☔ Weather
Bengaluru: ☁️ 21°C | AQI 60
Mysore: ☁️ 22°C | AQI 62
Mangalore: ☁️ 26°C | AQI 70
Bengaluru: ☁️ 21°C | AQI 60

PRICE HIKE : ರಾಜ್ಯದಲ್ಲಿ ಲೀಟರ್ ಹಾಲಿಗೆ 8 ರೂಪಾಯಿ ಹೆಚ್ಚಳ, ಸಚಿವ ಸಂಪುಟದಿಂದ ಅನುಮೋದನೆ

Image of Milk Price hike

ಬೆಂಗಳೂರು: ರಾಜ್ಯದ ಜನರಿಗೆ ನೇರವಾಗಿ ಹೊರೆಯಾಗುವ ರೀತಿ ಪ್ರತಿ ಲೀಟರ್ ಹಾಲಿನ ದರವನ್ನು 8 ರೂಪಾಯಿ ಹೆಚ್ಚಿಸಲು (Price hike) ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬೆಲೆ ಏರಿಕೆಗೆ ಅಂತಿಮ ಮುದ್ರೆ ಬಿದ್ದಿದೆ. ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ ಮತ್ತು ರಾಜ್ಯದ ವಿವಿಧ ಹಾಲು ಒಕ್ಕೂಟಗಳು ದೀರ್ಘಕಾಲದಿಂದ ಈ ಬೇಡಿಕೆ ಇಟ್ಟಿದ್ದವು.

ಇದನ್ನೂ ಓದಿ : ತಾರಕಕ್ಕೇರಿದ SIR ವಿವಾದ – ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ NDA ದೂರು

ಹಾಲು ಉತ್ಪಾದನೆಯ ಒಟ್ಟು ವೆಚ್ಚದಲ್ಲಿ ಭಾರಿ ಏರಿಕೆಯಾಗಿರುವುದೇ ಈ ನಿರ್ಧಾರಕ್ಕೆ ಮುಖ್ಯ ಕಾರಣವಾಗಿದೆ. ಪಶು ಆಹಾರ, ಹಿಂಡಿ, ಬೂಸಾ, ಮೇವುಗಳ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ, ಜೊತೆಗೆ ಸಾರಿಗೆ ಮತ್ತು ಹೈನುಗಾರಿಕೆಯ ದಿನನಿತ್ಯದ ನಿರ್ವಹಣಾ ವೆಚ್ಚವೂ ಗಣನೀಯವಾಗಿ ಏರಿದೆ. ಇದರಿಂದ ರೈತರಿಗೆ ಉತ್ಪಾದನಾ ವೆಚ್ಚಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ ಎಂಬ ದೂರು ಕೇಳಿಬಂದಿತ್ತು. ಈ ಕುರಿತು ಕೆಎಂಎಫ್ ಮತ್ತು ರೈತ ಸಂಘಟನೆಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಸುದೀರ್ಘ ಚರ್ಚೆ ನಡೆಸಿದ್ದವು. ಕಳೆದ ವರ್ಷ 4 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಈ ಬಾರಿ ರೈತರು ಮಳೆ ಕೊರತೆ ಮತ್ತು ನಿರ್ವಹಣಾ ಸಂಕಷ್ಟದ ಹಿನ್ನೆಲೆಯಲ್ಲಿ 10 ರೂಪಾಯಿ ಹೆಚ್ಚಳಕ್ಕೆ ಕೋರಿದ್ದು, ಅದರಲ್ಲಿ 7 ರೂಪಾಯಿ ನೇರವಾಗಿ ರೈತರಿಗೆ ಮತ್ತು 3 ರೂಪಾಯಿ ಒಕ್ಕೂಟಗಳ ನಿರ್ವಹಣೆಗೆ ನೀಡಬೇಕೆಂದು ಮನವಿ ಮಾಡಿದ್ದರು.

ರೈತರಿಗೆ ರಿಲೀಫ್ – ಗ್ರಾಹಕರಿಗೆ ಶಾಕ್ !

ಒಂದೆಡೆ ಹೈನುಗಾರರಿಗೆ ತುಸು ಆಸರೆ ಸಿಕ್ಕಂತಾಗಿದೆ, ಆದರೆ ಮತ್ತೊಂದೆಡೆ ನಗರದ ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಬಜೆಟ್ ಮೇಲೆ ನೇರ ಪರಿಣಾಮ ಬೀರಲಿದೆ. ಹಾಲು ಅತ್ಯಗತ್ಯ ವಸ್ತುವಾಗಿರುವುದರಿಂದ ಇದರ ಬೆಲೆ ಏರಿಕೆ ಟೀ, ಕಾಫಿ, ಮೊಸರು, ತುಪ್ಪದಂತಹ ಉಪ ಉತ್ಪನ್ನಗಳ ಬೆಲೆಯನ್ನೂ ಹೆಚ್ಚಿಸಲಿದೆ. ನೆರೆ ರಾಜ್ಯಗಳಲ್ಲಿ ಈಗಾಗಲೇ ಹೆಚ್ಚು ಬೆಲೆ ಇರುವುದರಿಂದ ರಾಜ್ಯದ ಹಾಲು ಅಲ್ಲಿಗೆ ಹರಿದು ಹೋಗುತ್ತಿದೆ ಎಂಬ ವಾದವೂ ಇದೆ. ಸರ್ಕಾರ ಕೇವಲ ಗ್ರಾಹಕರ ಮೇಲೆ ಹೊರೆ ಹಾಕುವ ಬದಲು ಪಶು ಆಹಾರಕ್ಕೆ ಸಬ್ಸಿಡಿ, ರೈತರಿಗೆ ಪ್ರೋತ್ಸಾಹಧನವನ್ನು 5 ರಿಂದ 8 ರೂಪಾಯಿಗೆ ಹೆಚ್ಚಿಸುವಂತಹ ದೀರ್ಘಕಾಲೀನ ಕ್ರಮಗಳನ್ನು ಜಾರಿಗೆ ತಂದರೆ ಮಾತ್ರ ರೈತ ಮತ್ತು ಗ್ರಾಹಕ ಇಬ್ಬರಿಗೂ ನ್ಯಾಯ ಒದಗಿಸಲು ಸಾಧ್ಯ.