BBK 13: ಬಿಗ್ ಬಾಸ್ ಕನ್ನಡ ಸೀಸನ್ 13ರ ಆಟ ಈಗ ಮತ್ತಷ್ಟು ರಂಗೇರಿದೆ. ಮನೆಗೆ ಎರಡನೇ ವೈಲ್ಡ್ ಕಾರ್ಡ್ ಸ್ಪರ್ಧಿಯ ಆಗಮನವಾಗಿದೆ. ಪ್ರಖ್ಯಾತ ಕಾಮಿಡಿಯನ್ ಪ್ರಶಾಂತ್ ಈಗ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ.
ಪ್ರಶಾಂತ್ ಹಲವು ಕಾಮಿಡಿ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ತಮ್ಮ ಅದ್ಭುತ ಕಾಮಿಡಿ ಟೈಮಿಂಗ್ ಮೂಲಕ ಜನರ ಮನ ಗೆದ್ದಿದ್ದಾರೆ. ಕಿರುತೆರೆಯಲ್ಲಿ ಅವರು ತಮ್ಮದೇ ಆದ ಸಾಲೊಬ್ಬ ಅಭಿಮಾನಿಗಳನ್ನು ಹೊಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲೂ ಪ್ರಶಾಂತ್ ಜಾದೂ ಮಾಡಿದ್ದರು. ತಮ್ಮ ತರಹೇವಾರಿ ರೀಲ್ಸ್‌ಗಳ ಮೂಲಕ ಅವರು ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಅವರ ಹಾಸ್ಯಭರಿತ ವೀಡಿಯೋಗಳು ನೆಟ್ಟಿಗರ ಗಮನ ಸೆಳೆದಿದ್ದವು.
ಬಿಗ್ ಬಾಸ್ ವೇದಿಕೆ ಮೇಲೆಯೇ ಸ್ಪರ್ಧಿಗಳ ಸ್ಪೂಫ್
ಪ್ರಶಾಂತ್ ಅವರಿಗೆ ಬಿಗ್ ಬಾಸ್ ವೇದಿಕೆ ಹೊಸದೇನಲ್ಲ. ಹಿಂದೆ ಅವರು ಬಿಗ್ ಬಾಸ್ ವೇದಿಕೆ ಮೇಲೆ ಸ್ಪರ್ಧಿಗಳ ಸ್ಪೂಫ್‌ಗಳನ್ನು ಮಾಡಿದ್ದರು.
ಇದನ್ನು ಓದಿ: BBK 13: ಬ್ಯಾಕ್ ಟು ಬ್ಯಾಕ್ ‘ವೈಲ್ಡ್ ಕಾರ್ಡ್’ ಎಂಟ್ರಿ ಪಡೆದ ‘ಘಾಟಿ ಗಾನವಿ’; ಬಿಗ್ ಬಾಸ್ ಮನೆಯಲ್ಲಿ ‘ಹಳ್ಳಿ ಪವರ್’ ಗತ್ತು
ಅವರ ಸ್ಪೂಫ್ ನಟನೆಗೆ ವೀಕ್ಷಕರು ಮತ್ತು ನಿರೂಪಕರು ಫುಲ್ ಫಿದಾ ಆಗಿದ್ದರು. ಸ್ಪರ್ಧಿಗಳ ನಡೆ-ನುಡಿಯನ್ನು ತಮಾಷೆಯಾಗಿ ಅನುಕರಣೆ ಮಾಡಿ ಎಲ್ಲರನ್ನೂ ನಗಿಸಿದ್ದರು.
ಈಗ ಅದೇ ಪ್ರಶಾಂತ್ ಸ್ಪರ್ಧಿಯಾಗಿ ಮನೆ ಒಳಗಡೆ ಕಾಲಿಟ್ಟಿದ್ದಾರೆ. ವೇದಿಕೆ ಮೇಲೆ ನಗಿಸಿದ್ದ ಪ್ರಶಾಂತ್ ಈಗ ಮನೆಯ ಒಳಗಡೆ ಯಾವ ರೀತಿ ಆಟವಾಡಲಿದ್ದಾರೆ ಎಂಬ ಕುತೂಹಲ ಮೂಡಿದೆ.
BBK 13: ಜಗಳಕ್ಕಲ್ಲ, ಫನ್ ಸೃಷ್ಟಿಸಲು ಬಂದಿದ್ದೇನೆ ಎಂದ ಪ್ರಶಾಂತ್
ಮನೆ ಪ್ರವೇಶಿಸುವ ಮೊದಲು ಪ್ರಶಾಂತ್ ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ. ತಾವು ಮನೆಯಲ್ಲಿ ಜಗಳ ಮಾಡಲು ಬಂದಿಲ್ಲ ಎಂದು ಹೇಳಿದ್ದಾರೆ.
ಮನೆಯಲ್ಲಿ ತುಸು ಫನ್ ವಾತಾವರಣ ಸೃಷ್ಟಿಸಲು ಹೋಗುತ್ತಿರುವುದಾಗಿ ತಿಳಿಸಿದ್ದಾರೆ. ಸದಾ ಗಂಭೀರ ಮತ್ತು ಜಗಳಗಳಿಂದ ಕೂಡಿರುವ ಬಿಗ್ ಬಾಸ್ ಮನೆಗೆ ಹಾಸ್ಯದ ಸ್ಪರ್ಶ ನೀಡಲು ಅವರು ಸಜ್ಜಾಗಿದ್ದಾರೆ.
ಪ್ರಶಾಂತ್ ಅವರ ಎಂಟ್ರಿಯಿಂದ ಮನೆಯಲ್ಲಿ ನಗುವಿನ ಅಲೆ ಏಳಲಿದೆ. ವೀಕ್ಷಕರಿಗೂ ಕೂಡ ಇವರ ಎಂಟ್ರಿಯಿಂದ ಉತ್ತಮ ಮನೋರಂಜನೆ ಸಿಗುವ ಭರವಸೆ ಮೂಡಿದೆ.




