Daily Horoscope: ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಭಾದ್ರಪದ ಮಾಸದ ಕೃಷ್ಣ ಪಕ್ಷದ ಪ್ರತಿಪತ್ ತಿಥಿಯ ಭಾನುವಾರದ ದಿನ ಭವಿಷ್ಯ ಇಲ್ಲಿದೆ. ಇಂದು ಧನಸಹಾಯ, ಸತ್ಯ ವಚನ, ವ್ಯಕ್ತಿತ್ವ ಬದಲಾವಣೆ ಹಾಗೂ ಉದ್ಯಮದಲ್ಲಿ ಲಾಭ ಸಿಗುವ ಸಾಧ್ಯತೆ ಇದೆ.
ಇಂದು ಮೇಷದಿಂದ ಮೀನ ರಾಶಿಯವರೆಗಿನ ಜಾತಕ ಫಲ ಹೇಗಿರಲಿದೆ? ಯಾವ ರಾಶಿಗೆ ಒಳಿತಾಗಲಿದೆ, ಯಾರಿಗೆ ಎಚ್ಚರಿಕೆ ಅಗತ್ಯ ಎಂಬ ಸಂಪೂರ್ಣ ವಿವರ ಇಲ್ಲಿದೆ.
ಸಂಗಾತಿಯ ಜೊತೆಗಿನ ಕಲಹ, ಆರ್ಥಿಕ ಸ್ಥಿತಿ ಹಾಗೂ ವೃತ್ತಿ ಜೀವನದ ಮೇಲಾಗುವ ಪರಿಣಾಮಗಳ ಕುರಿತು ಇಂದಿನ ಸಂಪೂರ್ಣ ರಾಶಿ ಫಲ ಹಾಗೂ ಪಂಚಾಂಗ ಇಲ್ಲಿದೆ.
ಮೇಷ
ನಿಮಗೆ ಸಾಧ್ಯವಿರುವ ಕಾರ್ಯಗಳನ್ನು ಮಾತ್ರ ಮಾಡಿ. ಪಾಲುದಾರಿಕೆಯ ಗೊಂದಲ ಬಗೆಹರಿಸಿಕೊಂಡರೆ ಇಬ್ಬರಿಗೂ ಅನುಕೂಲವಾಗಲಿದೆ. ಸ್ಥಿರಾಸ್ತಿ ಪರಿಶೀಲನೆ ಮಾಡಿಕೊಳ್ಳಿ. ಬೋಧನಾ ಕೌಶಲಕ್ಕೆ ಪ್ರಶಂಸೆ ಸಿಗಲಿದೆ. ಚರ ಸ್ವತ್ತನ್ನು ರಕ್ಷಿಸಿಕೊಳ್ಳಿ.
ವೃಷಭ
ನಿಮ್ಮ ಬಗ್ಗೆ ಸುಮ್ಮನೆ ಕುಖ್ಯಾತಿ ಬರಬಹುದು. ಆಸ್ತಿ ವಿಚಾರಕ್ಕೆ ಕುಟುಂಬದಲ್ಲಿ ಜಗಳವಾಗುವ ಸಾಧ್ಯತೆ ಇದೆ. ಕಡಿಮೆ ಖರ್ಚಿನಲ್ಲಿ ಕೆಲಸ ಮುಗಿಸುವಿರಿ. ಆರೋಗ್ಯ ಸುಧಾರಣೆಗೆ ವಾತಾವರಣ ಬದಲಾವಣೆ ಅಗತ್ಯ.
ಮಿಥುನ
ಇಂದು ತುರ್ತು ಆರ್ಥಿಕ ಸ್ಥಿತಿ ಎದುರಿಸುವುದು ಕಷ್ಟ. ಆಪ್ತರ ಮಾತಿನಿಂದ ಇರುಸುಮುರುಸಾಗಬಹುದು. ರಾಜಕೀಯ ವ್ಯಕ್ತಿಗಳಿಂದ ಕೆಲಸವಾಗಲು ಹಣ ಕೊಡುವಿರಿ. ಉದ್ಯಮಕ್ಕಾಗಿ ಬೇರೆಯವರ ಜೊತೆ ಕೈಜೋಡಿಸುವಿರಿ.
ಕರ್ಕಾಟಕ
ಸಾಲಬಾಧೆ ಹೆಚ್ಚಾಗಲಿದೆ. ದೂರದ ಬಂಧುಗಳ ಭೇಟಿಯಾಗಲಿದೆ. ನಡವಳಿಕೆ ಅಹಂಕಾರದಂತೆ ತೋರಬಹುದು. ಹಣಕಾಸಿನ ವಿಚಾರದಲ್ಲಿ ಜಾಗರೂಕತೆ ವಹಿಸಿ. ಭವಿಷ್ಯದ ಕನಸನ್ನು ಮಿತ್ರರ ಜೊತೆ ಹಂಚಿಕೊಳ್ಳುವಿರಿ.
ಸಿಂಹ
ಉದ್ಯೋಗ ಹುಡುಕುತ್ತಿರುವವರಿಗೆ ಶುಭ ಸುದ್ದಿ ಸಿಗಲಿದೆ. ಆರೋಗ್ಯಕ್ಕಾಗಿ ಖರ್ಚು ಮಾಡುವಿರಿ. ಮಾನಸಿಕ ಒತ್ತಡದಿಂದ ಕೆಲಸ ಸಾಕೆನಿಸಬಹುದು. ಉದ್ಯೋಗದ ಸ್ಥಳ ಇಂದು ನಿಮಗೆ ಖುಷಿ ನೀಡಲಿದೆ.
