Daily Horoscope: ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಭಾದ್ರಪದ ಮಾಸದ ಕೃಷ್ಣ ಪಕ್ಷದ ತ್ರಯೋದಶೀ ತಿಥಿಯ ಗುರುವಾರದ ಈ ದಿನ ಪೈಪೋಟಿಯಲ್ಲಿ ಸೋಲು, ಸ್ವಯಂ ಪ್ರಜ್ಞೆ, ಕಾರ್ಯದಲ್ಲಿ ಗೊಂದಲ, ಪ್ರತಿಷ್ಠೆಗೆ ಕಲಹ ಹಾಗೂ ವೃತ್ತಿಯ ಸ್ಥಳ ಬದಲಾವಣೆಯ ಸೂಚನೆಗಳಿವೆ. ಸಂಗಾತಿಯ ದೂರುಗಳನ್ನು ಸಮಾಧಾನದಿಂದ ಆಲಿಸಿ ಬಗೆಹರಿಸಿಕೊಳ್ಳುವುದು ಇಂದಿನ ಅಗತ್ಯ.
ಇಂದಿನ ಚಾಂದ್ರಮಾನ ಭಾದ್ರಪದ, ಸೌರಮಾನ ಕನ್ಯಾ ಮಾಸ, ಹಸ್ತಾ ಮಹಾನಕ್ಷತ್ರ ಹಾಗೂ ಪೂರ್ವಾಫಲ್ಗುಣೀ ನಿತ್ಯನಕ್ಷತ್ರಗಳ ಶುಭ ಸಂಯೋಗವಿದೆ. ಶುಭ ಯೋಗ ಮತ್ತು ತೈತಿಲ ಕರಣವಿದ್ದು, ಸೂರ್ಯೋದಯ ಬೆಳಿಗ್ಗೆ 06:10ಕ್ಕೆ ಹಾಗೂ ಸೂರ್ಯಾಸ್ತ ಸಂಜೆ 06:03ಕ್ಕೆ ಆಗಲಿದೆ.
ಇಂದಿನ ಶುಭಾಶುಭ ಕಾಲಗಳನ್ನು ಗಮನಿಸುವುದಾದರೆ, ಮಧ್ಯಾಹ್ನ 01:36 ರಿಂದ 03:05 ರವರೆಗೆ ರಾಹು ಕಾಲವಿರುತ್ತದೆ. ಯಮಗಂಡ ಕಾಲ ಬೆಳಿಗ್ಗೆ 06:10 ರಿಂದ 07:39 ಹಾಗೂ ಗುಳಿಕ ಕಾಲ ಬೆಳಿಗ್ಗೆ 09:09 ರಿಂದ 10:38 ರವರೆಗೆ ಇರಲಿದೆ.
ಮೇಷ ರಾಶಿ
ವಿವಾಹ ವಿಳಂಬಕ್ಕೆ ದೈವಜ್ಞರ ಸಲಹೆ ಪಡೆಯಿರಿ. ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿರುವ ವಿದ್ಯಾರ್ಥಿಗಳಿಗೆ ಕೊಂಚ ಅಸಮಾಧಾನ ಮೂಡಬಹುದು. ಸಂಗಾತಿಯ ದೂರನ್ನು ಸರಿಯಾಗಿ ಅರ್ಥೈಸಿಕೊಳ್ಳಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ರಾಜಕೀಯ ಸಂಪರ್ಕದಿಂದ ವ್ಯವಹಾರಕ್ಕೆ ಹೊಸ ದಿಕ್ಕು ಸಿಗಲಿದೆ.
ವೃಷಭ ರಾಶಿ
ವ್ಯವಹಾರದಲ್ಲಿ ಮೋಸವನ್ನು ಸಹಿಸಲಾರಿರಿ. ಹಳೆಯ ಸಾಲಗಳನ್ನು ತೀರಿಸುವಿರಿ. ಸಹೋದರನ ಅಸಹಕಾರ ಮನಸ್ಸಿಗೆ ಹಿಂಸೆ ನೀಡಬಹುದು. ಆರೋಗ್ಯ ಸಮಸ್ಯೆ ಎದುರಾದರೆ ವೈದ್ಯರ ಸಲಹೆ ಪಡೆಯಿರಿ. ಆಸ್ತಿ ರಕ್ಷಣೆ ಸವಾಲಾಗಲಿದ್ದು, ಆರ್ಥಿಕತೆ ಬಲಪಡಿಸಲು ಶ್ರಮಿಸುವಿರಿ.
