☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

BBK 13: ಓಂ ಪ್ರಕಾಶ್ ರಾವ್-ಸಂಗೀತಾ ಯಾಕೆ ಹೀಗೆ ಮಾಡಿದ್ರಿ? ಸ್ವಂತ ನಿರ್ಧಾರವೇ ಸಂಕಷ್ಟ ತಂದಿತಾ?

Is Om Prakash Rao and Sangeetha Bhat neglected health issues in BBK 13

BBK 13: ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಕೂಡ ಒಂದು. 12ನೇ ಸೀಸನ್‌ನಲ್ಲಿ ಚಿಂದಿ ಊಡಾಯಿಸಿದ್ದ ಶೋ 13ನೇ ಸೀಸನ್‌ನಲ್ಲಿಯೂ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಈ ಶೋನಲ್ಲಿ ವಯಸ್ಸಿನ ಮಿತಿ ಇಲ್ಲ. ಯುವಕರಿಂದ ಹಿಡಿದು ಹಿರಿಯರವರೆಗೂ ಕುಟುಂಬ ಸಮೇತ ಕುಳಿತು ನೋಡುವ ಕಾರ್ಯಕ್ರಮ ಬಿಗ್ ಬಾಸ್. ಹೀಗಾಗಿ ತನ್ನದೇ ಆದ ಪ್ರೇಕ್ಷಕ ವರ್ಗವನ್ನು ಹೊಂದಿದೆ. ಮನರಂಜನೆಯ ಜೊತೆಗೆ ಸ್ಪರ್ಧಿಗಳ ವ್ಯಕ್ತಿತ್ವ, ಅವರ ಮಾನಸಿಕ ಸಾಮರ್ಥ್ಯ, ತಾಳ್ಮೆ, ಸ್ಪರ್ಧಾತ್ಮಕ ಮನೋಭಾವ ಮತ್ತು ಪರಿಸ್ಥಿತಿಗೆ ಹೊಂದಿಕೊಳ್ಳುವ ಗುಣಗಳನ್ನೂ ಪರೀಕ್ಷಿಸಲು ಇದು ವೇದಿಕೆಯಾಗಿದೆ.

ಆದರೆ ಈ ಬಾರಿ ಕೆಲವು ಸ್ಪರ್ಧಿಗಳ ವಿಚಾರ,ಅವರ ಆರೋಗ್ಯ ಮತ್ತು ಟಾಸ್ಕ್‌ಗಳ ಕುರಿತ ಚರ್ಚೆ ಜೋರಾಗಿದೆ. ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಮುನ್ನ ಸ್ಪರ್ಧಿಗಳಿಗೆ ಕಾರ್ಯಕ್ರಮದ ನಿಯಮಗಳು, ಷರತ್ತುಗಳು ಹಾಗೂ ಮನೆಯೊಳಗಿನ ಜೀವನಶೈಲಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿರುತ್ತಾರೆ. ಹಲವು ನಿಯಮಗಳನ್ನು ಓದಿ, ಅರ್ಥಮಾಡಿಕೊಂಡು ಒಪ್ಪಿಗೆ ಸೂಚಿಸಿದ ನಂತರವೇ ಸ್ಪರ್ಧಿಗಳು ಮನೆಯೊಳಗೆ ಪ್ರವೇಶ ಮಾಡುತ್ತಾರೆ.

ಇಷ್ಟೆಲ್ಲಾ ನಿಯಮಗಳು ಮತ್ತು ಷರತ್ತುಗಳಿದ್ದರೂ, ಕೆಲವೊಮ್ಮೆ ಸ್ಪರ್ಧಿಗಳ ಉತ್ಸಾಹ ಮತ್ತು ಆತುರದ ನಿರ್ಧಾರಗಳು ಎದ್ದು ಕಾಣಿಸುತ್ತಿವೆ.ಸ ಬಿಗ್ ಬಾಸ್‌ಗೆ ಹೋಗ್ಬೇಕು ಅನ್ನೋ ಆಸೆಯಿಂದ ಅವರ ಆರೋಗ್ಯ ಸಮಸ್ಯೆಯನ್ನೂ ಲೆಕ್ಕಿಸುತ್ತಿಲ್ಲವೇ? ಎಂಬ ಪ್ರಶ್ನೆ ಇದೀಗ ವೀಕ್ಷಕರಲ್ಲಿ ಮೂಡಿದೆ.

ಇತ್ತೀಚೆಗೆ ಓಂ ಪ್ರಕಾಶ್ ರಾವ್ ಅವರ ಆರೋಗ್ಯದ ವಿಚಾರವೂ ಇದೇ ಹಿನ್ನೆಲೆಯಲ್ಲಿ ಚರ್ಚೆಗೆ ಬಂದಿದೆ. ಅವರಿಗೆ ಶುಗರ್, ಬಿಪಿ ಸಮಸ್ಯೆ ಇದ್ದರೂ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದರು. ಮನೆಯೊಳಗೆ ಪ್ರವೇಶಿಸಿದ ಕೆಲವೇ ದಿನಗಳಲ್ಲಿ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ಮನೆಯಿಂದ ಹೊರಬಂದರು. ಇದು ಮನೆಯೊಳಗೆ ಆರೋಗ್ಯದ ವಿಚಾರದಲ್ಲಿ ಸ್ಪರ್ಧಿಗಳು ಎಷ್ಟು ಎಚ್ಚರಿಕೆವಹಿಸಬೇಕು ಅನ್ನೋದನ್ನು ಮತ್ತೊಮ್ಮೆ ನೆನಪಿಸಿದೆ.