ಕನ್ಯಾ
ಹಲವು ದಿನಗಳ ವಾಹನ ಖರೀದಿಯ ಆಸೆ ಪೂರ್ಣಗೊಳ್ಳಲಿದೆ. ಆಮದು ವ್ಯವಹಾರದವರಿಗೆ ಸಂಕಷ್ಟ ಬರಬಹುದು. ಭೂಮಿ ವಿಸ್ತರಿಸುವ ಯೋಜನೆ ಮಾಡುವಿರಿ. ವಾಹನದಲ್ಲಿ ಓಡಾಟವನ್ನು ಕಡಿಮೆ ಮಾಡಿ.
ತುಲಾ
ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯ ಕಾಡಬಹುದು. ಭೂ ವ್ಯವಹಾರದಲ್ಲಿ ಲಾಭವಿರುವುದಿಲ್ಲ. ಜವಾಬ್ದಾರಿ ಇಲ್ಲದ ಕಡೆಗೆ ನೀವು ಹೋಗಬೇಡಿ. ನಿರುಪಯುಕ್ತ ವಸ್ತುಗಳನ್ನು ದಾನ ಮಾಡುವಿರಿ.
ವೃಶ್ಚಿಕ
ಉದ್ಯೋಗದ ಸ್ಥಳ ಖುಷಿ ನೀಡಲಿದೆ. ಹಳೆಯ ವಸ್ತುಗಳನ್ನು ಮಾರಾಟ ಮಾಡುವಿರಿ. ನೂತನ ಉದ್ಯೋಗ ಆರಂಭಿಸಲು ಕೊಂಚ ಭಯವಿರಲಿದೆ. ಇನ್ನೊಬ್ಬರನ್ನು ದೂರುವುದನ್ನು ಬಿಟ್ಟುಬಿಡಿ.
ಧನು
ವಿದ್ಯಾರ್ಥಿಗಳಿಗೆ ತಾಯಿಯ ಸಹಕಾರ ಸಿಗಲಿದೆ. ಗಂಡಾಂತರದಿಂದ ಪಾರಾಗಿ ನೆಮ್ಮದಿ ಪಡೆಯುವಿರಿ. ಮನೆಗೆ ಬೇಕಾದ ಉಪಕರಣಗಳನ್ನು ಖರೀದಿಸುವಿರಿ. ಒಂದಕ್ಕಿಂತ ಹೆಚ್ಚು ಕೆಲಸವನ್ನು ಒಟ್ಟಿಗೆ ಮಾಡಬೇಡಿ.
ಮಕರ
ಸಲ್ಲದ ಯೋಚನೆಗಳಿಂದ ಮನಸ್ಸು ಹಾಳಾಗಬಹುದು. ಹೊಸ ಉದ್ಯಮ ಆರಂಭಿಸಲು ಧೈರ್ಯ ಸಾಲದು. ಮಕ್ಕಳಿಂದ ಉದ್ಯಮಕ್ಕೆ ಬೆಂಬಲ ಸಿಗಲಿದೆ. ಹಣ ಉಳಿಸಲು ನಾನಾ ಪ್ರಯತ್ನ ಮಾಡುವಿರಿ.
ಕುಂಭ
ಮನೆಯಿಂದ ದೂರವಿರುವವರಿಗೆ ಕುಟುಂಬದ ನೆನಪಾಗಲಿದೆ. ಸ್ವಂತ ಉದ್ಯಮದವರು ಪ್ರಚಾರದ ಕಡೆಗೆ ಗಮನ ಕೊಡಿ. ಹೊಸ ವಸ್ತುಗಳನ್ನು ಪಡೆಯಲಿದ್ದೀರಿ. ಯಾರ ಮೇಲೆಯೂ ಬಲವಂತ ಬೇಡ.
ಮೀನ
ಕೆಲಸಗಳಲ್ಲಿ ಉತ್ಸಾಹ ಕಡಿಮೆ ಇರಲಿದೆ. ಚರ ಸಂಪತ್ತನ್ನು ಜೋಪಾನ ಮಾಡಿ. ಸ್ನೇಹಿತರಿಂದ ಲಾಭ ಸಿಗಲಿದೆ. ಕೆಲಸಕ್ಕೆ ಮೆಚ್ಚುಗೆ ಸಿಗಬಹುದು. ವಿದ್ಯಾಭ್ಯಾಸ ಕ್ಷೇತ್ರ ಬದಲಾಯಿಸುವ ಆಲೋಚನೆ ಬರಬಹುದು.
Daily Horoscope
ಸಂವತ್ಸರ & ದಿನ: ಶಾಲಿವಾಹನ ಶಕೆ 1949ರ ಪರಾಭವ ಸಂವತ್ಸರ, ಭಾನುವಾರ.
ಮಾಸ & ಪಕ್ಷ: ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಕನ್ಯಾ ಸೌರ ಮಾಸ, ಶುಕ್ಲ ಪಕ್ಷ, ಪ್ರತಿಪತ್ ತಿಥಿ.
ನಕ್ಷತ್ರ & ಯೋಗ: ಉತ್ತರಾಫಲ್ಗುಣೀ ಮಹಾನಕ್ಷತ್ರ, ರೇವತಿ ನಿತ್ಯನಕ್ಷತ್ರ, ವೃದ್ಧಿ ಯೋಗ, ಕೌಲವ ಕರಣ.
ಸೂರ್ಯೋದಯ & ಸೂರ್ಯಾಸ್ತ: ಸೂರ್ಯೋದಯ ಬೆಳಿಗ್ಗೆ 06:09, ಸೂರ್ಯಾಸ್ತ ಸಂಜೆ 06:11.
ಶುಭಾಶುಭ ಕಾಲ: ರಾಹು ಕಾಲ 16:41 – 18:11, ಯಮಗಂಡ ಕಾಲ 12:11 – 13:41, ಗುಳಿಕ ಕಾಲ 15:11 – 16:41.