ಮಿಥುನ ರಾಶಿ
ನಿಮ್ಮ ಪ್ರಭಾವ ಎಲ್ಲರಿಗೂ ತಿಳಿಯಲಿದೆ. ಸರ್ಕಾರಿ ಉದ್ಯೋಗಿಗಳಿಗೆ ಉತ್ತಮ ಪ್ರಗತಿ ಕಾದಿದೆ. ತಂದೆಯ ಸೇವೆ ಮಾಡುವ ಮನಸ್ಸಾಗಲಿದೆ. ಗೊತ್ತಿಲ್ಲದ ಕೆಲಸಗಳಿಗೆ ಕೈಹಾಕಿ ನಷ್ಟ ಮಾಡಿಕೊಳ್ಳಬೇಡಿ. ಸಮಾಧಾನದಿಂದ ವ್ಯವಹರಿಸಿದರೆ ಶುಭವಾಗಲಿದೆ. ಮಾತು ನಿಯಂತ್ರಣದಲ್ಲಿರಲಿ.
ಕರ್ಕಾಟಕ ರಾಶಿ
ಮನೆಯಲ್ಲಿದ್ದು ನಿರುಮ್ಮಳವಾಗಿ ಇರಲು ಬಯಸುವಿರಿ. ಸಮಸ್ಯೆಗಳನ್ನು ಹಂಚಿಕೊಳ್ಳಲು ಹಿಂಜರಿಯುವಿರಿ. ದಿನಚರಿಯಲ್ಲಿ ಬದಲಾವಣೆ ಮಾಡಿಕೊಳ್ಳುವಿರಿ. ಯೋಚನೆಗಳು ಬಲಿಷ್ಠವಾಗಿದ್ದರೂ ಕ್ರಿಯಾರೂಪಕ್ಕೆ ತರುವುದು ಕಷ್ಟವಾದೀತು. ಕೆಲಸದ ಗುಣಮಟ್ಟಕ್ಕೆ ಹೆಚ್ಚಿನ ಗಮನ ನೀಡಿ.
ಸಿಂಹ ರಾಶಿ
ಸಂಬಂಧಗಳನ್ನು ನಿರ್ವಹಿಸುವುದು ಕಷ್ಟವಾದೀತು. ಸ್ನೇಹಿತರಿಂದ ಧನಸಹಾಯ ಸಿಗಲಿದೆ. ಶತ್ರುಗಳಿಂದ ಕಿರಿಕಿರಿ ಉಂಟಾಗಬಹುದು. ಪ್ರಯಾಣಕ್ಕೆ ಇಂದು ಸೂಕ್ತ ದಿನವಲ್ಲ. ಬಂಧುಗಳ ಜೊತೆ ಪುಣ್ಯಕ್ಷೇತ್ರಕ್ಕೆ ತೆರಳುವಿರಿ. ವ್ಯವಹಾರದಲ್ಲಿ ತ್ವರಿತ ನಿರ್ಧಾರಗಳು ಅನುಕೂಲ ತರಲಿವೆ.
ಕನ್ಯಾ ರಾಶಿ
ಒಳಗೊಂದು ಹೊರಗೊಂದು ಸ್ವಭಾವ ತೋರಬೇಡಿ. ಮಕ್ಕಳ ಪ್ರಗತಿ ಕಂಡು ಸಂತೋಷವಾಗಲಿದೆ. ಅತಿಯಾದ ವಿಶ್ವಾಸದಿಂದ ವಂಚನೆಯಾಗುವ ಸಾಧ್ಯತೆ ಇದೆ. ದಾಂಪತ್ಯದಲ್ಲಿನ ಶೀತಲಸಮರ ನಿಯಂತ್ರಿಸಿ. ಆರೋಗ್ಯ ಹಾಳುಮಾಡಿಕೊಳ್ಳಬೇಡಿ.
ತುಲಾ ರಾಶಿ
ಸಮಾನ ಮನಸ್ಕರ ಜೊತೆ ಸಂಪರ್ಕ ಬೆಳೆಯಲಿದೆ. ನಿರಂತರ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಮಕ್ಕಳ ಕಲಹ ಪರಿಹರಿಸಲು ಮಧ್ಯಪ್ರವೇಶಿಸುವಿರಿ. ವಿದ್ಯಾರ್ಥಿಗಳ ಸಾಧನೆಗೆ ಪ್ರಶಂಸೆ ಸಿಗಲಿದೆ. ಯಾವುದೇ ಕಾರಣಕ್ಕೂ ನಿಮ್ಮ ತತ್ವಗಳನ್ನು ಬಿಟ್ಟುಕೊಡಬೇಡಿ.
