ ಹಿನ್ನಡೆಯಾಗಬಹುದು. ಸದ್ಯಕ್ಕೆ ಆಸ್ತಿ ಖರೀದಿ ನಿರ್ಧಾರ ಬೇಡ. ಯಾರ ಮೇಲೆಯೂ ಪಕ್ಷಪಾತ ಮಾಡಬೇಡಿ. ಕೆಲಸದ ನಡುವೆ ಕುಟುಂಬವನ್ನು ನಿರ್ಲಕ್ಷಿಸಬೇಡಿ.