ಇದೇ ರೀತಿಯಲ್ಲಿ ಟಾಸ್ಕ್‌ವೊಂದರಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಸಂಗೀತ ಭಟ್ ತೀವ್ರವಾಗಿ ಆಯಾಸಗೊಂಡು, ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ದೃಶ್ಯಗಳು ಪ್ರೇಕ್ಷಕರ ಗಮನ ಸೆಳೆದಿವೆ. ಸ್ಪರ್ಧೆಯ ಉತ್ಸಾಹದಲ್ಲಿ ಟಾಸ್ಕ್‌ಗಳನ್ನು ಪೂರ್ಣಗೊಳಿಸುವ ಹಂಬಲ ಸಹಜವಾದರೂ, ಆರೋಗ್ಯಕ್ಕಿಂತ ಯಾವುದೇ ಟಾಸ್ಕ್ ದೊಡ್ಡದಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

ಬಿಗ್ ಬಾಸ್ ಒಂದು ಸ್ಪರ್ಧಾತ್ಮಕ ಕಾರ್ಯಕ್ರಮ. ಗೆಲ್ಲಬೇಕು, ಉತ್ತಮ ಪ್ರದರ್ಶನ ನೀಡಬೇಕು ಎಂಬ ಆಸೆ ಪ್ರತಿಯೊಬ್ಬ ಸ್ಪರ್ಧಿಗೂ ಇರುವುದು ಸಹಜ. ಆದರೆ ಕಾರ್ಯಕ್ರಮಕ್ಕೆ ಬರುವ ಮುನ್ನ ತಮ್ಮ ದೈಹಿಕ ಸಾಮರ್ಥ್ಯ, ಆರೋಗ್ಯ ಪರಿಸ್ಥಿತಿ ಹಾಗೂ ಟಾಸ್ಕ್‌ಗಳ ಸ್ವರೂಪವನ್ನು ಪರಿಗಣಿಸಿ ಸ್ಪರ್ಧಿಗಳು ನಿರ್ಧಾರ ತೆಗೆದುಕೊಳ್ಳುವುದು ಕೂಡ ಅಷ್ಟೇ ಮುಖ್ಯ.

ಹೀಗಾಗಿ ಈ ಘಟನೆಗಳು ಬಿಗ್ ಬಾಸ್ ಕಾರ್ಯಕ್ರಮದ ತಪ್ಪು ಎನ್ನುವುದಕ್ಕಿಂತ, ಸ್ಪರ್ಧಿಗಳು ತಮ್ಮ ಸಾಮರ್ಥ್ಯ ಮತ್ತು ಆರೋಗ್ಯವನ್ನು ಅರ್ಥಮಾಡಿಕೊಂಡು ನಿರ್ಧಾರ ತೆಗೆದುಕೊಳ್ಳಬೇಕಾದ ಅಗತ್ಯವನ್ನು ಎತ್ತಿ ತೋರಿಸುತ್ತಿವೆ. ಮನರಂಜನೆ ಮುಖ್ಯ ಎನಿಸಿದರೂ, ಸ್ಪರ್ಧಿಗಳ ಸುರಕ್ಷತೆ ಹಾಗೂ ಆರೋಗ್ಯವೇ ಮೊದಲು. ಹೀಗಾಗಿ ಬಿಗ್ ಬಾಸ್ ಕೂಡ ಓಂ ಪ್ರಕಾಶ್ ರಾವ್ ಹಾಗೂ ಸಂಗೀತಾ ಭಟ್ ಅವರನ್ನು ರಿಯಾಲಿಟಿ ಶೋನಿಂದ ಮುಕ್ತಿಗೊಳಿಸಿ ಮನೆಗೆ ಕಳುಹಿಸಿದ್ದಾರೆ.

ಈ ಇಬ್ಬರೂ ಕಂಟೆಸ್ಟೆಂಟ್‌ಗಳು ಹೊರ ಹೋದರೂ ಬಿಗ್ ಬಾಸ್ ಮನೆಯೊಳಗಿನ ಆಟ ಮುಂದುವರೆದಿದೆ. ಮುಂದಿನ ದಿನಗಳಲ್ಲಿ ಬಿಗ್ ಬಾಸ್ ಹೇಗೆ ಸಾಗುತ್ತೆ? ಸೆಲೆಬ್ರೆಟಿ ಹಾಗೂ ಸಾಮಾನ್ಯ ಜನರ ಮಧ್ಯೆ ಪೈಪೋಟಿ ಹೇಗೆ ಮೂಡುತ್ತೆ? ಬಿಗ್ ಬಾಸ್ ಕನ್ನಡ 12ನ್ನು ಮೀರಿಸುತ್ತಾ? ಕನ್ನಡಿಗರಿಗೆ ಮನರಂಜನೆ ನೀಡುತ್ತಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.