ವೃಶ್ಚಿಕ ರಾಶಿ
ನಿಮ್ಮನ್ನು ಕೆಳಗಿಳಿಸಲು ಪ್ರಯತ್ನಗಳು ನಡೆಯಬಹುದು. ಕಾರಣವಿಲ್ಲದೆ ಸಿಟ್ಟು ಮಾಡಿಕೊಳ್ಳಬೇಡಿ. ಮೇಲಧಿಕಾರಿಗಳ ಬೆಂಬಲ ಸಿಕ್ಕರೂ ಸಹೋದ್ಯೋಗಿಗಳಿಂದ ಕಿರಿಕಿರಿ ಇರಲಿದೆ. ಕಳ್ಳತನದ ಭಯ ಕಾಡಬಹುದು. ಇಷ್ಟಪಟ್ಟವರ ಭೇಟಿ ಸಂತೋಷ ತರಲಿದೆ.
ಧನು ರಾಶಿ
ಮಾನಸಿಕ ಅಸ್ಥಿರತೆಯಿಂದ ಜೊತೆಗಾರರಿಗೆ ತೊಂದರೆಯಾಗಬಹುದು. ವಾಹನ ಚಾಲನೆಯಲ್ಲಿ ಎಚ್ಚರವಿರಲಿ. ಯಾರ ಮೇಲೆಯೂ ಪೂರ್ಣ ನಂಬಿಕೆ ಇಡಬೇಡಿ. ಆರ್ಥಿಕ ನಷ್ಟ ಸರಿದೂಗಿಸಲು ಪ್ರಯತ್ನಿಸುವಿರಿ. ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗಲಿವೆ.
ಮಕರ ರಾಶಿ
ಮಾನಸಿಕ ಖಿನ್ನತೆಯಿಂದ ಹೊರಬರಲು ಸ್ನೇಹಿತರು ಸಹಾಯ ಮಾಡುವರು. ಸಂಗಾತಿಯ ನಡುವಿನ ವಾಗ್ವಾದ ವಿಕೋಪಕ್ಕೆ ಹೋಗದಂತೆ ನೋಡಿಕೊಳ್ಳಿ. ವಿಶ್ವಾಸ ಗಳಿಕೆಯೇ ಇಂದಿನ ಉದ್ದೇಶವಾಗಲಿದೆ. ಕಠಿಣ ಪರಿಶ್ರಮದಿಂದ ಬಯಸಿದ ಫಲಿತಾಂಶ ಪಡೆಯುವಿರಿ.
ಕುಂಭ ರಾಶಿ
ಕಾರ್ಯಗಳನ್ನು ತದೇಕಚಿತ್ತದಿಂದ ಪೂರ್ಣಗೊಳಿಸುವಿರಿ. ಆತ್ಮೀಯರಿಂದ ಸೂಕ್ತ ನೆರವು ಸಿಗಲಿದೆ. ಕೂಡಿಟ್ಟ ಹಣದಿಂದ ಇಂದು ಪ್ರಯೋಜನವಾಗಲಿದೆ. ಆರ್ಥಿಕ ಭದ್ರತೆಯತ್ತ ಹೆಚ್ಚಿನ ಗಮನ ಹರಿಸಿ. ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳಿಗೆ ಜಾಗ ನೀಡಬೇಡಿ.
ಮೀನ ರಾಶಿ (Daily Horoscope)
ದಾಂಪತ್ಯ ಜೀವನವನ್ನು ಜಾಗರೂಕತೆಯಿಂದ ನಿರ್ವಹಿಸಿ. ಅನಗತ್ಯ ಕಲ್ಪನೆಗಳಿಂದ ದುಃಖಿಸಬೇಡಿ. ಹಣದ ಒಳಹರಿವು ನೆಮ್ಮದಿ ತರಲಿದೆ. ಬರುವ ಎಚ್ಚರಿಕೆಯ ಸಂದೇಶಗಳನ್ನು ನಿರ್ಲಕ್ಷಿಸಬೇಡಿ. ಉತ್ತಮ ಸಮಯಕ್ಕಾಗಿ ತಾಳ್ಮೆಯಿಂದ ಕಾಯಿರಿ.




